/newsfirstlive-kannada/media/media_files/2025/10/25/virat-kohli-1-2025-10-25-15-03-19.jpg)
ಇಂಡೋ-ಸೌತ್​ ಆಫ್ರಿಕಾ ಏಕದಿನ ಸರಣಿಯಲ್ಲಿ ವಿರಾಟ್​ ಕೊಹ್ಲಿ ಆರ್ಭಟ ಜೋರಾಗಿದೆ. ಆಫ್ರಿಕನ್​ ಬೌಲರ್​ಗಳ ಮೇಲೆ ಸವಾರಿ ಮಾಡ್ತಿರೋ ರನ್​ಮಷೀನ್ ಬೌಂಡರಿ, ಸಿಕ್ಸರ್​ಗಳ ಸುರಿಮಳೆ ಸುರಿಸ್ತಿದ್ದಾರೆ. ವಿರಾಟ್​ ರೂಪ ದರ್ಶನಕ್ಕೆ ಸೌತ್​ ಆಫ್ರಿಕಾ ಸ್ಟನ್​ ಆಗಿದ್ರೆ, ಫ್ಯಾನ್ಸ್​​ಗೆ ಫುಲ್​ ಮೀಲ್ಸ್​ ಎಂಟರ್​​ಟೈನ್​ಮೆಂಟ್​ ಸಿಗ್ತಿದೆ. ಈ ಅಬ್ಬರದ ಆಟದ ನಡುವೆ ಅಭಿಮಾನಿಗಳಿಗೆ ಕೊಹ್ಲಿ ಮತ್ತೊಂದು ಗುಡ್​ ನ್ಯೂಸ್​ ಕೊಟ್ಟಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಮತ್ತೆ ಶತಕಗಳ ಗತ ವೈಭವ.. ಋತುರಾಜ್ ಕಂಬ್ಯಾಕ್..!
/filters:format(webp)/newsfirstlive-kannada/media/media_files/2025/10/31/pant_kohli-2025-10-31-10-40-44.jpg)
ಟೀಮ್​ ಇಂಡಿಯಾ ಪರ ಪಂದ್ಯವಿಲ್ಲದ ಸಮಯದಲ್ಲಿ ಡೊಮೆಸ್ಟಿಕ್​ ಕ್ರಿಕೆಟ್​ ಆಡಬೇಕು ಅನ್ನೋ ನಿಯಮಕ್ಕೆ ವಿರಾಟ್​ ತಲೆಬಾಗಿದ್ದಾರೆ. ಸೌತ್​ ಆಫ್ರಿಕಾ ಸರಣಿ ಅಂತ್ಯದ ಬಳಿಕ ದೇಶಿ ಒನ್​ ಡೇ ಕ್ರಿಕೆಟ್​ ಟೂರ್ನಿ ವಿಜಯ್​ ಹಜಾರೆ ಟೂರ್ನಿಯನ್ನಾಡಲು ವಿರಾಟ್​ ಕೊಹ್ಲಿ ಮುಂದಾಗಿದ್ದಾರೆ. ಆರಂಭದಲ್ಲಿ ವಿಜಯ್​ ಹಜಾರೆ ಟೂರ್ನಿಯನ್ನಾಡಲು ವಿರಾಟ್​ ಕೊಹ್ಲಿ ಹಿಂದೇಟು ಹಾಕಿದ್ರು. ಆದ್ರೆ, ಅಂತಿಮವಾಗಿ ಡೊಮೆಸ್ಟಿಕ್​ ಕ್ರಿಕೆಟ್​ ಆಡುವಂತೆ ವಿರಾಟ್​ ಕೊಹ್ಲಿಯ ಮನವೊಲಿಸುವಲ್ಲಿ ಬಿಸಿಸಿಐ ಬಾಸ್​ಗಳು ಕೊನೆಗೂ ಯಶಸ್ವಿಯಾಗಿದ್ದಾರೆ.
15 ವರ್ಷಗಳ ಬಳಿಕ ವಿಜಯ್​​ ಹಜಾರೆ ಕಣಕ್ಕೆ ಕೊಹ್ಲಿ
2010.. ಬರೋಬ್ಬರಿ 15 ವರ್ಷಗಳ ಹಿಂದೆ ವಿರಾಟ್​ ಕೊಹ್ಲಿ ಕೊನೆಯದಾಗಿ ವಿಜಯ ಹಜಾರೆ ಟೂರ್ನಿ ಆಡಿದ್ರು. ಬಳಿಕ ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ಬ್ಯುಸಿಯಾಗಿದ್ದ ವಿರಾಟ್​, ಇದೀಗ ಮತ್ತೆ ಡೊಮೆಸ್ಟಿಕ್​ ಅಂಗಳಕ್ಕೆ ಮರಳಲು ಸಜ್ಜಾಗಿದ್ದಾರೆ. ಈಗಾಗಲೇ ಡೆಲ್ಲಿ ಡಿಸ್ಟ್ರಿಕ್ಟ್​ ಕ್ರಿಕೆಟ್​ ಅಸೋಸಿಯೇಶನ್​ಗೆ ವಿರಾಟ್​ ಕೊಹ್ಲಿ ತನ್ನ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. DDCA ಅಧ್ಯಕ್ಷ ರೋಹಿತ್​ ಜೇಟ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಿಂಗ್ ವಿರಾಟ್ ಕೊಹ್ಲಿ ಮತ್ತೊಂದು ಭರ್ಜರಿ ಶತಕ..! ಹೇಗಿತ್ತು ಶತಕ ವೈಭವ..?
/filters:format(webp)/newsfirstlive-kannada/media/media_files/2025/10/25/virat-kohli-1-2025-10-25-15-03-19.jpg)
ವಿಜಯ್​ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ತಂಡದ ಪಂದ್ಯಗಳು ಡಿಸೆಂಬರ್​ 24ರಿಂದ ಆರಂಭವಾಗಲಿವೆ. ಲೀಗ್​ ಹಂತದಲ್ಲಿ 7 ಪಂದ್ಯಗಳು ನಡೆಯಲಿದ್ದು, ಈ ಪೈಕಿ 4 ಪಂದ್ಯಗಳಲ್ಲಿ ವಿರಾಟ್​ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಜನವರಿಯಲ್ಲಿ ನ್ಯೂಜಿಲೆಂಡ್​ ಎದುರಿನ ಏಕದಿನ ಸರಣಿ ನಡೆಯೋದ್ರಿಂದ ಆರಂಭಿಕ 4 ಪಂದ್ಯಗಳಲ್ಲೇ ವಿರಾಟ್​​ ಕೊಹ್ಲಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಆಂಧ್ರಪ್ರದೇಶ, ಗುಜರಾತ್​, ಸೌರಾಷ್ಟ್ರ, ಒಡಿಶಾ ಎದುರಿನ ಪಂದ್ಯಗಳಲ್ಲಿ ಕೊಹ್ಲಿ ಆಡೋ ಸಾಧ್ಯತೆಯಿದೆ.
ವಿಜಯ ಹಜಾರೆ ಪಂದ್ಯಗಳನ್ನ ಬೆಂಗಳೂರಿನ ದತ್ತುಪುತ್ರ ವಿರಾಟ್​ ಕೊಹ್ಲಿ, ಸಿಲಿಕಾನ್ ಸಿಟಿಯಲ್ಲೇ ಆಡಲಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್​ ಎಕ್ಸಲೆನ್ಸ್​ನಲ್ಲಿ 2 ಪಂದ್ಯಗಳನ್ನ ವಿರಾಟ್​ ಕೊಹ್ಲಿ ಆಡಲಿದ್ದಾರೆ. ಇನ್ನುಳಿದ 2 ಪಂದ್ಯಗಳನ್ನ ಕೊಹ್ಲಿ ಪಾಲಿನ 2ನೇ ಹೋಮ್​ಗ್ರೌಂಡ್​​ ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ ಆಡಲಿದ್ದಾರೆ ಎನ್ನಲಾಗ್ತಿದೆ. ಆಲೂರಿನಲ್ಲಿ ಆಯೋಜನೆಯಾಗಿರೋ ಪಂದ್ಯಗಳನ್ನ ಚಿನ್ನಸ್ವಾಮಿ ಸ್ಟೇಡಿಯಂಗೆ ಶಿಫ್ಟ್​ ಮಾಡೋ ಸಾಧ್ಯತೆಯಿದೆ.
/filters:format(webp)/newsfirstlive-kannada/media/media_files/2025/12/03/virat-kohli-1-2025-12-03-16-07-28.jpg)
ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಡೆಲ್ಲಿ ತಂಡದ ಖದರ್​ ಮಾಯವಾಗಿದೆ. ರಣಜಿ ಟ್ರೋಫಿಯಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಹೀನಾಯ ಸೋಲುಂಡ ಡೆಲ್ಲಿ ತಂಡ, 2 ದಿನದ ಹಿಂದೆ ಸೈಯದ್​ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತ್ರಿಪುರಾ ವಿರುದ್ಧ ಸೋಲುಂಡಿದೆ. ಆತ್ಮವಿಶ್ವಾಸವನ್ನೇ ಕಳೆದುಕೊಂಡಿರೋ ಡೆಲ್ಲಿ ತಂಡಕ್ಕೆ ಕೊಹ್ಲಿ ಕಮ್​ಬ್ಯಾಕ್​ ಬಲ ತುಂಬೋ ನಿರೀಕ್ಷೆಯಿದೆ. ವಿಜಯ್​ ಹಜಾರೆಯಲ್ಲಿ ಕೊಹ್ಲಿ ಸಾಲಿಡ್​ ರೆಕಾರ್ಡ್​ ಹೊಂದಿರೋದು ಕೂಡ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿದೆ.
ವಿಜಯ್​ ಹಜಾರೆಯಲ್ಲಿ ಕೊಹ್ಲಿ
ವಿಜಯ್​ ಹಜಾರೆ ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ 819 ರನ್​ಗಳಿಸಿದ್ದಾರೆ. ಬರೋಬ್ಬರಿ 68.25ರ ಸರಾಸರಿಯನ್ನ ಹೊಂದಿದ್ದು, 106.08ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸಿದ್ದಾರೆ. ಒಟ್ಟಿನಲ್ಲಿ ಸುದೀರ್ಘ ಅಂತರದ ಬಳಿಕ ಡೊಮೆಸ್ಟಿಕ್​ ಕಣಕ್ಕೆ ಮರಳ್ತಾ ಇರೋ ವಿರಾಟ್ ಕೊಹ್ಲಿಯ ನಡೆ ನಾನು 2027ರ ವಿಶ್ವಕಪ್​ ಆಡೇ ತೀರೋದು ಅನ್ನೋ ಸ್ಪಷ್ಟ ಸಂದೇಶವನ್ನಂತೂ ರವಾನಿಸಿದೆ.
ಕೊಹ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡ್ತಾ ಇದ್ರೂ, ವಿಶ್ವಕಪ್​ ಆಡಬೇಕಂದ್ರೆ ನೀವು ಡೊಮೆಸ್ಟಿಕ್​ ಕ್ರಿಕೆಟ್​ ಆಡಬೇಕು ಅನ್ನೋ ನಿಯಮವನ್ನ ಬಿಸಿಸಿಐ ತಂದಿದೆ. ಕೊಹ್ಲಿಯ ನಡೆ ನೀವು ಎಷ್ಟೇ ರೋಲ್ಸ್​ ತನ್ನಿ, ಏನೇ ಮಾಡಿ 2027ರ ವಿಶ್ವಕಪ್​​ ಆಡೋಕೆ ನಾನು ಬದ್ಧ. ಅದಕ್ಕೆ ಏನು ಮಾಡೋಕೆ ಆದ್ರೂ ನಾನು ಸಿದ್ಧ ಎಂದು ಬಿಸಿಸಿಐ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​ಗೆ ಸಂದೇಶ ರವಾನಿಸಿದಂತಿದೆ.
ಇದನ್ನೂ ಓದಿ: ಮದುವೆಯಾಗಿ 24 ಗಂಟೆ.. ವರನಿಗೆ ಹೃದಯಾಘಾತ, ನಿಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us