/newsfirstlive-kannada/media/media_files/2025/09/24/extra-marital-affair-1-2025-09-24-12-43-14.jpg)
Photograph: (AI)
ಭಾರತೀಯ ಸಮಾಜದಲ್ಲಿ ಮದುವೆ (Marriage) ಅನ್ನೋದು ಒಂದು ಪವಿತ್ರ ಬಂಧ. ಗಂಡ ಮತ್ತು ಹೆಂಡತಿ ನಡುವಿನ ನಂಬಿಕೆಯೇ ಅದರ ಪ್ರಮುಖ ಅಡಿಪಾಯ. ಅನೇಕ ಬಾರಿ ಈ ನಂಬಿಕೆ ಮುರಿದುಬಿದ್ದು, ವಿವಾಹೇತರ ಸಂಬಂಧಗಳ (Extra Marital Affair) ಕಡೆಗೆ ಹೋಗುತ್ತದೆ. ಅಂತಹ ಸಂದರ್ಭದಲ್ಲಿ ಪ್ರಶ್ನೆಯೊಂದು ಉದ್ಭವಿಸುತ್ತದೆ. ಇಂಥ ಕೇಸ್​ಗಳಿಗೆ ಕಾನೂನು ಯಾವ ಶಿಕ್ಷೆ ನೀಡುತ್ತದೆ? ಮೋಸ ಹೋಗಿರುವ ಗಂಡ ಅಥವಾ ಹೆಂಡತಿ ನ್ಯಾಯವನ್ನು ಪಡೆಯಬಹುದೇ?ಎಂಬ ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಇಲ್ಲಿದೆ.
2018ರಲ್ಲಿ ಸುಪ್ರೀಂ ಕೋರ್ಟ್​ ವಿವಾಹೇತರ ಸಂಬಂಧಗಳ ಪ್ರಕರಣದ ಕುರಿತಾಗಿ ಮಹತ್ವದ ತೀರ್ಪು ನೀಡಿದೆ. ಜೋಸೆಫ್ ಶೈನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ (Joseph Shine vs Union of India) ಸುಪ್ರೀಂ ಕೋರ್ಟ್, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 497 ಅನ್ನು ಅಸಂವಿಧಾನಿಕ ಎಂದು ಘೋಷಿಸಿದೆ. ಹಿಂದೆ, ವಿವಾಹೇತರ ಸಂಬಂಧಗಳನ್ನು ಅಪರಾಧವೆಂದು ಪರಿಗಣಿಸಲಾಗಿತ್ತು. ಜೊತೆಗೆ ಜೈಲು ಶಿಕ್ಷೆಯನ್ನೂ ವಿಧಿಸಬಹುದಾಗಿತ್ತು.
/filters:format(webp)/newsfirstlive-kannada/media/media_files/2025/09/24/extra-marital-affair-2-2025-09-24-12-46-17.jpg)
ಈ ತೀರ್ಪಿನ ನಂತರ ವಿವಾಹೇತರ ಸಂಬಂಧಗಳನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಇದರರ್ಥ ಗಂಡ ಅಥವಾ ಹೆಂಡತಿ ವಿವಾಹೇತರ ಸಂಬಂಧ ಹೊಂದಿದ್ದರೆ ಅವರನ್ನು ಬಂಧಿಸುವುದಿಲ್ಲ. ಜೊತೆಗೆ ಜೈಲು ಶಿಕ್ಷೆ ಕೂಡ ಇರುವುದಿಲ್ಲ.
ನಾಗರಿಕ ಕಾನೂನಿನಲ್ಲಿ ಪರಿಣಾಮಗಳೇನು?
ಹಾಗಂದ ಮಾತ್ರಕ್ಕೆ ವಿವಾಹೇತರ ಸಂಬಂಧಗಳಿಗೆ ಕಾನೂನು ಪರಿಣಾಮ ಬೀರಲ್ಲ ಎಂದರ್ಥವಲ್ಲ. ದೇಶದಲ್ಲಿ ಇದನ್ನು ವಿಚ್ಛೇದನಕ್ಕೆ ಮಾನ್ಯ ಎಂದು ಪರಿಗಣಿಸಲಾಗುತ್ತದೆ. ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 13(1)(i) ಅಡಿಯಲ್ಲಿ ಪತಿ ಅಥವಾ ಪತ್ನಿ ವಿವಾಹೇತರ ಸಂಬಂಧಗಳ ಆಧಾರದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು.
ಹಾನಿ ಮತ್ತು ಜೀವನಾಂಶ
ವಿವಾಹೇತರ ಸಂಬಂಧದಿಂದ ಆಘಾತ ಅನುಭವಿಸಿದ ವ್ಯಕ್ತಿ ಪರಿಹಾರ ಕೋರಿ ಕೋರ್ಟ್​ ಮೆಟ್ಟಿಲೇರಬಹುದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಅಂದರೆ ಪತಿ ಅಥವಾ ಪತ್ನಿಯು ಇನ್ನೊಬ್ಬರ ಸಂಬಂಧದಿಂದಾಗಿ ಮಾನಸಿಕ ಅಥವಾ ಸಾಮಾಜಿಕ ಹಾನಿ ಅನುಭವಿಸಿದರೆ ಆರ್ಥಿಕ ಪರಿಹಾರ ಪಡೆಯಬಹುದು.
ಇದನ್ನೂ ಓದಿ:IND vs BAN: ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಗಾಯಗೊಂಡ ಕ್ಯಾಪ್ಟನ್
ಹೆಂಡತಿ ಆರ್ಥಿಕವಾಗಿ ದುರ್ಬಲಳಾಗಿದ್ದರೂ ಸಹ, ಆಕೆ ವಿವಾಹೇತರ ಸಂಬಂಧ ಹೊಂದಿದ್ದಾಳೆಂದು ಪತಿ ಸಾಬೀತುಪಡಿಸಿದರೆ ಕೋರ್ಟ್​ ಆಕೆಗೆ ಜೀವನಾಂಶವನ್ನು ನಿರಾಕರಿಸಬಹುದು. ಅದೇ ರೀತಿ, ಪತಿ ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದಾನೆಂದು ಹೆಂಡತಿ ಸಾಬೀತುಪಡಿಸಿದರೆ ಇದು ವಿಚ್ಛೇದನ ಮತ್ತು ಜೀವನಾಂಶಕ್ಕೆ ಆಧಾರವಾಗಬಹುದು ಎಂದು ಕೋರ್ಟ್ ಹೇಳಿದೆ.