Advertisment

ಸೋಲನ್ನು ಸಹಿಸಿಕೊಳ್ಳದ ಪಾಕಿಸ್ತಾನಿಯರು.. ಕಿರಾತಕರು ಭಾರತದ ವಿರುದ್ಧ ಮಾಡಿದ್ದೇನು ಗೊತ್ತಾ?

author-image
Ganesh
Updated On
ಸೋಲನ್ನು ಸಹಿಸಿಕೊಳ್ಳದ ಪಾಕಿಸ್ತಾನಿಯರು.. ಕಿರಾತಕರು ಭಾರತದ ವಿರುದ್ಧ ಮಾಡಿದ್ದೇನು ಗೊತ್ತಾ?
Advertisment
  • ನಿನ್ನೆ ಭಾರತದ ಎದುರು ಮುಂಡಿಯೂರಿದ ಪಾಕಿಸ್ತಾನ
  • ಟಿ20 ವಿಶ್ವಕಪ್​ನಲ್ಲಿ ಸತತ 2 ಸೋಲು ಕಂಡ ಪಾಕ್
  • ಪಂದ್ಯ ಸೋಲುತ್ತಿದ್ದಂತೆಯೇ ಪಾಕ್​ನಲ್ಲಿ ನಡೆದಿದ್ದೇನು..?

ಟಿ20 ವಿಶ್ವಕಪ್​ನಲ್ಲಿ ನಿನ್ನೆ ಭಾರತ ಮತ್ತು ಪಾಕಿಸ್ತಾನ ತಂಡದ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಿತು. ಭಾರೀ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಭಾರತ ಕೊನೆ ಕ್ಷಣದಲ್ಲಿ ಗೆದ್ದು ಬೀಗಿತು. ಪಾಕಿಸ್ತಾನ ಸೋಲುತ್ತಿದ್ದಂತೆಯೇ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಎಂದಿನಂತೆ ತಮ್ಮ ಕೆಟ್ಟ ಬುದ್ಧಿಯನ್ನು ಪ್ರದರ್ಶನ ಮಾಡಿದ್ದಾರೆ.

Advertisment

ಏನಿದು ವಿಚಾರ..?

ಭಾರತದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ಆಡ್ತಿದೆ ಎಂದರೆ.. ಪಾಕ್ ನೆಲದಲ್ಲಿರುವ ಅದೆಷ್ಟೋ ಟಿವಿಗಳು ಪುಡಿಪುಡಿ ಆಗೋದು ಮಾಮೂಲಿ. ಆದರೆ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿರುವ ಪಾಕಿಸ್ತಾನ, ಭಾರತದ ರಾಷ್ಟ್ರಗೀತೆಗೆ ಅವಮಾನ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಎರಡೂವರೆ ಲಕ್ಷಕ್ಕೆ ಟ್ರ್ಯಾಕ್ಟರ್​ ಮಾರಿ IND-PAK ಪಂದ್ಯ ವೀಕ್ಷಣೆಗೆ ಬಂದ.. ಮೈದಾನದಲ್ಲಿ ದೊಡ್ಡ ಆಘಾತ, ಕಣ್ಣೀರು..!

ಪಾಕಿಸ್ತಾನ ಪತ್ರಿಕೆ ‘ದಿ ಎಕ್ಸ್​ಪ್ರೆಸ್​ ಟ್ರಿಬ್ಯೂನ್’ ಮಾಡಿರುವ ವರದಿ ಪ್ರಕಾರ.. ಭಾರತದ ವಿರುದ್ಧ ಪಾಕಿಸ್ತಾನ ಸೋಲುತ್ತಿದ್ದಂತೆಯೇ ಪಾಕ್ ಕ್ರಿಕೆಟ್ ಅಭಿಮಾನಿಗಳ ಹೃದಯ ಒಡೆದಿದೆ. ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕ್ ಸೋಲುತ್ತಿದ್ದಂತೆಯೇ ಪಾಕಿಸ್ತಾನದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಕೇವಲ ಎರಡು ಪಂದ್ಯಗಳ ನಂತರ, ಟಿ20 ವಿಶ್ವಕಪ್​ನಲ್ಲಿ ಪಾಕ್ ಸೋತಿದೆ ಎಂದು ಅನೇಕ ಅಭಿಮಾನಿಗಳು ಭಾವಿಸಿದ್ದಾರೆ. ಪಾಕಿಸ್ತಾನಕ್ಕೆ ಕ್ರಿಕೆಟ್ ಮುಗಿದ ಅಧ್ಯಾಯ ಎಂದು ರಾವಲ್ಪಿಂಡಿ ಅಭಿಮಾನಿಯೊಬ್ಬ ಹೇಳಿದ್ದಾನೆ ಎಂದು ವರದಿಯಾಗಿದೆ.

Advertisment

ಮಾತ್ರವಲ್ಲ.. 15 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಇರುವ ರಾವಲ್ಪಿಂಡಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನೋಡಲು ದೊಡ್ಡ ಪರದೆಯನ್ನು ಅಳವಡಿಸಲಾಗಿತ್ತು. ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗಿತ್ತು. ಈ ವೇಳೆ ಭಾರತದ ರಾಷ್ಟ್ರಗೀತೆ ಬರುವಾಗ ಮ್ಯೂಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಅಲ್ಲದೇ ಪಾಕ್ 6 ರನ್​ಗಳಿಂದ ಸೋಲನ್ನು ಕಂಡಾಗ, ಅದೇ ಟಿವಿ ಪರದೆ ಮೇಲೆ ಬಾಟಲ್​​ಗಳನ್ನು ಎಸೆದಿದ್ದಾರೆ. ದೊಡ್ಡ ಹೈಡ್ರಾಮಗಳೇ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಮೋದಿ, ಅಮಿತ್​ ಶಾಗೆ ಬಿಗ್ ಶಾಕ್.. ನಿನ್ನೆ ಪ್ರತಿಜ್ಞಾವಿಧಿ ಸ್ವೀಕರಿಸಿ ಇಂದು ಸಚಿವ ಸ್ಥಾನ ಬೇಡ ಎಂದ ಬಿಜೆಪಿ ಸಂಸದ..!

ಇದನ್ನೂ ಓದಿ:ಪಾಕ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು.. ಈ ಮೂವರು ಗೆಲುವಿನ ಹೀರೋಗಳು..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment