Advertisment

Heavy rain: ಬರೋಬ್ಬರಿ 34 ಮಂದಿಯ ಜೀವ ತೆಗೆದ ಮಳೆ, ಸಿಡಿಲು.. ಒಂದೇ ದಿನ 10 ಜನರು ಸಾವು

author-image
Ganesh
Updated On
Heavy rain: ಬರೋಬ್ಬರಿ 34 ಮಂದಿಯ ಜೀವ ತೆಗೆದ ಮಳೆ, ಸಿಡಿಲು.. ಒಂದೇ ದಿನ 10 ಜನರು ಸಾವು
Advertisment
  • ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ
  • 17 ಜನ ಸಿಡಿಲು ಬಡಿದು ಪ್ರಾಣ ಕಳ್ಕೊಂಡಿದ್ದಾರೆ
  • ಮತ್ತಷ್ಟು ಸಾವು-ನೋವುಗಳ ಆತಂಕ

ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಉತ್ತರ ಪ್ರದೇಶ ಒಂದರಲ್ಲೇ 34 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಳೆ ಮತ್ತು ಅದರಿಂದ ಉಂಟಾದ ಅನಾಹುತದಿಂದ 34 ಜನ ಸಾವನ್ನಪ್ಪಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಸರ್ಕಾರ ತಿಳಿಸಿದೆ.

Advertisment

24 ಗಂಟೆಯಲ್ಲಿ ಕನಿಷ್ಠ 10 ಮಂದಿ ಅಸು ನೀಗಿದ್ದಾರೆ. ಮೃತ 34 ಮಂದಿಯಲ್ಲಿ 17 ಜನರು ಸಿಡಿಲಿಗೆ ಸಾವನ್ನಪ್ಪಿದ್ದರೆ, 12 ಜನರು ನೀರಲ್ಲಿ ಮುಳುಗಿ ಇನ್ನು ಐವರು ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಪ್ರವಾಹ ಮತ್ತು ಭೂಕುಸಿತ ನಿರಂತರವಾಗಿ ನಡೆಯುತ್ತಿದ್ದು, ಮತ್ತಷ್ಟು ಸಾವು-ನೋವುಗಳ ಆತಂಕ ಮನೆಮಾಡಿದೆ.

ಇನ್ನು, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಯೋದಿ ಆದಿತ್ಯನಾಥ್ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಗಾಯಗೊಂಡವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡುವ ಭರವಸೆಯನ್ನೂ ನೀಡಿದ್ದಾರೆ. ಉತ್ತರ ಪ್ರದೇಶ ರಾಜ್ಯದಲ್ಲಿ ಕಳೆದ ಬಾರಿಗಿಂತ 11 ಪರ್ಸೆಂಟ್ ಹೆಚ್ಚುವರಿ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದೆ, ಪ್ರವಾಹಗಳು ಸಂಭವಿಸುತ್ತಿವೆ. ಇಂಡಿಯನ್ ಮೆಟ್ರೊಲಾಜಿಕಲ್ ಡಿಪಾರ್ಟ್​​ಮೆಂಟ್ ಮಾಹಿತಿ ಪ್ರಕಾರ, ದೇಶದ 75 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. 68 ಜಿಲ್ಲೆಗಳು ಹಾನಿಗೊಳಗಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment