/newsfirstlive-kannada/media/post_attachments/wp-content/uploads/2024/08/MS_DHONI-3.jpg)
ಐಪಿಎಲ್ ಕೌನ್ಸಿಲ್​ನಿಂದ ಹೊಸ ರೂಲ್ಸ್​ ಜಾರಿಯಾಗಿ ಕೆಲ ದಿನಗಳೇ ಕಳೆದಿದೆ. ಈ ಹೊಸ ರೂಲ್ಸ್​ ಧೋನಿ ಹಾಗೂ ಚೆನ್ನೈಗೆ ಫೇವರ್ ಅನ್ನೋ ಮಾತುಗಳು ಕ್ರಿಕೆಟ್ ಅಂಗಳದಲ್ಲಿ ಸಖತ್​ ಸೌಂಡ್​ ಮಾಡ್ತಿದೆ. ಇದ್ರ ನಡುವೆ ಎಮ್​.ಎಸ್.ಧೋನಿಯ ಭವಿಷ್ಯ ಅಂತತ್ರಕ್ಕೆ ಸಿಲುಕಿದೆ.
ಐಪಿಎಲ್​ ಮೆಗಾ ಹರಾಜಿನ ಹೊಸ ರೂಲ್ಸ್​ ಹೊರಬಿದ್ದ ಬೆನ್ನಲ್ಲೇ ಫ್ರಾಂಚೈಸಿಗಳೆಲ್ಲಾ, ರಿಟೈನ್, ರಿಲೀಸ್ ಲೆಕ್ಕಾಚಾರದಲ್ಲೇ ಬ್ಯುಸಿಯಾಗಿದೆ. ಸೀಸನ್​​-18ರ ಇಂಡಿಯನ್ ಪ್ರೀಮಿಯರ್​ ಲೀಗ್​​​ಗಾಗಿ ಬಲಿಷ್ಠ ತಂಡ ಕಟ್ಟುವ ಸಲುವಾಗಿ ತಯಾರಿ ನಡೆಸ್ತಿದೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಒಂದಾಗಿದೆ. ಸಿದ್ಧತೆ ಆರಂಭಕ್ಕೂ ಮುನ್ನ ಎಮ್​.ಎಸ್​ ಧೋನಿಯ ಭವಿಷ್ಯ ಪಶ್ನಾರ್ಥಕವಾಗಿದೆ.
/newsfirstlive-kannada/media/post_attachments/wp-content/uploads/2024/09/Dhoni-3.jpg)
ಐಪಿಎಲ್​ನ ನಯಾ ರೂಲ್ಸ್ ಹೊರ ಬಂದಿದ್ದೇ ಬಂದಿದ್ದು, ಚೆನ್ನೈ ಸೂಪರ್ ಕಿಂಗ್ಸ್​ ಪಾಲಿಗೆ ವರದಾನ ಎನ್ನಲಾಗಿತ್ತು. ಇದು ಎಮ್​.ಎಸ್.ಧೋನಿ ಮುಂದಿನ ಸೀಸನ್ ಆಡ್ತಾರೆ ಎಂಬುವುದರ ಸಂದೇಶವೇ ಎನ್ನಲಾಗಿತ್ತು. ಧೋನಿ ಕಟ್ಟಾಭಿಮಾನಿಗಳಂತೂ ಕುಣಿದು ಕುಪ್ಪಳಿಸಿದ್ದರು. ಇದೇ ಫ್ಯಾನ್ಸ್​ಗೆ ಈಗ ಶಾಕಿಂಗ್ ನ್ಯೂಸ್ ಎದುರಾಗಿದೆ.
ಮುಂದಿನ ಐಪಿಎಲ್ ಆಡಲ್ವಾ ಧೋನಿ?
ಐಪಿಎಲ್​​ ಹೊಸ ರೂಲ್ಸ್​ನಿಂದ ಯಾರಿಗೆ ಸಂತಸವಾಗಿರುತ್ತೋ ಇಲ್ವೋ. CSK ಹಾಗೂ ಧೋನಿ ಅಭಿಮಾನಿಗಳನ್ನ ಮಾತ್ರ ಆಕಾಶದಲ್ಲಿ ತೇಲಾಡುತವಂತೆ ಮಾಡಿತ್ತು. 5+1 ರಿಟೈನ್​​ನಿಂದಾಗಿ ಎಮ್​.ಎಸ್.ಧೋನಿ ಮುಂದಿನ ಸೀಸನ್ ಆಡೋದು ಕನ್ಫರ್ಮ್​ ಅನ್ನೋ ಮಾತುಗಳೂ ಕೇಳಿ ಬಂದಿತ್ತು. ಚೆನ್ನೈ ಕ್ಯಾಂಪ್​ನಲ್ಲಿ ಧೋನಿಯ ಭವಿಷ್ಯ ಗೊಂದಲದ ಗೂಡಾಗಿದೆ. CSK ಸಿಇಒ ಕಾಸಿ ವಿಶ್ವನಾಥನ್​ಗೇ ಇನ್ನೂ ಈ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ.
ಇದನ್ನೂ ಓದಿ:ಕೋಟಿ ಕೋಟಿ ಹಣ ಕಳೆದುಕೊಂಡ MS ಧೋನಿ.. ಮಾಜಿ ಕ್ಯಾಪ್ಟನ್ ಲಾಸ್ ಆಗಿದ್ದು ಹೇಗೆ?
ಆ ರೂಲ್ ಬಳಸಲ್ಲ
ಧೋನಿ ರಿಟೈನ್ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ನಾವು ಧೋನಿಗೆ ಆ ನಿಯಮ ಬಳಸದೇ ಇರಬಹುದು. ಈ ವಿಚಾರವಾಗಿ ನಾವು ಅವರೊಂದಿಗೆ ಇನ್ನೂ ಚರ್ಚಿಸಿಲ್ಲ. ಧೋನಿ ಅಮೆರಿಕ ಪ್ರವಾಸದಿಂದ ಈಗ ಬಂದಿದ್ದಾರೆ. ನಾನು ಈ ವಾರ ಪ್ರಯಾಣದಲ್ಲಿರುತ್ತೇನೆ. ಹೀಗಾಗಿ ಮುಂದಿನ ವಾರದಲ್ಲಿ ಈ ಚರ್ಚೆ ನಡೆಯುವ ಸಾಧ್ಯತೆಯಿದೆ-ಕಾಸಿ ವಿಶ್ವನಾಥನ್, CSK CEO
ಧೋನಿ ನಿರ್ಧಾರವೇ ಅಂತಿಮ..
ಐಪಿಎಲ್​ನ ಹೊಸ ರೂಲ್ಸ್​ ಜಾರಿಯಾಗಿ ಐದಾರು ದಿನಗಳೇ ಕಳೆಯುತ್ತಿವೆ. ಸಿಎಸ್​ಕೆ ಫ್ರಾಂಚೈಸಿ ಧೋನಿ ಜೊತೆ ಈ ಕುರಿತು ಮಾತೇ ಆಡಿಲ್ಲ. ಅನ್​​ಕ್ಯಾಪ್ಡ್​ ರೂಲ್​​ ಬಳಸಲ್ಲ ಎಂದು ಮಾತನಾಡಿರುವ ಸಿಎಸ್​ಕೆ ಸಿಇಒ ವಿಶ್ವನಾಥನ್, ಇದೇ ವೇಳೆ ಮತ್ತೊಂದು ಬಾಂಬ್ ಹಾಕಿದ್ದಾರೆ.
ಇದನ್ನೂ ಓದಿ:RCB ಜೊತೆ ಚೆನ್ನೈ ಸೋತಿದ್ದಕ್ಕೆ ಟಿವಿ ಪುಡಿ ಪುಡಿ.. ಎಂ.ಎಸ್ ಧೋನಿ ಬಗ್ಗೆ ಮಾಜಿ ಪ್ಲೇಯರ್ ಹೇಳಿದ್ದು ಸತ್ಯನಾ?
/newsfirstlive-kannada/media/post_attachments/wp-content/uploads/2024/09/MS_DHONI_LOSS.jpg)
ನಾವು ಈ ವಾರ ಅಮೆರಿಕಾಗೆ ಪ್ರಯಾಣಿಸುತ್ತಿದ್ದೇವೆ. ಈ ವೇಳೆ ಧೋನಿ ಜೊತೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಆಗ ಈ ವಿಚಾರದಲ್ಲಿ ಒಂದಿಷ್ಟು ಸ್ಪಷ್ಟತೆ ಸಿಗಬಹುದು. ಧೋನಿ ಐಪಿಎಲ್‌ನಲ್ಲಿ ಆಡುತ್ತಾರೆ ಎಂದು ನಾವು ಭಾವಿಸುತ್ತೇವೆ. ಧೋನಿ ಅವರೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ-ಕಾಸಿ ವಿಶ್ವನಾಥನ್, CSK CEO
ಧೋನಿ ಐಪಿಎಲ್​ನಲ್ಲಿ ಆಡಬೇಕು ಅನ್ನೋ ಆಸೆ ಚೆನ್ನೈ ಫ್ರಾಂಚೈಸಿಗೆ ಇದೆ. ಎಲ್ಲವೂ ಧೋನಿ ನಿರ್ಧಾರದ ಮೇಲೆಯೇ ಅನ್ನೋದು ಕಾಶಿ ವಿಶ್ವನಾಥನ್ ಮಾತು. ಇದೇ ಮಾತು ಹಲವು ಅನುಮಾನಗಳನ್ನ ಹುಟ್ಟಿಹಾಕಿದೆ.
ಧೋನಿ ಕೋರ್ಟ್​ನಲ್ಲಿ ಚೆಂಡು
ಚೆನ್ನೈನ ಫ್ರಾಂಚೈಸಿಯ ಆಸೆಯಂತೆ ಹೊಸ ರಿಟೈನ್​ ರೂಲ್ಸ್​​ ಬಂದಿದೆ. ಅನ್​ಕ್ಯಾಪ್ಡ್ ಪ್ಲೇಯರ್​​​ ನಿಮಯದಲ್ಲೇ ಧೋನಿಯನ್ನು ಉಳಿಸಿಕೊಳ್ಳಬಹುದಾಗಿದೆ. ಮುಂದಿನ ಸೀಸನ್​​​​​​​​​​​​ ಆಡುವ ನಿರ್ಧಾರ ಧೋನಿಗೆ ಬಿಟ್ಟಿದ್ದು ಎಂದು ಫ್ರಾಂಚೈಸಿ ಹೇಳಿದೆ. ಕಳೆದೆರಡು ಸೀಸನ್​​ಗಳಿಂದ ಇಂಜುರಿ ಕೂಡ ಧೋನಿಯನ್ನ ಕಾಡ್ತಿದೆ. ಈ ಹಿಂದೆಯೇ ಮಿಸ್ಟರ್ ಕೂಲ್ ಮಾಹಿ, ಅಭಿಮಾನಿಗಳ ಮುಂದೆಯೇ ಕೊನೆ ಪಂದ್ಯವನ್ನಾಡುವ ಬಯಕೆ ವ್ಯಕ್ತಪಡಿಸಿದ್ರು. ಹೀಗಾಗಿ ಫ್ಯಾನ್ಸ್​ಗೆ ಗುಡ್​ ನ್ಯೂಸ್ ನೀಡ್ತಾರೆ ಅನ್ನೋದು ಎಲ್ಲರ ಲೆಕ್ಕಚಾರವಾಗಿದೆ.
ಇದನ್ನೂ ಓದಿ:RCB ವಿರುದ್ಧ ಸೋತಾಗ ಕೋಪದಲ್ಲಿ TV ಒಡೆದು ಹಾಕಿದ ಧೋನಿ! ಅಚ್ಚರಿಯ ಘಟನೆ ಬಿಚ್ಚಿಟ್ಟ ಪತ್ರಕರ್ತ
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us