Advertisment

BIGG BOSS: ಬಳೆಗಳೇ ಯಾವಾಗಲೂ ಟಾರ್ಗೆಟ್​ ಯಾಕೆ? ವಿನಯ್​​​ ಗೌಡಗೆ ಕಿಚ್ಚ ಸುದೀಪ್​ ಸಖತ್ ಕ್ಲಾಸ್‌!

author-image
Veena Gangani
Updated On
BIGG BOSS: ಬಳೆಗಳೇ ಯಾವಾಗಲೂ ಟಾರ್ಗೆಟ್​ ಯಾಕೆ? ವಿನಯ್​​​ ಗೌಡಗೆ ಕಿಚ್ಚ ಸುದೀಪ್​ ಸಖತ್ ಕ್ಲಾಸ್‌!
Advertisment
  • ನೋಡ ನೋಡುತ್ತಿದ್ದಂತೆ ನಾಲ್ಕನೇ ವಾರಕ್ಕೆ ಕಾಲಿಟ್ಟ ಬಿಗ್​ಬಾಸ್​ ಸ್ಪರ್ಧಿಗಳು
  • ವೇದಿಕೆ ಮೇಲೆ​​ ಎಂಟ್ರಿ ಆಗುತ್ತಿದ್ದಂತೆ ವಿನಯ್​​ ಗೌಡಗೆ ಕಿಚ್ಚ ಸಖತ್​​ ಕ್ಲಾಸ್​!
  • ಪದೇ ಪದೇ ಕಿಚ್ಚ ಸುದೀಪ್​​ ಸ್ಪರ್ಧಿಗಳ ಮೇಲೆ ಗರಂ ಆಗುತ್ತಿರುವುದು ಏಕೆ?

ಬಿಗ್​ಬಾಸ್‌ ಸೀಸನ್‌ 10ರ​ ಸ್ಪರ್ಧಿಗಳು ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದಾರೆ. ಇಂದು ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿ ನಡೆಯಲಿದೆ. ಸದ್ಯ ಕಲರ್ಸ್​​ ಕನ್ನಡ ಲೇಟೆಸ್ಟ್‌ ಪ್ರೋಮೋವೊಂದನ್ನ ರಿಲೀಸ್ ಮಾಡಿದೆ. ಆ ಪ್ರೋಮೋದಲ್ಲಿ ಕಿಚ್ಚ ಸುದೀಪ್​​ ಎಂಟ್ರಿ ಆಗುತ್ತಿದ್ದಂತೆ ವಿನಯ್​​ ಗೌಡ ಅವರಿಗೆ ಸಖತ್​​ ಕ್ಲಾಸ್​​ ತೆಗೆದುಕೊಂಡಿದ್ದಾರೆ.

Advertisment

publive-image

ಬಿಗ್​ಬಾಸ್​​ ಕೊಟ್ಟ ಹಳ್ಳಿ ಟಾಸ್ಕ್​​​​​ನಲ್ಲಿ ವಿನಯ್​ ಗೌಡ ಕಾರ್ತಿಕ್​​ಗೆ ಬಳೆಗಳ ರಾಜ ಎಂಬ ಹೇಳಿಕೆ ನೀಡಿದ್ದರು. ಬಳಿಕ ಈ ಇಬ್ಬರ ನಡುವೆ ಮಾತಿನ ಚಕಮಕಿ ಸಹ ನಡೆದಿತ್ತು. ಆಗ ವಿನಯ್​​ ಗಂಡಸು ತರಹ ಆಡು.. ಬಳೆಗಳನ್ನ ಹಾಕಿಕೊಂಡು ಹೆಂಗಸು ತರಹ ಆಡೋದಲ್ಲ. ಬಾರೋ ಬಾ.. ಏಯ್ ಗಂಡಸು ಬಾ.. ದೊಡ್ಡ ಗಂಡಸು ನನ್ಮಗನೇ ನಾನೇ ಬಳೆ ಹಾಕೊಂಡಿರೋದು ಎಂದು ಸಹ ಹೇಳಿದ್ದರು. ಇದೇ ಮಾತುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಕೂಡ ಆಗುತ್ತಿತ್ತು. ಇತ್ತ ಬಿಗ್​ಬಾಸ್​ ಪ್ರೇಕ್ಷಕರು ಸಹ ಬಿಗ್​ಬಾಸ್​​ ಬರುವಿಕೆಗಾಗಿ ಕಾಯುತ್ತಾ ಇದ್ದರು. ಇದೀಗ ಆ ಸಂದರ್ಭ ಬಂದಿದೆ. ಈ ವಿಚಾರದ ಬಗ್ಗೆ ಕಿಚ್ಚ ಸುದೀಪ್​​​​ ವಿನಯ್​ ಗೌಡ ಅವರಿಗೆ ಸಖತ್​ ಕ್ಲಾಸ್​ ತಗೆದುಕೊಳ್ಳಲಿದ್ದಾರೆ.

https://twitter.com/i/status/1720751509816615112

ರಿಲೀಸ್​ ಆದ ಪ್ರೋಮೋದಲ್ಲಿ ಏನಿದೆ..?

ಹೌದು, ಬಿಗ್​ಬಾಸ್​ ಮನೆಯ ಎಲ್ಲಾ 15 ಸ್ಪರ್ಧಿಗಳಿಗೆ ಹಾಯ್​​​ ಎನ್ನುತ್ತಲೆ ವಿನಯ್​ ಗೌಡ ವಿರುದ್ಧ ಕಿಚ್ಚ ಸುದೀಪ್​ ಗರಂ ಆಗಿದ್ದಾರೆ. ಕಿಚ್ಚ ಸುದೀಪ್​ ವೇದಿಕೆ ಮೇಲೆ ಬರುತ್ತಿದ್ದಂತೆ ವಿನಯ್​ ಅವರೇ ಗಂಡಸು ತರಹ ಆಡು, ಬಳೆಗಳನ್ನ ಹಾಕಿಕೊಂಡು ಹೆಂಗಸು ತರಹ ಆಡಬೇಡ. ಬಳೆ ಅವನಿಗೆ ತೊಡಿಸು ಈ ಬಳೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಸರ್​​ ಎಂದು ಕಿಚ್ಚ ಸುದೀಪ್​ ವಿನಯ್​ಗೆ ಕೇಳುತ್ತಾರೆ. ಆಗ ಅದಕ್ಕೆ ಪ್ರತಿಕ್ರಿಯೆ ನೀಡಿದ ವಿನಯ್​​, ಕಾರ್ತಿಕ್​​ ಯಾವಾಗಲೂ ಸಂಗೀತಾ ಹಾಗೂ ತನಿಶಾ ಜೊತೆ ಇರುತ್ತಾನೆ ಸರ್​ ಅದಕ್ಕೆ ಹಾಗೇ ಹೇಳಿದ್ದೇನೆ. ಆಗ ಕಿಚ್ಚ ಸುದೀಪ್​​, ಅವರಿಬ್ಬರೂ ಕಾರ್ತಿಕ್​ ಒಟ್ಟಿಗೆ ಇದ್ದಾಗ ಅವರು ಯಾಕೆ ಮೀಸೆಗಳ ರಾಣಿಯರು ಆಗಿರಬಾರದು ಎಂದು ಪ್ರಶ್ನೆ ಮಾಡುತ್ತಾರೆ. ಹೆಣ್ಣು ಏಕೆ ಸರ್​ ಯಾವಾಗಲೂ ಟಾರ್ಗೆಟ್​ ಆಗಬೇಕು ಎಂದು ಹೇಳುತ್ತಾರೆ. ಆಗ ವಿನಯ್​​​ ಬೇಕು ಅಂತಾ ಹಾಗೆ ಮಾತಾಡಿಲ್ಲ ಸರ್​ ಎನ್ನುತ್ತಾರೆ. ಕೆಲವೊಂದು ಸಾರಿ ಸೈಲೆಂಟ್​ ಆಗಿ ಇದ್ದರೆ ಒಳ್ಳೆಯದು. ಮಾತಿನ ಮೇಲೆ ನಿಗಾ ಇರಲಿ ಎಂದು ವಾರ್ನಿಂಗ್​ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment