/newsfirstlive-kannada/media/media_files/2025/10/06/jaipur-hospital-2-2025-10-06-08-15-21.jpg)
ರಾಜಸ್ಥಾನದ ಜೈಪುರದಲ್ಲಿರುವ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ (SMS Hospital) ತೀವ್ರ ನಿಗಾದಲ್ಲಿ (ICU) ಬೆಂಕಿ ಕಾಣಿಸಿಕೊಂಡು ಆರು ರೋಗಿಗಳು ಮೃತಪಟ್ಟಿದ್ದಾರೆ. ಬೆಳಗಿನ ಜಾವ 1:30 ರ ಸುಮಾರಿಗೆ ಟ್ರಾಮಾ ಸೆಂಟರ್‌ನ ನ್ಯೂರೋ ಐಸಿಯು ವಾರ್ಡ್‌ನ ಎರಡನೇ ಮಹಡಿಯಲ್ಲಿರುವ ಸ್ಟೋರ್ ರೂಮಿನಲ್ಲಿ ದುರಂತ ನಡೆದಿದೆ.
ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸಂಗ್ರಹಿಸಲಾಗಿದ್ದ ವಸ್ತುಗಳಿಗೆ ಬೆಂಕಿ ಆವರಿಸಿದೆ. ಘಟನೆಯಲ್ಲಿ ಕಾಗದದ ಫೈಲ್‌ಗಳು, ಐಸಿಯು ಉಪಕರಣಗಳು ಮತ್ತು ರಕ್ತದ ಮಾದರಿ ಟ್ಯೂಬ್‌ಗಳು ಸೇರಿದಂತೆ ಹಲವಾರು ವಸ್ತುಗಳು ಸುಟ್ಟುಹೋಗಿವೆ.
ಇದನ್ನೂ ಓದಿ: ಇದೇ ವಾರ ಭಕ್ತರಿಗೆ ದರುಶನ ನೀಡಲಿದ್ದಾಳೆ ಹಾಸನಾಂಬೆ.. ಹೇಗಿದೆ ತಯಾರಿ?
ಟ್ರಾಮಾ ಸೆಂಟರ್‌ನ ಉಸ್ತುವಾರಿ ಅನುರಾಗ್ ಧಕಾಡ್ ಘಟನೆಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ನರ್ಸಿಂಗ್ ಸಿಬ್ಬಂದಿ ಮತ್ತು ವಾರ್ಡ್ ಬಾಯ್ಸ್, ರೋಗಿಗಳನ್ನು ತುರ್ತಾಗಿ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದರು. ಇನ್ನೂ ಐದು ರೋಗಿಗಳ ಸ್ಥಿತಿ ಗಂಭೀರವಾಗಿದೆ. ಟ್ರಾಮಾ ಸೆಂಟರ್​ನ ಎರಡನೇ ಮಹಡಿಯಲ್ಲಿ ಎರಡು ಐಸಿಯುಗಳಿವೆ. ಒಂದು ಟ್ರಾಮಾ ಐಸಿಯು ಮತ್ತು ಇನ್ನೊಂದು ಸೆಮಿ-ಐಸಿಯು. ಒಟ್ಟು 24 ರೋಗಿಗಳಿದ್ದಾರೆ. ಟ್ರಾಮಾ ಐಸಿಯುನಲ್ಲಿ 11 ಮತ್ತು ಸೆಮಿ-ಐಸಿಯುನಲ್ಲಿ 13 ರೋಗಿಗಳಿದ್ದರು ಎಂದಿದ್ದಾರೆ.
ದುರಂತ ಬೆನ್ನಲ್ಲೇ ಗಂಭೀರ ರೋಗಿಗಳು ಕೋಮಾ ಸ್ಥಿತಿಗೆ ತಲುಪಿದರು. ಟ್ರಾಮಾ ಸೆಂಟರ್ ತಂಡ, ನಮ್ಮ ನರ್ಸಿಂಗ್ ಸಿಬ್ಬಂದಿ ಮತ್ತು ವಾರ್ಡ್ ಬಾಯ್ಸ್ ತಕ್ಷಣ ಟ್ರಾಲಿಗಳ ಸಹಾಯದಿಂದ ಅವರನ್ನು ರಕ್ಷಿಸಿದ್ದಾರೆ. ಸಾಧ್ಯವಾದಷ್ಟು ರೋಗಿಗಳನ್ನು ಐಸಿಯುನಿಂದ ಹೊರಗೆ ಶಿಫ್ಟ್ ಮಾಡಿದರು. ಆ ರೋಗಿಗಳಲ್ಲಿ ಆರು ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದರು. ಸಿಪಿಆರ್ ಮೂಲಕ ಉಳಿಸಿಕೊಳ್ಳಲು ಪ್ರಯತ್ನಿಸಿದೇವು. ಆದರೆ ನಮಗೆ ಸಾಧ್ಯವಾಗಲಿಲ್ಲ. ಐದು ರೋಗಿಗಳು ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಮೃತ ರೋಗಿಗಳಲ್ಲಿ ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷರು ಎಂದಿದ್ದಾರೆ.
ಇದನ್ನೂ ಓದಿ:ಜೀವಸತ್ವಗಳ ಗಣಿ ಮೊಳಕೆ ಕಾಳುಗಳು.. ಇವುಗಳಿಂದ ಏನೇನು ಪ್ರಯೋಜನಗಳಿವೆ..?
ತನಿಖೆ ಕೈಗೆತ್ತಿಕೊಂಡ FSL ತಂಡ
ಜೈಪುರ ಪೊಲೀಸ್ ಆಯುಕ್ತ ಬಿಜು ಜಾರ್ಜ್ ಜೋಸೆಫ್ ಮಾತನಾಡಿ, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಂತೆ ಕಂಡುಬಂದಿದೆ. ಆದರೂ ಬೆಂಕಿಯ ಕಾರಣವನ್ನು ನಿರ್ಧರಿಸಲು ವಿಧಿವಿಜ್ಞಾನ ತಂಡವು ತನಿಖೆ ನಡೆಸಲಿದೆ. ತನಿಖೆ ಪೂರ್ಣಗೊಂಡ ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದಿದ್ದಾರೆ.
ಆಸ್ಪತ್ರೆಗೆ ಸಿಎಂ ಭೇಟಿ
ಬೆಂಕಿಯ ನಂತರ ಪರಿಸ್ಥಿತಿಯನ್ನು ಪರಿಶೀಲಿಸಲು ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಎಸ್‌ಎಂಎಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಐಸಿಯುನಲ್ಲಿ ಬೆಂಕಿ ದುರಂತಕ್ಕೆ ಕಾರಣ ತಿಳಿದುಕೊಳ್ಳಲು ರೋಗಿಗಳು ಮತ್ತು ವೈದ್ಯರ ಜೊತೆ ಮಾತನ್ನಾಡಿದರು.
ಇದನ್ನೂ ಓದಿ: ಬಿಗ್​ಬಾಸ್​ ಶೋನಿಂದ ಹೊರಬಿದ್ದ ಇಬ್ಬರು ಸ್ಪರ್ಧಿಗಳು; ಒಂದೇ ವಾರಕ್ಕೆ ಜರ್ನಿ ಅಂತ್ಯ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ