/newsfirstlive-kannada/media/media_files/2025/12/07/mallikarjuna-kharge-kc-venugopal-2025-12-07-10-54-30.jpg)
ಕುರ್ಚಿ ಕಿತ್ತಾಟಕ್ಕೆ ಬ್ರೇಕ್‌ಫಾಸ್ಟ್ ಮೀಟ್‌ನಿಂದ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದ್ರೂ ತೆರೆಮರೆಯಲ್ಲಿ ಗದ್ದುಗೆ ಗುದ್ದಾಟದ ಬೆಳವಣಿಗೆಗಳು ನಡೆಯುತ್ತಲೇ ಇವೆ. ಕರ್ನಾಟಕ ಸಿಎಂ ಪಟ್ಟದ ಪೈಪೋಟಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಈಗ ಚರ್ಚೆ ನಡೆಸ್ತಿದೆ. ‘ಹಸ್ತ’ದ ಹೈ ನಾಯಕರು ನಿನ್ನೆ ಮಹತ್ವದ ಸಭೆ ನಡೆಸಿದ್ದಾರೆ. ಪವರ್ ಶೇರಿಂಗ್ ಫೈಟ್ ಮಧ್ಯೆ ಸಿಎಂ ಬಣ ಡಿಕೆಗೆ ಭರ್ಜರಿ ಟಾಂಟ್ ಕೊಡುತ್ತಲೇ ಇದೆ.
ರಾಜಕೀಯದಲ್ಲಿ ಅಧಿಕಾರ ಯಾರಿಗೆ ಬೇಡ ಹೇಳಿ.. ಪ್ರತಿಯೊಬ್ಬರು ಒಂದು ಹಂತದಲ್ಲಿ ದೊಡ್ಡ ಹುದ್ದೆ ಮೇಲೆ ಕಣ್ಣಿಟ್ಟಿರ್ತಾರೆ. ಅಂಥದ್ರಲ್ಲಿ ಡಿಕೆಶಿವಕುಮಾರ್ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರೋದು ತಪ್ಪಲ್ಲ. ಆದ್ರೆ, ಆ ಪಟ್ಟದಲ್ಲಿ ಕೂತಿರೋದು ಸಿದ್ದರಾಮಯ್ಯ. ಹೀಗಾಗಿ ಡಿ.ಕೆಶಿಗೆ ಪಟ್ಟ ಕಟ್ಟೋದಾ? ಸಿದ್ದರಾಮಯ್ಯರನ್ನೇ ಮುಂದುವರಿಸೋದಾ? ಎಂಬ ಗೊಂದಲ ಹೈ ನಾಯಕರಲ್ಲಿದೆ. ಇದೇ ವಿಚಾರವಾಗಿ ಮಹತ್ವದ ಸಭೆಗಳು ನಡೆದಿವೆ.
/filters:format(webp)/newsfirstlive-kannada/media/media_files/2025/12/07/rahu-l-gandhi-and-mallikarjuna-kharge-2025-12-07-10-56-36.jpg)
ಸೋನಿಯಾ ಜೊತೆ ವೇಣುಗೋಪಾಲ್ ಮಾತುಕತೆ!
ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ರಾಜಕೀಯದ ಬಗ್ಗೆ ಮಹತ್ವದ ಚರ್ಚೆ ನಡೆಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಕೂಡ ಸಭೆಯಲ್ಲಿ ಭಾಗವಹಿಸಿದ್ರು ಎಂಬ ಮಾಹಿತಿ ಇದೆ. ಈ ಸಭೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸ್ಥಾನದ ಬಗ್ಗೆಯೂ ಮಾತುಕತೆ ನಡೆದಿದೆ. ಸಭೆ ಬಳಿಕ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಭೆ ಸೇರಿ ತೀರ್ಮಾನ ಕೈಗೊಳ್ಳಲಾಗುವುದು. ನಾಯಕರಲ್ಲಿ ಒಗ್ಗಟ್ಟು ಇದೆ ಅಂತ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಗೋವಾದ ಜನಪ್ರಿಯ ಕ್ಲಬ್​​ನಲ್ಲಿ ಘೋರ ದುರಂತ.. 20 ಮಂದಿ ಸಜೀವ ದಹನ..
/filters:format(webp)/newsfirstlive-kannada/media/post_attachments/wp-content/uploads/2023/09/Sonia-Gandhi.jpg)
ಇಂದಿನ ರಾಜಕೀಯ ಸ್ಥಿತಿಗತಿ ಬಗ್ಗೆ ಇದೊಂದು ಸಾಮಾನ್ಯವಾದ ಚರ್ಚೆಯಷ್ಟೇ.. ಈ ವೇಳೆ ಕರ್ನಾಟಕದ ಬಗ್ಗೆಯೂ ನಾವು ಚರ್ಚೆ ಮಾಡಿದ್ದೇವೆ. ಆದ್ರೆ, ಯಾವುದೇ ನಿರ್ಧಾರಗಳು ಆಗಿಲ್ಲ. ಇಲ್ಲ.. ಇಲ್ಲ.. ನಾನು ಏನ್ ಹೇಳ್ತಿದೀನಿ ಅಂದ್ರೆ ನಾವು ಕರ್ನಾಟಕದ ಬಗ್ಗೆಯೂ ಚರ್ಚೆ ಮಾಡಿದ್ವಿ. ಆದ್ರೆ, ಯಾವುದೇ ತೀರ್ಮಾನ ಮಾಡಿಲ್ಲ. ನಾವು ಮತ್ತೆ ಚರ್ಚೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಇದೆ. ಕರ್ನಾಟಕ ಕಾಂಗ್ರೆಸ್ ಕೂಡಾ ಒಗ್ಗಟ್ಟಿನ ಸಂದೇಶವನ್ನ ಕೊಟ್ಟಿದೆ. ಇದ್ರ ಬಗ್ಗೆ ಚಿಂತೆ ಮಾಡಬೇಡಿ
-ಕೆ.ಸಿ. ವೇಣುಗೋಪಾಲ, ಎಐಸಿಸಿ ಪ್ರಧಾನಕಾರ್ಯದರ್ಶಿ
ಎರಡೂವರೆ ವರ್ಷ ಸಿದ್ದು ಸಿಎಂ.. ರಾಯರೆಡ್ಡಿ ಹೇಳಿಕೆ
ಕಾಂಗ್ರೆಸ್ ಪಟ್ಟದ ಕಿಚ್ಚಿಗೆ ಮತ್ತಷ್ಟು ಬೆಂಕಿ ಸುರಿಯುವ ಕೆಲಸ ಆಗ್ತಿದೆ. ಸಿಎಂ ಬಗ್ಗೆ ಘೋಷಣೆ ಕೂಗಿದವರಿಗೆ ನೋಟಿಸ್ ಜಾರಿಯಾಗ್ತಿದೆ. ಇದ್ರ ಮಧ್ಯೆ ಇನ್ನೂ ಎರಡೂವರೆ ವರ್ಷ ಸಿದ್ದರಾಮಯ್ಯರೇ ಮುಖ್ಯಮಂತ್ರಿ ಅಂತ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕ್ಯಾಪ್ಟನ್ ರೂಮ್​ಗೆ ಬೀಗ ಜಡಿದ ಕಿಚ್ಚ ಸುದೀಪ್.. ಇಲ್ಲಿ ಎಲ್ಲಾ ಗಿಲ್ಲಿಯಿಂದಲೇ..
ಡಿಕೆಶಿ ಸಿಎಂ ಆದ್ರೆ ನಾನು ಮಂತ್ರಿ ಆಗಲ್ಲ.. ರಾಜಣ್ಣ ವರಸೆೇ!
ಕಾಂಗ್ರೆಸ್‌ನಲ್ಲಿ ಮಾತಿನಿಂದಲೇ ಸಚಿವ ಪಟ್ಟ ಕಳೆದುಕೊಂಡವರು ಕೆ.ಎನ್. ರಾಜಣ್ಣ, ಇಷ್ಟಾದ್ರೂ ಕೌಂಟರ್ ಅಟ್ಯಾಕ್‌ನ ಬಿಟ್ಟಿಲ್ಲ. ಇದೀಗ ಡಿಕೆಶಿವಕುಮಾರ್ ವಿರುದ್ಧ ನೇರಾನೇರ ಮಾತಿನ ದಾಳಿ ನಡೆಸಿದ್ದಾರೆ. ಡಿಕೆಶಿ ಸಿಎಂ ಆದ್ರೆ, ಅವರ ಸಂಪುಟದಲ್ಲಿ ನಾನು ಸಚಿವ ಆಗಲ್ಲ ಅಂತ ಕೆ.ಎನ್. ರಾಜಣ್ಣ ಮಾತಿನ ಸಿಡಿಗುಂಡು ಸಿಡಿಸಿದ್ದಾರೆ.
ಪವರ್ ಶೇರಿಂಗ್ ಪ್ರಹಸನದಲ್ಲಿ ಸಿಎಂ-ಡಿಸಿಎಂ ಸೈಲೆಂಟ್ ಆದ್ರೂ ಅವರ ಬೆಂಬಲಿಗರು ಮಾತ್ರ ಬಿಡ್ತಿಲ್ಲ.. ಇದ್ರ ಮಧ್ಯೆ ಸಿಎಂ ಬದಲಾವಣೆ ಬಗ್ಗೆ ನಿನ್ನೆಯ ಮೀಟಿಂಗ್‌ನಲ್ಲಿ ಯಾವುದೇ ನಿರ್ಣಯಕ್ಕೆ ಹೈ ಕಮಾಂಡ್ ಬಂದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಅಧಿಕಾರ ಹಂಚಿಕೆ ಕಥಾನಕಕ್ಕೆ ಕೈ ಹೈಕಮಾಂಡ್ ಮತ್ತೇನ್ ಟ್ವಿಸ್ಟ್ ಕೊಡುತ್ತೋ? ಲೆಟ್ಸ್ ವೇಯ್ಟ್ ಅಂಡ್ ವಾಚ್.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us