Advertisment

ಬೂಮ್ರಾ ಔಟ್, ಕಿಶನ್ ಇನ್! KL ರಾಹುಲ್​​ಗೆ ಇಲ್ಲ ಸ್ಥಾನ? 2ನೇ ಟೆಸ್ಟ್​ಗೆ ಸಂಭಾವ್ಯ ತಂಡ..!

author-image
Ganesh
Updated On
ಬೂಮ್ರಾ ಔಟ್, ಕಿಶನ್ ಇನ್! KL ರಾಹುಲ್​​ಗೆ ಇಲ್ಲ ಸ್ಥಾನ? 2ನೇ ಟೆಸ್ಟ್​ಗೆ ಸಂಭಾವ್ಯ ತಂಡ..!
Advertisment
  • ಕಾನ್ಪುರದಲ್ಲಿ ಬಾಂಗ್ಲಾ ವಿರುದ್ಧ 2ನೇ ಟೆಸ್ಟ್ ಪಂದ್ಯ ನಡೆಯಲಿದೆ
  • 2ನೇ ಟೆಸ್ಟ್​ಗೆ ತಂಡ ಪ್ರಕಟಿಸಲಿರುವ ಬಿಸಿಸಿಐ, ಭಾರೀ ಕುತೂಹಲ
  • ದುಲೀಪ್ ಟ್ರೋಫಿಯಲ್ಲಿ ಇಶನ್ ಅದ್ಭುತ ಪ್ರದರ್ಶನ ನೀಡಿದ್ದಾರೆ

ಸೆಪ್ಟೆಂಬರ್ 27 ರಂದು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಮೊದಲ ಟೆಸ್ಟ್​ನಲ್ಲಿ ರೋಹಿತ್ ಪಡೆ ಹಿಡಿತ ಸಾಧಿಸಿದ್ದು, ಗೆಲುವು ಬಹುತೇಕ ಖಚಿತ ಆಗುತ್ತಿದೆ.

Advertisment

ಇದರ ಮಧ್ಯೆ ಬಿಸಿಸಿಐ ಎರಡನೇ ಟೆಸ್ಟ್​ಗೆ ತಂಡವನ್ನು ಪ್ರಕಟಿಸಬೇಕಿದೆ. ಮೊದಲ ಟೆಸ್ಟ್​ಗೆ ಪ್ರಕಟಿಸಿದ ತಂಡವನ್ನು ಬಿಸಿಸಿಐ ಉಳಿಸಿಕೊಳ್ಳೋದು ಡೌಟ್ ಆಗಿದೆ. ಪ್ರಮುಖವಾಗಿ ಎರಡು ಬದಲಾವಣೆ ಮಾಡುವ ನಿರೀಕ್ಷೆ ಇದೆ. ಎರಡನೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬೂಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಈ ಹಿಂದೆಯೇ ಬೂಮ್ರಾ ಸರಣಿಯಿಂದ ಹೊರಗುಳಿಯಲು ಸಿದ್ಧರಾಗಿದ್ದರು. ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ ಗೆಲುವು ಬಿಸಿಸಿಐಗೆ ಶಾಕ್ ನೀಡಿತ್ತು. ಹೀಗಾಗಿ ಬೂಮ್ರಾಗೆ ವಿಶ್ರಾಂತಿ ನೀಡಿರಲಿಲ್ಲ.

ಇದನ್ನೂ ಓದಿ:ಡೇಂಜರ್ ಝೋನ್​​ ತಲುಪಿದ KL ರಾಹುಲ್​; ಗೇಟ್ ಪಾಸ್​ ಕೊಡಲು ನಿರ್ಧರಿಸಿತಾ ಬಿಸಿಸಿಐ

publive-image

ಇನ್ನು ದುಲೀಪ್ ಟ್ರೋಫಿಯಲ್ಲಿ ಇಶಾನ್ ಕಿಶನ್ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ ಬ್ಯಾಕಪ್ ಕೀಪರ್‌ಗಳಾಗಿ ತಂಡದಲ್ಲಿದ್ದರೂ, ಸ್ಟ್ರಾಂಗ್​ ಕೀಪರ್ ಅಲ್ಲವೇ ಅಲ್ಲ. ಹೀಗಾಗಿ ಇಶಾನ್ ಕಿಶನ್​ಗೆ ಚಾನ್ಸ್ ನೀಡುವ ಸಾಧ್ಯತೆ ಇದೆ. ಜೈಸ್ವಾಲ್, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಿಶನ್ ಅವರ ಜಾವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಯಾಕೆಂದರೆ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ.

Advertisment

ಹಾಗೆಯೇ ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಚೆನ್ನೈನಲ್ಲಿ ಕಳಪೆ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿದ್ದಾರೆ. ಆಯ್ಕೆಗಾರರು ರಾಹುಲ್ ಅಥವಾ ಕೊಹ್ಲಿಯನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇಲ್ಲ. ಕೊಹ್ಲಿ ಆಡಲಿ, ಆಡದಿರಲಿ ಅವರ ಸ್ಥಾನ ಭದ್ರವಾಗಿದೆ. ಕೊಹ್ಲಿಗೆ ಸಿಕ್ಕಷ್ಟು ಅವಕಾಶ ಕೆ.ಎಲ್.ರಾಹುಲ್​ಗೆ ಸಿಗದಿರಬಹುದು.

ಇದನ್ನೂ ಓದಿ:ಮೂರು ಅನ್​ಕ್ಯಾಪ್ಡ್​ ಸ್ಟಾರ್​ ಮೇಲೆ RCB ಕಣ್ಣು; ಅವರಲ್ಲಿ ಓರ್ವ ದುಲೀಪ್ ಟ್ರೋಫಿ ಹೀರೋ

2ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ಕ್ಯಾಪ್ಟನ್), ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ಆರ್.ಅಶ್ವಿನ್, ಆರ್.ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಯಶ್ ದಯಾಳ್.

Advertisment

ಇದನ್ನೂ ಓದಿ:ಬೂಮ್ರಾ ದಾಳಿಗೆ ಕುಸಿದು ಬಿದ್ದ ಬಾಂಗ್ಲಾ.. ಕೊಹ್ಲಿ, ರೋಹಿತ್ ಮೇಲೆ ಗಂಭೀರ್​ ಮತ್ತೆ ಕೆಂಗಣ್ಣು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment