/newsfirstlive-kannada/media/media_files/2025/08/24/sara-tendulkar-1-2025-08-24-17-06-53.jpg)
ಸಾರಾ ತೆಂಡುಲ್ಕರ್
ಸಚಿನ್ ತೆಂಡುಲ್ಕರ್.. ಕ್ರಿಕೆಟ್ ಲೋಕದ ಅನಭಿಷಕ್ತ ದೊರೆ.. 24 ವರ್ಷಗಳ ಸುದೀರ್ಘ ಕ್ರಿಕೆಟ್ ಕರಿಯರ್ನಲ್ಲಿ ಈ ಬ್ಯಾಟಿಂಗ್ ಮಾಂತ್ರಿಕ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಬೆಂಕಿಯುಂಡೆಗಳನ್ನ ಉಗುಳಿತಿದ್ದ ಬೌಲರ್ಗಳ ಬೆವರಿಳಿಸಿ ಮಾಸ್ಟರ್ ಬ್ಲಾಸ್ಟರ್ ರನ್ ಕೋಟೆ ಕಟ್ಟುತ್ತಿದ್ರೆ ಎದುರಾಳಿ ಪಡೆ ದಿಕ್ಕೆಟ್ಟು ಹೋಗ್ತಿತ್ತು. ಕ್ರಿಕೆಟ್ ದೇವರು ಕ್ರಿಸ್ನಲ್ಲಿದ್ದಷ್ಟು ಹೊತ್ತು ಫ್ಯಾನ್ಸ್ಗಂತೂ ಹಬ್ಬವೇ ಬಿಡಿ. ಇಡೀ ವಿಶ್ವವೇ ದಿಗ್ಗಜನ ಆಟಕ್ಕೆ ತಲೆಬಾಗಿತ್ತು.
ಇದನ್ನೂ ಓದಿ:‘ಭರ್ಜರಿ ಬ್ಯಾಚುಲರ್ಸ್’ ಖ್ಯಾತಿಯ ರಮೋಲಾ ವಿರುದ್ಧ ದೂರು ದಾಖಲು
ಈ ಕ್ರಿಕೆಟ್ ದೇವರು ಬ್ಯಾಟ್ ಕೆಳಗಿಟ್ಟು ದಶಕವೇ ಉರುಳಿತು. ಆ ಹೆಸರಿಗಿರೋ ಗತ್ತು, ಗೈರತ್ತು ಕಿಂಚಿತ್ತೂ ಕುಂದಿಲ್ಲ. ನೇಮ್ಗಿರೋ ಪವರ್ರೇ ಬೇರೆ. ಆದ್ರೆ ಸಚಿನ್ ಪುತ್ರಿ ಸಾರಾಗೆ ಅಪ್ಪನ ಹೆಸರು, ಅದಕ್ಕಿರೋ ಪವರ್ ಬೇಡ್ವಂತೆ. ಸಚಿನ್ ತೆಂಡುಲ್ಕರ್ ಪುತ್ರಿ ಅನ್ನೋದನ್ನ ಸೈಡ್ಗಿಟ್ಟು ತನ್ನದೇ OWN IDENTITY ಕ್ರಿಯೇಟ್ ಮಾಡಿಕೊಳ್ಳೋಕೆ ಹೊರಟಿದ್ದಾರೆ.
ಹೊಸ ಬದುಕಿಗೆ ಹೆಜ್ಜೆ ಇಟ್ಟ ಸಾರಾ ತೆಂಡುಲ್ಕರ್
17 ವರ್ಷಕ್ಕೆ ಭಾರತವನ್ನ ಬಿಟ್ಟು ಹಾರಿದ್ದ ಸಾರಾ ತೆಂಡುಲ್ಕರ್ ವಿದೇಶದಲ್ಲಿ ಓದು ಮುಗಿಸಿ ವಾಪಾಸ್ಸಾಗಿದ್ದಾರೆ. ಕಳೆದೊಂದು ವರ್ಷದಿಂದ ಹಲವು ಹುಡುಕಾಟ ನಡೆಸಿದ್ದ ಸಾರಾ, ಇದೀಗ ಬದುಕಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಬ್ಯುಸಿನೆಸ್ ಕ್ಷೇತ್ರಕ್ಕೆ ಸಾರಾ ಕಾಲಿಟ್ಟಿದ್ದು, ಮುಂಬೈನಲ್ಲಿ ಹೊಸ ಸ್ಟುಡಿಯೋ ಓಪನ್ ಮಾಡಿದ್ದಾರೆ. ಜಿಮ್ಗಿಂತ ಸ್ವಲ್ಪ ವಿಭಿನ್ನವಾದ ಫಿಟ್ನೆಸ್ಗೆ ಸಂಬಂಧಿಸಿದ ಪಿಲಾಟಿಸ್ ಸ್ಟುಡಿಯೋ ಸಾರಾ ಮುಂಬೈನಲ್ಲಿ ಆರಂಭಿಸಿದ್ದಾರೆ. ಇದನ್ನ ಸ್ವತಃ ಸಚಿನ್ ಇದನ್ನ ಉದ್ಘಾಟನೆ ಮಾಡಿದ್ದಾರೆ.
ಇದನ್ನೂ ಓದಿ: ‘ನಾಪತ್ತೆಯಾದ ಹೆಣ್ಮಕ್ಕಳ ಕುಟುಂಬಕ್ಕೆ ನ್ಯಾಯ ಸಿಗ್ಬೇಕು’.. ಧರ್ಮಸ್ಥಳ ಕೇಸ್ ಬಗ್ಗೆ ಗಲ್ರಾನಿ ಏನಂದ್ರು?
ಸಾರಾ ಏನೇ ಮಾಡಿದ್ರೂ ಪ್ರತ್ಯೇಕ್ಷ, ಪರೋಕ್ಷವಾಗಿ ಸಚಿನ್ ಹೆಸ್ರು ಅಲ್ಲಿ ಬಂದೇ ಬರುತ್ತೆ. ಸೋಷಿಯಲ್ ಆಗಿ ಅಲ್ಲದಿದ್ರೂ, ಫೈನಾನ್ಶಿಯಲಿ ಡಿಪೆಂಡ್ ಆಗಬಾರದು ಅನ್ನೋದು ಸಾರಾ ಪ್ರಯತ್ನವಾಗಿದೆ. ಈ ಸ್ವಂತ ಐಡೆಂಟಿಟಿ ಕ್ರಿಯೇಟ್ ಮಾಡಿಕೊಳ್ಳೋಕೆ ಹಲವು ವರ್ಷಗಳಿಂದಲೇ ಸಾರಾ ಪ್ರಯತ್ನ ಪಡ್ತಿದ್ದಾರೆ.
ಕಾಂಗರೂ ನಾಡಿನ ಪ್ರವಾಸೋದ್ಯಮಕ್ಕೆ ಅಂಬಾಸಿಡರ್
ಸದ್ಯ ಹೊಸ ಸ್ಟುಡಿಯೋ ಓಪನ್ ಮಾಡಿರೋ ಸಾರಾ, ಈ ತಿಂಗಳ ಆರಂಭದಲ್ಲಿ ಬಿಗ್ ಡೀಲ್ಗೆ ಸೈನ್ ಹಾಕಿದ್ರು. ಆಸ್ಟ್ರೇಲಿಯಾ ಸರ್ಕಾರದ ಆಫರ್ ಒಪ್ಪಿಕೊಂಡಿರೋ ಸಾರಾ ಈಗ ಅಲ್ಲಿ ಪ್ರವಾಸೋದ್ಯಮದ ಅಂಬಾಸಿಡರ್. ಭಾರೀ ಮೊತ್ತದ ಒಪ್ಪಂದಕ್ಕೆ ಸಾರಾ, ಆಸಿಸ್ ಸರ್ಕಾರದೊಂದಿಗೆ ಸೈನ್ ಹಾಕಿದ್ದಾರೆ.
ಜಾಹೀರಾತು ಲೋಕದಲ್ಲಿ ಸಾರಾಗೆ ಫುಲ್ ಡಿಮ್ಯಾಂಡ್
ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರೋ ಸಾರಾಗೆ ಜಾಹೀರಾತು ಲೋಕದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ದೇಶ, ವಿದೇಶದ ಹಲವಾರು ಬಿಗ್ ಬ್ರ್ಯಾಂಡ್ಗಳಿಗೆ ಸಾರಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಇನ್ನೂ ಪ್ರಖ್ಯಾತ ಬ್ರ್ಯಾಂಡ್ ಸಾರಾ ಒಪ್ಪಿಗೆಗಾಗಿ ಕಾಯ್ತಿವೆ.
ವಿದೇಶದಲ್ಲಿ ಪದವಿ, ನ್ಯೂಟ್ರಿಶಿಯನ್ ವೃತ್ತಿ
ಅಂದ್ಹಾಗೆ ಸಾರಾ ತೆಂಡುಲ್ಕರ್ ಲಂಡನ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಪೌಷ್ಟಿಕಾಂಶದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಾರಾ, ಮಾಡೆಲ್ ಜೊತೆಗೆ ಬಯೋಮೆಡಿಕಲ್ ಸೈಂಟಿಸ್ಟ್ ಕೂಡಾ ಹೌದು. ನ್ಯೂಟ್ರಿಶಿಯನ್ ಆಗಿ ಕೆಲಸ ಮಾಡ್ತಿದ್ದಾರೆ.
ಇದನ್ನೂ ಓದಿ:ಧನ್ಯತಾ ಜೊತೆಗೆ ಡಾಲಿ ಧನಂಜಯ್ ಯೂರೋಪ್ ಪ್ರವಾಸ.. ಟಾಪ್ ಫೋಟೋಸ್ ಇಲ್ಲಿವೆ..!
ಸಾರಾ ತೆಂಡೂಲ್ಕರ್ ಅನ್ನೋ E-ಕಾಮರ್ಸ್ ಆನ್ಲೈನ್ ಸ್ಟೋರ್ ಅನ್ನೋ ಸಾರಾ ನಡೆಸ್ತಿದ್ದಾರೆ. ಒಟ್ಟಿನಲ್ಲಿ, ಫ್ಯಾಷನ್, ಮಾಡಲಿಂಗ್, ಬ್ಯುಸಿನೆಸ್ ಎಲ್ಲಾ ಕ್ಷೇತ್ರಗಳಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ತಂದೆಯ ಐಡೆಂಟಿಟಿಯ ಹೊರತಾಗಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡೋಕೆ ಪ್ರಯತ್ನ ಮಾಡ್ತಿದ್ದಾರೆ. ಈ ಪ್ರಯತ್ನಕ್ಕೆ ದೊಡ್ಡ ಸಕ್ಸಸ್ ಸಿಗಲಿ.
ಇದನ್ನೂ ಓದಿ:ಫುಲ್ ಗ್ಲಾಮರ್ ಲುಕ್ನಲ್ಲಿ ದರ್ಶನ್.. ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ರಿಲೀಸ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ