Advertisment

INDvsPAK; ಕೊಹ್ಲಿ ಬಿಟ್ಟುಕೊಟ್ಟ ಮಾತೇ ಇಲ್ಲ.. ಈ 5 ಇನ್ನಿಂಗ್ಸ್​ ಪಾಕ್​ ನೆನಪಲ್ಲಿ ಉಳಿಯುವಂತೆ ಮಾಡಿದ್ರು ಕಿಂಗ್​!

author-image
AS Harshith
Updated On
T20 ವಿಶ್ವಕಪ್​​ಗೆ ಮುನ್ನವೇ ಕ್ಯಾಪ್ಟನ್​ ರೋಹಿತ್​​ ಶರ್ಮಾಗೆ ಜಡೇಜಾ ಬಿಗ್​ ಶಾಕ್​​.. ಆಗಿದ್ದೇನು?
Advertisment
  • ಸಂಡೇ ಭಾರತ-ಪಾಕ್​ ಹೈವೋಲ್ಟೇಜ್​ ಮ್ಯಾಚ್​​​..!
  • ಕೊಹ್ಲಿ ಘರ್ಜನೆಗೆ ಪಾಕ್​ ಉಡೀಸ್​ ಆಗೋದು ಫಿಕ್ಸ್​
  • ಒಂದೊಂದು ಇನ್ನಿಂಗ್ಸ್ ಕಣ್ಣಿಗೆ ಹಬ್ಬ.. ಹೇಗಿವೆ ಗೊತ್ತಾ..?

ಭಾರತ vs​​​ ಪಾಕಿಸ್ತಾನ. ಈ ಹೆಸರು ಕೇಳಿದಾಕ್ಷಣ ತಟ್ಟನೇ ನೆನಪಾಗೋದು ಕಿಂಗ್ ಕೊಹ್ಲಿ. ಯಾಕಂದ್ರೆ ಬದ್ಧವೈರಿ ವಿರುದ್ಧ ಕೊಹ್ಲಿ ರಾಜದರ್ಬಾರ್ ನಡೆಸಿದ್ದಾರೆ. ಅದ್ಭುತ ಆಟವಾಡಿ ಫ್ಯಾನ್ಸ್ ರಂಜಿಸಿದ್ದಾರೆ. ಟಿ20 ವಿಶ್ವಕಪ್ ಸಂಗ್ರಾಮದಲ್ಲಿ ರನ್ ಮಷೀನ್​​ ಪಾಕ್​​ ವಿರುದ್ಧ ಕಟ್ಟಿದ ಸೂಪರ್ ಡೂಪರ್​​​ ಇನ್ನಿಂಗ್ಸ್​ಗಳನ್ನ ಯಾರೊಬ್ಬ ಕ್ರಿಕೆಟ್ ಪ್ರೇಮಿ ಮರೆಯಲು ಸಾಧ್ಯವಿಲ್ಲ. ಅಂತಹ ಅಚ್ಚಳಿಯದೇ ಉಳಿದಿರೋ ಟಾಪ್​​​​​​-5 ಇನ್ನಿಂಗ್ಸ್​ಗಳು ಇಲ್ಲಿವೆ.

Advertisment

ಬದ್ಧವೈರಿ ಇಂಡೋ-ಪಾಕ್​ ಕಾದಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಮೆಗಾ ಬ್ಯಾಟಲ್​​ಗೆ ಎರಡೇ ದಿನ ಬಾಕಿ ಇದ್ದು, ಎಲ್ಲರ ಪೋಕಸ್​​​ ಕಿಂಗ್ ಕೊಹ್ಲಿ ಕಡೆ ಶಿಫ್ಟ್ ಆಗಿದೆ. ಅದಕ್ಕೆ ಕಾರಣವು ಇದೆ. ಹಿಂದೆ ಪಾಕ್​ ವಿರುದ್ಧ ಆಡಿದಾಗಲೆಲ್ಲಾ ರನ್ ಶಿಖರ ಏರಿದ್ದಾರೆ. ಬ್ಯಾಟ್ ಅನ್ನೋ ಅಸ್ತ್ರದಿಂದ ಸಿಡಿದು ಬದ್ಧವೈರಿಯನ್ನ ಉಡೀಸ್ ಮಾಡಿದ್ದಾರೆ. ಟಿ20 ವಿಶ್ವಕಪ್ ದಂಗಲ್​ನಲ್ಲಿ ಪಾಕ್ ವಿರುದ್ಧ ಕೊಹ್ಲಿ ಕಟ್ಟಿದ ದಿ ಬೆಸ್ಟ್​​ ಫೈವ್​ ಇನ್ನಿಂಗ್ಸ್​ಗಳನ್ನ ನೆನಪಿಸಿಕೊಳ್ಳಲೇಬೇಕು.

publive-image

ಕಿಂಗ್ ಕೊಹ್ಲಿ ಕೆಚ್ಚೆದೆಯ ಹೋರಾಟಕ್ಕೆ ತಲೆಬಾಗಿದ ಪಾಕ್​​​​..!

ಇದು ಟಿ20 ವಿಶ್ವಕಪ್​ನಲ್ಲಿ ಕಿಂಗ್ ಕೊಹ್ಲಿ ಕಟ್ಟಿದ ಗ್ರೇಟೆಸ್ಟ್​ ಇನ್ನಿಂಗ್ಸ್​​. 2022ರ ಟಿ20 ವಿಶ್ವಕಪ್​​ನಲ್ಲಿ ಭಾರತ ಸೋಲಿನ ಸುಳಿಯಲ್ಲಿತ್ತು. ಮೆಲ್ಬರ್ನ್​ ಮೈದಾನದಲ್ಲಿ ಸಿಡಿದೆದ್ದ ಕೊಹ್ಲಿ ಗೆಲುವಿಗಾಗಿ ಟೊಂಕಕಟ್ಟಿ ಹೋರಾಡಿದ್ರು.53 ಎಸೆತಗಳಲ್ಲಿ ಸ್ಪೋಟಕ ಅಜೇಯ 82 ರನ್ ಚಚ್ಚಿ, ಭಾರತದ ರಣರೋಚಕ ಗೆಲುವಿಗೆ ಕಾರಣರಾಗಿದ್ರು.

ಗುಡುಗಿದ ಕೊಹ್ಲಿ..ಭಾರತಕ್ಕೆ ರಣರೋಚಕ ಗೆಲುವು..!

ಇದಂತೂ ಕ್ಲಾಸ್ ಇನ್ನಿಂಗ್ಸ್ ಬಿಡಿ. 147 ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭಿಕರನ್ನೇ ಬೇಗನೆ ಕಳೆದುಕೊಳ್ತು. ಆಗ ಕಿಂಗ್ ಕೊಹ್ಲಿ ಕ್ರೀಸ್​ನಲ್ಲಿ ನೆಲಕಚ್ಚಿ ನಿಂತ್ರು. ಟಫ್​​​ ಸಿಚುವೇಶನ್​ನಲ್ಲಿ ದಿಟ್ಟ ಆಟವಾಡಿದ ಕೊಹ್ಲಿ 34 ರನ್ ಗಳಿಸಿ ತಂಡಕ್ಕೆ ಗೆಲುವಿನ ಸರಾಮಾಲೆ ಧರಿಸಿದ್ರು. ಒಂದು ವೇಳೆ ಕೊಹ್ಲಿ ಬೇಗನೆ ಔಟಾಗಿದ್ರೆ ಗೆಲುವು ಮರೀಚಿಕೆ ಆಗ್ತಿತ್ತು.

Advertisment

ಇದನ್ನೂ ಓದಿ: ಚಿಕ್ಕಮಗಳೂರು TO ಅಮೆರಿಕ.. T20 ವಿಶ್ವಕಪ್​​ನಲ್ಲಿ ಪಾಕ್​ಗೆ ಮುಖಭಂಗ ಮಾಡಿದ ಕನ್ನಡಿಗ.. ಈತನ ಬಗ್ಗೆ ಗೊತ್ತಾ?

publive-image

ಭಾರತದ ಕ್ರಿಕೆಟ್ ಕಾಶಿಯಲ್ಲಿ ವಿರಾಟ್ ವೀರಾವೇಶ

2016ರ ಟಿ20 ವಿಶ್ವಕಪ್​ನಲ್ಲಿ ಭಾರತ-ಪಾಕ್​ ತಂಡಗಳು ಈಡನ್ ಗಾರ್ಡನ್ಸ್​ನಲ್ಲಿ ಮುಖಾಮುಖಿಯಾಗಿದ್ವು.ಇಲ್ಲಿ ಕೊಹ್ಲಿ ವೀರಾವೇಶ ತೋರಿದ್ರು. 37 ಎಸೆತಗಳಲ್ಲಿ 7 ಬೌಂಡ್ರಿ, 1 ಸಿಕ್ಸರ್ ಸಹಿತ 55 ರನ್ ಗಳಿಸಿದ್ರು. ವಿರಾಟ್​ ಆರ್ಭಟಕ್ಕೆ ಬೆಚ್ಚಿಬಿದ್ದ ಪಾಕ್​ ತಂಡ ಹೀನಾಯ ಸೋಲು ಕಾಣ್ತು.

ಇದನ್ನೂ ಓದಿ: ಕೊಹ್ಲಿ, ಶರ್ಮಾ, ಪಂತ್ ಅಲ್ಲವೇ ಅಲ್ಲ.. ಭಾರತದ ಈ ಆಟಗಾರನ ಟಾರ್ಗೆಟ್ ಮಾಡಿದ ಪಾಕ್..!

Advertisment

ಸೋಲಿನಲ್ಲೂ ದುಸ್ವಪ್ನರಾಗಿ ಕಾಡಿದ ರನ್ ಮಷೀನ್​​​..!

2021ರ ಟಿ20 ವಿಶ್ವಕಪ್​ ಸಮರ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತಕ್ಕೆ ನಂಬಿಗಸ್ಥ ಬ್ಯಾಟ್ಸ್​​ಮನ್​ ಅನ್ನಿಸಿಕೊಂಡೋರೆಲ್ಲಾ ಕೈಕೊಟ್ರು. ಆದರೆ ಕೊಹ್ಲಿ ಸಂಕಷ್ಟದಲ್ಲಿ ತಂಡದ ಬೆನ್ನಿಗೆ ನಿಂತ್ರು. ಅಮೋಘ 57 ರನ್ ಗಳಿಸಿ ಸ್ಪರ್ಧಾತ್ಮಕ ಸ್ಕೋರ್ ಕಲೆಹಾಕಲು ಕಾರಣರಾದ್ರು. ಆದರೆ ಈ ಪಂದ್ಯದಲ್ಲಿ ಭಾರತ ಪರಾಭವಗೊಳ್ತು. ಸೋಲಿನಲ್ಲಿ ಕಿಂಗ್ ಕೊಹ್ಲಿ ಇನ್ನಿಂಗ್ಸ್​ ಎಲ್ಲರ ಹೃದಯ ನಾಟಿತ್ತು.

publive-image

ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿದ ವೀರಸೇನಾನಿ

2012ರ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ, ಬದ್ಧವೈರಿ ಪಾಕ್​ಗೆ ಸೋಲಿನ ದರ್ಶನ ಮಾಡಿಸಿದ್ರು. ಅಲ್ಪ ಗುರಿ ತಂಡದ ಮುಂದಿದ್ರೂ, ಸಿಡಿಗುಂಡು ವಿರೇಂದ್ರ ಸೆಹ್ವಾಗ್​​​, ಗಂಭೀರ್​​​ ಬೇಗನೇ ಪೆವಿಲಿಯನ್ ಸೇರಿಸಿದ್ರು. ಆದರೂ ಕೊಹ್ಲಿ ದೃತಿಗೆಡಲಿಲ್ಲ. 61 ಎಸೆತಗಳಲ್ಲಿ ಸಿಡಿಲಬ್ಬರದ 78 ರನ್ ಸಿಡಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ರು.

ಇದನ್ನೂ ಓದಿ: IND vs PAK .. ನಸ್ಸೌ ಸ್ಟೇಡಿಯಂ ಕಂಡೀಷನ್ ಯಾವ ತಂಡಕ್ಕೆ ಹೆಚ್ಚು ವರ ಆಗಿದೆ ಗೊತ್ತಾ..?

Advertisment

ಪಾಕ್​ ವಿರುದ್ಧ ಕಿಂಗ್ ಕೊಹ್ಲಿ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ಪಂಟರ್​​​. ಮೇಲಿನ ಟಾಪ್​​​​​​​-5 ಇನ್ನಿಂಗ್ಸ್​​​ ಅದಕ್ಕೆ ಉತ್ತಮ ನಿದರ್ಶನ. ಸಂಡೇ ಮಹಾಸಮರದಲ್ಲಿ ಇಂತಹದೇ ಮತ್ತೊಂದು ರಾಕಿಂಗ್ ಪರ್ಫಾಮೆನ್ಸ್​ ಮೂಡಿರಲಿ ಅನ್ನೋದು ಎಲ್ಲರ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment