/newsfirstlive-kannada/media/media_files/2025/09/19/russia-soul-deal-2025-09-19-14-57-41.jpg)
ಅಂತಾರ್ಜಾಲದಿಂದಾಗಿ ಇಡೀ ಜಗತ್ತು ನಮ್ಮ ಅಂಗೈಯಲ್ಲಿದೆ. ಇಲ್ಲಿ ಏನನ್ನಾದ್ರೂ ಕೊಳ್ಳಬಹುದು, ಏನನ್ನಾದರೂ ಮಾರಾಟ ಮಾಡಬಹುದು. ನಿಮಗೆ ಉಪಯೋಗವಿಲ್ಲದ ಹಳೆಯ ವಸ್ತುಗಳನ್ನು ಮಾರಲೂ ಸಹ ಇಲ್ಲಿ ಅವಕಾಶವಿದೆ. ಸಾಮಾಜಿಕ ಮಾಧ್ಯಮವನ್ನ ಕೆಲವರು ಅವಶ್ಯಕತೆಗಳಿಗನುಗುಣವಾಗಿ ಉಪಯೋಗಿಸಿದ್ರೆ ಇನ್ನೂ ಕೆಲವರು ಪ್ರಚಾರ, ಟ್ರೆಂಡಿಂಗ್​ಗಾಗಿ ಏನನ್ನಾದರೂ ಮಾಡಲು ರೆಡಿ ಇರುತ್ತಾರೆ. ಇದೀಗ ರಷ್ಯಾದಿಂದ ವಿಚಿತ್ರ ಸುದ್ದಿ ಬಂದಿದೆ. ಅದು ಆತ್ಮ ಮಾರಾಟ!
ಹೌದು, ರಷ್ಯಾದ ಮಹಿಳೆಯೊಬ್ಬಳು ತನ್ನ ಆತ್ಮವನ್ನೇ ಮಾರಾಟ ಮಾಡಿದ್ದಾಳೆ. ಅದೂ ಒಂದಲ್ಲ, ಎರಡಲ್ಲ, ಬರೋಬ್ಬರಿ 100,000 ರೂಬಲ್ಸ್​ಗೆ ಅಂದರೆ 1 ಲಕ್ಷ ರೂ.ಗೆ ತನ್ನ ಆತ್ಮ ಮಾರಾಟ ಮಾಡಿದ್ದಾಳೆ. ಅದಕ್ಕೆ ಒಪ್ಪಂದ ಸಹ ಆಗಿದ್ದು ಅದೂ ತಮಾಷೆಯಲ್ಲ. ರಕ್ತದಲ್ಲಿ ಒಪ್ಪಂದಕ್ಕೆ ಸಹಿ ಮಾಡಿದ್ದಾಳೆ.
ಇದನ್ನೂ ಓದಿ:ಭಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ಹಾದಿ ಸುಗಮ, ಪ್ರಶ್ನಿಸಿದ್ದ ಅರ್ಜಿ ಸುಪ್ರೀಂಕೋರ್ಟ್ ನಲ್ಲೂ ವಜಾ
/filters:format(webp)/newsfirstlive-kannada/media/media_files/2025/09/19/russia-soul-deal-2-2025-09-19-15-03-24.jpg)
ವರದಿಯ ಪ್ರಕಾರ ಡಿಮಿಟ್ರಿ ಎಂಬ ಮಾರ್ಕೆಟಿಂಗ್ ಸಲಹೆಗಾರ ರಷ್ಯಾದ ಸಾಮಾಜಿಕ ಮಾಧ್ಯಮ ವೇದಿಕೆ Vkontakteನಲ್ಲಿ ತಮಾಷೆಯಾಗಿ ಪೋಸ್ಟ್ ಮಾಡಿದ್ದ. ಯಾರಾದಾದ್ರೂ ಆತ್ಮ ಖರೀದಿಸಲು ಬಯಸಿದ್ದೇನೆ ಅಂತ ಪೋಸ್ಟ್ ಹಾಕಿದ್ದ. ಇದನ್ನು ತಮಾಷೆ ಎಂದೇ ಭಾವಿಸಲಾಗಿತ್ತು. ಆದರೆ ಕರೀನಾ ಎಂಬ ಮಹಿಳೆ ಈ ಪ್ರಸ್ತಾಪವನ್ನೇ ಗಂಭೀರವಾಗಿ ಪರಿಗಣಿಸಿದ್ದಾಳೆ. ಅಲ್ಲದೇ ತನ್ನ ಆತ್ಮ ಮಾರಾಟ ಮಾಡಲು ಒಪ್ಪಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಅದಕ್ಕೆ ಒಪ್ಪಂದ ಸಹ ಮಾಡಿಕೊಟ್ಟಿದ್ದಾಳೆ. ಅದೂ ರಕ್ತದಲ್ಲಿ ಬರೆದು ಸಹಿ ಮಾಡಿ ಕೊಟ್ಟಿದ್ದಾಳೆ. ಆ ಬಳಿಕ ಡಿಮಿಟ್ರಿ ಸಾಮಾಜಿಕ ಮಾಧ್ಯಮದಲ್ಲಿ ಫೋಸ್ಟ್​ ಹಂಚಿದ್ದಾರೆ. ನಾನು ಮೊದಲ ಆತ್ಮವನ್ನು ಖರೀದಿಸಿದ್ದೇನೆ. ಇದು ರಕ್ತದಲ್ಲಿ ಒಪ್ಪಂದ ಅಂತ ಪೋಸ್ಟ್​ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/09/19/russia-soul-deal-1-2025-09-19-15-03-39.jpg)
ರಕ್ತದಲ್ಲಿ ಸಹಿ ಮಾಡಿದ ಫೋಟೋ ಈಗ ವೈರಲ್ ಆಗುತ್ತಿದೆ. ಅದರಲ್ಲಿ ರಕ್ತದಿಂದ ಶಾಯಿ ಹಚ್ಚಿದ ಸ್ಟ್ಯಾಂಪ್ ಮಾಡಿದ ಕಾಗದವಿದೆ. ಅಷ್ಟೇ ಆ ಮಹಿಳೆಯ ಅಕೌಂಟ್​ಗೆ ಹಣ ಸಹ ಜಮೆಯಾಗಿದೆ. ಈ ಒಪ್ಪಂದದ ಬಗ್ಗೆ ಯಾವುದೇ ವಿಷಾದವಿಲ್ಲ ಅಂತ 26 ವರ್ಷದ ಕರೀನಾ ಹೇಳಿದ್ದಾಳೆ. ಆ ಹಣದಿಂದ ಕೂಡಲೇ ಲಬುಬು ಗೊಂಬೆಗಳು, ಜೊತೆಗೆ ಪ್ರಸಿದ್ದ ಗಾಯಕಿ ನಾಡೆಜ್ಡಾ ಕಡಿಶೇವಾ ಅವರ ಸಂಗೀತ ಕಚೇರಿಯ ಟಿಕೆಟ್ ಖರೀದಿಸಲು ಬಳಸಿದ್ದಾಳೆ.
ಈ ಬಗ್ಗೆ ಡಿಮಿಟ್ರಿ, ತಪಾಷೆಗಾಗಿ ಆಫರ್ ನೀಡಿದ್ದೆ. ಆ ಮಹಿಳೆ ಗಂಭೀರವಾಗಿ ಪರಿಗಣಿಸುತ್ತಾಳೆ ಅಂದುಕೊಂಡಿರಲಿಲ್ಲ. ಈಗ ಖರೀದಿಸಿದ ಆತ್ಮದೊಂದಿಗೆ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೇನೆ ಎಂದಿದ್ದಾರೆ. ರಷ್ಯಾದ ಆರ್ಥೋಡಾಕ್ಸ್​ ಚರ್ಚೆ ಈ ಒಪ್ಪಂದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಇದು ಕೆಟ್ಟದ್ದು, ಇದರಿಂದ ಅನಾರೋಗ್ಯ, ಕೆಟ್ಟದ್ದು ಸಂಭವಿಸಲಿದೆ ಅಂತ ಎಚ್ಚರಿಸಿದೆ.
ಇದನ್ನೂ ಓದಿ:ಇಶಾನಿ ಬರ್ತ್​ಡೇ.. ವಿನಯ್, ತನಿಷಾ, ನೀತು ಸೇರಿ ಯಾರೆಲ್ಲ ಬಂದಿದ್ದರು?
ಆತ್ಮ ಖರೀದಿ, ಮಾರಾಟದ ವಿಚಿತ್ರ ಕಲ್ಪನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ರಷ್ಯಾದಲ್ಲಿ ಆತ್ಮವನ್ನು ಅಮರ, ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅಂಥ ವ್ಯವಹಾರಗಳನ್ನು ಪಾವಿತ್ರ್ಯಕ್ಕೆ ಮಾಡಿದ ಅಣಕ. ಆತ್ಮದಂಥ ಅಮೂರ್ತ ವಸ್ತುವಿನ ಮಾರಾಟ ಅಥವಾ ಖರೀದಿ ಸರೀನಾ ಎಂಬ ಚರ್ಚೆ ಹುಟ್ಟು ಹಾಕಿದೆ.
ವಿಶೇಷ ವರದಿ: ವಿಶ್ವನಾಥ್, ಸೀನಿಯರ್ ಕಾಪಿ ಎಡಿಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us