Advertisment

ಕೊನೆಗೂ ಕೂಡಿ ಬಂತು ಕಾಲ.. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬದಲಾವಣೆಗೆ ಖರ್ಗೆ ಚೆಕ್‌ಮೇಟ್‌; ಏನಿದರ ಸುಳಿವು?

author-image
admin
Updated On
ಗ್ಯಾರಂಟಿ ಯೋಜನೆ ಬಗ್ಗೆ ಮೋದಿ ಟೀಕೆ​.. ಕೆರಳಿ ಕೆಂಡವಾದ ಸಿಎಂ ಸಿದ್ದರಾಮಯ್ಯ
Advertisment
  • ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಬದಲಾವಣೆಗೆ ಮುಹೂರ್ತ ಫಿಕ್ಸ್!
  • ಕುರ್ಚಿ ಮೇಲೆ ವಾಲ್ಮೀಕಿ ಸಮುದಾಯದ ನಾಯಕರು ಕಣ್ಣು
  • ಅಲ್ಲಿ ಹಿಂದುಳಿದ ವರ್ಗದವರು ಅಧ್ಯಕ್ಷರಾಗಿ ಆಯ್ಕೆ ಇಲ್ಲಿ ಯಾರು?

ಅಂದಾಜು ಏಳೆಂಟು ತಿಂಗಳುಗಳೇ ಕಳೀತು ಅನ್ಸುತ್ತೆ. ರಾಜ್ಯ ಕಾಂಗ್ರೆಸ್​​ನಲ್ಲಿ ಮೊಳಕೆಯೊಡೆದಿದ್ದ ಪವರ್ ಶೇರಿಂಗ್ ಫೈಟ್​​ ಸದ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಂತೆ ಕಾಣಿಸ್ತಿದೆ. ಒಬ್ಬೊಬ್ಬ ನಾಯಕರು ಹಾದಿ-ಬೀದಿಯಲ್ಲಿ ಬಾಯಿ ಬಡಬಡಾಯಿಸಿದ್ದೇ ಆಯ್ತು. ಅಂತರ್ಯುದ್ಧ ಮುಗಿಲು ಮುಟ್ತಿದ್ದಂತೆ ಎಚ್ಚೆತ್ತಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಾಯಿ ಮುಚ್ಕೊಂಡು ಇರುವಂತೆ ಖಡಕ್ ಸಂದೇಶ ಕೊಟ್ಟಿದ್ದರು. ಇದೀಗ ಅದೇ ಖರ್ಗೆ ಅವರೇ ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಬದಲಾವಣೆ ಸುಳಿವು ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

Advertisment

ರಾಜ್ಯ ಕಾಂಗ್ರೆಸ್ ಮನೆಯೊಳಗೆ ಕುರ್ಚಿ ಫೈಟ್​ ಎಪಿಸೋಡ್ ಫಸ್ಟ್ ಆಫ್ ಮುಗಿಸಿ ಈಗ ಸೆಕೆಂಡ್​ ಆಫ್​ ತಲುಪಿದೆ. ಪ್ರಮುಖ ನಾಯಕರು ಪವರ್​ ಪಡೆಯಲು ಬೆವರು ಹರಿಸಿದ್ದು ವರಿಷ್ಠರ ಲಕ್ಷ್ಮಣರೇಖೆ ದಾಟಿ ಅಶಿಸ್ತು ತಾಂಡವವಾಡಿತ್ತು. ಅಂತರ್​ ಕಲಹಕ್ಕೆ ವಿರಾಮ ಹಾಕೋಕೆ ಹೈಕಮಾಂಡ್ ಪ್ರಯತ್ನಿಸಿದ್ರೂ ಸಾಧ್ಯವಾಗಿರಲಿಲ್ಲ. ಇದೆಲ್ಲಾ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ ಅಂತ ಹೈಕಮಾಂಡ್​​ಗೆ ಜ್ಞಾನೋದಯವಾಗಿದ್ದು ಶೀತಲಸಮರಕ್ಕೆ ಫುಲ್​ಸ್ಟಾಫ್ ಇಡುವ ಹೆಜ್ಜೆ ಇರಿಸಿದೆ.

publive-image

ಕೆಪಿಸಿಸಿ ಸಾರಥಿ ಡಿಕೆಶಿ ಬದಲಾವಣೆಗೆ ಮುಹೂರ್ತ ಫಿಕ್ಸ್!?
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಸುಳಿವು ಕೊಟ್ಟ ಖರ್ಗೆ!
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಈ ಬಗ್ಗೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಸುಳಿವು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೆಳಗಿಳಿಸುವ ಬಗ್ಗೆ ಖರ್ಗೆ ಸಾಹೇಬರು ಬಿಗ್ ಅಪ್​ಡೇಟ್ ಕೊಟ್ಟಿದ್ದಾರೆ.

ಡಿಸಿಎಂ ಡಿಕೆಶಿಗೆ ಪ್ರಭಾವಿ ಇಲಾಖೆ ಜೊತೆಗೆ ರಾಜ್ಯಾಧ್ಯಕ್ಷರ ಹುದ್ದೆಯೂ ಇದೆ ಎಂದು ಕಾಂಗ್ರೆಸ್‌ನ ಕೆಲವು ಸಚಿವರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಅಧ್ಯಕ್ಷ ಸ್ಥಾನದ ಮೇಲೆ ವಾಲ್ಮೀಕಿ ಸಮುದಾಯದ ನಾಯಕರು ಕಣ್ಣಿಟ್ಟಿದ್ದು ಈ ನಡುವೆ ದೆಹಲಿಗೂ ತೆರಳಿ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದಾರೆ.

Advertisment

publive-image

ಈ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರೋ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಡಿಶಾದಲ್ಲಿ ಅಧ್ಯಕ್ಷರನ್ನು ಬದಲಾವಣೆ ಮಾಡಿ ಬಂದಿದ್ದೇನೆ, ಒಡಿಶಾದಲ್ಲಿ ಹಿಂದುಳಿದ ವರ್ಗದವರು ಅಧ್ಯಕ್ಷರಾಗಿದ್ದಾರೆ. ಉಳಿದ ರಾಜ್ಯಗಳಲ್ಲೂ ಸದ್ಯದಲ್ಲೇ ಬದಲಾವಣೆ ಆಗುತ್ತೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

publive-image

ಕಾಂಗ್ರೆಸ್​ನಲ್ಲಿ ಕೆಪಿಸಿಸಿ ಅಧ್ಯಕ್ಷ ಬದಲಾವಣೆಯ ಬಗ್ಗೆ ಚರ್ಚೆ ನಡೆಸಲು ಸಚಿವ ಕೆ.ಎನ್.ರಾಜಣ್ಣ ದೆಹಲಿಗೆ ತೆರಳಿ ವೇಣುಗೋಪಾಲ್ ಭೇಟಿ ಮಾಡಿದ್ದಾರೆ. ಈ ವಿಚಾರಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರೋ ಡಿಸಿಎಂ ಡಿಕೆಶಿ, ರಾಜಣ್ಣ ದೊಡ್ಡವರು, ದೊಡ್ಡವರ ಬಗ್ಗೆ ಮಾತಾಡಲ್ಲ ಎಂದಿದ್ದಾರೆ. ಇನ್ನು ಅಧ್ಯಕ್ಷರ ಬದಲಾವಣೆ ಕುರಿತು ಖರ್ಗೆ ಹೇಳಿಕೆ ಬಗ್ಗೆಯೂ ನನಗೇನೂ ಗೊತ್ತಿಲ್ಲ ಎಂದಿದ್ದಾರೆ.

ದೊಡ್ಡ ನಾಯಕರು ಎಂದ ಡಿಕೆಶಿಗೆ ಸಚಿವ ರಾಜಣ್ಣ ತಿರುಗೇಟು ನೀಡಿದ್ದಾರೆ. ದೊಡ್ಡ ನಾಯಕರು, ಸಣ್ಣ ನಾಯಕರು ಅನ್ನೋದು ಬೇರೆ, ನಾವು ಕುಬೇರರ ಮಾತಿಗೆ ಪ್ರತಿಕ್ರಿಯಿಸಲ್ಲ ಅಂತ ಮಾತಿನಲ್ಲೇ ಚುಚ್ಚಿದ್ದಾರೆ. ಅಧ್ಯಕ್ಷರು ಹೇಳಿದ್ಮೇಲೆ ಮುಗೀತು ಅಂತ ವಾಲ್ಮೀಕಿ ನಾಯಕ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಇನ್ನು ನಾನು 2 ದಿನ ದೆಹಲಿಗೆ ಹೋಗಿದ್ದು ನನ್ನ ಇಲಾಖೆ ಸಂಬಂಧ ಚರ್ಚೆ ಮಾಡಲಿಕ್ಕೆ ಅಂತ ಉತ್ತರಿಸಿದ್ದಾರೆ.

Advertisment

ಇದನ್ನೂ ಓದಿ: VIDEO: ಸಿದ್ದರಾಮಯ್ಯರನ್ನು ಗೌರವದಿಂದ ಕಂಡ ರಾಜನಾಥ್ ಸಿಂಗ್ -ಹೆಚ್ಚು ವೈರಲ್ ಆದ ವಿಡಿಯೋ ಇದು.. 

ರಾಜ್ಯ ಕಾಂಗ್ರೆಸ್​​ನಲ್ಲಿ ಪೋಸ್ಟಿಂಗ್ ಬದಲಾವಣೆಯ ಪುಂಗಿ ಊದಿದವರಲ್ಲಿ ದಲಿತ ನಾಯಕರಾದ ಕೆ.ಎನ್​.ರಾಜಣ್ಣ, ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್ ಮುಂಚೂಣಿಯಲ್ಲಿದ್ದಾರೆ. ಆದ್ರೆ ಹೈಕಮಾಂಡ್ ಯಾರಿಗೆ ಅಧ್ಯಕ್ಷ ಪಟ್ಟ ಕಟ್ಟುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment