/newsfirstlive-kannada/media/post_attachments/wp-content/uploads/2024/10/NAILS-BITING-4.jpg)
ಕೆಲವು ಜನರು ಗೊಂದಲ, ಆತಂಕ ಮತ್ತು ಭಯದಿಂದ ಆಗಾಗ ತಮ್ಮ ಉಗುರುಗಳನ್ನು ಕಚ್ಚುತ್ತಾರೆ. ಇದರಿಂದ ಉಗುರುಗಳು ಒಡೆಯುತ್ತವೆ ಮತ್ತು ಅನೇಕ ತೊಂದರೆಗಳು ಉಂಟಾಗುತ್ತವೆ. ಉಗುರುಗಳನ್ನು ಕಚ್ಚುವುದರಿಂದ ಏನೆಲ್ಲ ಸಮಸ್ಯೆ ಆಗುತ್ತದೆ ಅನ್ನೋ ವಿವರ ಇಲ್ಲಿದೆ.
/newsfirstlive-kannada/media/post_attachments/wp-content/uploads/2024/10/NAILS-BITING-2.jpg)
ಅಂದ್ಹಾಗೆ ಬಹುತೇಕ ಜನರು ಉಗುರುಗಳನ್ನು ಕಚ್ಚುತ್ತಾರೆ. ಮನಸ್ಸಿನಲ್ಲಿರುವ ಚಡಪಡಿಕೆ, ಆತಂಕ ಅಥವಾ ಹೆದರಿಕೆಯನ್ನು ಹೇಗೆ ವ್ಯಕ್ತಪಡಿಸಬೇಕೆಂದು ತಿಳಿದಿರುವುದಿಲ್ಲ. ಉಗುರು ಕಚ್ಚುವ ಮೂಲಕ ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ, ಹಲವು ದೈಹಿಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ನೀವೇನಾದರೂ ಉಗುರು ಕಚ್ಚುವ ಅಭ್ಯಾಸ ರೂಢಿಸಿಕೊಂಡಿದ್ದರೆ ಇಂದೇ ನಿಲ್ಲಿಸಿಬಿಡಿ.
ಇದನ್ನೂ ಓದಿ:ದಿನಕ್ಕೆ ಮೂರುವರೆ ಗಂಟೆ ನಿದ್ದೆ, ಸಂಜೆ 6 ಗಂಟೆಯ ಮೇಲೆ ಊಟವಿಲ್ಲ, ಹೇಗಿದೆ ಪ್ರಧಾನಿ ಮೋದಿ ಜೀವನ ಶೈಲಿ?
/newsfirstlive-kannada/media/post_attachments/wp-content/uploads/2024/10/NAILS-BITING-1.jpg)
ಏನೆಲ್ಲ ಸಮಸ್ಯೆ ಆಗುತ್ತದೆ..?
- ಉಗುರು ಕಚ್ಚುವಿಕೆಯು ಉಗುರಿನ ರಚನೆಯನ್ನು ಹಾನಿ ಮಾಡುತ್ತದೆ
- ನೀವು ಉಗುರುಗಳನ್ನು ಕಚ್ಚುವುದರಿಂದ ನಿಮ್ಮ ಹಲ್ಲುಗಳಿಗೂ ಹಾನಿ
- ಉಗುರು ಕಚ್ಚುವುದರಿಂದ ಬಾಯಿಯಲ್ಲಿರುವ ಒಸಡುಗಳಿಗೆ ಹಾನಿ
- ಉಗುರಿನ ಸುತ್ತಲಿನ ಚರ್ಮವು ಒಣಗಲು ಮತ್ತು ಚಪ್ಪಟೆ ಆಗುತ್ತದೆ
- ಉಗುರು ಕಚ್ಚುವುದು ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ
ಇದನ್ನೂ ಓದಿ:ನಿಮ್ಮ ದೈನಂದಿನ ಜೀವನ ಹೇಗಿದೆ? ಈ ಹವ್ಯಾಸ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು!
/newsfirstlive-kannada/media/post_attachments/wp-content/uploads/2024/10/NAILS-BITING.jpg)
ಹೀಗಾಗಿ ಉಗುರು ಕಚ್ಚುವುದು ಆರೋಗ್ಯಕರವಲ್ಲ. ಹಲವು ಬ್ಯಾಕ್ಟೀರಿಯಾಗಳು ನಿಮ್ಮ ದೇಹವನ್ನು ಪ್ರವೇಶಿಸುತ್ತವೆ. ಉಗುರಿನ ಕೊಳೆ ಬಾಯಿಯಲ್ಲಿ ಶೇಖರಗೊಳ್ಳುತ್ತದೆ. ಶೀತಗಳು ಮತ್ತು ಇತರ ಸಾಂಕ್ರಾಮಿಕ ರೋಗಗಳು ಬೇಗ ಬರುತ್ತದೆ. ಉಗುರು ಕಚ್ಚುವುದರಿಂದ ಕರುಳಿನ ಕ್ಯಾನ್ಸರ್ ಕೂಡ ಬರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ಇದನ್ನೂ ಓದಿ:ಇದು ವಿಶ್ವದ ಅತ್ಯಂತ ದುಬಾರಿ ಕಾಂಡೋಮ್..! 10, 20 ಸಾವಿರ ಅಲ್ಲವೇ ಅಲ್ಲ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us