/newsfirstlive-kannada/media/media_files/2025/10/13/gaza-2025-10-13-07-41-56.jpg)
ಮಧ್ಯಪ್ರಾಚ್ಯದ ವಿಚಾರದಲ್ಲಿ ಇವತ್ತು ಜಗತ್ತು ಶಾಂತಿಯ ಶುಭಸುದ್ದಿ ಕೇಳ್ತಿದೆ. ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ನಡೆದ ದಾಳಿ ಬಳಿಕ ಉಂಟಾದ ಸಂಘರ್ಷ ಇವತ್ತು ಸಮಾಪ್ತವಾಗುವ ನಿರೀಕ್ಷೆ ಇದೆ. ಅಮೆರಿಕಾ ಅಧ್ಯಕ್ಷ ಟ್ರಂಪ್​ ಸೇರಿ 20 ಪ್ರಮುಖ ದೇಶಗಳ ನಾಯಕರು ಈಜಿಪ್ಟ್‌ನ ಶರ್ಮ್ ಎಲ್ ಶೇಖ್‌ನಲ್ಲಿ ಶೃಂಗಸಭೆ ಸೇರುತ್ತಿದ್ದು, ಗಾಜಾ ಶಾಂತಿ ಸಂಬಂಧ ಮಹತ್ವ ತೀರ್ಮಾನ ಕೈಗೊಳ್ಳಲಿದ್ದಾರೆ.
ಸ್ವರ್ಗ ನರಕಗಳನ್ನ ಯಾರಾದ್ರೂ ನೋಡಿದ್ದಾರ? ನೋಡಿದವ್ರು ಬಂದು ಹೇಳಿದವರು ಯಾರಿದ್ದಾರೆ.. ಆದ್ರೆ, ಸ್ವರ್ಗ ಮತ್ತು ನರಕದ ಕಲ್ಪನೆ, ಮಧ್ಯಪ್ರಾಚ್ಯಕ್ಕೆ ಬಂದ್ರೆ ಕಣ್ಣಿಗೆ ಕಟ್ಟಿದಂತೆ ಕಾಣಿಸ್ತಿದೆ.. ಗಾಜಾ ಎಂಬ ಪುಟ್ಟ ಜಾಗದಲ್ಲಿ ಇಸ್ರೇಲ್​ ಸೃಷ್ಟಿಸಿದ ಭೂಲೋಕದ ನರಕ ಇದು.. ಇಲ್ಲಿ ಧೂಳು ಬಿದ್ದ ಕಟ್ಟಡಗಳು ಪರಿಸ್ಥಿತಿಯ ಚಿತ್ರಣ ವಿವರಿಸ್ತಿದೆ.. ಸತ್ತವರ ಸಂಖ್ಯೆ 66 ಸಾವಿರಕ್ಕೆ ಮೀರಿದೆ.. ಈಗ ಯುದ್ಧಕ್ಕೆ ವಿರಾಮ ಬಂದಿದೆ.. ಗಾಜಾದಲ್ಲಿ ಶಾಂತಿ ಸಂಧಾನಕ್ಕೆ ಇವತ್ತು ಐತಿಹಾಸದ ಮಹತ್ವದ ದಿನ.
ಇದನ್ನೂ ಓದಿ: ಎಲ್ಲರ ಜೊತೆ ಕಿತ್ತಾಡುವ ಪಾಪಿ ಪಾಕಿಸ್ತಾನ​.. 58 ಸೈನಿಕರು ಸಾವು, ಸರಿಯಾಗಿ ಗುಮ್ಮಿದ ಅಫ್ಘಾನ್
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಅಂತ್ಯದ ಆರಂಭಕ್ಕೆ ಬಂದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಗಾಜಾ ಶಾಂತಿ ಒಪ್ಪಂದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಹಮಾಸ್​​​ ಸಮ್ಮತಿಯ ಮುದ್ರೆ ಒತ್ತಿದೆ. ಈ ಬೆನ್ನಲ್ಲೆ ಶಾಂತಿ-ಸಂಧಾನಕ್ಕೆ ಇಡೀ ವಿಶ್ವ ಸಾಕ್ಷಿ ಆಗ್ತಿದೆ.
ಐತಿಹಾಸಿಕ ಗಾಜಾ ಶಾಂತಿ ಒಪ್ಪಂದ
- ಈಜಿಪ್ಟ್‌ನ ಶರ್ಮ್ ಎಲ್ ಶೇಖ್‌ನಲ್ಲಿ ಗಾಜಾ ಶಾಂತಿ ಶೃಂಗಸಭೆ
- ಅಮೆರಿಕಾ ಅಧ್ಯಕ್ಷ ಟ್ರಂಪ್, ಈಜಿಪ್ಟ್ ಅಧ್ಯಕ್ಷ ಫತ್ತಾಹ್ ಅಧ್ಯಕ್ಷತೆ
- ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್
- ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಇಟಲಿ ಪ್ರಧಾನಿ ಮೆಲೋನಿ
- ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಂಚೆಜ್, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್
- ಸುಮಾರು 20ಕ್ಕೂ ಹೆಚ್ಚು ದೇಶಗಳ ನಾಯಕರಿಗೆ ಸಭೆಗೆ ಆಹ್ವಾನ
- ಗಾಜಾದಲ್ಲಿನ ಯುದ್ಧ ಕೊನೆಗೊಳಿಸುವ ಗುರಿಯನ್ನು ಹೊಂದಿದೆ
- ಮಧ್ಯಪ್ರಾಚ್ಯದಲ್ಲಿ ಶಾಂತಿ & ಸ್ಥಿರತೆ, ಪ್ರಾದೇಶಿಕ ಭದ್ರತೆ ಉದ್ದೇಶ
ಗಾಜಾ ಶಾಂತಿ ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಎಲ್-ಸಿಸಿ ಅಧಿಕೃತ ಆಹ್ವಾನ ನೀಡಿದ್ದಾರೆ.. ಅಮೆರಿಕಾ ಅದ್ಯಕ್ಷ ಟ್ರಂಪ್​​​ ಕೂಡ ಆಹ್ವಾನಿಸಿದ್ರು.. ಆದ್ರೆ, ಪ್ರಧಾನಿ ಮೋದಿ ವೈಯಕ್ತಿಕವಾಗಿ ಭಾಗವಹಿಸ್ತಿಲ್ಲ.. ಭಾರತದ ಪರವಾಗಿ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವೆ ಕೀರ್ತಿ ವರ್ಧನ್​ ಸಿಂಗ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಈ ಐತಿಹಾಸಿನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದೆ..
ಇದನ್ನೂ ಓದಿ: ಭಯಾನಕ ಮಳೆ, ಭೂ ಕುಸಿತ.. ಪ್ರವಾಹದಿಂದ ಉಸಿರು ಚೆಲ್ಲಿದ 42 ಜನ, 16,000 ಮನೆಗಳಿಗೆ ಹಾನಿ
ಈ ಶಾಂತಿ ಪ್ರಕ್ರಿಯೆ ಹಲವು ಅಡೆತಡೆಗಳನ್ನ ಎದುರಿಸುತ್ತಿದೆ. ಪ್ರಮುಖವಾಗಿ ಉಗ್ರಗಾಮಿ ಸಂಘಟನೆ ಹಮಾಸ್, ಶಾಂತಿ ಒಪ್ಪಂದದ ಅಧಿಕೃತ ಸಹಿ ಹಾಕುವಿಕೆಗೆ ಬಹಿಷ್ಕರಿಸಿದೆ. ಟ್ರಂಪ್ ಅವರ 20 ಅಂಶಗಳ ಯೋಜನೆಯಲ್ಲಿ ನಿಶ್ಯಸ್ತ್ರೀಕರಣದ ಬೇಡಿಕೆ ಬಗ್ಗೆ ಭಿನ್ನಾಭಿಪ್ರಾಯ ಹೊರಹಾಕಿದೆ. ಪ್ಯಾಲೆಸ್ತೀನಿಯರನ್ನು ಗಾಜಾದಿಂದ ಸ್ಥಳಾಂತರಿಸುವ ಪ್ರಸ್ತಾವನೆಗಳನ್ನು ಅಸಂಬದ್ಧ ಅಂತ ಕರೆದಿದೆ..
ಸದ್ಯ, ಶಾಂತಿ ಯೋಜನೆ ಪ್ರಕಾರ, ಗಾಜಾ ಭಾಗದಲ್ಲಿ ಅಮೆರಿಕಾ, ಈಜಿಪ್ಟ್, ಕತಾರ್, ಟರ್ಕಿ, ಮತ್ತು ಯುಎಇ ಒಳಗೊಂಡ ಬಹುರಾಷ್ಟ್ರೀಯ ಕಾರ್ಯಪಡೆಯು ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆ ಮಾಡಲಿದೆ.. ಆದ್ರೆ, ಗಾಜಾದಲ್ಲಿ ನಿಶ್ಯಸ್ತ್ರೀಕರಣ ಮತ್ತು ರಾಜಕೀಯ ನಿಯಂತ್ರಣದ ಬಗ್ಗೆ ಪ್ರಮುಖ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳಿವೆ.. ಈ ಸಭೆಯಲ್ಲಿ ಪರಿಹಾರ ಕಾಣುವ ನಿರೀಕ್ಷೆ ಇದೆ..
ಇದನ್ನೂ ಓದಿ: ಪಾಕ್​​ಗೆ ನುಗ್ಗಿ ಹೊಡೆದ ಅಫ್ಘಾನಿಸ್ತಾನ ಸೇನೆ.. ಗಡಿಯಲ್ಲಿ ಮತ್ತೊಂದು ಯುದ್ಧ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ