Advertisment

ಇಂದು RSS ಚಿತ್ತಾಪುರ ಪಥಸಂಚಲನದ ಭವಿಷ್ಯ ನಿರ್ಧಾರ! ಸಿಗುತ್ತಾ ಗ್ರೀನ್ ಸಿಗ್ನಲ್​?

ಚಿತ್ತಾಪುರದಲ್ಲಿ ಶುರುವಾಗಿರೋ ಆರ್​ಎಸ್​ಎಸ್​ ಪಥಸಂಚಲನದ ವಿವಾದಕ್ಕೆ ಇಂದು ಹೈಕೋರ್ಟ್​ ಕ್ಲೈಮ್ಯಾಕ್ಸ್​​ ನೀಡಲಿದೆ. ಆರ್​ಎಸ್​ಎಸ್ ಪಥಸಂಚಲನ ನಡೆಸಬೇಕಾ ಅಥವಾ ಬೇಡ್ವಾ ಅನ್ನೋ ಬಗ್ಗೆ ಹೈಕೋರ್ಟ್​ ಇಂದು ತೀರ್ಪು ನೀಡಲಿದೆ.

author-image
Ganesh Kerekuli
PRIYANK_KHARGE_RSS
Advertisment

ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರವಾದ ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನ ಸಂಘರ್ಷ ಮುಗಿಯದ ಕತೆಯಾಗಿದೆ. ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್​ಎಸ್ಎಸ್​ ಕೊರ್ಟ್​​ ಮುಂದೆ ತಿಳಿಸಿದ್ದು, ಈ ಸಂಬಂಧ ಶಾಂತಿ ಸಭೆ ನಡೆಸುವಂತೆ ಕೋರ್ಟ್ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾರೀ ಹೈಡ್ರಾಮಾವೇ ನಡೆದಿತ್ತು.. ಆರ್​ಎಸ್​ಎಸ್​​ ಹಾಗೂ ಭೀಮ್ ಆರ್ಮಿ ನಾಯಕರ ನಡುವೆ ಮಾತಿನ ಚಕಮಕಿ ನಡೆದು ವಿಷಯ ಮತ್ತಷ್ಟು ಜಟಿಲವಾಗಿದೆ.

Advertisment

ಇಂದು ಆರ್​ಎಸ್​ಎಸ್​ ಪಥಸಂಚಲನದ ಭವಿಷ್ಯ ನಿರ್ಧಾರ!

ಪಥಸಂಚಲನ ನಡೆಸಲು ಆರ್‌ಎಸ್‌ಎಸ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ಕಲಬುರಗಿ ಹೈಕೋರ್ಟ್ ಪೀಠ, ಸರ್ಕಾರಕ್ಕೆ ಕೆಲವು ಸಲಹೆ ಸೂಚನೆಗಳನ್ನು ನೀಡಿ, ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.. ಚಿತ್ತಾಪುರದಲ್ಲಿನ ಪರಿಸ್ಥಿತಿಯನ್ನು ಪರಿಗಣಿಸಿ ವರದಿ ಸಲ್ಲಿಸುವಂತೆ ಡಿಸಿಗೆ ಕೋರ್ಟ್ ತಿಳಿಸಿತ್ತು.. ಈ ವರದಿಯ ಆಧಾರದ ಮೇಲೆ ಕೋರ್ಟ್ ಇಂದು ತೀರ್ಪು ನೀಡಲಿದೆ.. ಇಂದಿನ ಕೋರ್ಟ್​ ತೀರ್ಪಿನ ಮೇಲೆ ಆರ್​ಎಸ್​ಎಸ್​ ಪಥಸಂಚಲನದ ಭವಿಷ್ಯ ನಿಂತಿದೆ.. ಹಾಗಿದ್ರೆ ಕಳೆದ ಅಕ್ಟೋಬರ್​ 28ರಂದು ನಡೆದ ಶಾಂತಿ ಸಭೆಯಲ್ಲಿ ಏನೆಲ್ಲಾ ನಡೀತು ಎಂಬ ವಿವರ ಇಲ್ಲಿದೆ.. 

ಇದನ್ನೂ ಓದಿ: ಶರಾವತಿ ಪಂಪ್ಡ್‌ ಸ್ಟೋರೇಜ್‌ನ ಆಳ ಅಗಲ.. ಏನಿದು ಯೋಜನೆ? ವಿರೋಧ ಇರೋದು ಯಾಕೆ?

ಶಾಂತಿ ಸಭೆ ಸದ್ದುಗದ್ದಲ​!

  • ಶಾಂತಿ ಸಭೆಯಲ್ಲಿ RSS, ಭೀಮ್ ಆರ್ಮಿ ಸೇರಿ 10 ಸಂಘಟನೆ ಭಾಗಿ
  • RSS ಮಾತ್ರವಲ್ಲ ಎಲ್ಲಾ ಸಂಘಟನೆಗಳಿಗೂ ಅವಕಾಶ ಕೊಡಿ ಅಂತ ಪಟ್ಟು
  • ಎಲ್ರಿಗೂ ಅವಕಾಶ ಕೊಡಿ ಎಂದು ಆರ್​ಎಸ್​ಎಸ್​ನಿಂದಲೂ ಡಿಸಿಗೆ ಮನವಿ 
  • ಶಾಂತಿ ಸಭೆಯ ಬಳಿಕ ಮತ್ತಷ್ಟು ಜಿದ್ದಾ ಜಿದ್ದಿಗೆ ಬಿದ್ದಿದ್ದ ದಲಿತ ಸಂಘಟನೆಗಳು 
  • RSS ಪಥಸಂಚಲನದ ದಿನವೇ ತಾವೂ ಪಥಸಂಚಲನ ಮಾಡೋ ಎಚ್ಚರಿಕೆ
  • ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಹೊಗ್ತೇವೆ ಅಂತಲೂ ಎಚ್ಚರಿಕೆ
  • ಲಾಠಿ ಬಿಟ್ಟು ರಾಷ್ಟ್ರಧ್ವಜ, ಸಂವಿಧಾನ ಹಿಡಿದ್ರೆ ಸುಮ್ಮನಿರುತ್ತೇವೆ ಎಂದು ಎಚ್ಚರಿಕೆ
Advertisment

RSS ಪಥಸಂಚಲನದಲ್ಲಿ ಭಾಗಿಯಾದ 4 ಶಿಕ್ಷಕರಿಗೆ ನೋಟಿಸ್ 

ಅಕ್ಟೋಬರ್​ 7 ಮತ್ತು 13ರಂದು ಬೀದರ್​ ಜಿಲ್ಲೆಯ ಔರಾದ್​ನಲ್ಲಿ RSS ಪಥಸಂಚಲನ ನಡೆದಿತ್ತು.. ಪಥಸಂಚಲನದಲ್ಲಿ ಶಿಕ್ಷಕರಾದ ಮಹದೇವ​, ಶಾಲಿವಾನ್​, ಪ್ರಕಾಶ್ ಮತ್ತು ಸತೀಶ್​​ ಭಾಗವಹಿಸಿದ್ದರು.. ಈ ಬಗ್ಗೆ ಅಕ್ಟೋಬರ್ 27ರಂದು ದಲಿತ ಸೇನೆಯ ಮುಖಂಡರು ಬಿಇಒಗೆ ದೂರು ನೀಡಿದ್ದರು.. ಜೊತೆಗೆ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.. ದೂರು ಸಲಿಸಿದ ಮರುದಿನವೇ ನಾಲ್ಕು ಜನ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.. ಪಥಸಂಚಲನದಲ್ಲಿ ಬಾಗಿಯಾಗಿದ್ದಕ್ಕೆ ಕಾರಣ ಕೇಳಿ ನಾಲ್ವರಿಗೆ ಔರಾದ್ ಬಿಇಓ ನೋಟಿಸ್​ ಜಾರಿ ಮಾಡಿದ್ದು, ಸೂಕ್ತ ಕಾರಣ ನೀಡದಿದ್ರೆ ಕ್ರಮ ಜರುಗಿಸೋ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಜಾರಿಯಾದ್ರೆ ಜನ ಹೇಗೆಲ್ಲ ಬೀದಿಗೆ ಬೀಳ್ತಾರೆ? ಏನೆಲ್ಲ ನಷ್ಟ?

ನೋಟಿಸ್​​ನಲ್ಲಿ ಏನಿದೆ?

ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಅಕ್ಟೋಬರ್​ 7 ಮತ್ತು 13 ರಂದು ನಡೆದ RSS ಪಥಸಂಚಲನದಲ್ಲಿ ತಾವುಗಳು ಭಾಗಿಯಾಗಿರುತ್ತೀರಿ.. ಈ ಕುರಿತು ವಿಡಿಯೋ ಮತ್ತು ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದಿರುವ ದೃಶ್ಯಗಳು ಕಂಡು ಬಂದಿರುತ್ತವೆ.. ತಾವುಗಳು ಸರಕಾರಿ ನೌಕರರು ಆಗಿರುವುದರಿಂದ ಯಾವುದೇ ಪ್ರಕಾರ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ.. ತಾವುಗಳು RSS​ ಪಥಸಂಚಲನದಲ್ಲಿ ಭಾಗವಹಿಸಿ ಸರಕಾರದ ಸೇವಾ ನಿಬಂಧನೆಗೆ ವಿರುದ್ಧವಾಗಿ ಕರ್ತವ್ಯ ಮಾಡಿರುವಿರಿ.. ಈ ಪ್ರಯುಕ್ತ ತಾವುಗಳು ಈ ನೋಟಿಸ್ ತಲುಪಿದ ಬಳಿಕ ಕಾರಣ ಕೇಳುವ ನೋಟಿಸ್‌ಗೆ ಲಿಖಿತ ಹೇಳಿಕೆಯನ್ನ ನೀಡಿ ಖುದ್ದಾಗಿ ಬಂದು ಈ ಕಚೇರಿಗೆ ಸಲ್ಲಿಸುವುದು.. ಇಲ್ಲವಾದಲ್ಲಿ ಏಕಪಕ್ಷಿಯವಾಗಿ ಕರ್ನಾಟಕ ನಾಗರಿಕ ಸೇವಾ ನಿಯಮಗಳು-1957ರನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
-ಔರಾದ್ ಬಿಇಓ 

Advertisment

ಇದನ್ನೂ ಓದಿ: ರಕ್ಷಿತಾಗೆ ಮನೆ ಕೆಲಸದಳ ರೀತಿ ಟ್ರೀಟ್​.. ಅಶ್ವಿನಿ, ರಿಷಾ, ರಾಶಿ ಕೊಡ್ತಿರೋ ಕಾಟ ಅಷ್ಟಿಷ್ಟಲ್ಲ..!

ಒಟ್ನಲ್ಲಿ ಚಿತ್ತಾಪುರದಲ್ಲಿ ಹೊತ್ತಿರೋ ಆರ್​ಎಸ್​ಎಸ್​ ಕಿಚ್ಚಿಗೆ ಇಂದು ಹೈಕೋರ್ಟ್​ ನೀಡೋ ತೀರ್ಪು ತುಪ್ಪವಾಗಿ ಪರಿಣಮಿಸುತ್ತಾ ಅಥವಾ ತಣ್ಣೀರಾಗುತ್ತಾ ಕಾದುನೋಡಬೇಕಿದೆ.. ಇಂದಿನ ಹೈಕೋರ್ಟ್​ ತೀರ್ಪಿನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ವಿಶೇಷ ವರದಿ: ಭಜರಂಗಿ ನ್ಯೂಸ್​ ಫಸ್ಟ್ ಕಲಬುರಗಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Priyank Kharge RSS ban RSS
Advertisment
Advertisment
Advertisment