Advertisment

ಮಹಾಮಳೆಗೆ ತತ್ತರಿಸಿದ ಉತ್ತರ ಭಾರತ.. ಇನ್ನೂ ಘೋರ ಮಳೆಯ ಎಚ್ಚರಿಕೆ..!

ಮುಂಗಾರು ಆರ್ಭಟಕ್ಕೆ ಉತ್ತರ ಭಾರತ ತತ್ತರಿಸಿ ಹೋಗಿದೆ. ಹಿಮಾಚಲ, ಉತ್ತರಾಖಂಡ್​.. ಪಂಜಾಬ್​, ಹರಿಯಾಣಕ್ಕೆ ವರುಣಾ ಜಲಾಘಾತ ನೀಡಿದ್ದಾನೆ. ಗುಡ್ಡ ಕುಸಿತ, ಜಲದಿಗ್ಬಂಧನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.

author-image
Ganesh Kerekuli
Rain (21)
Advertisment

ಮುಂಗಾರು ಆರ್ಭಟಕ್ಕೆ ಉತ್ತರ ಭಾರತ ತತ್ತರಿಸಿ ಹೋಗಿದೆ. ಹಿಮಾಚಲ, ಉತ್ತರಾಖಂಡ್​.. ಪಂಜಾಬ್​, ಹರಿಯಾಣಕ್ಕೆ ವರುಣಾ ಜಲಾಘಾತ ನೀಡಿದ್ದಾನೆ. ಗುಡ್ಡ ಕುಸಿತ, ಜಲದಿಗ್ಬಂಧನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.

Advertisment

ಕಾರು ಜಸ್ಟ್​ ಮಿಸ್​

ಹಿಮಾಚಲ ಪ್ರದೇಶದಲ್ಲಿ ಮಳೆರಾಯನ ಅಬ್ಬರಕ್ಕೆ ಗುಡ್ಡಗಳೇ ಕುಸಿಯುತ್ತಿವೆ. ಸೋಲನ್​-ಶಿಮ್ಲಾ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಬೃಹತ್​ ಬಂಡೆಗಳು ಹೆದ್ದಾರಿಗೆ ಅಡ್ಡಲಾಗಿ ಉರುಳಿ ಬಂದಿದೆ. ಇದನ್ನು ನೋಡಿದ ಕಾರು ಚಾಲಕ ತಕ್ಷಣವೇ ಕಾರು ನಿಲ್ಲಿಸಿ ಅಪಾಯದಿಂದ ಪಾರಾಗಿದ್ದಾನೆ. ಇನ್ನು ಮಂಡಿ ಪ್ರದೇಶದಲ್ಲಿ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿ ಬಿರುಕು ಬಿಟ್ಟಿದ್ದು ಸಂಚಾರ ಬಂದ್ ಆಗಿ  ಟ್ರಾಫಿಕ್ ಜಾಮ್​ ಉಂಟಾಗಿದೆ.

ಇದನ್ನೂ ಓದಿ:ಬೆಂಗಳೂರು ಹುಡುಗಿಯರು ಡಗಾ* ಗಳು ಎಂದು ಮಲಯಾಳಂ ಸಿನಿಮಾ ಡೈಲಾಗ್‌ಗೆ ವಿರೋಧ

Advertisment

ಧರೆಗುರುಳಿದ ಮನೆಗಳು

ಕುಲು ನಗರದಲ್ಲಂತು ಜನರು ಯಾವ ಕ್ಷಣದಲ್ಲಿ ಏನ್​ ಆಗುತ್ತೋ ಅನ್ನೋ ಭಯದಲ್ಲೇ ಜೀವವನ್ನು ಕೈಯಲ್ಲಿಡಿದು ಬದುಕುತ್ತಿದ್ದಾರೆ. ಭೂ ಕುಸಿತದಿಂದ ಗುಡ್ಡದ ಮೇಲಿನ ಮನೆಗಳು ಕಳೆಭಾಗದ ಕಟ್ಟಡಗಳ ಮೇಲೆ ಕುಸಿದು ಬೀಳ್ತೀವಿ. ಕುಲು ನಗರದ ನೂತನ ಬಸ್ ನಿಲ್ದಾಣದ ಹತ್ತಿರ ಮನೆ ಕುಸಿಯುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ. ಇದಷ್ಟೇ ಅಲ್ಲ.

ಇದನ್ನೂ ಓದಿ:ಮಗಳು ಕವಿತಾರನ್ನೇ ಬಿಆರ್‌ಎಸ್‌ ಪಕ್ಷದಿಂದ ಸಸ್ಪೆಂಡ್ ಮಾಡಿದ ತಂದೆ ಕೆಸಿಆರ್‌!

Advertisment

ಪಂಜಾಬ್​ನಲ್ಲಿ ಜೀವ ಉಳಿಸಿಕೊಳ್ಳ ಮನೆ ಏರಿ ಕುಳಿತ ಜನರು

ಪಂಜಾಬ್​ನಲ್ಲೂ ಮಳೆರಾಯದ ಒಂದೇ ಸಮನೆ ಆರ್ಭಟಿಸುತ್ತಿದ್ದು, ನದಿಗಳು ಹಳ್ಳ-ಕೊಳ್ಳಲು ಉಕ್ಕಿ ಹರಿಯುತ್ತಿವೆ. ಇದರಿಂದ 1300 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೆಲ ಗ್ರಾಮದ ಜನರು ತಮ್ಮ ಮತ್ತು ಜಾನೂವಾರಗಳ ರಕ್ಷಣೆಗಾಗಿ ಮನೆಯ ಮಹಡಿಗಳಲ್ಲಿ ರಕ್ಷಣೆ ಪಡೀತಿರುವ ವಿಡಿಯೋಗಳು ವೈರಲ್​ ಆಗಿವೆ. ಕೆಲವೆಡೆ ಪ್ರವಾಹದ ನೀರಲ್ಲಿ 10ಕ್ಕೂ ಹೆಚ್ಚು ಮೂಖ ಪ್ರಾಣಿಗಳು ಕೊಚ್ಚಿ ಹೋಗಿವೆ.

ಹರಿಯಾಣ, ದೆಹಲಿಯಲ್ಲೂ ಮಳೆ ಅಬ್ಬರ

ಹರಿಯಾಣದ ಗುರುಗ್ರಾಮ್​ನಲ್ಲಿ ಸುರಿದ ದಾಖಲೆ ಮಳೆಗೆ ರಸ್ತೆಗಳೆಲ್ಲ ಜಲಾವೃತವಾಗಿ ವಾಹನ ಸವಾರರು ಪರದಾಡಿದ್ರು... ರಸ್ತೆಗಳಲ್ಲಿ ಮೊಣಕಾಲುದ್ದ ನೀರು ತಿಂತಿದ್ದ ಕಾರಣ, ವಾಹನಗಳು ತೇಲುತ್ತಿದ್ದ ಕಂಡು ಬಂದ್ವು.. ಗುರುಗ್ರಾಮದ ಇಫ್ಟೋ ಸರ್ಕಲ್ ಅಂತೂ ಮಳೆ ನೀರಿನಿಂದ ಕೆರೆಯಂತಾಗಿ ಜನರು ಪರಿದಾಡಿದ್ದಾರೆ.

Advertisment

ಇದನ್ನೂ ಓದಿ:ಬೆಂಗಳೂರು ಹುಡುಗಿಯರ ಬಗ್ಗೆ ಆಕ್ಷೇಪಾರ್ಹ ಪದ ತೆಗೆಯುತ್ತೇವೆ ಎಂದ ಲೋಕಃ ಸಿನಿಮಾ ತಂಡ, ಕ್ಷಮಾಪಣೆ ಕೋರಿದ ಚಿತ್ರತಂಡ

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಯಮುನಾ ನದಿ ಉಗ್ರರೂಪ ತಾಳಿದೆ. ಕ್ಷಣ ಕ್ಷಣಕ್ಕೂ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದ್ದು, ಯಮುನೆ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದಾಳೆ. ಇದರಿಂದ ನದಿ ತೀರದ ಪ್ರದೇಶದಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.

ಇದಷ್ಟೇ ಅಲ್ಲ.. ಉತ್ತರಾಖಂಡ್​ನ ಕೇದಾರನಾಥದಲ್ಲೂ ಭಾರೀ ಮಳೆಯಿಂದ ರಸ್ತೆಗಳ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು, ಯಾತ್ರಿಕರನ್ನು ಆತಂಕ ಮೂಡಿಸಿದೆ. ಒಟ್ಟಾರೆ.. ಉತ್ತರ ಭಾರತದ ರಾಜ್ಯಗಳ ಮೇಲೆ ಮುನಿದಿರುವ ಮುಂಗಾರು. ಅಕ್ಷರಶಃ ಜಲಪ್ರಳಯವನ್ನೇ ಸೃಷ್ಟಿಸಿದೆ. ಮಾತ್ರವಲ್ಲ, ಇನ್ನೂ ಮೂರ್ನಾಲ್ಕು ದಿನಗಳ ಕಾಲ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅದರಲ್ಲೂ ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಣೆ ಮಾಡಿದೆ. 

Advertisment

ಇದನ್ನೂ ಓದಿ:ಜಿಎಸ್‌ಟಿ ದರ ಸರಳೀಕರಣದಿಂದ ರಾಜ್ಯಕ್ಕೆ ವಾರ್ಷಿಕ 15,000 ಕೋಟಿ ಖೋತಾ: ಸಚಿವ ಕೃಷ್ಣ ಭೈರೇಗೌಡ ಆತಂಕ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Heavy Rain MUMBAI RAIN Karnataka Rains
Advertisment
Advertisment
Advertisment