/newsfirstlive-kannada/media/media_files/2025/08/15/gst-reforms-by-modi-03-2025-08-15-20-12-31.jpg)
ಇವತ್ತಿನಿಂದ ಎರಡು ದಿನಗಳ ಕಾಲ ಜಿಎಸ್‌ಟಿ ಕೌನ್ಸಿಲ್ ಮೀಟಿಂಗ್ (GST Council meeting) ನಡೆಯಲಿದೆ. ಭಾರೀ ಬದಲಾವಣೆಯ ನಿರೀಕ್ಷೆ ಮಾಡಲಾಗಿದ್ದು, ಸಾಮಾನ್ಯ ಜನರು ಭರ್ಜರಿ ಗುಡ್ನ್ಯೂಸ್ಗಾಗಿ ಕಾದು ಕೂತಿದ್ದಾರೆ.
ಮಾಹಿತಿಗಳ ಪ್ರಕಾರ...
ಕಾಳುಗಳು, ಟೀ, ಮಂಡಕ್ಕಿ, ಕಡಲೆ ಹಿಟ್ಟು ಸೇರಿದಂತೆ ಅಗತ್ಯ ಸಾಮಗ್ರಿಗಳ ಜಿಎಸ್‌ಟಿ ಇಳಿಕೆಗೆ ಒಲವು ವ್ಯಕ್ತವಾಗುತ್ತಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮಧ್ಯಮ ವರ್ಗ, ಕೆಳ ವರ್ಗದ ಆಕ್ರೋಶ ತಣಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
175 ಉತ್ಪನ್ನಗಳ ಮೇಲೆ ಶೇಕಡಾ 10 ರಷ್ಟು ಕಡಿತ..!
ಶಾಂಪೂಗಳು ಮತ್ತು ಹೈಬ್ರಿಡ್ ಕಾರುಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್ ಐಟಮ್ ಸೇರಿ ಸುಮಾರು 175 ಉತ್ಪನ್ನಗಳ ಮೇಲಿನ ‘ಬಳಕೆ ತೆರಿಗೆ’ಯನ್ನು ಶೇಕಡಾ 10 ರಷ್ಟು ಕಡಿತಗೊಳಿಸುವ ಪ್ರಸ್ತಾಪ ಇದೆ. ಅಮೆರಿಕದೊಂದಿಗಿನ ವ್ಯಾಪಾರ ಸಂಬಂಧಗಳು ಹದಗೆಟ್ಟ ಬೆನ್ನಲ್ಲೇ ಇಂತಹ ನಿರ್ಧಾರಕ್ಕೆ ಬರಲಾಗುತ್ತಿದೆ.
ಪ್ರಸ್ತಾಪ ಹೇಗಿದೆ..?
ಸರ್ಕಾರದ ಮುಂದೆ.. ಟಾಲ್ಕಮ್ ಪೌಡರ್, ಟೂತ್‌ಪೇಸ್ಟ್ ಮತ್ತು ಶಾಂಪೂಗಳಂತಹ (talcum powder, toothpaste) ಗ್ರಾಹಕ ವಸ್ತುಗಳ ಮೇಲಿನ GST ಶೇಕಡಾ 18 ರಿಂದ ಶೇಕಡಾ 5ಕ್ಕೆ ಇಳಿಸುವ ಪ್ರಸ್ತಾಪವಿದೆ. ಅದೇ ರೀತಿ ಹಿಂದೂಸ್ತಾನ್ ಯೂನಿಲಿವರ್ ಮತ್ತು ಗೋದ್ರೇಜ್ ಇಂಡಸ್ಟ್ರೀಸ್‌ನಂತಹ ಕಂಪನಿಗಳಲ್ಲಿ ಮಾರಾಟ ಹೆಚ್ಚಿಸುವ ಸಾಧ್ಯತೆಯೂ ಇದೆ.
ಇದನ್ನೂ ಓದಿ:ದರ್ಶನ್ಗೆ ಮತ್ತೆ ಟೆನ್ಷನ್.. ಇವತ್ತು ಕೋರ್ಟ್ನಲ್ಲಿ ವಾದ-ಪ್ರತಿವಾದ ಹೇಗಿತ್ತು?
ಅಕ್ಟೋಬರ್‌ನಲ್ಲಿ ದೀಪಾವಳಿ ಶಾಪಿಂಗ್ ಋತು ಆರಂಭವಾಗಲಿದೆ. ಸ್ಯಾಮ್‌ಸಂಗ್, ಎಲ್‌ಜಿ ಎಲೆಕ್ಟ್ರಾನಿಕ್ಸ್ ಮತ್ತು ಸೋನಿಯಂತಹ ಬ್ರ್ಯಾಂಡ್‌ಗಳ ( Samsung, LG Electronics, and Sony) ವಸ್ತುಗಳ ಮಾರಾಟ ಜೋರಾಗಿರಲಿದೆ. ಹವಾನಿಯಂತ್ರಣ ಯಂತ್ರಗಳು ಮತ್ತು ದೂರದರ್ಶನ ಸೆಟ್‌ಗಳ ಮೇಲಿನ ಜಿಎಸ್‌ಟಿ ಶೇ.28 ರಿಂದ ಶೇ.18 ಕ್ಕೆ ಇಳಿಯುವ ಸಾಧ್ಯತೆ ಇದೆ.
ಕೃಷಿ ಆದಾಯ ಹೆಚ್ಚಿಸಿ ಭಾರತೀಯ ಉತ್ಪಾದಕರಲ್ಲಿ ಸ್ವಾವಲಂಬನೆ ಉತ್ತೇಜಿಸುವ ಗುರಿಯನ್ನೂ ಕೂಡ ಹೊಂದಲಾಗಿದೆ. ಅಂದರೆ ರಸಗೊಬ್ಬರ, ಕೃಷಿ ಯಂತ್ರೋಪಕರಣ ಮತ್ತು ಟ್ರ್ಯಾಕ್ಟರ್ಗಳು, ಅವುಗಳ ಬಿಡಿ ಭಾಗಗಳ ರಫ್ತು ವಸ್ತುಗಳ ಮೇಲಿನ ಬಳಕೆ ತೆರಿಗೆಯನ್ನು ಶೇಕಡಾ 12 ಅಥವಾ ಶೇಕಡಾ 18 ರಿಂದ ಶೇಕಡಾ 5ಕ್ಕೆ ಇಳಿಸಲು ಪ್ಲಾನ್ ಮಾಡಲಾಗ್ತಿದೆ. ಈ ಕಡಿತವು ದೇಶದ ಅತಿದೊಡ್ಡ ರಫ್ತುದಾರರಲ್ಲಿ ಒಂದಾದ ಜವಳಿ ವಲಯಕ್ಕೂ ವಿಸ್ತರಿಸುವ ಸಾಧ್ಯತೆ ಇದೆ.
CARS AND COLAS
ಜಪಾನಿನ ಮೂಲದ ಟೊಯೋಟಾ ಮೋಟಾರ್ ಮತ್ತು ಸುಜುಕಿ ಮೋಟಾರ್‌ಗೆ ಗೆಲುವು ಸಿಗುವ ನಿರೀಕ್ಷೆ ಇದೆ. ಮೋದಿ ಸರ್ಕಾರವು ಸಣ್ಣ ಪೆಟ್ರೋಲ್ ಹೈಬ್ರಿಡ್ ಕಾರುಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 28 ರಿಂದ 18ಕ್ಕೆ ಇಳಿಸಲು ಪ್ರಸ್ತಾಪಿಸಿದೆ. ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಗಳು ಕೂಡ ಜಿಎಸ್‌ಟಿ ಕಡಿಮೆ ಮಾಡುವಂತೆ ಬೇಡಿಕೆ ಇಟ್ಟಿದ್ದವು. ಹಾಗಾಗಿ 350 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿರುವ ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಮೇಲಿನ ತೆರಿಗೆ ಕಡಿತಗೊಳಿಸಲು ಸರ್ಕಾರ ಪ್ರಸ್ತಾಪಿಸಿದೆ. ಅವುಗಳಲ್ಲಿ ಪ್ರಮುಖವಾಗಿ ಬಜಾಜ್ ಆಟೋ, ಹೀರೋ ಮೋಟೋಕಾರ್ಪ್ ಮತ್ತು ಟಿವಿಎಸ್ ಮೋಟಾರ್ ಸೇರಿವೆ.
ಇದನ್ನೂ ಓದಿ:ನೆಸ್ಲೆ ಕಂಪನಿ ಸಿಇಓಗೆ ಸೀಕ್ರೆಟ್ ಅಫೇರ್ ಕಾರಣದಿಂದ ಕಂಪನಿಯಿಂದಲೇ ಗೇಟ್ ಪಾಸ್!
ತೆರಿಗೆ ಕಡಿತದ ಜೊತೆಗೆ ಪೆಪ್ಸಿಕೋ, ಕೋಕಾ-ಕೋಲಾ ಮತ್ತು ಸ್ವದೇಶಿ ರಿಲಯನ್ಸ್ ಇಂಡಸ್ಟ್ರೀಸ್ ತಯಾರಿಸಿದ ಕೋಲಾಗಳು ಮತ್ತು ಇತರ ಕಾರ್ಬೊನೇಟೆಡ್ ಪಾನೀಯಗಳ ಮೇಲಿನ ಸುಂಕವನ್ನು ಕಾಯ್ದುಕೊಳ್ಳುವುದರ ಜೊತೆಗೆ ಕಲ್ಲಿದ್ದಲು ಮತ್ತು ಬೆಟ್ಟಿಂಗ್, ಕ್ಯಾಸಿನೊಗಳು ಮತ್ತು ಕುದುರೆ ಓಟದಂತಹ ಗೇಮ್ಗಳ ದರಗಳನ್ನು ಹೆಚ್ಚಿಸುವ ಬಗ್ಗೆ ಭಾರತ ಪರಿಗಣಿಸುತ್ತಿದೆ.
ಕೇಂದ್ರಕ್ಕೆ ಲಾಸ್ ಆಗುತ್ತಾ..?
ಅಗತ್ಯ ಸಾಮಗ್ರಿಗಳ ಮೇಲಿನ ಜಿಎಸ್‌ಟಿ ಸಂಗ್ರಹ ಕಡಿಮೆಯಾದರೂ ಕೇಂದ್ರದ ಆದಾಯಕ್ಕೆ ಕೊರತೆ ಇರಲ್ಲ. ಮಧ್ಯಮ ವರ್ಗದ ಪ್ರತಿ ತಿಂಗಳ ಖರ್ಚುವೆಚ್ಚ ಕಡಿಮೆ ಮಾಡಲು ಕೇಂದ್ರದಿಂದ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ದೇಶದ ಜನ ಸಾಮಾನ್ಯರಿಗೆ ರಿಲೀಫ್ ನೀಡಲು ಅವಕಾಶ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಮೇ, 2025ರಲ್ಲಿ 2.01 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಜೂನ್, 2025 ರಲ್ಲಿ 1.85 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಇದು ದೇಶದಲ್ಲಿ ಜಿಎಸ್‌ಟಿ ಸಂಗ್ರಹ ಹೆಚ್ಚಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತೆ. ಜೂನ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ಕಡಿಮೆಯಾಗಿದ್ದರೂ, 2024ರ ಜೂನ್ ತಿಂಗಳಿಗೆ ಹೋಲಿಸಿದರೇ, ಶೇ.6.5 ರಷ್ಟು ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ.
ದೇಶದಲ್ಲಿ 4 GST ಸ್ಲ್ಯಾಬ್ಗಳು..!
ದೇಶದಲ್ಲಿ ಶೇ.5, ಶೇ. 12, ಶೇ.18, ಶೇ. 28ರ ನಾಲ್ಕು ಜಿಎಸ್‌ಟಿ ಸ್ಲ್ಯಾಬ್ಗಳಿವೆ. ಸಾಮಾನ್ಯರು ಬಳಸುವ ಉತ್ಪನ್ನಗಳೇ ಶೇ.12ರ ಸ್ಲ್ಯಾಬ್ ನಲ್ಲಿವೆ. ಅವುಗಳನ್ನು ಶೇ.5 ರ ಜಿಎಸ್‌ಟಿ ಸ್ಲ್ಯಾಬ್ ವ್ಯಾಪ್ತಿಗೆ ತಂದರೆ, ಜನ ಸಾಮಾನ್ಯರಿಗೆ ತೆರಿಗೆ ಹೊರೆ ಕಡಿಮೆಯಾಗುತ್ತೆ. ಶೇ.12 ರ ಜಿಎಸ್‌ಟಿ ಸ್ಲ್ಯಾಬ್ ನಲ್ಲಿ ಟೂತ್ ಪೇಸ್ಟ್, ಟೂತ್ ಪೌಡರ್, ಛತ್ರಿ, ಬಟ್ಟೆ ಹೊಲಿಯು ಮೆಷಿನ್, ಪ್ರೆಷರ್ ಕುಕ್ಕರ್, ಅಡುಗೆ ಮನೆ ಸಾಮಗ್ರಿಗಳು, ಎಲೆಕ್ಟ್ರಿಕ್ ಐರನ್, ವಾಷಿಂಗ್ ಮೆಷಿನ್, ಬೈಸಿಕಲ್, ಸಾವಿರ ರೂಪಾಯಿವರೆಗಿನ ಗಾರ್ಮೆಂಟ್ಸ್ ಬಟ್ಟೆಗಳು, 500 ರೂಪಾಯಿಯಿಂದ 1 ಸಾವಿರ ರೂಪಾಯಿ ಒಳಗಿನ ಫುಟ್ ವೇರ್, ವ್ಯಾಕ್ಸಿನ್, ಸೆರಾಮಿಕ್ ಟೈಲ್ಸ್, ಕೃಷಿ ಟೂಲ್ಸ್ ಗಳಿವೆ. ವಾಟರ್ ಫಿಲ್ಟರ್, ಸೋಪ್, ವಾಟರ್ ಹೀಟರ್, ವಾಕ್ಯೂಮ್ ಕ್ಲೀನರ್, ಡಯೋಗ್ನೋಸ್ಟಿಕ್ ಕಿಟ್, ಸೋಲಾರ್ ವಾಟರ್ ಹೀಟರ್ ಜಾಮಿಟ್ರಿ ಬಾಕ್ಸ್, ಎಕ್ಸೈಸ್ ಬುಕ್, ರೆಡಿ ಮಿಕ್ಸ್ ಕಾಂಕ್ರೀಟ್, ಡ್ರಾಯಿಂಗ್ ಕಲರ್ ಬುಕ್ಸ್ ಗಳೆಲ್ಲಾ ಶೇ.12 ರ ಜಿಎಸ್‌ಟಿ ಸ್ಲ್ಯಾಬ್ ನಲ್ಲಿವೆ.
ಇದನ್ನೂ ಓದಿ:ದ್ರಾವಿಡ್ಗೆ ತಾನೇ ಸಾಕಿದ ಗಿಣಿ ಹದ್ದಾಗಿ ಬಂದು ಕುಕ್ಕಿದೆ.. ಯಾಕೆ ಹೀಗೆ ಆಯ್ತು..?
ಇವುಗಳನ್ನು ಶೇ. 12 ರ ಜಿಎಸ್‌ಟಿ ಸ್ಲ್ಯಾಬ್ ನಿಂದ ತೆಗೆದು ಶೇ.5 ರ ಜಿಎಸ್‌ಟಿ ಸ್ಲ್ಯಾಬ್ಗೆ ಸೇರ್ಪಡೆ ಮಾಡಿದ್ರೆ, ಕೇಂದ್ರ ಸರ್ಕಾರಕ್ಕೆ ವಾರ್ಷಿಕ 40 ಸಾವಿರ ಕೋಟಿ ರೂಪಾಯಿಯಿಂದ 50 ಸಾವಿರ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹ ನಷ್ಟವಾಗಲಿದೆ. ಈ ನಷ್ಟವನ್ನು ಬೇರೆಡೆಯಿಂದ ತುಂಬಿಕೊಳ್ಳುವ, ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ, ಸಾಮರ್ಥ್ಯ ಕೇಂದ್ರ ಸರ್ಕಾರಕ್ಕೆ ಇದೆ. ಜೊತೆಗೆ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾದಷ್ಟು ಆ ಉತ್ಪನ್ನಗಳು ಹೆಚ್ಚಾಗಿ ಮಾರಾಟವಾಗುತ್ತವೆ. ಇದರಿಂದ ಉತ್ಪಾದನೆಯೂ ಜಾಸ್ತಿಯಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತೆ ಎಂಬ ಲೆಕ್ಕಾಚಾರ ಕೇಂದ್ರ ಸರ್ಕಾರದ್ದಾಗಿದೆ.
ಆದರೆ ಶೇ.12ರ ಜಿಎಸ್‌ಟಿ ಸ್ಲ್ಯಾಬ್ ತೆಗೆಯುವುದಕ್ಕೆ ಪಂಜಾಬ್, ಕೇರಳ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಮಾತ್ರ ವಿರೋಧಿಸುತ್ತಿವೆ. ವೋಟಿಂಗ್ ನಡೆದ್ದಲ್ಲಿ ಕೇಂದ್ರ ಸರ್ಕಾರದ ಸ್ಲ್ಯಾಬ್ ಬದಲಾವಣೆಗೆ ಬಹುಮತ ಸಿಗಲಿದೆ. ಜಿಎಸ್‌ಟಿ ಮಂಡಳಿಯಲ್ಲಿ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಇಲ್ಲವೇ ಅವರ ಪ್ರತಿನಿಧಿಗಳು ಭಾಗಿಯಾಗ್ತಾರೆ. ಇದುವರೆಗೂ ಒಮ್ಮೆ ಮಾತ್ರ ಜಿಎಸ್‌ಟಿ ಮಂಡಳಿಯಲ್ಲಿ ವೋಟಿಂಗ್ ನಡೆದಿದ್ದು, ಉಳಿದೆಲ್ಲಾ ತೀರ್ಮಾನಗಳನ್ನು ಸಹಮತದ ಆಧಾರದ ಮೇಲೆಯೇ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ:ಕಿಚ್ಚ ಸುದೀಪ್ಗೆ ಪ್ರೀತಿಯಿಂದ ಮುತ್ತುಕೊಟ್ಟ ಅಭಿಮಾನಿ VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ