Advertisment

ಭದ್ರಕೋಟೆ ಎನಿಸಿದ್ದ ರಾಜ್ಯಗಳಲ್ಲೇ ಶಾಕ್.. ಬಿಜೆಪಿಗೆ ಹೊಡೆತ ಬಿದ್ದಿದ್ದು ಎಷ್ಟು ರಾಜ್ಯಗಳಲ್ಲಿ..?

author-image
Ganesh
Updated On
ಭದ್ರಕೋಟೆ ಎನಿಸಿದ್ದ ರಾಜ್ಯಗಳಲ್ಲೇ ಶಾಕ್.. ಬಿಜೆಪಿಗೆ ಹೊಡೆತ ಬಿದ್ದಿದ್ದು ಎಷ್ಟು ರಾಜ್ಯಗಳಲ್ಲಿ..?
Advertisment
  • ರಾಜಸ್ಥಾನದಲ್ಲಿ ಬಿಜೆಪಿಗೆ 11 ಕ್ಷೇತ್ರಗಳು ಖೋತಾ!
  • ಮಹಾರಾಷ್ಟ್ರದಲ್ಲಿ ಅಘಾಡಿ ಎದುರು ಮಂಕಾದ ಮೈತ್ರಿ!
  • ಕರ್ನಾಟಕದಲ್ಲೂ ನಿರೀಕ್ಷಿತ ಸಾಧನೆ ತೋರದ ಬಿಜೆಪಿ

400 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಎನ್​ಡಿಎಗೆ ಈ ಬಾರಿ 300 ಸೀಟು ಕೂಡಾ ದಕ್ಕಿಲ್ಲ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಏಕಾಂಗಿಯಾಗಿ ಬಹುಮತ ಪಡೆದಿದ್ದ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತವನ್ನೂ ತಲುಪಿಲ್ಲ. ಎನ್‌ಡಿಎ ಮೈತ್ರಿ ಪಕ್ಷಗಳ ಬಲ ಮ್ಯಾಜಿಕ್ ನಂಬರ್​​ಗಿಂತಲೂ ಕೆಲವೇ ಸೀಟುಗಳು ಹೆಚ್ಚು ಬಂದಿವೆ. ಹಾಗಾದ್ರೆ ಬಿಜೆಪಿಗೆ ಹೊಡೆತ ಬಿದ್ದಿದ್ದೆಲ್ಲಿ?

Advertisment

ಅಬ್​​ಕಿ ಬಾರ್​ ಮೋದಿ ಸರ್ಕಾರ್​.. ಚಾರ್ ಸೌ ಫಾರ್ ಇದು ಈ ಬಾರಿಯ ಲೋಕಸಭಾ ಚುನಾವಣೆಗೆ ಎನ್​ಡಿಎ ನಾಯಕರು ಘೋಷವಾಕ್ಯ.. 3ನೇ ಬಾರಿಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಗದ್ದುಗೆ ಏರುವ ಅಭಿಲಾಷೆಯಲ್ಲಿದ್ದ ಮೋದಿ ಪರಿವಾರ್​​​​​ಗೆ ಪವರ್ ಕುಗ್ಗಿದೆ. ನಂಬಿಕಸ್ಥ ರಾಜ್ಯಗಳಲ್ಲೇ ಮತದಾರರು ಬಿಜೆಪಿಗೆ ಸೋಲಿನ ರುಚಿ ಉಣಿಸಿದ್ದಾರೆ.

ಇದನ್ನೂ ಓದಿ:ಚಾಂಪಿಯನ್ ತಂಡಕ್ಕೇ ಮುಣ್ಣು ಮುಕ್ಕಿಸಿದೆ ಐರ್ಲೆಂಡ್.. ಬೆರಳು ಕೊಟ್ರೆ ಅಂಗೈನೇ ನುಂಗುತ್ತೆ ಹುಷಾರ್..!

ಭದ್ರಕೋಟೆ ಎನಿಸಿದ್ದ ರಾಜ್ಯಗಳಲ್ಲೇ ಬಿಜೆಪಿಗೆ ಶಾಕ್!
2019ರ ಲೋಕಸಭಾ ಚುನಾವಣೆಯಲ್ಲಿ 353 ಸೀಟುಗಳನ್ನು ಗೆದ್ದಿದ್ದ ಎನ್​ಡಿಎ ಈ ಬಾರಿ 300ರ ಗಡಿ ದಾಟಲು ಸಾಧ್ಯವಾಗಿಲ್ಲ. 2014 ಹಾಗೂ 2019ರ ಚುನಾವಣೆಯಲ್ಲಿ ಹಿಂದಿ ಹಾರ್ಟ್​​​ಲ್ಯಾಂಡ್​​ಗಳು ಬಿಜೆಪಿ ಕೈ ಹಿಡಿದಿದ್ದು ಗೆಲುವಿಗೆ ಕಾರಣ ಆಗಿತ್ತು. 2019ರಲ್ಲಿ ಏಕಾಂಗಿಯಾಗಿಯೇ ಬಿಜೆಪಿ 303 ಸ್ಥಾನಗಳನ್ನ ಗೆದ್ದುಕೊಂಡಿತ್ತು. ಆದ್ರೆ ಈ ಬಾರಿ ಹಿಂದಿ ಭಾಷಿಕ ರಾಜ್ಯಗಳಲ್ಲೇ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಹರಿಯಾಣ ಅಲ್ಲದೇ ಪಂಜಾಬ್​​​ನಲ್ಲೂ ಬಿಜೆಪಿ ನೀರಸ ಫಲಿತಾಂಶ ತೋರಿದೆ.

Advertisment

ಇದನ್ನೂ ಓದಿ:ಮಕ್ಕಳ ಗೆಲ್ಲಿಸುವಲ್ಲಿ ಸೋತ ಮೂವರು ಸಚಿವರು.. ತೀವ್ರ ಮುಖಭಂಗ, ಸ್ಥಾನಕ್ಕೆ ಬಂತಾ ಕುತ್ತು..?

ಅದರಲ್ಲೂ ಉತ್ತರ ಪ್ರದೇಶವೊಂದರಲ್ಲೇ ಬಿಜೆಪಿ 30 ಸೀಟುಗಳನ್ನ ಕಳೆದುಕೊಂಡಿದೆ. ರಾಮನ ವಿಚಾರದಲ್ಲಿ ಸದಾ ಮೈಲೇಜ್​​ನಲ್ಲಿದ್ದ ಬಿಜೆಪಿಗೆ ಅದ್ಯಾಕೋ ಶ್ರೀರಾಮ ಕೃಪೆ ತೋರಿದಂತಿಲ್ಲ, ರಾಮಜನ್ಮಭೂಮಿ ಅಯೋಧ್ಯೆಯಲ್ಲೇ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್, ಇಂಡಿಯಾ ಒಕ್ಕೂಟದ ಅಭ್ಯರ್ಥಿ ಅವದೇಶ್ ಪ್ರಸಾದ್ ಎದುರು ಸೋಲು ಕಂಡಿದ್ದಾರೆ.

ರಾಜಸ್ಥಾನದಲ್ಲಿ ಬಿಜೆಪಿಗೆ 11 ಕ್ಷೇತ್ರಗಳು ಖೋತಾ!
ಮತ್ತೊಂದೆಡೆ 25 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಬಿಜೆಪಿ ಈ ಬಾರಿ 14 ಕ್ಷೇತ್ರಗಳನ್ನಷ್ಟೇ ಗೆದ್ದಿದೆ. ಕಾಂಗ್ರೆಸ್ 8 ಹಾಗೂ ಇತರರು 3 ಸ್ಥಾನಗಳನ್ನು ಗಳಿಸಿದ್ದಾರೆ. 2019ರಲ್ಲಿ ಎಲ್ಲಾ 25 ಕ್ಷೇತ್ರಗಳನ್ನೂ ಬಿಜೆಪಿ ಗೆದ್ದು ದಾಖಲೆ ಬರೆದಿದ್ದ ಬಿಜೆಪಿ ಇಲ್ಲಿಯೂ 11 ಸ್ಥಾನಗಳಷ್ಟು ನಷ್ಟ ಅನುಭವಿಸಿದೆ.

Advertisment

ಮಹಾರಾಷ್ಟ್ರದಲ್ಲಿ ಅಘಾಡಿ ಎದುರು ಮಂಕಾದ ಮೈತ್ರಿ!
ಮಹಾರಾಷ್ಟ್ರದಲ್ಲೂ ಎನ್​ಡಿಎ ಮೈತ್ರಿಕೂಟ ಕ್ಷೇತ್ರಬಲ ಕುಗ್ಗಿದೆ. ಒಟ್ಟು 48 ಕ್ಷೇತ್ರಗಳಲ್ಲಿ ಮಹಾರಾಷ್ಟ್ರದಲ್ಲಿ 2019ರಲ್ಲಿ 41 ಸ್ಥಾನಗಳನ್ನು ಗೆದ್ದಿದ್ದ ಎನ್​​ಡಿಎ ಈ ಬಾರಿ 18 ಸ್ಥಾನಗಳನ್ನಷ್ಟೇ ಪಡೆದಿದೆ.

ಇದನ್ನೂ ಓದಿ:ಕರ್ನಾಟಕ ಕಾಂಗ್ರೆಸ್​ಗೆ ನವರತ್ನ.. ಸಿದ್ದುಗೆ ಪೂರಕ.. ಡಿಕೆಶಿಗೆ ಆಘಾತ.. ಹೇಗೆ ಗೊತ್ತಾ?

ಕರ್ನಾಟಕದಲ್ಲೂ ನಿರೀಕ್ಷಿತ ಸಾಧನೆ ತೋರದ ಬಿಜೆಪಿ
ಇತ್ತ ಕರ್ನಾಟಕದಲ್ಲಿ ಈ ಬಾರಿ ಜೆಡಿಎಸ್ ಮೈತ್ರಿಯೊಂದಿಗೆ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದ ಬಿಜೆಪಿ ನಿರಾಸೆ ಅನುಭವಿಸಿದೆ. ಕಳೆದ ಬಾರಿಗಿಂತ 7 ಸ್ಥಾನಗಳನ್ನು ಕಳೆದುಕೊಂಡಿದೆ. ಚಿಕ್ಕೋಡಿ, ಕಲಬುರಗಿ, ಬಳ್ಳಾರಿ, ಬೀದರ್ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸೋಲು ಕಂಡಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಭದ್ರನೆಲೆ ಹೊಂದಿದ್ದ ಬಿಜೆಪಿ ಬಲ ಕುಗ್ಗಿದಂತಾಗಿದೆ. ಒಟ್ಟಾರೆ, ಅತಿಯಾದ ಆತ್ಮವಿಶ್ವಾಸವೇ ಬಿಜೆಪಿಗೆ ಹಿನ್ನಡೆ ಆಯ್ತಾ ಎಂಬ ಮಾತು ಕೇಳಿಬರ್ತಿದೆ.

Advertisment

ಇದನ್ನೂ ಓದಿ:ಮೋದಿ ಅಲ್ಲವೇ ಅಲ್ಲ.. NDA ಒಕ್ಕೂಟದಲ್ಲಿ ಇಬ್ಬರು ಕಿಂಗ್ ಮೇಕರ್..! ಕುಮಾರಸ್ವಾಮಿಗೂ ಬಂತು ಬುಲಾವ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment