Advertisment

ದೇಶದ ಈ ರಾಜ್ಯದ ಹಿಂದೂಗಳು ದೀಪಾವಳಿ ಆಚರಿಸಲ್ಲ.. ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಿ..

ದೀಪಗಳ ಹಬ್ಬ ದೀಪಾವಳಿಯನ್ನು ದೇಶದಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ.. ಮನೆ ಮನೆಗಳಲ್ಲಿ ದೀಪಗಳ ಅಲಂಕಾರ ತುಂಬಿರುತ್ತದೆ.. ಆದರೆ ಕೇರಳದಲ್ಲಿ ದೀಪಾವಳಿ ಸಂಭ್ರಮ ಜೋರಾಗಿ ಇರೋದಿಲ್ಲ. ಯಾಕೆ ಗೊತ್ತಾ?

author-image
Ganesh Kerekuli
Deepavali (1)
Advertisment

Deepavali 2025: ದೀಪಗಳ ಹಬ್ಬ ದೀಪಾವಳಿಯನ್ನು ದೇಶದಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ.. ಮನೆ ಮನೆಗಳಲ್ಲಿ ದೀಪಗಳ ಅಲಂಕಾರ ತುಂಬಿರುತ್ತದೆ.. 

Advertisment

ಸುಪ್ರೀಂ ಕೋರ್ಟ್ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಿದೆ. ಇದು ದೆಹಲಿ-ಎನ್‌ಸಿಆರ್ ಜನರಿಗೆ ಸಮಾಧಾನ ತಂದಿದೆ. ದೇಶದಲ್ಲಿ ದೀಪಾವಳಿ ಆಚರಣೆಗಳು ವಾಸ್ತವಿಕವಾಗಿ ಇಲ್ಲದ ರಾಜ್ಯವೊಂದು ಇದೆ. ಅದು ಕೇರಳ. ಅಲ್ಲಿ ಈ ಹಬ್ಬವನ್ನು ಬಹಳ ಸೀಮಿತ ರೀತಿಯಲ್ಲಿ ಆಚರಿಸಲಾಗುತ್ತದೆ.. 

ಇದನ್ನೂ ಓದಿ: ದೀಪಾವಳಿ ಧಮಾಕ.. ಆಭರಣ ಪ್ರಿಯರಿಗೆ ಗುಡ್​ನ್ಯೂಸ್​, ಬೆಲೆಯಲ್ಲಿ ಭಾರೀ ಇಳಿಕೆ ಕಂಡ ಚಿನ್ನ!

ದೀಪಾವಳಿಗೆ ಅಡ್ಡಿ! ಹಬ್ಬದ ಸಂಭ್ರಮ ಕಿತ್ತುಕೊಳ್ಳಲು ಕಾಯ್ತಿದ್ದಾನೆ ಎಂದು ಎಚ್ಚರಿಕೆ

ಕೇರಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ಹೆಸರುವಾಸಿ. ಆದರೆ ದೀಪಾವಳಿಯನ್ನು ಭಾರತದ ಉಳಿದ ಭಾಗಗಳಿಗಿಂತ ವಿಭಿನ್ನವಾಗಿ ಇಲ್ಲಿ ಆಚರಿಸಲಾಗುತ್ತದೆ.  ಇಲ್ಲಿನ ಹಿಂದೂ ಕುಟುಂಬಗಳು ದೀಪಾವಳಿಯನ್ನು ಹೆಚ್ಚು ಸಂಭ್ರಮದಿಂದ ಆಚರಿಸಲ್ಲ. ಅದಕ್ಕೆ ಕಾರಣ ಸ್ಥಳೀಯ ನಂಬಿಕೆಗಳು ಮತ್ತು ಸಂಪ್ರದಾಯ. ಕೇರಳದ ರಾಜ ಮಹಾಬಲಿ ದೀಪಾವಳಿಯಂದು ನಿಧನರಾದರು ಎಂದು ಹೇಳಲಾಗುತ್ತದೆ. ಆದ್ದರಿಂದ ಅಲ್ಲಿನ ಅನೇಕ ಕುಟುಂಬಗಳು ಈ ದಿನವನ್ನು ಆಚರಿಸಲ್ಲ. ಅವರು ದೀಪಗಳನ್ನು ಬೆಳಗಿಸಬಹುದು ಅಥವಾ ಪೂಜೆಗಳನ್ನು ಮಾಡಬಹುದು. ಆದರೆ ಯಾವುದೇ ಶಬ್ದ ಅಥವಾ ಪಟಾಕಿಗಳನ್ನ ಸಿಡಿಸುವುದಿಲ್ಲ. 

Advertisment

ಓಣಂ ವಿಜೃಂಭಣೆಯಿಂದ ಆಚರಿಸ್ತಾರೆ.. 

ದೀಪಾವಳಿಯ ಆಸುಪಾಸಿನಲ್ಲಿ ಕೇರಳದಲ್ಲಿ ಮಳೆಗಾಲ ಇರೋದ್ರಿಂದ ದೀಪಗಳನ್ನು ಬೆಳಗಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದು ಕಷ್ಟ ಎಂದು ಕೆಲವರು ವಾದಿಸುತ್ತಾರೆ. ಅಲ್ಲದೇ ಮಹಾಬಲಿಯೊಂದಿಗೆ ಸಂಬಂಧ ಹೊಂದಿರುವ ಓಣಂನಂತಹ ಹಬ್ಬಗಳನ್ನು ಬಹಳ ವೈಭವದಿಂದ ಆಚರಿಸುತ್ತಾರೆ. 

ಇದನ್ನೂ ಓದಿ:ದಸರಾ ಮುಗಿದ 20 ದಿನಗಳ ನಂತರ ದೀಪಾವಳಿ ಏಕೆ ಆಚರಿಸಲಾಗುತ್ತದೆ? ಅದರ ಹಿಂದಿನ ಕಾರಣ ತಿಳಿಯಿರಿ..

Breaking: ರೂಲ್ಸ್​ ಬ್ರೇಕ್ ಮಾಡಿದ್ರೆ ಅಷ್ಟೇ..! ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡೆಯಲು ಟೈಂ ನಿಗದಿ..!

ಕುತೂಹಲಕಾರಿ ಅಂಶವೆಂದರೆ ಕೇರಳದಲ್ಲಿ ಸುಮಾರು 55% ರಷ್ಟು ಹಿಂದೂಗಳಿದ್ದಾರೆ. ಹಾಗಿದ್ದ ಮೇಲೆ ಅಲ್ಲಿ ಧಾರ್ಮಿಕ ದೀಪಾವಳಿ ಆಚರಣೆಗಳಿಗೆ ಕೊರತೆ ಇಲ್ಲ. ಸ್ಥಳೀಯ ನಂಬಿಕೆಗಳು ಮತ್ತು ಐತಿಹಾಸಿಕ ನಂಬಿಕೆಗಳಿಂದ ಹಬ್ಬದ ಸ್ವರೂಪ ಬದಲಾಗಿದೆ. ಕೊಚ್ಚಿ ಮತ್ತು ತಿರುವನಂತಪುರಂನಂತಹ ಕೆಲವು ನಗರಗಳಲ್ಲಿ ದೀಪಾವಳಿಯನ್ನು ಹೆಚ್ಚು ಆಧುನಿಕ ರೀತಿಯಲ್ಲಿ ಸೆಲೆಬ್ರೇಟ್ ಮಾಡಲಾಗುತ್ತಿದೆ.. 

Advertisment

ತಮಿಳುನಾಡಿನಲ್ಲಿಯೂ ದೀಪಾವಳಿ ಇಲ್ಲ

ಕೇರಳದಲ್ಲಿ ಮಾತ್ರವಲ್ಲ, ತಮಿಳುನಾಡಿನ ಕೆಲವು ಭಾಗಗಳಲ್ಲಿಯೂ ದೀಪಾವಳಿಯ ಸಾಂಪ್ರದಾಯಿಕ ರೂಪ ವಿಭಿನ್ನವಾಗಿದೆ. ಅಲ್ಲಿನ ಜನರು ನರಕ ಚತುರ್ದಶಿಗೆ ವಿಶೇಷ ಪ್ರಾಮುಖ್ಯತೆ ನೀಡ್ತಾರೆ. ದಂತಕಥೆಯ ಪ್ರಕಾರ, ಶ್ರೀಕೃಷ್ಣನು ಈ ದಿನದಂದು ನರಕಾಸುರನೆಂಬ ರಾಕ್ಷಸನನ್ನು ಕೊಂದನು. ಆದ್ದರಿಂದ ತಮಿಳುನಾಡಿನಲ್ಲಿ, ಈ ದಿನವನ್ನು ‘ಛೋಟಿ ದೀಪಾವಳಿ’ ಎಂದು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. 

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಕಾರ್ ಗಿಫ್ಟ್ ಕೊಟ್ಟ ಫಾರ್ಮಾ ಕಂಪನಿಯ ಮಾಲೀಕ !!: 51 ಉದ್ಯೋಗಿಗಳಿಗೆ ಲಕ್ಷುರಿ ಎಸ್‌ಯುವಿ ಕಾರ್ ಗಿಫ್ಟ್ !!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Diwali Deepavali
Advertisment
Advertisment
Advertisment