Advertisment

ಅಬ್ಬಬ್ಬಾ..! 23 ಕೋಟಿ ಮೌಲ್ಯದ ಕೋಣ, 15 ಕೋಟಿ ಬೆಲೆ ಬಾಳುವ ಕುದುರೆ..!

ರಾಜಸ್ಥಾನದಲ್ಲಿ ನಡೆಯುತ್ತಿರುವ ‘ಪುಷ್ಕರ್ ಜಾನುವಾರು ಮೇಳ’ದಲ್ಲಿ (Pushkar Mela 2025) 23 ಕೋಟಿ ಮೌಲ್ಯದ ಕೋಣವೊಂದು ಪ್ರಮುಖ ಆಕರ್ಷಣೆ ಆಗಿದೆ. ಜೊತೆಗೆ 15 ಕೋಟಿ ಮೌಲ್ಯದ ಕುದುರೆ ಕೂಡ ಸಖತ್ ‘ಸೌಂಡ್’ ಮಾಡ್ತಿದೆ.

author-image
Ganesh Kerekuli
Pushkar Mela (5)
Advertisment

ರಾಜಸ್ಥಾನದಲ್ಲಿ ನಡೆಯುತ್ತಿರುವ ‘ಪುಷ್ಕರ್ ಜಾನುವಾರು ಮೇಳ’ದಲ್ಲಿ (Pushkar Mela 2025) 23 ಕೋಟಿ ಮೌಲ್ಯದ ಕೋಣವೊಂದು ಪ್ರಮುಖ ಆಕರ್ಷಣೆ ಆಗಿದೆ. ಜೊತೆಗೆ 15 ಕೋಟಿ ಮೌಲ್ಯದ ಕುದುರೆ ಕೂಡ ಸಖತ್ ‘ಸೌಂಡ್’ ಮಾಡ್ತಿದೆ. 

Advertisment

1500 ಕೆಜಿಯ ಅನ್‌ಮೋಲ್

ರಾಜಸ್ಥಾನದ ಅನ್​ಮೋಲ್ (Anmol buffalo) ಎಂಬ ಕೋಣವು ಬರೋಬ್ಬರಿ 23 ಕೋಟಿ ಬೆಲೆ ಬಾಳುತ್ತಿದೆ. ಅಂದ್ಹಾಗೆ ಇದು ಮಾಮೂಲಿ ಕೋಣ ಅಲ್ಲವೇ ಅಲ್ಲ. ಇದರ ತೂಕ 1500 ಕೆ.ಜಿ. ಇದೆ. ಪ್ರತಿದಿನ ಸಾವಿರಾರು ರುಪಾಯಿ ವೆಚ್ಚ ಮಾಡಿ ಈ ವಿಶೇಷ ಆಹಾರ ಕೊಡಲಾಗುತ್ತಿದೆ. ಇದನ್ನು ಸಂತಾನೋತ್ಪತ್ತಿಗಾಗಿ ಬಳಸಲಾಗುತ್ತದೆ. ಈ ಕೋಣದಿಂದ ಮಾಲೀಕನಿಗೆ ಮಾಸಿಕವಾಗಿ 4 ಲಕ್ಷ ರೂಪಾಯಿ ಆದಾಯ ಬರುತ್ತಿದೆ. 

Pushkar Mela

ಅದೇ ರೀತಿ ಉಜ್ಜಯಿನಿ ಮೂಲದ ಮತ್ತೊಂದು ಕೋಣ ಕೂಡ 25 ಲಕ್ಷ ರೂಪಾಯಿ ವರೆಗೆ ಬಿಡ್ ಮಾಡಿದೆ. ಇದು 600 ಕೆ.ಜಿ. ತೂಕ ಹೊಂದಿದ್ದು, 8 ಅಡಿ ಉದ್ದ ಹಾಗೂ 5 ಅಡಿ ಎತ್ತರ ಹೊಂದಿದೆ. ಇದರ ನಿತ್ಯದ ಆಹಾರಕ್ಕಾಗಿ 1500 ರೂಪಾಯಿ ಖರ್ಚು ಮಾಡಲಾಗುತ್ತಿದೆ. 

ಇದನ್ನೂ ಓದಿ: ರಕ್ಷಿತಾಗೆ ಮನೆ ಕೆಲಸದಳ ರೀತಿ ಟ್ರೀಟ್​.. ಅಶ್ವಿನಿ, ರಿಷಾ, ರಾಶಿ ಕೊಡ್ತಿರೋ ಕಾಟ ಅಷ್ಟಿಷ್ಟಲ್ಲ..!

Advertisment

Pushkar Mela (4)

ಚಂಡೀಗಢದ ಗೇರಿ ಗಿಲ್ ಅವರ ಎರಡೂವರೆ ವರ್ಷದ ಕುದುರೆ ಶಹಬಾಜ್ (Shahbaz ) ಪುಷ್ಕರ ಮೇಳದಲ್ಲಿ ಮತ್ತೊಂದು ಆಕರ್ಷಣೆ. ಅನೇಕ ಸ್ಪರ್ಧೆಗಳಲ್ಲಿ ಗೆದ್ದಿರುವ ಈ ಮಾರ್ ವಾರಿ ತಳಿಯ ಕುದುರೆಗೆ ಈಗಾಗಲೇ ಗ್ರಾಹಕರು 15 ಕೋಟಿ ರೂಪಾಯಿವರೆಗೆ ಬೆಲೆ ನಿಗದಿ ಮಾಡಲಾಗಿದೆ. ಅದೇ ರೀತಿ ಪ್ರದರ್ಶನಕ್ಕಿಟ್ಟಿರುವ ಬಾದಲ್ ಕುದುರೆಗೂ ಭಾರೀ ಬೇಡಿಕೆ ಇದೆ. 11 ಕೋಟಿ ರೂಪಾಯಿ ಕೊಟ್ಟು ಕುದುರೆ ಖರೀದಿಸಿದ್ದಾರೆ.

ಇದನ್ನೂ ಓದಿ:ಸರ್ಕಾರದಿಂದ ದೊಡ್ಡ ಹೆಜ್ಜೆ.. ಶೀಘ್ರದಲ್ಲೇ ಅಧಿಕೃತ caller ID ಸೇವೆ..!

Pushkar Mela (3)

ಪ್ರತಿ ವರ್ಷ ನಡೆಯುವ ಪುಷ್ಕರ್ ಮೇಳದಲ್ಲಿ ದೇಶದ ಅತ್ಯಂತ ದುಬಾರಿ ಜಾನುವಾರುಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ವಿಶೇಷ ಜಾನುವಾರುಗಳನ್ನು ಖರೀದಿಸಲು, ನೋಡಲೆಂದೇ ಭಾರೀ ಸಂಖ್ಯೆಯಲ್ಲಿ ಜನ ದೇಶ-ವಿದೇಶಗಳಿಂದ ಆಗಮಿಸುತ್ತಾರೆ. 

Advertisment

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ರಾಗಾ ವ್ಯಂಗ್ಯ.. ಕೆರಳಿದ ಬಿಜೆಪಿ, ‘ಲೋಕಲ್ ಗೂಂಡಾ’ ಎಂದು ವಾಗ್ದಾಳಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rs 23-crore buffalo Pushkar Cattle Fair Rs 15-crore horse
Advertisment
Advertisment
Advertisment