Advertisment

ಕೇಂದ್ರದಲ್ಲಿ ಕುಮಾರಸ್ವಾಮಿಗೆ ಮಂತ್ರಿ ಸ್ಥಾನ.. JDS ಡಿಮ್ಯಾಂಡ್ ಇಡ್ತಿರೋ ಖಾತೆ ಯಾವುದು ಗೊತ್ತಾ?

author-image
Ganesh
Updated On
ಕೇಂದ್ರದಲ್ಲಿ ಕುಮಾರಸ್ವಾಮಿಗೆ ಮಂತ್ರಿ ಸ್ಥಾನ.. JDS ಡಿಮ್ಯಾಂಡ್ ಇಡ್ತಿರೋ ಖಾತೆ ಯಾವುದು ಗೊತ್ತಾ?
Advertisment
  • ಲೋಕಸಭಾ ಕದನದಲ್ಲಿ 1 ಸ್ಥಾನ ಹೆಚ್ಚಿಸಿಕೊಂಡ ಜೆಡಿಎಸ್‌!
  • ಮೂರು ಕ್ಷೇತ್ರಗಳಲ್ಲಿ ಎರಡರಲ್ಲಿ ಗೆದ್ದುಬೀಗಿದ ದಳಪತಿಗಳು!
  • ಮಂಡ್ಯದಲ್ಲಿ ಅತಿಹೆಚ್ಚು ಲೀಡ್‌ನಿಂದ ಹೆಚ್‌ಡಿಕೆ ಜಯಭೇರಿ

ಬಿಜೆಪಿ ಜೊತೆ ಸಖ್ಯ ಜೆಡಿಎಸ್‌ಗೆ ಬಲ ತಂದಿದೆ.. ದೋಸ್ತಿಯ ಜೊತೆ ಕೈ ಜೋಡಿಸಿ ಶಕ್ತಿಯ ವೃದ್ಧಿಯಾಗಿದೆ.. ಕಮಲದೊಳ್ ದಳವಾಗಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿದಂತಿದೆ. ಜೆಡಿಎಸ್ ಇದೆಯಾ ಎಂಬ ಕಾಂಗ್ರೆಸ್ ಪಾಳಯಕ್ಕೆ ಉತ್ತರ ಸಿಕ್ಕಿದೆ.. ಕೇಸರಿ ಜೊತೆ ಸೇರಿ ಲೋಕಸಮರದಲ್ಲಿ ಮಣ್ಣಿನ ಮಕ್ಕಳು ಕೊಂಚ ನಿರಾಳರಾಗಿದ್ದಾರೆ.. ಜೊತೆಗೆ ಹೆಚ್‌ಡಿಕೆಗೆ ಕನಸೊಂದು ನನಸಾಗುವ ಕಾಲ ಹತ್ತಿರವಾಗಿದೆ.

Advertisment

ಲೋಕಸಭಾ ಕದನದಲ್ಲಿ 1 ಸ್ಥಾನ ಹೆಚ್ಚಿಸಿಕೊಂಡ ಜೆಡಿಎಸ್‌!
ಮಂಡ್ಯ, ಕೋಲಾರ, ಹಾಸನ.. ಈ ಮೂರೂ ಕ್ಷೇತ್ರಗಳಲ್ಲಿ ಅಗ್ನಿಪರೀಕ್ಷೆಗಿಳಿದಿದ್ದ ಜೆಡಿಎಸ್‌ಗೆ ಎರಡರಲ್ಲಿ ತೃಪ್ತಿ ಸಿಕ್ಕಿದೆ. ಮೂರು ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಜೆಡಿಎಸ್‌ ಭರ್ಜರಿ ಜಯಭೇರಿ ಭಾರಿಸಿದೆ. ಮಂಡ್ಯ ಅಭ್ಯರ್ಥಿ ಹೆಚ್‌.ಡಿ. ಕುಮಾರಸ್ವಾಮಿ, ಕೋಲಾರ ಅಭ್ಯರ್ಥಿ ಮಲ್ಲೇಶ್ ಬಾಬು ಭಾರೀ ಜಯಗಳಿಸಿದ್ದಾರೆ.. ಆದ್ರೆ, ಹಾಸನದಲ್ಲಿ ದಳಪತಿಗಳಿಗೆ ಸೋಲಾಗಿದ್ದು, ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಕನಸು ಕನಸಾಗೇ ಉಳಿದಿದೆ.

ಇದನ್ನೂ ಓದಿ:ಸ್ಮೃತಿ ಇರಾನಿ ಸೇರಿ ಒಟ್ಟು 16 ಕೇಂದ್ರ ಸಚಿವರಿಗೆ ಹೀನಾಯ ಸೋಲು.. ಯಾರೆಲ್ಲ ಸೋತಿದ್ದಾರೆ..?

ಮಂಡ್ಯದಲ್ಲಿ ಅತಿಹೆಚ್ಚು ಲೀಡ್‌ನಿಂದ ಹೆಚ್‌ಡಿಕೆ ಜಯಭೇರಿ
ಸಕ್ಕರೆ ನಾಡಿನಲ್ಲಿ ಸ್ಪರ್ಧಿಸಬೇಕೋ? ಬೇಡ್ವೋ ಎಂಬ ಗೊಂದಲದಲ್ಲೇ ಕೊನೆ ಘಳಿಗೆಯಲ್ಲಿ ಅಖಾಡಕ್ಕಿಳಿದಿದ್ದ ಹೆಚ್‌ಡಿ ಕುಮಾರಸ್ವಾಮಿ ಗೆದ್ದು ಬೀಗಿದ್ದಾರೆ.. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ವಿರುದ್ಧ 2 ಲಕ್ಷದ 84 ಸಾವಿರದ 620 ಮತಗಳ ಭಾರೀ ಅಂತರದಲ್ಲಿ ಗೆಲುವಿನ ದಡ ಮುಟ್ಟಿದ್ದಾರೆ.. ಈ ಮೂಲಕ ಸಕ್ಕರೆ ನಾಡಿನ ಸವಿಯನ್ನ ದಳಪತಿ ಉಂಡಿದ್ದಾರೆ.

Advertisment

ಕೇಂದ್ರದಲ್ಲಿ ಕುಮಾರಸ್ವಾಮಿಗೆ ಮಂತ್ರಿ ಸ್ಥಾನ ಫಿಕ್ಸ್‌!
ಚುನಾವಣೆಗೂ ಮುನ್ನ ಕೇಳಿಬರ್ತಿದ್ದ ಅದೊಂದು ಮಾತೀಗ ನಿಜವಾಗುವಂತೆ ಕಾಣ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಕೇಂದ್ರ ಸಚಿವರಾಗ್ತಾರೆ ಎಂಬ ಚರ್ಚೆ ಸತ್ಯವಾಗು ಕಾಲ ಸನ್ನಿಹಿತವಾಗಿದೆ. ಕೇಂದ್ರದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗಲಿದೆ.. ಹೀಗಾಗಿ ಕೇಂದ್ರದಲ್ಲಿ ಕುಮಾರಸ್ವಾಮಿಗೆ ಮಂತ್ರಿ ಸ್ಥಾನ ಸಿಗೋದು ಫಿಕ್ಸ್ ಎಂಬ ಮಾತು ಮಾರ್ಧನಿಸುತ್ತಿದೆ. ಒಂದು ವೇಳೆ ಕುಮಾರಸ್ವಾಮಿಗೆ ಮಂತ್ರಿ ಸ್ಥಾನ ನೀಡುವ ಭರವಸೆ ಸಿಕ್ಕರೆ ಜೆಡಿಎಸ್ ಕೃಷಿ ಖಾತೆಯನ್ನೇ ಕೇಳಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಮೋದಿಗೆ ಐದು ವರ್ಷ ಅಧಿಕಾರ ನಡೆಸೋದು ಹಗ್ಗದ ಮೇಲೆ ನಡೆದಷ್ಟೇ ಸವಾಲು.. ಯಾಕೆಂದರೆ..!

ಹಗ್ಗ ಜಗ್ಗಾಟದಲ್ಲಿ ಮಲ್ಲೇಶ್ ಬಾಬುಗೆ ದಿಗ್ವಿಜಯ
ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವಿನ ಗಡಿದಾಟುತ್ತಿದ್ರೆ, ಇತ್ತ ಕೋಲಾದಲ್ಲಿ ಹಾವು-ಏಣಿಯ ಆಟ ನಡೀತಿತ್ತು. ಒಮ್ಮೆ ಜೆಡಿಎಸ್‌ನ ಮಲ್ಲೇಶ್‌ ಬಾಬು ಲೀಡ್‌ ಅಲ್ಲಿ ಇದ್ರೆ, ಮತ್ತೊಮ್ಮೆ ಕೈ ಅಭ್ಯರ್ಥಿ ಗೌತಮ್ ದಂಡೆತ್ತಿ ಬರ್ತಿದ್ರು.. ಮೊದಲು ಜೆಡಿಎಸ್‌ ಅಬ್ಯರ್ಥಿ 70 ಸಾವಿರ ಮತಗಳ ಲೀಡ್ ಬಂದು ಬಳಿಕ ದಿಢೀರ್ 10 ಸಾವಿರಕ್ಕೆ ಕುಸಿತ ಕಂಡಿದ್ರು.. ನಂತರ 71 ಸಾವಿರ 388 ಮತಗಳ ಅಂತರದಿಂದ ಗೆದ್ದುಬೀಗಿದ್ದಾರೆ.

Advertisment

ಒಟ್ಟಾರೆ, ಅಂದುಕೊಂಡಂತೆ ಮೂರೂ ಸ್ಥಾನಗಳನ್ನ ಗೆಲ್ಲಲು ಆಗದೇ ಇದ್ರೂ ದಳಪತಿಗಳಿಗೆ ಕೊಂಚ ನೆಮ್ಮದಿ ಸಿಕ್ಕಿದೆ.. ಪ್ರಜ್ವಲ್ ರೇವಣ್ಣನ ಸೋಲಿನ ಕಹಿಯ ನಡುವೆಯೂ ಕಳೆದ ಬಾರಿಗಿಂತ 1 ಸ್ಥಾನ ಹೆಚ್ಚಿಸಿಕೊಂಡಿರೋದು ಖುಷಿ ಕೊಟ್ಟಂತಿದೆ.. ಈ ಮೂಲಕ ಕಮಲದ ಜೊತೆಗಿನ ದೋಸ್ತಿ ದಳಪತಿಗಳಿಗೆ ಪಾಸಿಟಿವ್ ಆದಂತಿದೆ.

ಇದನ್ನೂ ಓದಿ:ಚಾಂಪಿಯನ್ ತಂಡಕ್ಕೇ ಮುಣ್ಣು ಮುಕ್ಕಿಸಿದೆ ಐರ್ಲೆಂಡ್.. ಬೆರಳು ಕೊಟ್ರೆ ಅಂಗೈನೇ ನುಂಗುತ್ತೆ ಹುಷಾರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment