ಊಟ ಮಾಡುವಾಗ ಮೊಬೈಲ್, ಲ್ಯಾಪ್ಟಾಪ್, ಟಿವಿಯಿಂದ ದೂರವಿರಿ
ಊಟದ ಮೇಲೆ ಗಮನಕೊಡದೇ ಆಹಾರ ಸೇವಿಸುವುದು ಉತ್ತಮವಲ್ಲ
ಊಟ ಹೇಗಿರಬೇಕು, ಹೇಗೆ ಮಾಡಬೇಕು ಅನ್ನೊದಕ್ಕೂ ಇವೆ ನಿಯಮಗಳು
ಊಟದ ಪದ್ಧತಿಯನ್ನು ಆಯ್ಕೆ ಮಾಡುವುದೇ ಉತ್ತಮ ಆರೋಗ್ಯ ಹೊಂದಲು. ನಮ್ಮ ಆಹಾರ ನಮ್ಮ ಆರೋಗ್ಯವನ್ನು ಪ್ರತಿನಿಧಿಸುತ್ತದೆ ನಮ್ಮ ಊಟದ ತಟ್ಟೆಯಲ್ಲಿ ಏನಿದೆ ಅನ್ನೋದರ ಮೇಲೆ ನಮ್ಮ ಫಿಟ್ನೆಸ್ ಗುರುತಿಸುತ್ತದೆ. ಹೀಗಾಗಿ ನಾವು ನಮ್ಮ ಆಹಾರ ಪದ್ಧತಿಯನ್ನು ತುಂಬಾ ಜಾಗೃತೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ನಮ್ಮ ಆರೋಗ್ಯ ವಿಷಯದಲ್ಲಿ ಏನು ತಿನ್ನಬೇಕು ಅನ್ನೋದಕ್ಕಿಂತ, ಹೇಗೆ ಊಟ ಮಾಡಬೇಕು ಎಷ್ಟು ಊಟ ಮಾಡಬೇಕು ಅನ್ನೋದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಈಗ ನಿತ್ಯ ಬಾದಾಮ್ ಹೇಗೆ ತಿನ್ನಬೇಕು, ನೀರಲ್ಲಿ ನೆನಸಿಟ್ಟು ತಿನ್ನಬೇಕಾ ಇಲ್ಲವೇ ನೇರವಾಗಿ ಸೇವಿಸಬೇಕಾ ಅನ್ನೋದು ಮುಖ್ಯವಾಗುತ್ತದೆ. ದಿನಕ್ಕೆ ಎಷ್ಟು ಮತ್ತು ಹೇಗೆ ಬಾದಾಮ್ ತಿಂದರೆ ಒಳ್ಳೆಯದು ಎಂಬುದನ್ನು ನಾವು ಅರಿತಿರಬೇಕು
ಇದನ್ನೂ ಓದಿ: Mark Zuckerberg ಧರಿಸಿರುವ ವಾಚ್ನ ಬ್ರ್ಯಾಂಡ್ ಯಾವುದು? ಬೆಲೆ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ
ಈ ವಿಷಯದಲ್ಲಿ ಅನೇಕರು ಸೆಲಬ್ರಿಟಿಸ್ಗಳ ಆಹಾರ ಪದ್ಧತಿಯೂ ಹೇಗಿದೆ ಎಂಬುದನ್ನು ನೋಡಿ ಅದನ್ನು ಅಳವಡಿಸಿಕೊಳ್ಳಲು ಸಜ್ಜಾಗುತ್ತಾರೆ. ನೀವು ಟಾಪ್ ನ್ಯೂಟ್ರಿಷಿಯನ್ ಎಂದು ಹೆಸರು ಮಾಡಿರುವ ರುಜುತಾ ದಿವಾಕರ್ ಅವರು ನೀಡುವ ಸಲಹೆಗಳನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಅವರು ಮೈಂಡ್ಫುಲ್ ಈಟಿಂಗ್ ಬಗ್ಗೆ ಅಂದ್ರೆ ಊಟದ ಜಾಗೃತೆಯ ಬಗ್ಗೆ ಹೆಚ್ಚು ಸಲಹೆ ನೀಡುತ್ತಾರೆ. ಊಟ ಮಾಡುವಾಗ ಇತ್ತೀಚಿನ ತಲೆಮಾರು ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಊಟ ಮಾಡುವ ಪದ್ಧತಿಯನ್ನು ನಾವು ನೋಡಿದ್ದೇವೆ. ಅದು ಮಹಾಪ್ರಮಾದ. ಮೊಬೈಲ್ನ್ನು ಆಚೆಯಿಟ್ಟು. ನಮ್ಮ ಆಹಾರವನ್ನು ಆಸ್ವಾದಿಸುತ್ತಾ ತಿನ್ನುವುದು ಉತ್ತಮ. ಅದು ನಮ್ಮ ಆರೋಗ್ಯ ಹಾಗೂ ತೂಕದ ಸಮತೋಲನ ಕಾಪಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತೆ ಅಂತಾರೆ ರುಜುತಾ.ಆಹಾರದ ಬಗ್ಗೆ ಎಚ್ಚರಿಕೆ ಅಂದ್ರೆ ಗಮನ ನೀಡುವುದು ತುಂಬಾ ಅಗತ್ಯ.
ಇದನ್ನೂ ಓದಿ: ಖಿನ್ನತೆಗೂ ಅಲ್ಜಮೈರ್ಗೂ ಇದೆಯಾ ನಂಟು? ಹೊಸ ಅಧ್ಯಯನ ತೆರೆದಿಟ್ಟಿದೆ ಭಯಾನಕ ಮಾಹಿತಿ!
ನೀವು ಅಗೆಯುವ ಪ್ರತಿ ಮೆಲಕು ಕೂಡ ನಿಮ್ಮ ಗಮನವನ್ನು ಕೇಳುತ್ತದೆ. ಹೀಗಾಗಿ ಊಟ ಮಾಡುವಾಗ ಹೆಚ್ಚು ಊಟದ ಕಡೆ ಗಮನ ಕೊಡಬೇಕು. ನಾವು ತಿನ್ನುವ ಪ್ರಕ್ರಿಯೆಯಲ್ಲಿ ಹೆಚ್ಚು ಗಮನ ಕೊಡುವುದರಿಂದ, ನಾವು ನಮ್ಮ ಆಹಾರವನ್ನು ಹೆಚ್ಚು ಅಗಿದು ಜಗಿದು ತಿನ್ನುತ್ತೇವೆ. ಇಲ್ಲವಾದಲ್ಲಿ ಗಡಿಬಿಡಿಯಲ್ಲಿ ಅಗಿದು ತಿಂದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತೆ ಮಾಡುತ್ತೇವೆ. ಹೀಗಾಗಿ ಊಟದ ಬಗ್ಗೆ ಎಚ್ಚರಿಕೆ ಮೂಡಬೇಕಾದ್ರೆ ನಾವು ಟಿವಿ, ಲ್ಯಾಪ್ಟಾಪ್ ಹಾಗೂ ಮೊಬೈಲ್ಗಳಿಂದ ದೂರುವಿದ್ದು ಊಟ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ ನ್ಯೂಟ್ರಿಷಿನ್ಸ್. ಅದು ಮಾತ್ರವಲ್ಲ, ಊಟ ಮಾಡುವಾಗ ಮಾತನಾಡುವುದನ್ನೂ ಕೂಡ ನಿಷಿದ್ಧಗೊಳಿಸಬೇಕು.
ಹಸಿವು ಆಗುವುದಕ್ಕಿಂತ ಮುಂಚೆಯೇ ಊಟ ಮಾಡುವ ಪದ್ಧತಿಯೂ ಈಗ ಜಾರಿಯಲ್ಲಿದೆ. ಕೆಲಸದ ಒತ್ತಡ ಮತ್ತು ಸಮಯದ ಅಭಾವದಿಂದ ಈ ಹಿಂದೆ ಮಾಡಿದ ಊಟ ಅಥವಾ ತಿಂಡಿ ಸಂಪೂರ್ಣವಾಗಿ ಜೀರ್ಣವಾಗದೇ ಇನ್ನೂ ಹಸಿವು ಕೂಡ ಅನಿಸದೇ ಇದ್ದಾಗಲೇ ನಾವು ಮುಂದಿನ ಊಟಕ್ಕೆ ಸಜ್ಜಾಗಿಬಿಟ್ಟಿರುತ್ತೇವೆ. ಇದು ಕೂಡ ಅಪಾಯಕಾರಿ. ಸಂಪೂರ್ಣವಾಗಿ ಹಸಿವು ಆಗುವುದಕ್ಕಿಂತ ಮುಂಚೆ ಏನೂ ತಿನ್ನಬಾರದು.
ಒಟ್ಟಾಗಿ ಕೂತು ಊಟ ಮಾಡುವುದು ಉತ್ತಮ
ಒಂದು ಕಾಲದಲ್ಲಿ ಭಾರತದಲ್ಲಿ ಕೂಡ ಕುಟುಂಬಗಳು ಹೆಚ್ಚು ಇದ್ದವು. ಯಾವ ಸಮಯದಲ್ಲೂ ಒಂದಾಗದಿದ್ರೂ ಊಟದ ಸಮಯದಲ್ಲಿ ಒಂದೇ ಕಡೆ ಸೇರುತ್ತಿದ್ದರು. ಈಗ ಆ ವ್ಯವಸ್ಥೆ ಇಲ್ಲ. ಎಲ್ಲರೂ ಒಂದೇ ಬಾರಿಗೆ ಊಟಕ್ಕೆ ಕೂರುವ ವ್ಯವಸ್ಥೆ ಇಂಚಿಂಚಾಗಿ ಮರೆಯಾಗುತ್ತಾ ಹೋಗುತ್ತಿದೆ. ಆ ಒಂದು ವ್ಯವಸ್ಥೆ ತುಂಬಾ ಒಳ್ಳೆಯದಿತ್ತು. ಊಟವನ್ನು ಇರೋದ್ರಲ್ಲಿ ಹಂಚಿ ತಿನ್ನುವುದು, ಆ ವೇಳೆ ನಡೆಯುತ್ತಿದ್ದ ಮಾತುಗಳು ಇವೆಲ್ಲವೂ ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ. ಈಗಂತೂ ಕೂಡ ಕುಟುಂಬಗಳು ಮರೆಯಾಗುತ್ತಿವೆ. ಅದರಲ್ಲೂ ಪಟ್ಟಣದಲ್ಲಿ ತಾಯಿ ತಂದೆ ಮಕ್ಕಳಷ್ಟೇ ಇರುವ ವ್ಯವಸ್ಥೆಗೆ ಬಂದುಬಿಟ್ಟಿದ್ದಾರೆ. ಕನಿಷ್ಠ ಈ ನಾಲ್ಕು ಜನರಾದರೂ ಒಂದೇ ಟೇಬಲ್ ಮೇಲೆ ಒಟ್ಟಿಗೆ ಊಟ ಮಾಡುವುದು ಕೂಡ ಆರೋಗ್ಯದ ವಿಚಾರದಲ್ಲಿ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ ಆಹಾರ ತಜ್ಞರು.
ಇದನ್ನೂ ಓದಿ: ನಿತ್ಯವೂ ತುಪ್ಪದಲ್ಲಿ ಮಾಡಿದ ಪದಾರ್ಥ ಸೇವನೆ ಎಷ್ಟು ಅಪಾಯಕಾರಿ? ಇಲ್ಲಿದೆ ನೀವು ಓದಲೇಬೇಕಾದ ಸ್ಟೋರಿ
ನಾವು ಏನು ಊಟ ಮಾಡುತ್ತೇವೆ ಅನ್ನೊದಕ್ಕಿಂತ ಹೇಗೆ ಊಟ ಮಾಡುತ್ತೇವೆ ಅನ್ನೋದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಹೀಗಾಗಿ ಊಟದ ಮೇಲೆ ನಾವು ತೆಗೆದುಕೊಳ್ಳುವ ಆಹಾರದ ಮೇಲೆ,ಸಮಯದ ಮೇಲೆ ಹೆಚ್ಚು ಎಚ್ಚರಿಕೆಯಿಂದ ಇರುವುದು ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ