Advertisment

ಕಾವೇರಿ ಬಸ್‌ ದುರಂತಕ್ಕೆ ಟ್ವಿಸ್ಟ್​.. 20ಕ್ಕೂ ಹೆಚ್ಚು ಅಮಾಯಕರ ಬಲಿ ಪಡೆದ ಬೈಕ್ ಸವಾರರು

ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ.. ಒಬ್ಬ ಮಾಡಿದ ಅವಿವೇಕಿತನದಿಂದ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿರೋ ಸ್ಟೋರಿ.. ಇದು ಕರ್ನೂಲ್ ಬಳಿ ಸಂಭವಿಸಿರೋ ಬಸ್ ದುರಂತದ ಅಸಲಿ ಕಹಾನಿ.

author-image
Ganesh Kerekuli
bus fire
Advertisment

ಕರ್ನೂಲ್‌ನಲ್ಲಿ ನಡೆದ ಕಾವೇರಿ ಬಸ್‌ ದುರಂತದ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ. ಬೈಕ್‌ಗೆ ಡಿಕ್ಕಿ ಹೊಡೆದು ಎಸಿ ಸ್ಲೀಪರ್ ಬಸ್ ಧಗಧಗಿಸಿದ್ದಕ್ಕೆ ಟ್ವಿಸ್ಟ್ ಸಿಕ್ಕಿದೆ. ಬೈಕ್ ಸವಾರ ಮಾಡಿದ ಯಡವಟ್ಟಿಗೆ ಅಮಾಯಕರು ಪ್ರಾಣತೆತ್ತಿದ್ದಾರೆ. ಡ್ರಂಕ್ ಅಂಡ್ ಡ್ರೈವ್ ಮಾಡಿದ್ರೆ ತಮ್ಮ ಜೀವಕ್ಕಷ್ಟೇ ಅಲ್ಲ.. ಹತ್ತಾರು ಜನರ ಜೀವಕ್ಕೂ ಆಪತ್ತು ಬರುತ್ತೆ ಅನ್ನೋದಕ್ಕೆ ಇದು ನೈಜ ನಿದರ್ಶನವಾಗಿದೆ.

Advertisment

ಹೈವೇನಲ್ಲಿ ಬಿದ್ದಿದ್ದ ಬೈಕ್‌ ಮೇಲೆ ಹರಿದು ಬಸ್‌ಗೆ ಬೆಂಕಿ!

ರಸ್ತೆಯಲ್ಲಿ ವಾಹನಗಳ ಚಾಲನೆ ಮಾಡ್ಬೇಕಾದ್ರೆ ಮೈಯ್ಯಲ್ಲಾ ಕಣ್ಣಾಗಿರ್ಬೇಕು. ಸ್ವಲ್ಪ ಯಾಮಾರಿದ್ರೆ ಜೀವಕ್ಕೆ ಕುತ್ತು. ಅಕ್ಟೋಬರ್ 24ರಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಸಂಭವಿಸಿದ್ದ ಭೀಕರ ದುರಂತ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. 20 ಮಂದಿ ಸಜೀವ ದಹನವಾಗಿದ್ದನ್ನ ಅರಗಿಸಿಕೊಳ್ಳದಾಗಿದೆ. ಬಸ್ ದುರಂತಕ್ಕೆ ಬೈಕ್ ಸವಾರರೇ ಕಾರಣ ಅನ್ನೋದು ಈಗಾಗಲೇ ಗೊತ್ತಾಗಿದೆ. ಆದ್ರೆ, ಅಸಲಿಗೆ ಘಟನೆ ನಡೆದದ್ದು ಹೇಗೆ ಅಂತ ಬೈಕ್‌ನ ಹಿಂಬದಿ ಕೂತಿದ್ದ ಸವಾರನೇ ತೆರೆದಿಟ್ಟಿದ್ದಾನೆ. 

ಬಸ್​ ದುರಂತದ ಅಸಲಿ ಸತ್ಯ!

ಕರ್ನೂಲ್​ ಜಿಲ್ಲೆಯ ತಂಡ್ರಪಾಡು ಹಳ್ಳಿಯ 21 ವರ್ಷದ ಶಿವಶಂಕರ್, ​ತುಗ್ಗಳಿಯ ಎರಿಸ್ವಾಮಿ ಎಂಬಾತನನ್ನ ಡ್ರಾಪ್​ ಮಾಡಲು ಹೈವೇನಲ್ಲಿ ಹೊರಟ್ಟಿದ್ದ. ಅಕ್ಟೋಬರ್​ 24 ರಂದು ತಡರಾತ್ರಿ 2.22ರ ಸುಮಾರಿಗೆ ಡಾಬಾವೊಂದರಲ್ಲಿ ಮದ್ಯಪಾನ ಮಾಡಿ.. ಆಮೇಲೆ ಊಟ ಮಾಡಿ ಇಬ್ಬರೂ ಸ್ನೇಹಿತರು ಪ್ರಯಾಣ ಬೆಳೆಸಿದ್ರು. ಮಾರ್ಗ ಮಧ್ಯದಲ್ಲಿ ಪೆಟ್ರೋಲ್‌ ಹಾಕಿಸಲು ಬಂಕ್‌ವೊಂದಕ್ಕೆ ಹೋಗಿದ್ದಾಗ ಅಲ್ಲಿಯೇ ಬೈಕ್ ಚಲಾಯಿಸ್ತಿದ್ದ ಶಿವಶಂಕರ್‌ಗೆ ಮೈಮೇಲೆ ಪ್ರಜ್ಞೆ ಇಲ್ಲದೇ ಬೈಕ್‌ ಸ್ಕಿಡ್‌ ಆಗಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ 2.26ರ ಸುಮಾರಿಗೆ ಪೆಟ್ರೋಲ್​ ಬಂಕ್‌ನಿಂದ ಶಿವಶಂಕರ್​ ಮತ್ತು ಎರಿಸ್ವಾಮಿ ಬೈಕ್‌ನಲ್ಲಿ ಮುಂದೆ ತೆರಳುತ್ತಾರೆ. ಹೀಗೆ ಹೈವೇನಲ್ಲಿ ಹೋಗ್ತಿದ್ದಾಗ ಮತ್ತೆ ಬೈಕ್‌ ಸ್ಕಿಡ್‌ ಆಗಿ ಕಂಟ್ರೋಲ್‌ ಕಳೆದುಕೊಂಡ ಸವಾರ ಶಿವಶಂಕರ್‌ ನೇರವಾಗಿ ಡಿವೈಡರ್‌ಗೆ ಬೈಕ್‌ನ ಡಿಕ್ಕಿ ಹೊಡೆಸಿದ್ದಾನೆ. ಪರಿಣಾಮ ಬೈಕ್‌ ರೈಡ್‌ ಮಾಡ್ತಿದ್ದ ಶಿವಶಂಕರ್​ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಗಿಲ್ಲಿ ನಗುವಿನ ಟಾನಿಕ್.. ಅಶ್ವಿನಿ ಮೇಲೆ ಕಾವ್ಯ ಬೆಂಕಿ ಕಿಡಿ.. ಬಿಗ್​ಬಾಸ್​ನಲ್ಲಿ ಇವತ್ತು ಏನೇನು..?

Advertisment

bus fire (1)

ಬಸ್ ದುರಂತದ ಅಸಲಿ ಸತ್ಯ

ಸ್ನೇಹಿತ ಶಿವಶಂಕರ್‌ ಸಾವಿನಿಂದ ಗಾಬರಿಗೊಂಡಿದ್ದ ಎರಿಸ್ವಾಮಿ ಆತನ ದೇಹವನ್ನ ಪಕ್ಕಕ್ಕೆ ಎಳೆದಿದ್ದಾನೆ. ಆದ್ರೆ, ಬೈಕ್​ ಎಳೆಯೋಕೆ ಆಗದೇ ರಸ್ತೆ ಬದಿಯಲ್ಲೇ ನೋಡುತ್ತಾ ನಿಂತಿದ್ದಾನೆ. ಈ ವೇಳೆ ರಸ್ತೆ ಮೇಲೆ ಬಿದ್ದಿದ್ದ ಬೈಕ್‌ ಪಕ್ಕದಲ್ಲೇ 2 ಬಸ್‌ಗಳು ಹೇಗೋ ಪಾಸ್‌ ಆಗಿ ಹೋಗಿವೆ.  ಬೈಕ್​ ಬಂಕ್​ನಿಂದ ತೆರಳಿದ 13 ನಿಮಿಷಕ್ಕೆ ಅಂದ್ರೆ, 2 ಗಂಟೆ 39 ನಿಮಿಷಕ್ಕೆ ಬಂದ ಕಾವೇರಿ ಟ್ರಾವೆಲ್ಸ್​ ಬಸ್‌ನ ಚಾಲಕನಿಗೆ ಮಾತ್ರ ಬೈಕ್‌ನ ತಪ್ಪಿಸಲಾಗದೇ ಅದರ ಮೇಲೆ ಹತ್ತಿಸಿದ್ದಾನೆ. ಈ ವೇಳೆ ಬೈಕ್‌ ಬಸ್‌ನ ಕೆಳಗೆ ಸಿಲುಕಿ 600 ಮೀಟರ್‌ವರೆಗೂ ಎಳೆದೊಯ್ದಿದೆ. ಅಷ್ಟರಲ್ಲಾಗಲೇ ಬೈಕ್‌ ಸ್ಫೋಟಗೊಂಡು ಇಡೀ ಬಸ್‌ಗೆ ತಗುಲಿ ಬೆಂಕಿ ಇಡೀ ಬಸ್‌ಗೆ ಆವರಿಸಿ ದುರಂತವೇ ಸಂಭವಿಸಿದೆ.
ಹೀಗೆ ಬೈಕ್ ಸವಾರ ಮಾಡಿದ ಯಡವಟ್ಟು 20 ಮಂದಿಯ ಪ್ರಾಣವನ್ನೇ ಬಲಿಪಡೆದಿದೆ. ತಾನು ಸಾಯೋದಲ್ಲದೇ ಮತ್ತೊಬ್ಬರ ಜೀವಕ್ಕೂ ಬೈಕ್ ಸವಾರ ಮಾರಕವಾಗಿದ್ದಾನೆ. 

ಇದನ್ನೂ ಓದಿ: ODI ಸರಣಿ ಸೋಲಿಗೆ ಕಾರಣ ಗಿಲ್​.. ಅಸಲಿ ಸತ್ಯ ಇಲ್ಲಿದೆ..!

ಕರ್ನೂಲ್ ಬಳಿ ಕಾವೇರಿ ಬಸ್ ದುರಂತದ ಬಳಿಕ ರಾಜ್ಯ ಸಾರಿಗೆ ಇಲಾಖೆ ಅಲರ್ಟ್‌ ಆಗಿದೆ. ಆರ್‌ಟಿಒ ಅಧಿಕಾರಿಗಳು ಬೆಂಗಳೂರಲ್ಲಿ ಖಾಸಗಿ ಬಸ್‌ಗಳ ಪರಿಶೀಲನೆ ಮಾಡಿದ್ದಾರೆ. ಖಾಸಗಿ ಬಸ್‌ಗಳು, ಎಸಿ ಬಸ್​ಗಳ ಚಾಲಕರ ಲೈಸೆನ್ಸ್, ಬಸ್​ಗಳ ದಾಖಲೆಗಳ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಬಸ್‌ಗಳ ಗುಣಮಟ್ಟಗಳನ್ನೂ ಆರ್‌ಟಿಒ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಕರ್ನೂಲ್ ಬಳಿ ಸಂಭವಿಸಿದ್ದು ನಿಜಕ್ಕೂ ಘನಘೋರ ದುರಂತ.. ಈ ರೀತಿಯ ಅಪಘಾತಗಳು ಮರುಕಳಿಸದಿರಲಿ ಅನ್ನೋದು ಪ್ರಯಾಣಿಕರ ಪ್ರಾರ್ಥನೆ.

ಇದನ್ನೂ  ಓದಿ:ಅಯ್ಯಯ್ಯೋ ಗಿಲ್ಲಿ ಹೆಂಗೆಲ್ಲ ಟ್ರೋಲ್ ಆಗವ್ರೆ ನೋಡ್ರಿ.. Video

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bus
Advertisment
Advertisment
Advertisment