ಈತ ಆರು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ.. ಭಯಾನಕ ಮನುಷ್ಯ ಕೊನೆಗೂ ಲಾಕ್..!

ಬಾಲಿವುಡ್ ‘ಧುರಂಧರ್’ ಚಿತ್ರದ ‘ರೆಹಮಾನ್ ಡಕಾಯಿತ’ ಪಾತ್ರ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಅದೇ ಹೆಸರಿನ ನಿಜ ಜೀವನದ ಅಪರಾಧಿಯನ್ನು ಸೂರತ್‌ನಲ್ಲಿ ಬಂಧಿಸಲಾಗಿದೆ. ಅವನ ಹೆಸರು ರಾಜು ಇರಾನಿ ಅಲಿಯಾಸ್ ಅಬಿದ್ ಅಲಿ ಅಲಿಯಾಸ್ ರೆಹಮಾನ್ ಡಕಾಯಿತ.

author-image
Ganesh Kerekuli
irani gang leader
Advertisment

ಬಾಲಿವುಡ್ ‘ಧುರಂಧರ್’ ಚಿತ್ರದ ‘ರೆಹಮಾನ್ ಡಕಾಯಿತ’ ಪಾತ್ರ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಅದೇ ಹೆಸರಿನ ನಿಜ ಜೀವನದ ಅಪರಾಧಿಯನ್ನು ಸೂರತ್‌ನಲ್ಲಿ ಬಂಧಿಸಲಾಗಿದೆ. ಅವನ ಹೆಸರು ರಾಜು ಇರಾನಿ ಅಲಿಯಾಸ್ ಅಬಿದ್ ಅಲಿ ಅಲಿಯಾಸ್ ರೆಹಮಾನ್ ಡಕಾಯಿತ.

ಈತ ಭೋಪಾಲ್‌ನ ಕುಖ್ಯಾತ ‘ಇರಾನಿ ಡೇರಾ’ದ ಲೀಡರ್. ಆರು ರಾಜ್ಯಗಳಿಗೂ ಹೆಚ್ಚು ಪೊಲೀಸರು ಈತನಿಗಾಗಿ ಹುಡುಕಾಟ ನಡೆಸ್ತಿದ್ದರು. ನಗರದಲ್ಲಿ ಒಂದು ದೊಡ್ಡ ಅಪರಾಧಕ್ಕೆ ಹೊಂಚು ಹಾಕ್ತಿದ್ದಾಗ ಸೂರತ್ ಅಪರಾಧ ವಿಭಾಗವು ಲಾಕ್ ಮಾಡಿದೆ. 

ಇದನ್ನೂ ಓದಿ: ಮೊದಲ ಪಂದ್ಯಕ್ಕೂ ಮುನ್ನವೇ ಆಘಾತ.. ODI ಸಿರೀಸ್​ನಿಂದ ಹೊರಬಿದ್ದ ಟೀಂ ಇಂಡಿಯಾ ಸ್ಟಾರ್..!​

irani gang leader (1)

ಆತನ ಬಂಧನ ಸಣ್ಣ ಸುಳಿವಿನಿಂದ ಆಗಿದೆ. ಸೂರತ್ ಕ್ರೈಂ ಬ್ರ್ಯಾಂಚ್ ಪೊಲೀಸ್ ಇನ್ಸ್‌ಪೆಕ್ಟರ್‌ ಜೆ.ಎನ್‌. ಗೋಸ್ವಾಮಿ ಮತ್ತು ಅವರ ತಂಡಕ್ಕೆ ಭೋಪಾಲ್‌ನ ‘ರೆಹಮಾನ್ ಡಕಾಯಿತ’ ಸೂರತ್​​ಗೆ ಬಂದಿದ್ದಾನೆ ಎಂಬ ಮಾಹಿತಿ ಸಿಕ್ಕಿರುತ್ತದೆ. ಆ ಮಾಹಿತಿ ನಿಖರವಾಗಿತ್ತು. ಸೂರತ್​​ನಲ್ಲಿ ದೊಡ್ಡ ಅಪರಾಧ ಎಸೆಗಲು ಪ್ಲಾನ್ ಹಾಕಿ ಕೂತಿರೋದು ಖಾತ್ರಿ ಆಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಲಾಕ್ ಮಾಡಿದ್ದಾರೆ. 

ಭಯಾನಕ ಇತಿಹಾಸ

  • ಅಸಲಿ ಹೆಸರು ಅಬ್ಬಾಸ್ ಅಲಿ!
  • ಅಪರಾಧ ಜಗತ್ತಿಗೆ ರಾಜು ಇರಾನಿ, ರೆಹಮಾನ್ ಡಕಾಯಿತ ಎಂದು ಕುಖ್ಯಾತಿ
  • ಸಾಮಾನ್ಯ ಅಪರಾಧಿಯಲ್ಲ, ಇಡೀ ಅಪರಾಧ ಜಾಲದ ಹಿಂದಿನ ಮಾಸ್ಟರ್ ಮೈಂಡ್
  • ಭೋಪಾಲ್‌ನಲ್ಲಿ ಇರಾನಿ ಡೇರಾ ಪ್ರದೇಶದಲ್ಲಿ ಡಕಾಯಿತಿಗಾಗಿ ಸಾಮ್ರಾಜ್ಯ ಇದೆ 
  • ರಾಜು ಇರಾನಿ ನೇತೃತ್ವದಲ್ಲಿ ಆರಕ್ಕೂ ಹೆಚ್ಚು ಗ್ಯಾಂಗ್‌ಗಳು ಕಾರ್ಯನಿರ್ವಹಿಸುತ್ತಿವೆ
  • ಈ ಗ್ಯಾಂಗ್‌ 14 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಹರಡಿಕೊಂಡಿದೆ, ಕ್ರೈಂನಲ್ಲಿ ಚಾಣಾಕ್ಷ್ಯತೆ 
  • ಕಳ್ಳತನ ಎಲ್ಲಿ ಮಾಡ್ಬೇಕು? ಯಾವ ಗ್ಯಾಂಗ್​ ಅನ್ನು ಯಾವ ರಾಜ್ಯಕ್ಕೆ ಕಳುಹಿಸಬೇಕು
  • ಯಾವ ಅಪರಾಧವನ್ನು ಮಾಡಿಸಬೇಕು ಎಂಬುದನ್ನು ಈತನೇ ನಿರ್ಧರಿಸುತ್ತಿದ್ದ
  • ಸಂಘಟಿತ ಕೆಲಸ, ಪ್ರತಿಯೊಂದು ಗ್ಯಾಂಗ್​​ಗೂ ವಿಭಿನ್ನ ಕೆಲಸಗಳು ನಿಗದಿ ಮಾಡ್ತಿದ್ದ
  • ಈತನ ಕೆಲವು ಗ್ಯಾಂಗ್‌ಗಳು ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡಿವೆ
  • ಇನ್ನು ಕೆಲವು ಗ್ಯಾಂಗ್‌ಗಳು ಪೊಲೀಸರಂತೆ, ಸಿಬಿಐನಂತೆ ನಟಿಸಿ ದರೋಡೆ 
  • ಆಭರಣ ಮತ್ತು ನಗದು ದರೋಡೆ ಮಾಡಲು ಮಾಸ್ಟರ್ ಮೈಂಡ್ 
  • ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ನಕಲಿ ಚೆಕ್‌ ಪೋಸ್ಟ್ ನಡೆಸಿ ಹಣ ಸುಲಿಗೆ 
  • ಇನ್ನು ಕೆಲವು ಸದಸ್ಯರು ಭೂಮಿ ವಿಚಾರದಲ್ಲಿ ಹೆದರಿ, ಬೆದರಿಸಿ ವಂಚನೆ 
  • ಶಸ್ತ್ರಾಸ್ತ್ರಗಳನ್ನು ತೋರಿಸಿ, ಜನರ ಹೆದರಿಸಿ ಸುಲಿಗೆ ಮಾಡೋದ್ರಲ್ಲಿ ಹೆಸರುವಾಸಿ

ಪೊಲೀಸ್ ದಾಖಲೆಗಳಲ್ಲಿ ಅವರ ವಿರುದ್ಧ ದರೋಡೆ, ಕಳ್ಳತನ, ವಂಚನೆ, ಅಕ್ರಮ ಸ್ವಾಧೀನ ಮತ್ತು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಅಪರಾಧಗಳು ಸೇರಿದಂತೆ 10 ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ತೋರಿಸುತ್ತವೆ.

ಇದನ್ನೂ ಓದಿ: ಕಿವೀಸ್​ ಕ್ಯಾಂಪ್​ನಲ್ಲಿ ಕಿಂಗ್​ ಕೊಹ್ಲಿಯದ್ದೇ ಭಯ.. ನ್ಯೂಜಿಲೆಂಡ್​​ಗೆ ಕಾಡ್ತಿರೋ ಕರಾಳ ನೆನಪುಗಳು..

irani gang leader (2)

ಐಷಾರಾಮಿ ಜೀವನದ ಉತ್ಸಾಹ

ರಾಜು ಇರಾನಿ ಮತ್ತು ಅವರ ಸಹೋದರ ಜಾಕಿರ್ ಅಲಿ ತಮ್ಮ ಅಪರಾಧದಿಂದ ಬಂದ ಹಣವನ್ನು ಅದ್ದೂರಿಯಾಗಿ ಖರ್ಚು ಮಾಡುತ್ತಾರೆ. ಐಷಾರಾಮಿ ಕಾರುಗಳು, ದುಬಾರಿ ಬೈಕ್‌ಗಳು ಮತ್ತು ಕುದುರೆಗಳನ್ನೂ ಹೊಂದಿದ್ದಾರೆ. ಪ್ರತಿಯೊಂದು ಕೆಲಸವನ್ನೂ ತಮ್ಮ ಸಹಾಯಕರ ಮೂಲಕವೇ ಮಾಡಿಸುತ್ತಾರೆ. ಕದ್ದಿರುವ ವಸ್ತುವನ್ನು ಎಲ್ಲಿಗೆ ತರಬೇಕು? ಯಾರ ಮೂಲಕ ಮಾರಾಟ ಮಾಡಿಸಬೇಕು ಎಂಬುದನ್ನು ಇವರೇ ನಿರ್ಧರಿಸುತ್ತಾರೆ. 

ಇದನ್ನೂ ಓದಿ: ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಯಾರು ಅಂತಾ ಭವಿಷ್ಯ ನುಡಿದ ನೀತು ವನಜಾಕ್ಷಿ..! VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Irani gang Raman Dakaait
Advertisment