/newsfirstlive-kannada/media/media_files/2025/10/30/rahul-gandhi-vs-narendra-modi-2025-10-30-09-00-24.jpg)
ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಬಿಹಾರದಲ್ಲಿ ಅಬ್ಬರದ ಪ್ರಚಾರ ನಡೆಸ್ತಿದ್ದಾರೆ. ನಿನ್ನೆಯಷ್ಟೇ ಬಿಹಾರ ವಿಧಾನಸಬಾ ಚುನಾವಣಾ ಅಖಾಡಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಧುಮುಕಿದ್ದಾರೆ. ಮೋದಿ ವಿರುದ್ಧ ಮಾತಿನ ಮಳೆ ಸುರಿಸಿದ್ದಾರೆ. ನಮೋ ವಿರುದ್ಧ ರಾಗಾ ಆಡಿದ ಮಾತುಗಳು ಬಿಜೆಪಿಗರನ್ನ ಕೆರಳುವಂತೆ ಮಾಡಿದೆ. ಇದೇ ವಿಚಾರಕ್ಕೆ ಕೈ-ಕಮಲ ಮಧ್ಯೆ ಏಟು-ಎದಿರೇಟಿನ ಸಮರ ನಡೆದಿದೆ.
ಇದನ್ನೂ ಓದಿ: ಕೆ.ಎನ್.ರಾಜಣ್ಣ ಜೊತೆ ಸೇರಿ ಮತ್ತೊಂದು ದಾಳ ಉರುಳಿಸಿದ ಸಿಎಂ..!
ಬಿಹಾರದಲ್ಲಿ ಚುನಾವಣೆಗೆ ಹೆಚ್ಚುಕಡಿಮೆ ಇನ್ನೊಂದು ವಾರ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ರಾಷ್ಟ್ರಮಟ್ಟದ ಘಟಾನುಘಟಿ ನಾಯಕರೆಲ್ಲಾ ಅಲ್ಲಿ ಪ್ರಚಾರಕ್ಕೆ ಹೋಗಿ ಬಂದಿದ್ದಾರೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ಮಾತ್ರ ಬಿಹಾರದತ್ತ ಇಷ್ಟು ದಿನ ಮುಖ ಮಾಡಿರಲಿಲ್ಲ., ಸೀಟು ಹಂಚಿಕೆ ಗೊಂದಲದಿಂದ ಬಿಹಾರ ಅಖಾಡದಿಂದ ದೂರವೇ ಉಳಿದಿದ್ರು. ಆದ್ರೆ ನಿನ್ನೆ ವಿಧಾನಸಭಾ ಅಖಾಡಕ್ಕೆ ಲೇಟ್ ಆದ್ರೂ ಲೇಟೆಸ್ಟ್ ಆಗಿ ರಾಗಾ ಎಂಟ್ರಿ ಕೊಟ್ಟು ಅಬ್ಬರಿಸಿದ್ದಾರೆ.
ಬಿಹಾರದಲ್ಲಿ ರಾಹುಲ್ ಗಾಂಧಿ ಅಬ್ಬರದ ಪ್ರಚಾರ!
ಬಿಹಾರ ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ ಧುಮಿಕಿದ್ರು. ಮುಜಫರ್‌ಪುರ, ದರ್ಬಾಂಗಾದಲ್ಲಿ ತೇಜಸ್ವಿ ಯಾದವ್ ಜೊತೆ ರಾಹುಲ್ ಅಬ್ಬರದ ಪ್ರಚಾರ ನಡೆಸಿದ್ರು. ಇನ್ನು ನಿನ್ನೆಯಿಂದ ಆರಂಭವಾಗಿರೋ ರಾಹುಲ್ ಗಾಂಧಿ ಮತಯಾತ್ರೆ ನವೆಂಬರ್ 7ರವರೆಗೆ ನಡೆಯಲಿದೆ. ಸುಮಾರು 12 ಪ್ರಚಾರ ಸಭೆಗಳಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ:ಇಂದು RSS ಚಿತ್ತಾಪುರ ಪಥಸಂಚಲನದ ಭವಿಷ್ಯ ನಿರ್ಧಾರ! ಸಿಗುತ್ತಾ ಗ್ರೀನ್ ಸಿಗ್ನಲ್​?
‘ಮತಕ್ಕಾಗಿ ಡ್ಯಾನ್ಸ್ ಬೇಕಾದ್ರೂ ಮಾಡ್ತಾರೆ’.. ರಾಗಾ ವ್ಯಂಗ್ಯ!
ಚುನಾವಣಾ ರಣಕಣದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಒಬ್ಬರ ಮೇಲೋಬ್ಬರು ವಾಗ್ದಾಳಿಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಅದ್ರಂತೆ, ನಿನ್ನೆಯ ಪ್ರಚಾರದ ವೇಳೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮೋದಿಯನ್ನ ಅಣುಕಿಸಿ ಮಾತನಾಡಿದ್ದಾರೆ. ವೋಟಿಗಾಗಿ ಪ್ರಧಾನಿ ನರೇಂದ್ರ ಮೋದಿ ವೇದಿಕೆ ಮೇಲೆ ಡ್ಯಾನ್ಸ್ ಬೇಕಾದ್ರೂ ಮಾಡ್ತಾರೆ ಅಂತ ವ್ಯಂಗ್ಯವಾಡಿದ್ದಾರೆ.
ಒಂದು ಡ್ರಾಮಾ ರಚನೆಯಾಗಿದೆ. ಒಂದು ಕಡೆ ಯಮುನಾ ನದಿ. ಆಕೆಯನ್ನ ಯಮುನೆ ಎಂದು ಕರೆಯಲಾಗುತ್ತದೆ. ಆದ್ರೆ ಮೋದಿ ಜಿ ಹೇಳುತ್ತಾರೆ. ನಾನು ನಾಟಕ ಮಾಡುತ್ತಿದ್ದೇನೆ. ನನ್ನನ್ನು ನೋಡಿ ನಾನು ಯಮುನೆಯಲ್ಲಿ ಸ್ನಾನ ಮಾಡಿದ್ದೇನೆ ಅಂತ. ಆದ್ರೆ, ಅಲ್ಲಿ ಯಮುನೆ ಇಲ್ಲ. ಅಲ್ಲಿ ಒಂದು ಕೊಳ ಇದೆ. ನರೇಂದ್ರ ಮೋದಿ ಅವರು ಈಜು ಕೊಳದಲ್ಲಿ ಸ್ನಾನ ಮಾಡಿದ್ರು. ಕೊಳದಲ್ಲಿ ಸ್ನಾನ ಮಾಡಲು ಹೋದರು. ಅವರಿಗೂ ಯಮುನಾ ನದಿಗೂ ಯಾವುದೇ ಸಂಬಂಧವಿಲ್ಲ. ಅವರಿಗೂ ಛಟ್ ಪೂಜೆಗೂ ಯಾವುದೇ ಸಂಬಂಧವಿಲ್ಲ. ಅವರಿಗೆ ನಿಮ್ಮ ಮತಬೇಕು ಅಷ್ಟೇ. ನರೇಂದ್ರ ಮೋದಿಯವರು ವೋಟಿಗಾಗಿ ನಾಟಕವನ್ನ ಬೇಕಿದ್ರೂ ಮಾಡ್ತಾರೆ. ನೀವು ಏನನ್ನ ಮಾಡಬೇಕು ಅಂತ ಬಯಸುತ್ತೀರೋ ಅದನ್ನ ಮಾಡ್ತಾರೆ. ನಾನು ಹೇಳುತ್ತಿದ್ದೇನೆ.. ಬೇಕಾದ್ರೆ ನೀವು ಹೇಳಿ ನೋಡಿ. ನಾವು ನಿಮಗೆ ಮತಹಾಕುತ್ತೇವೆ ನೀವು ವೇದಿಕೆ ಮೇಲೆ ಬಂದು ನೃತ್ಯವನ್ನ ಮಾಡಿ ಅಂತ ಹೇಳಿ.. ಅವರು ನೃತ್ಯವನ್ನ ಬೇಕಾದ್ರೂ ಮಾಡ್ತಾರೆ.
-ರಾಹುಲ್ ಗಾಂಧಿ, ಎಐಸಿಸಿ ನಾಯಕ
ರಾಹುಲ್ ಗಾಂಧಿ ‘ಲೋಕಲ್ ಗೂಂಡಾ’.. ಬಿಜೆಪಿ ಕೆಂಡ!
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕುಹಕವಾಡಿರೋ ರಾಹುಲ್ ಗಾಂಧಿಗೆ ಅವರ ದಾಟಿಯಲ್ಲೇ ಬಿಜೆಪಿ ಪಾಳಯ ತಿರುಗೇಟು ನೀಡಿದೆ. ರಾಹುಲ್​ ಗಾಂಧಿಗೆ ರೌಡಿಯಂತೆ ಮಾತನಾಡಬೇಡಿ ಎಂದು ವಾರ್ನಿಂಗ್ ಕೊಟ್ಟಿದೆ. ಬಿಜೆಪಿ ನಾಯಕ ಪ್ರದೀಪ್ ಭಂಡಾರಿ, ರಾಹುಲ್ ಗಾಂಧಿ ಲೋಕಲ್ ಗೂಂಡಾ ಎನ್ನುವ ಮೂಲಕ ಖಾರವಾಗಿ ತಿರುಗೇಟು ನೀಡಿದ್ದಾರೆ.
‘ರಾಹುಲ್ ಲೋಕಲ್ ಗೂಂಡಾ’
ರಾಹುಲ್ ಗಾಂಧಿ ಒಂದು ರೀತಿ ಲೋಕಲ್ ಗೂಂಡಾ ರೀತಿಯಲ್ಲಿ ಮಾತನಾಡಿದ್ದಾರೆ. ಅಲ್ಲದೇ ಬಹಿರಂಗವಾಗಿ ದೇಶದ ಬಡವರಿಗೆ ಅಪಮಾನ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಪರ ಮತ ಚಲಾಯಿಸುವ ಮತದಾರರಿಗೆ ಅವಮಾನಿಸಿದ್ದಾರೆ. ಮತದಾರರು ಮತ್ತು ಭಾರತದ ಪ್ರಜಾಪ್ರಭುತ್ವವನ್ನ ಅಣಕಿಸಿದ್ದಾರೆ.ಪ್ರದೀಪ್ ಭಂಡಾರಿ, ಬಿಜೆಪಿ ನಾಯಕ
ಬಿಹಾರ ಮತಯುದ್ಧ ಮತ್ತಷ್ಟು ರಣರೋಚಕ ಘಟ್ಟಕ್ಕೆ ತಲುಪುತ್ತಿದೆ.. ವಾಗ್ಯುದ್ಧ.. ವಾಗ್ದಾಳಿಗಳ ಮಧ್ಯೆ ರಣರಂಗದ ಕಾವು ಹೆಚ್ಚಾಗುತ್ತಿದೆ. 243 ಕ್ಷೇತ್ರಗಳಿಗೆ ನವೆಂಬರ್ 6 ಮತ್ತು 12ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಯಾರಿಗೆ ಬಿಹಾರ ಅನ್ನೋದು ನವೆಂಬರ್ 14ರಂದು ಗೊತ್ತಾಗಲಿದೆ.
ಇದನ್ನೂ ಓದಿ: ಸರ್ಕಾರದಿಂದ ದೊಡ್ಡ ಹೆಜ್ಜೆ.. ಶೀಘ್ರದಲ್ಲೇ ಅಧಿಕೃತ caller ID ಸೇವೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us