/newsfirstlive-kannada/media/media_files/2026/01/04/trump-2026-01-04-09-01-50.jpg)
ವೆನಿಜುವೆಲಾದಲ್ಲಿ(Venezuela) ನಡೆದ ಕ್ಷಿಪ್ರ ದಾಳಿಗಳ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಹತ್ವದ ಹೇಳಿಕೆ ನೀಡಿದ್ದಾರೆ. ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ (Nicolas Maduro) ಮತ್ತು ಅವರ ಪತ್ನಿ ಅಮೆರಿಕದ ವಶದಲ್ಲಿದ್ದಾರೆ. ಅವರನ್ನು ದೇಶದಿಂದ ಹೊರಗೆ ಕರೆದೊಯ್ಯಲಾಗಿದೆ. ಹಾಲಿ ಅಧ್ಯಕ್ಷರನ್ನು ಅವರ ಸ್ವಂತ ರಾಜಧಾನಿಯಿಂದ ಅಮೆರಿಕ ಸೆರೆಹಿಡಿದಿದೆ. ಈದು ಈ ಆಧುನಿಕ ಕಾಲದಲ್ಲಿ ಅಪರೂಪದ ಘಟನೆಯಾಗಿದೆ ಎಂದಿದ್ದಾರೆ. ಟ್ರಂಪ್ ಅಧಿಕಾರಾವಧಿಯಲ್ಲಿ ನಡೆಸಲಾದ ಈ ಕಾರ್ಯಾಚರಣೆಯನ್ನು ಸದ್ದಾಂ ಹುಸೇನ್ ಮತ್ತು ಒಸಾಮಾ ಬಿನ್ ಲಾಡೆನ್ ಸೆರೆಹಿಡಿಯಲು ಅಮೆರಿಕ ನಡೆಸಿದ ಕಾರ್ಯಾಚರಣೆಗಳಿಗೆ ಹೋಲಿಸಲಾಗಿದೆ.
ಸದ್ದಾಂ ಹುಸೇನ್ ಮತ್ತು ಬಿನ್ ಲಾಡೆನ್ ನಂತರ, ಈಗ ಮಡುರೊ
ಹಿರಿಯ ಭದ್ರತಾ ವಿಶ್ಲೇಷಕರು ವೆನಿಜುವೆಲಾದಲ್ಲಿ ಮಡುರೊ ಸೆರೆಹಿಡಿಯುವಿಕೆಯನ್ನು ಸದ್ದಾಂ ಹುಸೇನ್ ಮತ್ತು ಒಸಾಮಾ ಬಿನ್ ಲಾಡೆನ್ ಮೇಲೆ ಅಮೆರಿಕ ನಡೆಸಿದ್ದ ಕಾರ್ಯಾಚರಣೆಗಳಿಗೆ ಹೋಲಿಸಿದ್ದಾರೆ. ಅಲ್ಲದೇ 1989ರಲ್ಲಿ ಪನಾಮ ನಾಯಕ ಮ್ಯಾನುಯೆಲ್ ನೊರಿಗಾ ( Manuel Noriega ) ಅವರ ಮೇಲೂ ಅಮೆರಿಕ ಇದೇ ರೀತಿಯ ಕ್ರಮ ತೆಗೆದುಕೊಂಡಿತ್ತು. ಮಡುರೊ ಅವರಂತೆಯೇ ನೊರಿಗಾ ಕೂಡ ವಿವಾದಿತ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ನಂತರ ಅವರ ಮೇಲೆ ಅಮೆರಿಕ ಮಾದಕವಸ್ತು ಕಳ್ಳಸಾಗಣೆ ಆರೋಪ ಹೊರಿಸಿತ್ತು. ಅಮೆರಿಕದ ತೀವ್ರ ಒತ್ತಡದಿಂದ ನೊರಿಗಾ ಅಧಿಕಾರ ಕಳೆದುಕೊಳ್ಳಬೇಕಾಯಿತು. ಇದೀಗ ಮುಡುರೊ ಪರಿಸ್ಥಿತಿ ಕೂಡ ಅದೇ ಆಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
/filters:format(webp)/newsfirstlive-kannada/media/media_files/2026/01/04/venezuelan-president-nicolas-maduro-2026-01-04-08-01-50.jpg)
ನೊರಿಗಾ ಮತ್ತು ಮಡುರೊ ಇತಿಹಾಸ ಒಂದೇ ರೀತಿ ಇದೆ: ತಜ್ಞರು
1989ರಲ್ಲಿ ಪನಾಮ ನಾಯಕ ಮ್ಯಾನುಯೆಲ್ ನೊರಿಗಾ ಅವರನ್ನು ಬಂಧಿಸಲು ಅಮೆರಿಕ ಇಂಥ ಕಾರ್ಯಾಚರಣೆ ನಡೆಸಿತ್ತು ಎಂದು ವಿಶ್ಲೇಷಕರು ಹೇಳುತ್ತಾರೆ. ಮಡುರೊ ಅವರಂತೆಯೇ, ನೊರಿಗಾ ಕೂಡ ವಿವಾದಿತ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಅಮೆರಿಕ ಅವರ ಮೇಲೆ ಮಾದಕವಸ್ತು ಕಳ್ಳಸಾಗಣೆ ಆರೋಪ ಹೊರಿಸಿತ್ತು. ನಂತರ ನೊರಿಗಾ ಮೇಲೆ ತೀವ್ರ ಒತ್ತಡ ಹೇರಿ ಅಧಿಕಾರದಿಂದ ತೆಗೆದು ಹಾಕಿಸಿತು. ಪನಾಮ ಪಡೆಗಳನ್ನು ತ್ವರಿತವಾಗಿ ಸೋಲಿಸಿದ ಅಮೆರಿಕ ನೊರಿಗಾ ಅವರನ್ನ ಸೆರೆ ಹಿಡಿದಿತ್ತು. ಆದರೆ ಈ ಬಾರಿ ಅಮೆರಿಕ ಕ್ರಮ ಸ್ವಲ್ಪ ಭಿನ್ನವಾಗಿದೆ. ಬಿಬಿಸಿ ತಜ್ಞರ ಪ್ರಕಾರ.. ನೆಲದ ಆಕ್ರಮಣವಿಲ್ಲದೆ ನೇರವಾಗಿ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು ಎಳೆದುಕೊಂಡು ಬರಲಾಗಿದೆ. ಇದು ನೊರಿಗಾ ಬಂಧನಕ್ಕಿಂತ ರೋಚಕ ಕಾರ್ಯಾಚರಣೆ. ಅತ್ಯಂತ ಸೂಕ್ಷ್ಮವಾಗಿರುವ ದೇಶ ಒಂದರ ರಾಜಧಾನಿಯಲ್ಲಿ ಅಮೆರಿಕ ನಡೆಸಿದ ನಿಖರವಾದ ಕಾರ್ಯಾಚರಣೆಯಾಗಿದೆ. ಸಿಎನ್‌ಎನ್‌ನ ಅಂತರರಾಷ್ಟ್ರೀಯ ಭದ್ರತಾ ವ್ಯವಹಾರಗಳ ಮುಖ್ಯಸ್ಥ ನಿಕ್ ಪ್ಯಾಟನ್-ವಾಲ್ಷ್ ಪ್ರಕಾರ, ಅಮೆರಿಕದ ಕ್ರಮವು ಒಸಾಮಾ ಬಿನ್ ಲಾಡೆನ್ ವಿರುದ್ಧದ ಕ್ಯಾಂಪೇನ್ ಮತ್ತು ಸದ್ದಾಂ ಹುಸೇನ್‌ರ ಸೆರೆಹಿಡಿಯುವಿಕೆಯನ್ನು ನೆನಪಿಸುತ್ತದೆ ಎಂದಿದ್ದಾರೆ. ಅಲ್ಲದೇ ಟ್ರಂಪ್ ಅಧ್ಯಕ್ಷತೆಯ ಅತ್ಯಂತ ಪ್ರಮುಖ ವಿದೇಶಿ ಮಿಲಿಟರಿ ಹಸ್ತಕ್ಷೇಪ ಎಂದು ಕರೆದ್ದಾರೆ.
/filters:format(webp)/newsfirstlive-kannada/media/media_files/2026/01/03/america-attacks-venezuela-capital-3-2026-01-03-17-50-35.jpg)
ನಿಕೋಲಸ್ ಮೇಲಿನ ಆರೋಪ ಏನು..?
ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ವಿರುದ್ಧ ಅಮೆರಿಕ ಗಂಭೀರ ಆರೋಪ ಮಾಡಿದೆ. ಮಡುರೊ ವಿರುದ್ಧ ಮಾದಕ ದ್ರವ್ಯ-ಭಯೋತ್ಪಾದನಾ ಪಿತೂರಿ, ಕೊಕೇನ್ ಆಮದು ಪಿತೂರಿ, ಮೆಷಿನ್ ಗನ್‌ಗಳು ಮತ್ತು ವಿನಾಶಕಾರಿ ಸಾಧನಗಳನ್ನು ಹೊಂದಿರುವ ಆರೋಪ ಮಾಡಿದೆ. ಯುನೈಟೆಡ್ ಸ್ಟೇಟ್ಸ್ ವಿರುದ್ಧ ಮೆಷಿನ್ ಗನ್‌ಗಳು ಮತ್ತು ವಿನಾಶಕಾರಿ ಸಾಧನಗಳನ್ನು ಹೊಂದಲು ಪಿತೂರಿ ನಡೆಸಿದ್ದಾರೆ ಎಂದು ಅಮೆರಿಕ ಆರೋಪ ಮಾಡಿದೆ. ಬಂಧನಕ್ಕೆ ಒಳಗಾಗಿರುವ ಮಡುರೋ ಶೀಘ್ರದಲ್ಲೇ ಯುಎಸ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಇನ್ನು ವೆನಿಜುವೆಲಾದ ಉಪಾಧ್ಯಕ್ಷರು ಮಡುರೊ ಮತ್ತು ಅವರ ಪತ್ನಿ ಜೀವಂತವಾಗಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಕೇಳಿದ್ದಾರೆ. ಒಂದು ವೇಳೆ ಅಮೆರಿಕ ಅವರನ್ನು ಬಿಡುಗಡೆ ಮಾಡದೇ ಸೆರೆಯಲ್ಲೇ ಇಟ್ಟುಕೊಂಡರೆ ವೆನಿಜುವೆಲಾದಲ್ಲಿ ಮುಂದೆ ಏನಾಗಲಿದೆ ಎಂಬ ಪ್ರಶ್ನೆ ಶುರುವಾಗಿದೆ.
ಇದನ್ನೂ ಓದಿ: ಗಿಲ್ಲಿ ವೈರಲ್ ಹಾಡನ್ನು ಕ್ಯೂಟ್ ಆಗಿ ಹಾಡಿದ ಪುಟಾಣಿ - VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us