ಕರ್ನಾಟಕ ವಿಧಾನಸಭೆಯ ಹಿರಿಮೆಗೆ ಮತ್ತೊಂದು ಗರಿ: UP ವಿಧಾನಸಭೆಗೂ ಮಾದರಿಯಾಯ್ತು ನಮ್ಮ ‘ಸಭಾಧ್ಯಕ್ಷರ ಖುರ್ಚಿ’!

ಕರ್ನಾಟಕದ ಶಕ್ತಿ ಸೌಧವಾದ ವಿಧಾನಸೌಧದ ಕೀರ್ತಿ ಈಗ ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶಕ್ಕೂ ಹಬ್ಬಿದೆ. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರು (ಸ್ಪೀಕರ್) ಕುಳಿತು ಸದನ ನಡೆಸುವ ಆ ಆಕರ್ಷಕ ಮತ್ತು ಗಾಂಭೀರ್ಯದ ಖುರ್ಚಿ ಈಗ ಉತ್ತರಪ್ರದೇಶದ ವಿಧಾನಸಭೆಗೂ ಮಾದರಿಯಾಗಿದೆ.

author-image
Ganesh Kerekuli
Speaker chair (4)
Advertisment

ಬೆಂಗಳೂರು: ಕರ್ನಾಟಕದ ಶಕ್ತಿ ಸೌಧವಾದ ವಿಧಾನಸೌಧದ ಕೀರ್ತಿ ಈಗ ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶಕ್ಕೂ ಹಬ್ಬಿದೆ. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರು (ಸ್ಪೀಕರ್) ಕುಳಿತು ಸದನ ನಡೆಸುವ ಆ ಆಕರ್ಷಕ ಮತ್ತು ಗಾಂಭೀರ್ಯದ ಖುರ್ಚಿ ಈಗ ಉತ್ತರಪ್ರದೇಶದ ವಿಧಾನಸಭೆಗೂ ಮಾದರಿಯಾಗಿದೆ. ಉತ್ತರಪ್ರದೇಶದ ವಿಧಾನಸಭೆಯ ಕಲಾಪದಲ್ಲಿ ಅಲ್ಲಿನ ಸಭಾಧ್ಯಕ್ಷರು ನಮ್ಮ ರಾಜ್ಯದ ಮಾದರಿಯಲ್ಲೇ ಸಿದ್ಧಗೊಂಡಿರುವ ನೂತನ ಖುರ್ಚಿಯನ್ನು ಅಲಂಕರಿಸಿದ್ದಾರೆ. 

ಇದನ್ನೂ ಓದಿ: ಬೆಂಗಳೂರು ವಾಹನ ಸವಾರರೇ ಅಲರ್ಟ್​.. ಸಂಚಾರ ಮಾರ್ಗದಲ್ಲಿ ಭಾರೀ ಬದಲಾವಣೆ..!

Speaker chair (3)

ಯುಪಿ ಸಭಾಧ್ಯಕ್ಷರ ಮನಗೆದ್ದ ಕರ್ನಾಟಕದ ಕಲೆ

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಉತ್ತರಪ್ರದೇಶದ ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ತಂಡವೊಂದು ಕರ್ನಾಟಕದ ವಿಧಾನಸೌಧಕ್ಕೆ ಭೇಟಿ ನೀಡಿತ್ತು. ಕಲಾಪ ವೀಕ್ಷಣೆಯ ಸಂದರ್ಭದಲ್ಲಿ ಅಲ್ಲಿನ ಸಭಾಧ್ಯಕ್ಷರಾದ ಸತೀಶ್ ಮಹಾನ ಅವರ ಕಣ್ಣು ಕರ್ನಾಟಕದ ಸ್ಪೀಕರ್ ಕುಳಿತುಕೊಳ್ಳುವ ಆ ಭವ್ಯವಾದ ಖುರ್ಚಿಯ ಮೇಲೆ ಬಿದ್ದಿತ್ತು. ಅದರ ಕೆತ್ತನೆ, ವಿನ್ಯಾಸ ಮತ್ತು ಗಾಂಭೀರ್ಯಕ್ಕೆ ಮಾರುಹೋದ ಅವರು, ಅದರ ವಿಶೇಷತೆಗಳನ್ನು ವಿಸ್ತಾರವಾಗಿ ತಿಳಿದುಕೊಂಡಿದ್ದರು.

ಇದನ್ನೂ ಓದಿ: 2 ಪಂದ್ಯ ಬಾಕಿ ಇರುವಾಗಲೇ ಸರಣಿ ಗೆದ್ದ ಭಾರತ.. ನಿನ್ನೆಯ ಆಟದ ಹೈಲೈಟ್ಸ್..!

Speaker chair (1)

ಅದೇ ಮಾದರಿಯಲ್ಲಿ ಕೆತ್ತನೆ

ನಮ್ಮ ವಿಧಾನಸಭೆಯ ಸ್ಪೀಕರ್ ಖುರ್ಚಿಯ ವಿನ್ಯಾಸದಿಂದ ಪ್ರೇರಿತರಾದ ಸತೀಶ್ ಮಹಾನ ಅವರು, ಉತ್ತರಪ್ರದೇಶದ ವಿಧಾನಸಭೆಗೂ ಅಂತಹದ್ದೇ ಖುರ್ಚಿಯನ್ನು ಅಳವಡಿಸಲು ನಿರ್ಧರಿಸಿದ್ದರು. ಅದರಂತೆ, ಇಷ್ಟು ದಿನ ಯುಪಿ ಸದನದಲ್ಲಿದ್ದ ಹಳೆಯ ಖುರ್ಚಿಯ ಬದಲಿಗೆ, ಕರ್ನಾಟಕದ ಖುರ್ಚಿಯ ಮಾದರಿಯಲ್ಲೇ ಕೆತ್ತನೆ ಮಾಡಲಾದ ನೂತನ ಖುರ್ಚಿಯನ್ನು ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: ಸಂಕಷ್ಟಕ್ಕೆ ಸಿಲುಕಿದ ಜಡೇಜಾ ಕರಿಯರ್.. ಮತ್ತೊಬ್ಬ ಸ್ಟಾರ್​ಗೆ ಒಲಿದ ಅದೃಷ್ಟ..!

Speaker chair (2)

ಕರ್ನಾಟಕದ ಹಿರಿಮೆ ಹೆಚ್ಚಿಸಿದ ನಡೆ

ಇಂದಿನಿಂದ ಉತ್ತರಪ್ರದೇಶದ ಅಧಿವೇಶನ ಆರಂಭವಾಗುತ್ತಿದ್ದು, ಸ್ಪೀಕರ್ ಸತೀಶ್ ಮಹಾನ ಅವರು ಕರ್ನಾಟಕದ ಮಾದರಿಯ ಕೆತ್ತನೆಯುಳ್ಳ ಈ ನೂತನ ಖುರ್ಚಿಯಲ್ಲಿ ಕುಳಿತು ಸದನವನ್ನು ಮುನ್ನಡೆಸಲಿದ್ದಾರೆ. ಇದು ನಮ್ಮ ರಾಜ್ಯದ ವಿಧಾನಸಭೆಯ ಶಿಷ್ಟಾಚಾರ ಮತ್ತು ಕಲೆಗೆ ಸಿಕ್ಕ ದೊಡ್ಡ ಗೌರವವಾಗಿದೆ.

Speaker chair

ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ವಿಶಿಷ್ಟ ಸ್ಥಾನ ಹೊಂದಿರುವ ಕರ್ನಾಟಕದ ವಿಧಾನಸಭೆಯ ಸಣ್ಣ ವಿಷಯಗಳೂ ಸಹ ಬೇರೆ ರಾಜ್ಯಗಳಿಗೆ ಮಾದರಿಯಾಗುತ್ತಿರುವುದು ಕನ್ನಡಿಗರು ಹೆಮ್ಮೆಪಡುವ ವಿಷಯವಾಗಿದೆ.

ಇದನ್ನೂ ಓದಿ: ದೇಶದಲ್ಲಿ 77ನೇ ಗಣರಾಜ್ಯೋತ್ಸವದ ಸಂಭ್ರಮ; 'ಕರ್ತವ್ಯ ಪಥ'ದಲ್ಲಿ ಅದ್ಧೂರಿ ಪೆರೇಡ್‌ಗೆ ಕ್ಷಣಗಣನೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Vidhana Soudha Speaker's chair
Advertisment