Video: ಅಯ್ಯೋ ದುರ್ವಿಧಿಯೇ.. ಒಂದೇ ಒಂದು ಮಟನ್​ ಪೀಸ್​ ಸಿಕ್ಕಿಲ್ಲವೆಂದು ಬಡಿದಾಡಿಕೊಂಡ್ರು ಕಣ್ರಿ

author-image
AS Harshith
Updated On
Video: ಅಯ್ಯೋ ದುರ್ವಿಧಿಯೇ.. ಒಂದೇ ಒಂದು ಮಟನ್​ ಪೀಸ್​ ಸಿಕ್ಕಿಲ್ಲವೆಂದು ಬಡಿದಾಡಿಕೊಂಡ್ರು ಕಣ್ರಿ 
Advertisment
  • ಮದುವೆ ಮನೆಯಲ್ಲಿ ಬಿರಿಯಾನಿಯಿಂದಾದ ಗಲಾಟೆ
  • ಒಂದೇ ಒಂದು ಪೀಸ್​ ಸಿಗದಕ್ಕೆ ಇಷ್ಟೊಂದು ಕೋಪನಾ?
  • ಮಟನ್​ ಬಿರಿಯಾನಿಯಿಂದ ಇಷ್ಟು ದೊಡ್ಡ ರಾದ್ದಾಂತ ಆಯ್ತು

ಪಾಕಿಸ್ತಾನದವರು ಯಾಕೆ, ಯಾವಾಗ, ಯಾವ ವಿಚಾರವಾಗಿ ಕಿತ್ತಾಡುತ್ತಾರೋ ಗೊತ್ತಾಗಲ್ಲ. ಇದೀಗ ಮದುವೆ ಕಾರ್ಯಕ್ರಮವೊಂದರಲ್ಲಿ ಮಟನ್​ಗಾಗಿ ಫೈಟಿಂಗ್ ನಡೆದಿದೆ.

ಮದುವೆ ಸಮಾರಂಭದ ದಿನ ಭೋಜನದ ವೇಳೆ ವ್ಯಕ್ತಿಯೋರ್ವನಿಗೆ ಬಿರಿಯಾನಿಯಲ್ಲಿ ಮಟನ್ ಪೀಸ್ ಸಿಕ್ಕಿರೋದಿಲ್ಲ. ಈ ವಿಚಾರವಾಗಿ ರೊಚ್ಚಿಗೆದ್ದಿದ್ದ ಆತ ಮದುವೆ ಮನೆಯವರಿಗೆ ಬೈದಿದ್ದಾನೆ. ಇದೇ ಕಾರಣ ಆತ ಮತ್ತು ಆತನ ಜೊತೆ ಬಂದಿದ್ದ ಸಂಬಂಧಿಕರನ್ನ ಮದುವೆ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಹರಿದಾಡುತ್ತಿದೆ. ಅನೇಕರು ದೃಶ್ಯ ಕಂಡು ನಕ್ಕರೆ, ಇನ್ನು ಕೆಲವರು ಹೀಗೂ ಆಗುತ್ತಾ ಎಂದು ಬರೆದುಕೊಂಡಿದ್ದಾರೆ. ಅಂತೂ ಬಿರಿಯಾನಿಯಲ್ಲಿ ಮಟನ್​ ಪೀಸ್​ ಸಿಗದೇ ಇರೋದಕ್ಕೆ ನಡೆದ ಗಲಾಟೆ ಅನ್ನೋದು ಅಚ್ಚರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment