Advertisment

KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

author-image
Ganesh
Updated On
’ಎಷ್ಟು ಕೋಟಿಯಾದ್ರೂ ಆಗಲಿ ಕೆ.ಎಲ್​​ ರಾಹುಲ್​​​ ಆರ್​​ಸಿಬಿಗೆ ಬರಲೇಬೇಕು’- ಏನಿದು ಹೊಸ ಸ್ಟೋರಿ?
Advertisment
  • ಎಸ್​ಆರ್​​ಹೆಚ್​ ವಿರುದ್ಧ ಎಲ್​ಎಸ್​ಜಿಗೆ ಹೀನಾಯ ಸೋಲು
  • ಇದರಿಂದ ಕೋಪಿಸಿಕೊಂಡ ಮಾಲೀಕ ಸಂಜೀವ್ ಗೋಯೆಂಕಾ
  • ಗೋಯೆಂಕಾ ಅವರ ಬಾಡಿ ಲಾಗ್ವೇಜ್ ಹೇಳ್ತಿದೆ ಆಕ್ರೋಶದ ಕಿಚ್ಚು

ಐಪಿಎಲ್​-2024ರ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಕಳಪೆ ಪ್ರದರ್ಶನ ನೀಡಿದೆ. ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಎಸ್​ಆರ್​ಹೆಚ್​ ವಿರುದ್ಧ 10 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡ 165 ರನ್ ಗಳಿಸಿದ್ದು, ಉತ್ತರವಾಗಿ ಹೈದರಾಬಾದ್ ಕೇವಲ 9.4 ಓವರ್‌ಗಳಲ್ಲಿ ಈ ಗುರಿ ಮುಟ್ಟಿದೆ.

Advertisment

ಈ ಹೀನಾಯ ಸೋಲಿನ ನಂತರ ನಾಯಕ ಕೆ.ಎಲ್.ರಾಹುಲ್‌ ಅವರನ್ನು ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:ವಿರಾಟ್ ಕೊಹ್ಲಿಗೆ ಹೊಸ ಬಿರುದು.. ರೈನಾರನ್ನು ಓವರ್​ ಟೇಕ್ ಮಾಡಿದ ವಿರಾಟ್..!

ಬಾಸ್​ನಿಂದ ಬೈಸಿಕೊಂಡ್ರಾ ರಾಹುಲ್?
ಲಕ್ನೋ ಸೋಲಿನ ನಂತರ ಕೆ.ಎಲ್.ರಾಹುಲ್ ಜೊತೆ ಸಂಜೀವ್ ಗೋಯೆಂಕಾ ಮಾತನಾಡುತ್ತಿರುವುದು ಕಂಡುಬಂದಿದೆ. ಗೋಯೆಂಕಾ ಬಾಡಿ ಲಾಂಗ್ವೇಜ್‌ ಕೆ.ಎಲ್‌.ರಾಹುಲ್ ಮೇಲೆ ಕೋಪಿಸಿಕೊಂಡಿದ್ದಾರೆ ಅನ್ನೋದು ಸ್ಪಷ್ಟವಾಗುತ್ತಿದೆ. ಗೋಯೆಂಕಾ ರಾಹುಲ್​ಗೆ ಏನೇನೋ ವಿವರಿಸಲು ಪ್ರಯತ್ನಿಸುತ್ತಿದ್ದಾರೆ. ಇಬ್ಬರ ಮಧ್ಯೆ ಯಾವ ಮಾತುಕತೆ ಆಗಿದೆ ಅನ್ನೋದ್ರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ರಾಹುಲ್​ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಮಾತನಾಡಿಕೊಳ್ತಿದ್ದಾರೆ.

Advertisment

ಇದನ್ನೂ ಓದಿ:ಕೊರೊನಾ ವ್ಯಾಕ್ಸಿನ್ ಹಿಂತೆಗೆದುಕೊಂಡ AstraZeneca; ಲಸಿಕೆ ಪಡೆದವರಲ್ಲಿ ಹೆಚ್ಚಿದ ಮತ್ತಷ್ಟು ಆತಂಕ..!

publive-image

ಆದಾಗ್ಯೂ ಲಕ್ನೋ ಸೂಪರ್‌ಜೈಂಟ್ಸ್ ಸೋಲಿನ ಪ್ರಮುಖ ಜವಾಬ್ದಾರಿ ಕೆಎಲ್ ರಾಹುಲ್ ಮೇಲಿದೆ ಎನ್ನಲಾಗ್ತಿದೆ. ಯಾಕೆಂದರೆ ನಿನ್ನೆಯ ಪಂದ್ಯದಲ್ಲಿ ನಾಯಕ ರಾಹುಲ್ ಸ್ವತಃ ಸಾಕಷ್ಟು ತಪ್ಪುಗಳನ್ನು ಮಾಡಿದ್ದಾರೆ. ಬ್ಯಾಟಿಂಗ್​ನಲ್ಲಿ ಸಂಪೂರ್ಣ ಸೋಲು ಕಂಡಿದ್ದಾರೆ. ರಾಹುಲ್ 33 ಎಸೆತಗಳಲ್ಲಿ 29 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 87.88 ಆಗಿದೆ. ರಾಹುಲ್ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ಲಕ್ನೋ ಪವರ್‌ಪ್ಲೇನಲ್ಲಿ ಕೇವಲ 27 ರನ್ ಗಳಿಸಿದೆ. ಅದೇ ಪಿಚ್‌ನಲ್ಲಿ ಹೈದರಾಬಾದ್ ತಂಡವು ಪವರ್‌ಪ್ಲೇನಲ್ಲಿ 107 ರನ್ ಗಳಿಸಿದೆ.

Advertisment

ಇದನ್ನೂ ಓದಿ‘ಕೋವಿಶೀಲ್ಡ್​ ಲಸಿಕೆ ಪಡೆದ್ರೆ ಡ್ಯಾನ್ಸ್ ಮಾಡುವಂತಿಲ್ಲ’ ಏನಿದು ಹೊಸ ಆತಂಕ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment