2 ಪಂದ್ಯ ಬಾಕಿ ಇರುವಾಗಲೇ ಸರಣಿ ಗೆದ್ದ ಭಾರತ.. ನಿನ್ನೆಯ ಆಟದ ಹೈಲೈಟ್ಸ್..!

ಗುವಾಹಟಿಯಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್​ ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಿದ್ರು. ನ್ಯೂಜಿಲೆಂಡ್ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್, ಮೊದಲ 10 ಓವರ್​ಗಳಲ್ಲೇ ಗೇಮ್ ಖತಂ ಮಾಡಿದ್ರು. ಟೀಮ್ ಇಂಡಿಯಾ ವಿನ್ನಿಂಗ್ ಹೈಲೈಟ್ಸ್ ಇಲ್ಲಿದೆ.

author-image
Ganesh Kerekuli
Suryakumar Yadav
Advertisment
  • ಗುವಾಹಟಿಯಲ್ಲಿ ಬೌಂಡ್ರಿ, ಸಿಕ್ಸರ್​ಗಳ ಸುರಿಮಳೆ
  • ಅಭಿಷೇಕ್ ಶರ್ಮಾ ಆರ್ಭಟಕ್ಕೆ ಬೆಚ್ಚಿಬಿದ್ದ ಕಿವೀಸ್
  • ಸೂರ್ಯ ಸುನಾಮಿ ಬ್ಯಾಟಿಂಗ್​ಗೆ ಕಿವೀಸ್ ಉಡೀಸ್

ಗುವಾಹಟಿ ಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡಕ್ಕೆ, ಮೊದಲ ಓವರ್​ನಲ್ಲೇ ಆಘಾತ ಎದುರಾಯ್ತು. ಎರಡನೇ ಓವರ್​ನ ನಾಲ್ಕನೇ ಎಸೆತದಲ್ಲಿ ರಚ್ಚಿನ್ ರವೀಂದ್ರಗೆ, ಹಾರ್ದಿಕ್ ಪಾಂಡ್ಯ ಶಾಕ್ ನೀಡಿದ್ರು. ಡೇಂಜರೆಸ್ ಟಿಮ್ ಸೈಫರ್ಟ್​​​​ ಸಹ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಜಸ್ಪ್ರೀತ್ ಬೂಮ್ರಾರ ಮೊದಲ ಎಸೆತದಲ್ಲೇ ಸೈಫರ್ಟ್​​, ಕ್ಲೀನ್ ಬೌಲ್ಡ್ ಆದ್ರು.

4ನೇ ವಿಕೆಟ್​​ಗೆ ಗ್ಲೇನ್ ಫಿಲಿಪ್ಸ್​ ಮತ್ತು ಮಾರ್ಕ್ ಚಾಪ್​ಮೆನ್​​​​, ಇನ್ನಿಂಗ್ಸ್ ಬಿಲ್ಡ್ ಮಾಡಿದ್ರು. 41 ಎಸೆತಗಳಲ್ಲಿ 52 ರನ್ ಕಲೆಹಾಕಿದ ಈ ಜೋಡಿ ತಂಡಕ್ಕೆ ಆಸರೆಯಾಯ್ತು. 3ನೇ ಓವರ್ ಬೌಲ್ ಮಾಡಲು ಬಂದ ಲೆಗ್​ಸ್ಪಿನ್ನರ್ ರವಿ ಬಿಷ್ನೊಯ್, ಚಾಪ್​ಮೆನ್​​ ವಿಕೆಟ್ ಪಡೆದ್ರು. ಚಾಪ್​ಮೆನ್​ 32 ರನ್​ಗಳಿಗೆ ಇನ್ನಿಂಗ್ಸ್​ ಮುಗಿಸಿದ್ರು. ಇನ್​ಫಾರ್ಮ್ ಬ್ಯಾಟರ್ ಡ್ಯಾರೆಲ್ ಮಿಚ್ಚೆಲ್, ಒಂದು ಬೌಂಡರಿ ಮತ್ತು 1 ಸಿಕ್ಸರ್​ಗೆ ಮಾತ್ರ ಸೀಮಿತರಾದ್ರು. 14 ರನ್​ಗಳಿಸಿದ ಮಿಚ್ಚೆಲ್, ಡೀಪ್ ಪಾಯಿಂಟ್​​ನಲ್ಲಿ ಕ್ಯಾಚ್ ನೀಡಿದ್ರು.

ಇದನ್ನೂ ಓದಿ: ಸಂಕಷ್ಟಕ್ಕೆ ಸಿಲುಕಿದ ಜಡೇಜಾ ಕರಿಯರ್.. ಮತ್ತೊಬ್ಬ ಸ್ಟಾರ್​ಗೆ ಒಲಿದ ಅದೃಷ್ಟ..!

ಸಾಲಿಡ್ ಬ್ಯಾಟಿಂಗ್ ನಡೆಸ್ತಿದ್ದ ಗ್ಲೇನ್ ಫಿಲಿಪ್ಸ್, ಅರ್ಧಶತಕದ ಅಂಚಿನಲ್ಲಿ ಎಡವಿದ್ರು. 40 ಬಾಲ್ ಫೇಸ್ ಮಾಡಿದ್ದ ಫಿಲಿಪ್ಸ್, 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 48 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡ್ರು.​ ಲೋವರ್ ಆರ್ಡರ್ ಬ್ಯಾಟರ್​ಗಳಾದ ಕೈಲ್ ಜೇಮಿಸನ್ ಮತ್ತು ಮ್ಯಾಟ್ ಹೆನ್ರಿ, ಬಂದ ಹಾದಿಯಲ್ಲೇ ಹಿಂತಿರುಗಿದ್ರು.

ಕೊನೆಗೆ ಕಿವೀಸ್ ನಾಯಕ ಸ್ಯಾಂಟ್ನರ್​​​ 17 ಎಸೆತಗಳಲ್ಲಿ 27 ರನ್​​ ಸಿಡಿಸಿ ಔಟಾದ್ರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್​ಗಳಿಸಿತು. ಟೀಮ್ ಇಂಡಿಯಾ ಪರ ಬೂಮ್ರಾ 3 ವಿಕೆಟ್ ಪಡೆದ್ರೆ, ಬಿಷ್ನೊಯ್ ಮತ್ತು ಹಾರ್ದಿಕ್ ತಲಾ 2 ವಿಕೆಟ್ ಪಡೆದು ಮಿಂಚಿದ್ರು. 

154 ರನ್​ಗಳ ಚೇಸ್ ಮಾಡಲು ಹೊರಟ ಟೀಮ್ ಇಂಡಿಯಾಗೆ ಮೊದಲ ಎಸೆತದಲ್ಲೇ ಬಿಗ್ ಶಾಕ್ ಎದುರಾಯ್ತು. ಆರಂಭಿಕ ಸಂಜು ಸ್ಯಾಮ್ಸನ್, ಖಾತೆ ತೆರೆಯದೆ ಕ್ಲೀನ್ ಬೌಲ್ಡ್ ಆದ್ರು. ಸಂಜು ಔಟಾಗ್ತಿದ್ದಂತೆ ಕ್ರಿಸ್​​ಗಿಳಿದ ಇಶಾನ್ ಕಿಶನ್, ಸ್ಪೋಟಗೊಂಡರು. 3 ಬೌಂಡರಿ, 2 ಸಿಕ್ಸರ್ ಸಿಡಿಸಿದ ಕಿಶನ್, ಕಿವೀಸ್ ದಾಳಿಯನ್ನ ಉಡೀಸ್ ಮಾಡಿದ್ರು. 

ಇದನ್ನೂ ಓದಿ: ಒತ್ತಾಯ ಮಾಡಿ ಕೊಹ್ಲಿಯಿಂದ ರಾಜೀನಾಮೆ ಪಡೆದ್ರು -ಮಾಜಿ ಕ್ರಿಕೆಟಿಗ ಆಕ್ರೋಶ..!

20 ಎಸೆತಗಳಲ್ಲಿ 53 ರನ್​ ಕಲೆಹಾಕಿದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್, 2ನೇ ವಿಕೆಟ್​​ಗೆ ಅರ್ಧಶತಕದ ಜೊತೆಯಾಟವಾಡಿದ್ರು. 13 ಎಸೆತಗಳಲ್ಲಿ 28 ರನ್ ಚಚ್ಚಿದ ಕಿಶನ್, ಲೆಗ್​ಸ್ಪಿನ್ನರ್ ಇಶ್ ಸೋಧಿ ಬೌಲಿಂಗ್​ನಲ್ಲಿ ಚಾಪ್​ಮೆನ್​​ಗೆ ಕ್ಯಾಚ್ ನೀಡಿದ್ರು. ಮೂರನೇ ವಿಕೆಟ್​​ಗೆ ಅಭಿಷೇಕ್ ಶರ್ಮಾ ಮತ್ತು ಕ್ಯಾಪ್ಟನ್ ಸಂಜು ಸ್ಯಾಮ್ಸನ್, ನ್ಯೂಜಿಲೆಂಡ್ ಬೌಲರ್​ಗಳನ್ನ ಮನಬಂದಂತೆ ದಂಡಿಸಿದ್ರು.
ಈ ನಡುವೆ ಅಭಿಷೇಕ್ ಶರ್ಮಾ, ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿಕೊಂಡ್ರು. ಮತ್ತೊಂದೆಡೆ ಅಭಿಷೇಕ್​​ಗೆ ಸಾಲಿಡ್ ಸಾಥ್ ನೀಡಿದ ಸೂರ್ಯಕುಮಾರ್ ಯಾದವ್ ಸಹ 25 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ್ರು. 3ನೇ ವಿಕೆಟ್​​ಗೆ ಅಭಿಷೇಕ್ ಮತ್ತು ಸೂರ್ಯ, ಕೇವಲ 40 ಎಸೆತಗಳಲ್ಲಿ ಅಜೇಯ 102 ರನ್​​ ಕಲೆಹಾಕಿದ್ರು.

ಅಂತಿಮವಾಗಿ ಟೀಮ್ ಇಂಡಿಯಾ ಕೇವಲ 10 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 155 ರನ್​ಗಳಿ, ಗೆಲುವಿನ ನಗೆ ಬೀರಿತು. ಅಭಿಷೇಕ್ ಶರ್ಮಾ ಅಜೇಯ 68 ರನ್​ಗಳಿಸಿದ್ರೆ, ಸೂರ್ಯಕುಮಾರ್ 57 ರನ್​ಗಳಿಸಿ ನಾಟೌಟ್ ಆದ್ರು. ಸತತ 3 ಪಂದ್ಯಗಳನ್ನ ಗೆದ್ದಿರುವ ಟೀಮ್ ಇಂಡಿಯಾ, ಇನ್ನು 2 ಪಂದ್ಯಗಳು ಬಾಕಿ ಇರುವಂತೆ ಸರಣಿ ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: ಚಹಲ್​ಗೆ ಮತ್ತೆ ‘ಬ್ರೇಕ್​ ಅಪ್​’ ನೋವು.. ಸಿಕ್ಕ ಮತ್ತೊಬ್ಬ ಗೆಳತಿಗೂ ಟಾಟಾ ಹೇಳಿದ ಸ್ಪಿನ್ನರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Team India T20I India vs NewZealand IND vs NZ
Advertisment