/newsfirstlive-kannada/media/media_files/2026/01/04/crude-oil-2026-01-04-12-43-27.jpg)
Venezuela vs America: ವೆನಿಜುವೆಲಾ ಮತ್ತು ಅಮೆರಿಕ ನಡುವಿ ಬಿಕ್ಕಟ್ಟು ತೀವ್ರಗೊಂಡಿದೆ. ಅಮೆರಿಕವು ವೆನಿಜುವೆಲಾ ಮೇಲೆ ದಾಳಿ ನಡೆಸ್ತಿರೋದು ‘ಭೌಗೋಳಿಕ ರಾಜಕೀಯ ಉದ್ವಿಗ್ನತೆ’ಗೆ ಕಾರಣವಾಗಿದೆ. ಇದು ಭವಿಷ್ಯದಲ್ಲಿ ಕಚ್ಚಾ ತೈಲ ಬೆಲೆಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.
ವೆನಿಜುವೆಲಾದಲ್ಲಿ ಅಮೆರಿಕ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದ ನಂತರ ‘ಜಾಗತಿಕ ತೈಲ ಪೂರೈಕೆ’ಯಲ್ಲಿ ಸಂಭವನೀಯ ಅಡಚಣೆಗಳ ಹೆಚ್ಚಾಗುವ ಆತಂಕ ಎದುರಾಗಿದೆ.
/filters:format(webp)/newsfirstlive-kannada/media/media_files/2026/01/04/venezuelan-president-nicolas-maduro-2026-01-04-08-01-50.jpg)
ವೆನಿಜುವೆಲಾ ಮೇಲೆ ಅಮೆರಿಕ ಆಕ್ರಮಣ
ವೆನಿಜುವೆಲಾ ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದು. ವೆನಿಜುವೆಲಾ ವಿಶ್ವದ ಅತಿದೊಡ್ಡ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿದೆ. ಹೀಗಿದ್ದೂ, ಕಳೆದ ಕೆಲವು ವರ್ಷಗಳಿಂದ ಅಮೆರಿಕದ ನಿರ್ಬಂಧಗಳು ಅಲ್ಲಿನ ಕಚ್ಚಾ ತೈಲ ಪೂರೈಕೆಯನ್ನು ಸೀಮಿತಗೊಳಿಸಿವೆ.
ಇದೀಗ ಅಲ್ಲಿನ ಅಧ್ಯಕ್ಷರನ್ನ ಅಮೆರಿಕ ಹೆಡೆಮುರಿ ಕಟ್ಟಿದೆ. ಆ ಮೂಲಕ ವೆನಿಜುವೆಲಾದ ತೈಲ ಉದ್ಯಮದ ಮೇಲಿನ ಅಮೆರಿಕದ ಹಿಡಿತ ಬಲಗೊಳ್ಳಲಿದೆ. ಇದನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಹೇಳಿದ್ದಾರೆ. ಅಮೆರಿಕದ ತೈಲ ಕಂಪನಿಗಳು ಈಗ ಅಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವೆನಿಜುವೆಲಾದ ಕಂಪನಿಗಳನ್ನು ವಿಶ್ವದ ಅತಿದೊಡ್ಡ ಕಂಪನಿಗಳನ್ನಾಗಿ ಮಾಡುತ್ತವೆ ಎಂದು ಟ್ರಂಪ್ ಶನಿವಾರ ಘೋಷಣೆ ಮಾಡಿದ್ದಾರೆ.
ತೈಲ ಬೆಲೆಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?
ಪ್ರಸ್ತುತ ತೈಲ ಬೆಲೆಗಳು ಸ್ವಲ್ಪ ಕಡಿಮೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 60 ಡಾಲರ್ ಆಸುಪಾಸಿನಲ್ಲಿದೆ. ವಿಶ್ವದ ಅತಿದೊಡ್ಡ ತೈಲ ಸಮೃದ್ಧ ರಾಷ್ಟ್ರಗಳಲ್ಲಿ ಒಂದಾದ ವೆನಿಜುವೆಲಾದ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಅನಿಶ್ಚಿತತೆಯನ್ನುಂಟು ಮಾಡಲಿದೆ ಅನ್ನೋದು ವಿಶ್ಲೇಷಕರ ಕಳವಳ.
ಇದನ್ನೂ ಓದಿ:ಸದ್ದಾಂ ಹುಸೇನ್ ಮತ್ತು ಬಿನ್ ಲಾಡೆನ್ ನಂತರ ಈಗ ಮಡುರೊ.. ಹಲವು ದೇಶಗಳಿಗೆ ಭಯ ಹುಟ್ಟಿಸಿದ ಅಮೆರಿಕದ ಈ ಆಪರೇಷನ್..!
/filters:format(webp)/newsfirstlive-kannada/media/media_files/2026/01/04/crude-oil-2-2026-01-04-12-44-57.jpg)
ರಾಯಿಟರ್ಸ್ ವರದಿ ಪ್ರಕಾರ.. ವೆನಿಜುವೆಲಾದ ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿ ಪಿಡಿವಿಎಸ್ಎ (PDVSA), ಶನಿವಾರದ ವೇಳೆಗೆ ತನ್ನ ತೈಲ ಉತ್ಪಾದನೆ ಮತ್ತು ಸಂಸ್ಕರಣಾ ಕಾರ್ಯಾಚರಣೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಅಮೆರಿಕದ ದಾಳಿಯಿಂದ ಅಲ್ಲಿ ಯಾವುದೇ ಹಾನಿಯಾಗಿಲ್ಲ. ಹೀಗಿದ್ದೂ ಅಮೆರಿಕ ದಾಳಿಯ ಉದ್ವಿಗ್ನತೆ ಹೆಚ್ಚಾದರೆ ತೈಲ ಕಂಪನಿಗಳು ಕಾರ್ಯಾಚರಣೆಯಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಹಡಗುಗಳು ವೆನಿಜುವೆಲಾದ ಬಂದರುಗಳನ್ನು ಪ್ರವೇಶಿಸಲು ಕಷ್ಟಪಡುತ್ತವೆ. ಇದರಿಂದಾಗಿ ತೈಲ ಸರಬರಾಜಿಗೆ ಅಡ್ಡಿ ಆಗಲಿದೆ.
ಭಾರತದ ಮೇಲೆ ಪರಿಣಾಮ
ಭಾರತದ ದೃಷ್ಟಿಕೋನದಲ್ಲಿ ನೋಡೋದಾದ್ರೆ.. ವೆನಿಜುವೆಲಾದಿಂದ ಭಾರತ ಕೂಡ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೂ ಅಮೆರಿಕ ಕಡ್ಡಿ ಹಾಕುತ್ತಲೇ ಬಂದಿದೆ. 2021 ಮತ್ತು 2022 ರಲ್ಲಿ ಅಮೆರಿಕದ ನಿರ್ಬಂಧಗಳಿಂದಾಗಿ ವೆನಿಜುವೆಲಾದಿಂದ ಆಮದು ಮಾಡಿಕೊಳ್ತಿರುವ ತೈಲದ ಪ್ರಮಾಣ ಕಡಿಮೆ ಆಗಿತ್ತು. ಆದರೆ 2023-24 ರಲ್ಲಿ ತೈಲ ವ್ಯಾಪಾರವು ಮತ್ತೆ ಚೇತರಿಸಿಕೊಂಡಿದೆ.
ಇದನ್ನೂ ಓದಿ: ಅಶ್ವಿನಿ ಗೌಡ ಪರ ಎದ್ದ ಅಲೆ.. ಕ್ಲೈಮ್ಯಾಕ್ಸ್‌ನಲ್ಲಿ ಎಡವಿದ ‘ಕೀ ಮಾಸ್ಟರ್’ ಗಿಲ್ಲಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us