/newsfirstlive-kannada/media/media_files/2025/09/01/us-on-brahmin-1-2025-09-01-22-17-19.jpg)
ಇದು ದೊಡ್ಡಣ್ಣ ಅಮೆರಿಕದ ಸರ್ವಾಧಿಕಾರಿ ಧೋರಣೆ. 50% ತೆರಿಗೆ ಹೊರಿಸಿ ತುಘಲಕ್ನಂತೆ ವರ್ತಿಸ್ತಿರೋ ಅಮೆರಿಕದ ಸಹವಾಸವೇ ಬೇಡ ಅಂದ್ರೂ ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಿದೆ. ರಷ್ಯಾದಿಂದ ಭಾರತ ತೈಲ ಖರೀದಿಸ್ತಿರೋದನ್ನು ಟೀಕಿಸಿರುವ ಟ್ರಂಪ್ ಆರ್ಥಿಕ ಸಲಹೆಗಾರ ಇದು ಭಾರತದ ಬ್ರಾಹ್ಮಣರ ಲಾಭಕೋರತನ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿ:ಮೋದಿ ಮತ್ತು ಕ್ಸಿ ಚರ್ಚಿಸಿದ್ದೇನು..? ಮಾನಸ ಸರೋವರ ಯಾತ್ರೆಯಿಂದ ನೇರ ವಿಮಾನದವರೆಗೆ..!
ಪೀಟರ್ ನವರೋ ಅಮೆರಿಕದ ಅರ್ಥಶಾಸ್ತ್ರಜ್ಞ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಆರ್ಥಿಕ ಸಲಹೆಗಾರ.. ಟ್ರಂಪ್ ತಲೆಯಲ್ಲಿರೋ ಮೆದುಳು ಈತನೇ.. ಭಾರತದ ಮೇಲೆ 50% ಸುಂಕ ಹೊರಿಸುವಂತೆ ಟ್ರಂಪ್ ಕಿವಿಯೂದಿದ್ದ ಟ್ಯಾರಿಫ್ ಗುರುವಾಗಿದ್ದಾನೆ.. ಅಮೆರಿಕ ಫಸ್ಟ್ ನೀತಿಗಳ ಹಿಂದಿನ ಮಾಸ್ಟರ್ಮೈಂಡ್ ಪೀಟರ್ ನವರೋ ಭಾರತದ ವಿರುದ್ಧ ಮತ್ತೊಂದು ವಿವಾದಿತ ಬಾಂಬ್ ಸ್ಫೋಟಿಸಿದ್ದಾನೆ..
ರಷ್ಯಾದಿಂದ ತೈಲ ಖರೀದಿ ಭಾರತದ ಬ್ರಾಹ್ಮಣರಿಗೆ ಲಾಭ!
ಇತ್ತೀಚಿಗೆ ಉಕ್ರೇನ್ ಯುದ್ಧವನ್ನು ಮೋದಿ ವಾರ್ ಅಂತ ಕರೆದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ವಿರೋಧಿ ಸುಂಕ ನೀತಿಯ ಹಿಂದಿನ ರೂವಾರಿ ಪೀಟರ್ ನವರೋ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾನೆ.. ಅಮೆರಿಕ ಬೆದರಿಕೆ ನಡುವೆಯೂ ರಷ್ಯಾ ಜೊತೆ ಭಾರತದ ಸ್ನೇಹ ಬಂಧಕ್ಕೆ ಅಸಹನೆ ವ್ಯಕ್ತಪಡಿಸಿರೋ ಪೀಟರ್ ನವರೋ, ರಷ್ಯಾ ಜೊತೆಗಿನ ತೈಲ ವ್ಯಾಪಾರ ಭಾರತದ ಉನ್ನತ ವರ್ಗಕ್ಕೆ ಲಾಭ ಮಾಡಿಕೊಡುವ ಹುನ್ನಾರ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ, ಭಾರತ ಯಾವ ಕಾರಣಕ್ಕೆ ರಷ್ಯಾಗೆ ಇಷ್ಟು ಹತ್ತಿರವಾಗ್ತಿದೆ ಅಂತ ಅನುಮಾನಿಸಿದ್ದಾನೆ..
ಇದನ್ನೂ ಓದಿ: ಮೋದಿ, ಜಿನ್ಪಿಂಗ್ ಭೇಟಿ -ಚೀನಾಗೆ 3 ಪದಗಳಲ್ಲಿ ಸಂದೇಶ
ಮೋದಿ ಒಬ್ಬ ಗ್ರೇಟ್ ಲೀಟರ್, ಅವರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ಅದ್ಯಾಕೆ ಪುಟಿನ್ ಹಾಗೂ ಜಿನ್ಪಿಂಗ್ ಜೊತೆ ಏಕೆ ಮಲಗುತ್ತಿದ್ದಾರೆ ಅನ್ನೋದೇ ತಿಳಿಯುತ್ತಿಲ್ಲ, ಹೀಗಾಗಿ ನಾನು ಭಾರತೀಯ ಪ್ರಜೆಗಳಿಗೆ ಸರಳವಾಗಿ ಹೇಳೋದೇನು ಅಂದ್ರೆ ದಯವಿಟ್ಟು ಇಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಿ, ಭಾರತೀಯರ ತೆರಿಗೆ ಹಣದಲ್ಲಿ ಬ್ರಾಹ್ಮಣರಿಗೆ ಲಾಭ ಮಾಡಿಕೊಡುತ್ತಿದ್ದೀರಿ, ನೀವು ಅದನ್ನು ನಿಲ್ಲಿಸುವ ಅಗತ್ಯವಿದೆ, ನಾವು ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸ್ತಿದ್ದೇವೆ
ಪೀಟರ್ ನವರೋ, ಟ್ರಂಪ್ ಆರ್ಥಿಕ ಸಲಹೆಗಾರ
ಮೋದಿ-ಪುಟಿನ್, ಜಿನ್ಪಿಂಗ್ ಸ್ನೇಹ.. ಅಮೆರಿಕ ಅಚ್ಚರಿ!
ಮತ್ತೊಂದೆಡೆ ಸದಾ ಭಾರತ-ಪಾಕಿಸ್ತಾನ ಮೇಲೆ ಗುರಿ ಇಟ್ಟಂತೆ ಮಾತನಾಡುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೋ, ರಷ್ಯಾ-ಭಾರತ ಸಂಬಂಧ ಏನೇ ಇದ್ದರೂ, ಅಮೆರಿಕ ಹಾಗೂ ಭಾರತದ ನಡುವಿನ ಸಂಬಂಧ ವ್ಯಾಖ್ಯಾನಿಸಲ್ಪಡುವಂತೆಯೇ ಇರಲಿದೆ ಎಂದಿದ್ದಾನೆ. ಈ ಕುರಿತು ಟ್ವೀಟ್ ಮಾಡಿರೋ ರುಬಿಯೋ ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ ಅಂತ ಪುಂಗಿ ಊದಿದ್ದಾನೆ.
ಇದನ್ನೂ ಓದಿ:ಟ್ರಂಪ್ ಅವರ ಈ ಮಾತಿಗೆ ಮೋದಿಗೆ ಸಿಟ್ಟು -ಸಿಕ್ರೇಟ್ ರಿವೀಲ್ ಮಾಡಿದ ನ್ಯೂಯಾರ್ಕ್ ಟೈಮ್ಸ್..!
ಒಟ್ಟಾರೆ, ಭಾರತ, ರಷ್ಯಾ ಸುಮಧುರ ಸ್ನೇಹ ದೊಡ್ಡಣ್ಣಗೆ ಒಗ್ಗದ ಸಂಗತಿಯಾಗಿದೆ. ಸದ್ಯ ಪೀಟರ್ ನವರೋ ಕಿಚ್ಚಿನ ನುಡಿಗಳು ಟ್ರಂಪ್ ಆಡಳಿತ ಬೌದ್ಧಿಕವಾಗಿ ಅದೆಷ್ಟು ದಿವಾಳಿಯಾಗಿದೆ ಅನ್ನೋದನ್ನು ಸಾಬೀತುಪಡಿಸ್ತಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ 2 ಭಾರಿ ಪ್ರಬಲ ಭೂಕಂಪನ, ಕನಿಷ್ಠ 622ಕ್ಕೂ ಹೆಚ್ಚು ಸಾವು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ