/newsfirstlive-kannada/media/post_attachments/wp-content/uploads/2023/10/laxman.jpg)
ಚಿಕ್ಕೋಡಿ: ಹುಲಿ ಉಗುರು ಪೆಂಡೆಂಟ್ ಪತ್ತೆ ಪ್ರಕರಣ ವ್ಯಾಪಕ ತಿರುವು ಪಡೆದುಕೊಳ್ಳುತ್ತಿದೆ. ಬಿಗ್ಬಾಸ್ನ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ಸ್ಯಾಂಡಲ್ವುಡ್ ಸ್ಟಾರ್ ಸೆಲೆಬ್ರಿಟಿಗಳಿಂದ ಹಿಡಿದು ಜ್ಯೋತಿಷಿ, ಅರ್ಚಕರು, ರಾಜಕಾರಣಿಗಳ ಪುತ್ರರು ಸೇರಿ ಸರ್ಕಾರಿ ಅಧಿಕಾರಿಗಳಿಗೂ ಈ ಕಂಠಹಾರ ಕಂಟಕ ತಂದಿಟ್ಟಿದೆ. ಈಗಾಗಲೇ ಅರಣ್ಯಾಧಿಕಾರಿಗಳು ಅನೇಕ ನಟರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇದೀಗ ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಕುಟುಂಬಕ್ಕೂ ಹುಲಿ ಉಗುರು ಸಂಕಷ್ಟ ತಂದಿದೆ. ಸವದಿ ಅವರ ತೃತೀಯ ಪುತ್ರ ಸುಮಿತ್ ಅವರು ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಶಾಸಕ ಲಕ್ಷ್ಮಣ ಸವದಿ ಅವರು ಮದುವೆ ಸಂದರ್ಭದಲ್ಲಿ ಕೊರಳಲ್ಲಿ ಹುಲಿ ಪೆಂಡೆಂಟ್ ಹಾಕಿಕೊಂಡಿದ್ದಾರೆ.
ಮತ್ತೊಂದೆಡೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕೊರಳಲ್ಲೂ ಪೆಂಡೆಂಟ್ ಪತ್ತೆಯಾಗಿದ್ದು ಅರಣ್ಯ ಅಧಿಕಾರಿಗಳು ಹೆಬ್ಬಾಳ್ಕರ್ ಮನೆಯಲ್ಲಿ ಶೋಧ ಮೃಣಾಲ್ನನ್ನು ವಿಚಾರಣೆ ನಡೆಸಿದ್ದಾರೆ. ಹುಲಿ ಉಗುರಿನ ಪೆಂಡೆಂಟ್ ಈಗ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಅರಣ್ಯ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ