/newsfirstlive-kannada/media/media_files/2025/12/04/hariyana-mother-1-2025-12-04-09-53-59.jpg)
ತಾಯಿ ಅದವಳು ಮಕ್ಕಳು ತನಗಿಂತ ಚೆಂದವಾಗಿ ಹುಟ್ಟಲಿ ಅಂತ ಗರ್ಭಿಣಿಯಾದ ವೇಳೆ ಕೇಸರಿ ತಿನ್ನೋದನ್ನ ನೋಡಿದ್ದೇವೆ.. ಅಷ್ಟೇ ಯಾಕೆ ತನಗುಟ್ಟಿದ ಮಗು ಜಗತ್ತಲ್ಲಿ ಎಲ್ಲರಿಗಿಂತ ಚಂದ ಕಾಣಲಿ ಅಂತ ಶೃಂಗಾರ ಮಾಡೋ ತಾಯಿಯನ್ನ ನೋಡಿದ್ದೇವೆ. ಆದ್ರೆ, ಇಲ್ಲೊಬ್ಬಳು ತಾಯಿ.. ಅಲ್ಲಲ್ಲ ರಾಕ್ಷಸಿ ತನಗಿಂತ ಸುಂದರವಾಗಿದ್ದಾರೆ ಅಂತ ಸ್ವಂತ ಮಗ ಸೇರಿ 4 ಮಕ್ಕಳ ಜೀವ ತೆಗೆದಿದ್ದಾಳೆ.
ಉಪ್ಪಿಗಿಂತ ರುಚಿ ಇಲ್ಲ.. ತಾಯಿಗಿಂತ ಬಂಧುವಿಲ್ಲ.. ತಾಯಿಯೇ ದೇವರು ಅನ್ನೋ ಮಾತಿದೆ. ಆದ್ರೆ, ಈ ಸ್ಟೋರಿಯಲ್ಲಿ ತಾಯಿ ಅನ್ನಿಸಿಕೊಂಡವಳೇ ಹೆಮ್ಮಾರಿಯಂತೆ ಮಕ್ಕಳ ಪ್ರಾಣ ತೆಗೆದಿದ್ದಾಳೆ.. ಮನುಷ್ಯ ಕುಲವನ್ನೇ ಪ್ರಶ್ನೆ ಮಾಡುವಂಥಹ ಕೃತ್ಯ ಎಸಗಿದ್ದಾಳೆ.
ಇದನ್ನೂ ಓದಿ: ಇಂದು ಭಾರತಕ್ಕೆ ಪುಟಿನ್ ಆಗಮನ.. ಇಂದ್ರಲೋಕದಂತಿದೆ ರಷ್ಯಾ ಅಧ್ಯಕ್ಷ ತಂಗುವ ಹೋಟೆಲ್..!
/filters:format(webp)/newsfirstlive-kannada/media/media_files/2025/12/04/hariyana-mother-2025-12-04-09-55-41.jpg)
ಹೆಸರು ಪೂನಮ್.. ಇವಳು ತಾಯಿ ಅನ್ನೋ ಪದ ಕರೆಸಿಕೊಳ್ಳಲು ಯೋಗ್ಯಳಲ್ಲ. ಅದೆಂಥಾ ಕ್ರೂರ ಮನಸ್ಥಿತಿ ಈಕೆಯದ್ದು ಅನ್ನೋದು ಗೊತ್ತಾಗಿದೆ. ತನಗಿಂತ ಸುಂದರವಾಗಿದ್ದಾರೆ ಅಂತ ಸ್ವಂತ ಮಗ ಸೇರಿ ನಾಲ್ವರನ್ನ ಈ ಪೂನಮ್ ಮುಗಿಸಿದ್ದಾಳೆ.
ಸೈಕೋ ಕಿ*ರ್ ಮದರ್!
ತನಗಿಂತ ಸುಂದರವಾಗಿದ್ದಾರೆ ಅಂತ ಪೂನಮ್ ನಾಲ್ವರನ್ನ ಸಾ*ಸಿರೋದು ಬೆಳಕಿಗೆ ಬಂದಿದೆ. ಹರಿಯಾಣದ ಪಾಣಿಪತ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತನ್ನ ಸೋದರಿಯ 6 ವರ್ಷದ ಮಗಳನ್ನ ನೀರಲ್ಲಿ ಮುಳುಗಿಸಿ ಈಗ ಸಿಕ್ಕಿಬಿದ್ದಿದ್ದಾಳೆ. ಪೂನಮ್ ಸಂಬಂಧಿಯಾಗಿದ್ದ ಬಾಲಕಿ ನಾಪತ್ತೆಯಾಗಿದ್ದಾಳೆ ಅನ್ನೋ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರ ತನಿಖೆ ಶುರು ಮಾಡಿದ್ರು. ಈ ವೇಳೆ ಬಾಲಕಿ ವಿಧಿ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾ*ನ್ನಪ್ಪಿದ್ದಾಳೆ ಅನ್ನೋದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಮದುವೆಯಾಗಿ 24 ಗಂಟೆ.. ವರನಿಗೆ ಹೃದಯಾಘಾತ, ನಿಧನ
ಶಂಕೆ ಮೇರೆಗೆ ಬಾಲಕಿಯ ಚಿಕ್ಕಮ್ಮನನ್ನ (ಪೂನಮ್​) ಪೊಲೀಸರು ಬಂಧಿಸಿದ್ರು. ವಿಚಾರಣೆ ವೇಳೆ ಕೊ*ಗಾತಿ ಪೂನಮ್ ಅನೇಕ ವಿಷಯ ಬಾಯ್ಬಿಟ್ಟಿದ್ದಾಳೆ. ತನಗಿಂತ ನೋಡಲು ಸುಂದರವಾಗಿದ್ದಾರೆ ಅಂತ ಇತರ ಮೂರು ಮಕ್ಕಳನ್ನ ಈ ಹಿಂದೆ ಕೊ* ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. 2023, ಸೋನಿಪತ್‌ನಲ್ಲಿ ಇಬ್ಬರು ಮಕ್ಕಳನ್ನ ಈಕೆ ಕೊ* ಮಾಡಿದ್ದಳಂತೆ. ಅಲ್ಲದೇ ತನ್ನ ಮಗ ಸೇರಿ ನಾದಿನಿಯ ಮಗಳನ್ನ ಪೂನಮ್ ಕೊಂ*ದ್ದಳಂತೆ. ಕಳೆದ ಆಗಸ್ಟ್‌ನಲ್ಲಿ ತನ್ನ ಸೋದರ ಸಂಬಂಧಿಯ ಮಗಳನ್ನೂ ಕೊ*ಗೈದಿದ್ದಳಂತೆ. ಹೀಗೆ ಹೀಗೆ ಸ್ವಂತ ಮಗ ಸೇರಿ ನಾಲ್ವರನ್ನ ಕೊಂದ ಪೂನಮ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಈಕೆ ಮಹಿಳೆಯಲ್ಲ.. ತಾಯಿಯಂತೂ ಅಲ್ವೇ ಅಲ್ಲ.. ಇಂಥಹ ರಾಕ್ಷಸಿ ಮನಸ್ಸಿನ ಮಹಿಳೆಗೆ ದೇವರು ಮಕ್ಕಳನ್ನ ಕರುಣಿಸಿದ್ದಾದ್ರೂ ಏಕೆ ಅನ್ನೋದು ಸ್ಥಳೀಯರ ಪ್ರಶ್ನೆ.. ಕೊನೆಗೂ ಸುಂದರ ಮಕ್ಕಳ ದ್ವೇಷಿ, ಕೊಲೆಗಾತಿ ಪೊಲೀಸರ ಬಲೆಗೆ ಬಿದ್ದಿರೋದು ಸಂಬಂಧಿಕರು.. ಗ್ರಾಮಸ್ಥಱ ನಿಟ್ಟುಸಿರು ಬಿಟ್ಟಿರೋದಂತೂ ಸತ್ಯ.
ಇದನ್ನೂ ಓದಿ: ಕೊಹ್ಲಿ ಮನವೊಲಿಸುವಲ್ಲಿ BCCI ಯಶಸ್ವಿ.. ಬೆಂಗಳೂರು ಅಭಿಮಾನಿಗಳಿಗೆ ಗುಡ್​ನ್ಯೂಸ್..!​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us