newsfirstkannada.com

ಧೋನಿ ಅಭಿಮಾನಿಗಳಿಗೆ ಬ್ಯಾಡ್​ ನ್ಯೂಸ್; ಸಂಕಷ್ಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​..!

Share :

Published April 3, 2024 at 2:08pm

    ಮೊದಲ 2 ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆ..!

    3ನೇ ಪಂದ್ಯದಲ್ಲಿ ಧೋನಿ ದರ್ಶನ..! ಫ್ಯಾನ್ಸ್​ ಖುಷ್​.!

    ಎಲ್ಲಾ ಅಭಿಮಾನಿಗಳಿಗಾಗಿ.. ನೋವಲ್ಲೂ ನಕ್ಕ ಮಾಹಿ..!

ಐಪಿಎಲ್​ ಅಖಾಡದಲ್ಲಿ ಬ್ಯಾಟ್​ ಬೀಸಿದ ಮೊದಲ ಪಂದ್ಯದಲ್ಲೇ ಧೋನಿ, ಫ್ಯಾನ್ಸ್​ಗೆ ಫುಲ್​ ಟ್ರೀಟ್​ ಕೊಟ್ಟಿದ್ದಾರೆ. ವೈಜಾಕ್​​ನಲ್ಲಿ ಧೋನಿ ಘರ್ಜಿಸಿದ್ದನ್ನ ನೋಡಿ ಕ್ರಿಕೆಟ್​​ ಲೋಕ ಸಂಭ್ರಮಿಸಿದೆ. ಹಳೆ ಖದರ್​​ನಲ್ಲಿ ಮಾಹಿ ಘರ್ಜಿಸಿದ್ದನ್ನ ನೋಡಿ ಫ್ಯಾನ್ಸ್ ಫುಲ್​ ಖುಷ್​​ ಆದ ಬೆನ್ನಲ್ಲೇ ಬೇಸರದ ಸುದ್ದಿ ಹೊರಬಿದ್ದಿದೆ. ಏನಪ್ಪಾ ಆ ಬ್ಯಾಡ್​ನ್ಯೂಸ್​ ಅಂತೀರಾ?

ಕಳೆದ ಸೀಸನ್​ನಂತೆ ಈ ಬಾರಿಯೂ ಐಪಿಎಲ್​ ಅಖಾಡದಲ್ಲಿ ಧೋನಿ ಜಾತ್ರೆ ನಡೀತಾಯಿದೆ. ಮಹೇಂದ್ರ ಬಾಹುಬಲಿಯ ಆಟವನ್ನ ಕಣ್ತುಂಬಿಕೊಳ್ಳಲು ಜನ ಸಾಗರವೇ ಮೈದಾನಕ್ಕೆ ಹರಿದು ಬರ್ತಿದೆ. ಈ ಸೀಸನ್​ನಲ್ಲಿ ಧೋನಿಯ ಆಟವನ್ನ ನೋಡಬೇಕು ಅಂತಾ ಮೈದಾನಕ್ಕೆ ಎಂಟ್ರಿ ಕೊಟ್ಟ ಅಭಿಮಾನಿಗಳಿಗೆ ಮೊದಲ 2 ಪಂದ್ಯದಲ್ಲಿ ಆಗಿದ್ದು ತೀವ್ರ ನಿರಾಸೆ. ಕೀಪಿಂಗ್​ ಮಾಡಿ ಗಮನ ಸೆಳೆದ ಮಾಹಿ, ಬ್ಯಾಟಿಂಗ್​ಗೆ ಬರಲೇ ಇಲ್ಲ. ಇದ್ರಿಂದ ಚೆನ್ನೈ ಅಭಿಮಾನಿಗಳಿಗೆ ಆದ ಬೇಸರ ಅಷ್ಟಿಷ್ಟಲ್ಲ..

ಮೊದಲ 2 ಪಂದ್ಯದಲ್ಲಿ ಕಾದ ಅಭಿಮಾನಿಗಳಿಗೆ ನಿರಾಸೆ..!
ಕೊನೆಗೂ 3ನೇ ಪಂದ್ಯದಲ್ಲಿ ಧೋನಿ ಕಣಕ್ಕಿಳಿದೇ ಬಿಟ್ರು.. ಪ್ಯಾಡ್​​ ಕಟ್ಟಿ ಧೋನಿ ಎಂಟ್ರಿ ಕೊಟ್ಟಾಗ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಅಸಲಿಗೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಸೋಲುಂಡಿತು. ಆದ್ರೂ ಚೆನ್ನೈ ಫ್ಯಾನ್ಸ್​ ಮುಖದಲ್ಲಿ ಮಾತ್ರ ಮಂದಹಾಸವಿತ್ತು. ಧೋನಿ ಆಡಿದ್ದು ಅಂತಾ ಎಂಟರ್​​ಟೈನಿಂಗ್​ ಇನ್ನಿಂಗ್ಸ್​.! ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಮಾಹಿ, ಬಿರುಸಿನ ಆಟವಾಡಿದ್ರು. 4 ಬೌಂಡರಿ, 3 ಸಿಕ್ಸರ್​​ ಚಚ್ಚಿ ಬಿಸಾಕಿದ್ರು.

ಫುಲ್​​ ಖುಷ್​​ ಆದ ಫ್ಯಾನ್ಸ್​ಗೆ ಬ್ಯಾಡ್​ನ್ಯೂಸ್​​.!
ಹೌದು.. ಧೋನಿ ಇನ್ನಿಂಗ್ಸ್ ನೋಡಿ​ ಖುಷ್​ ಆದ ಫ್ಯಾನ್ಸ್​ಗೆ ಇದೀಗ ಬ್ಯಾಡ್​ ನ್ಯೂಸ್​​ ಕೇಳಿ ಬಂದಿದೆ. ಈ ಸೀಸನ್​​ನ ಅರ್ಧಕ್ಕೆ ಧೋನಿ ಐಪಿಎಲ್​ಗೆ ಗುಡ್​ ಬೈ ಹೇಳ್ತಾರಾ ಎಂಬ ಚರ್ಚೆ ಕ್ರಿಕೆಟ್​ ವಲಯದಲ್ಲಿ ಜೋರಾಗಿದೆ. ಇದಕ್ಕೆಲ್ಲಾ ಕಾರಣ ಧೋನಿ ಇಂಜುರಿ…

ಇದನ್ನೂ ಓದಿ: ರಾಯಚೂರಿನ ಅಭಿಮಾನಿಗೆ ಹೊಡಿಬೇಡಿ ಎಂದಿದ್ದ ಕೊಹ್ಲಿ, ಆದರೂ ಥಳಿಸಿದ ಬಾಡಿಗಾರ್ಡ್ಸ್

ಮತ್ತೆ ಉಲ್ಬಣವಾಯ್ತಾ ಧೋನಿಯ ಇಂಜುರಿ?
ಕಳೆದ ಸೀಸನ್​ನಲ್ಲೂ ಇಂಜುರಿ ನೋವಿನ ನಡುವೆ ಧೋನಿ ಅಖಾಡಕ್ಕಿಳಿದ್ರು. ಟೂರ್ನಿ ಮುಗಿದ ಬಳಿಕ KNEE ಸರ್ಜರಿ ಮಾಡಿಸಿಕೊಂಡು ಸುದೀರ್ಘ ವಿಶ್ರಾಂತಿಯ ಮೊರೆ ಹೋಗಿದ್ರು. ಹೀಗಾಗಿ ಈ ಸೀಸನ್​​ಗೂ ಮುನ್ನ ಹೆಚ್ಚು ಅಭ್ಯಾಸ ನಡೆಸಲಿಲ್ಲ. ಸೀಸನ್​ ಆರಂಭವಾದ ಬಳಿಕ ನಾರ್ಮಲ್​ ಆಗೇ ಧೋನಿ ಕಾಣಿಸಿಕೊಂಡಿದ್ರು. ಚಾಣಾಕ್ಷ ವಿಕೆಟ್​ ಕೀಪಿಂಗ್​ನಿಂದ ಮಿಂಚಿದ್ರು. ಆದ್ರೆ, ಯಾವಾಗಲೂ ಬಿಟ್ವೀನ್​ ದ ವಿಕೆಟ್ಸ್​​ ಚಿರತೆಯಂತೆ ಓಡ್ತಿದ್ದ ಧೋನಿ, ಡೆಲ್ಲಿ ಎದುರು ಬ್ಯಾಟಿಂಗ್​ಗಿಳಿದಾಗ ಹೆಚ್ಚು ರನ್​ ಓಡಲೇ ಇಲ್ಲ. ಯಾಕಂದ್ರೆ, ಅದಾಗಲೇ ಇಂಜುರಿ ಧೋನಿಯನ್ನ ಕಾಡಲಾರಂಭಿಸಿತ್ತು.

ಇದನ್ನೂ ಓದಿ: RCB ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಯಾದವ್ ದಾಖಲೆ; ಅಚ್ಚರಿಯ ಬೌಲಿಂಗ್ ಸ್ಪೀಡ್​..! ವಿಡಿಯೋ

ಡೆಲ್ಲಿ ಕ್ಯಾಪಿಟಲ್ಸ್​ ಎದುರು ಅಬ್ಬರದ ಬ್ಯಾಟಿಂಗ್​ ನಡೆಸಿದ ಧೋನಿ, ಪಂದ್ಯ ಮುಗಿದ ಬಳಿಕ ಮೈದಾನದಲ್ಲಿ ಕಾಣಿಸಿಕೊಂಡಾಗ ಕಾಲಿಗೆ ಐಸ್​​ಪ್ಯಾಕ್​ ಕಟ್ಟಿಕೊಂಡಿದ್ರು. ಕುಂಟುತ್ತಲೇ ಆಟಗಾರರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ್ರು. ಅಪಾರ ನೋವಿನಿಂದ ಬಳಲುತ್ತಿದ್ದಾರೆ ಅನ್ನೋದನ್ನ ಅವರ ಮುಖವೇ ಸಾರಿ ಸಾರಿ ಹೇಳ್ತಿತ್ತು. ಪೆವಿಲಿಯನ್​ಗೆ ವಾಪಾಸ್ಸಾಗುವಾಗ ಹೆಚ್ಚು ಕುಂಟಿದ ಧೋನಿ ಭಾರವಾದ ಹೆಜ್ಜೆಗಳನ್ನಿಟ್ಟರು.

ಕೆಲ ಪಂದ್ಯಗಳಿಂದ ದೂರ ಉಳೀತಾರಾ ಮಾಹಿ.?
ಪಂದ್ಯ ಮುಗಿದ 2 ದಿನಗಳ ಬಳಿಕ ಹೈದ್ರಾಬಾದ್​ಗೆ ಬಂದಿಳಿದಾಗಲೂ ಧೋನಿ ಕುಂಟುತ್ತಲೇ ಸಾಗಿದ್ರು. ಇದನ್ನ ನೋಡಿದ ಬಳಿಕ, ಮಾಹಿ ಇಂಜುರಿ ಗಂಭೀರ ಸ್ವರೂಪದಲ್ಲಿದೆ ಅನ್ನೋದು ಕನ್​ಫರ್ಮ್​ ಆಗಿದೆ. ಹೀಗಾಗಿ ಈ ಸೀಸನ್​ನ ಕೆಲ ಪಂದ್ಯಗಳಿಂದ ಧೋನಿ ಹೊರಗುಳಿಯುವ ತೀರ್ಮಾನ ಮಾಡೋ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:ರಾಜ್ಯ ಸರ್ಕಾರದ ವಿರುದ್ಧ ಅಮಿತ್ ಶಾ ಬಾಂಬ್ ಬಾಣ; ಬರದ ಅಸ್ತ್ರ ಪ್ರಯೋಗಿಸಿ ಕೌಂಟರ್ ಕೊಟ್ಟ ಸಿದ್ದರಾಮಯ್ಯ..!

ಒಟ್ಟಿನಲ್ಲಿ, ಧೋನಿ ಇಂಜುರಿ ಸಮಸ್ಯೆ ಎದುರಿಸ್ತಿರೋದು ಸದ್ಯಕ್ಕೆ ಓಪನ್​​ ಸೀಕ್ರೆಟ್​.! ಆದ್ರೆ, ಧೋನಿಯ ಮುಂದಿನ ನಡೆ ಏನು ಅನ್ನೋದು ಸಸ್ಪೆನ್ಸ್​​.. ರೆಸ್ಟ್​ ತೆಗೆದುಕೊಂಡು ವಾಪಾಸ್ಸಾಗ್ತಾರಾ.? ಅಥವಾ ನೋವಿನ ನಡುವೆಯೂ ಆಡ್ತಾರಾ.? ಅಥವಾ ಸೀಸನ್​ ಮಧ್ಯೆಯೇ ಗುಡ್​​ ಬೈ ಹೇಳಿಬಿಡ್ತಾರಾ.? ಕಾದು ನೋಡಬೇಕಿದೆ.

ಇದನ್ನೂ ಓದಿ: RCB ಫ್ಯಾನ್ಸ್​ಗೆ ಸಲಾಂ ಹೊಡೆದ ಎಲ್​ಎಸ್​ಜಿ; ಟ್ವೀಟ್ ಮಾಡಿ ಹೇಳಿದ್ದೇನು ಗೊತ್ತಾ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಧೋನಿ ಅಭಿಮಾನಿಗಳಿಗೆ ಬ್ಯಾಡ್​ ನ್ಯೂಸ್; ಸಂಕಷ್ಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​..!

https://newsfirstlive.com/wp-content/uploads/2024/04/MS-DHONI-5.jpg

Load More