/newsfirstlive-kannada/media/media_files/2025/09/28/vijay-rally-5-2025-09-28-08-32-46.jpg)
ದಕ್ಷಿಣ ಭಾರತದಲ್ಲೇ ಕಂಡು ಕೇಳರಿಯದ ದುರಂತವೊಂದು ತಮಿಳುನಾಡಿನಲ್ಲಿ ನಡೆದು ಹೋಗಿದೆ. ತಮಿಳು ನಟ ದಳಪತಿ ವಿಜಯ್​ರ ರಾಜಕೀಯ ಱಲಿ. 40 ಅಮಾಯಕ ಜನರನ್ನು ಬಲಿ ಪಡೆದಿದೆ. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಬಂದಿದ್ದವರು ಮಸಣ ಸೇರಿದ್ದು, ಕರೂರಲ್ಲಿ ನೀರವ ಮೌನ ಆವರಿಸಿದೆ. ಕರೂರು ಕಾಲ್ತುಳಿತ ಪ್ರಕರಣ ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು, ರಾಜಕೀಯ ಕೆಸರೆರಚಾಟ ಮುಂದುವರಿದೆ. ಟಿವಿಕೆ ಮತ್ತು ಆಡಳಿತ ಪಕ್ಷದ ನಡುವೆ ರಾಜಕೀಯ ವಾಗ್ಯುದ್ಧ ಶುರುವಾಗಿದೆ.
ಇದನ್ನೂ ಓದಿ:‘ಮೈದಾನದಲ್ಲೂ ಆಪರೇಷನ್ ಸಿಂಧೂರ್..’ ಪಾಕ್ ಸೋಲಿಸಿದ ಬೆನ್ನಲ್ಲೇ ಮೋದಿ ಹೇಳಿದ್ದೇನು?
ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಟಿವಿಕೆ ಪಕ್ಷ ಆಗ್ರಹ
ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನಾನಾ ಅನುಮಾನಗಳಿವೆ.. ಕಾರ್ಯಕ್ರಮದಲ್ಲಿ ಪೊಲೀಸ್ ಭದ್ರತೆ ಸರಿಯಾಗಿ ಇರಲಿಲ್ಲ. ಆಂಬುಲೆನ್ಸ್​ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂಬಿತ್ಯಾದಿ ಆರೋಪಗಳು ಕೇಳಿ ಬಂದಿವೆ. ಆದ್ರೆ ಈ ಆರೋಪಗಳನ್ನು ಎಡಿಜಿಪಿ ತಳ್ಳಿಹಾಕಿದ್ದಾರೆ. ಹಲವು ಅನುಮಾನಗಳು ಇರುವ ಕಾರಣ, ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಲು ಆದೇಶಿಸುವಂತೆ ಕೋರಿ ಟಿವಿಕೆ ನಾಯಕರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ತನಿಕೆ ಕೋರಿ ಟಿವಿಕೆ ಸಲ್ಲಿಸಿರುವ ಅರ್ಜಿ ಇಂದು ಮಧ್ಯಾಹ್ನ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ವಿಜಯ್​ ಬಂಧನಕ್ಕೆ ಹಿಂದೇಟು
ಕರೂರು ಕಾಲ್ತುಳಿತ ದುರಂತ ಸಂಬಂಧ ಕೇವಲ ಟಿವಿಕೆ ಪ್ರಮುಖರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಆದ್ರೆ, ಇಷ್ಟು ದೊಡ್ಡ ದುರಂತ ಸಂಭವಿಸಿದ್ರೂ ವಿಜಯ್​ ವಿರುದ್ಧ ಕ್ರಮಕ್ಕೆ ತಮಿಳುನಾಡು ಸರ್ಕಾರ ವಿಳಂಬ ಮಾಡಿದ್ಯಾ ಅನ್ನೋ ಪ್ರಶ್ನೆ ಮೂಡಿದೆ.
ಇದನ್ನೂ ಓದಿ:ಟ್ರೋಫಿ ಗೆದ್ದರೂ ಪ್ರಶಸ್ತಿ ಸ್ವೀಕರಿಸದ ಭಾರತ.. ಪಾಕ್​​ಗೆ ಸೋಲಿಗಿಂತ ದೊಡ್ಡ ಅವಮಾನ
ತಮಿಳುನಾಡಲ್ಲಿ ದೊಡ್ಡ ಮಟ್ಟದಲ್ಲಿ ದಳಪತಿ ವಿಜಯ್ ಅಲೆ ಇದೆ. ವಿಜಯ್ ರಾಜಕೀಯ ಪಕ್ಷದ ಱಲಿಗೆ ಜನಸಾಗರ ಸೇರುತ್ತಿದೆ. ಹೀಗಾಗಿ ಕಾಲ್ತುಳಿತ ಕೇಸ್‌ನಲ್ಲಿ ವಿಜಯ್ ಬಂಧಿಸಿದ್ರೆ ಸಿಂಪಥಿ ಸೃಷ್ಟಿ ಆಗುವ ಸಾಧ್ಯತೆ. ಇದು ನಟ ವಿಜಯ್ ಮೇಲೆ ಅನುಕಂಪಕ್ಕೂ ಕಾರಣವಾಗಬಹುದು. ಡಿಎಂಕೆ ಪಕ್ಷದ ವಿರುದ್ಧದ ಅಭಿಪ್ರಾಯಕ್ಕೆ ಕಾರಣವಾಗಬಹುದು. ಆದ್ದರಿಂದ ನ್ಯಾಯಾಂಗ ತನಿಖೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಡಿಎಂಕೆ ಸರ್ಕಾರ ಚಿಂತನೆ ನಡೆಸಿದೆ.
ವಿಜಯ್​​ ಮನೆಗೆ ಬಿಗ ಭದ್ರತೆ
ಇನ್ನು ಕಾಲ್ತುಳಿತ ಬೆನ್ನಲ್ಲೇ ಟಿವಿಕೆ ಸಂಸ್ಥಾಪಕ ನಟ ವಿಜಯ್​​ಗೆ ಬಾಂಬ್​ ಬೆದರಿಕೆ ಹಾಕಲಾಗಿದೆ. ಇದರ ಬೆನ್ನಲ್ಲೇ ಅಲರ್ಟ್​ ಆದ ಪೊಲೀಸರು ಚೆನ್ನೈನಲ್ಲಿರುವ ನಟ ವಿಜಯ್​ ಮನೆಗೆ ಭದ್ರತೆ ಹೆಚ್ಚಿಸಿದ್ದಾರೆ. ಬಾಂಬ್​ ನಿಷ್ಕ್ರಿಯ ದಳ, ಮತ್ತು ಶ್ವಾನ ದಳದವರು ನಟ ವಿಜಯ್​ ಮನೆಗೆ ದೌಡಾಯಿಸಿ, ಮೂಲೆ ಮೂಲೆಯನ್ನು ಶೋಧ ನಡೆಸಿದ್ದಾರೆ.
ಇದನ್ನೂ ಓದಿ:BBK12; ಒಟ್ಟು ಎಷ್ಟು ಕಂಟೆಸ್ಟೆಂಟ್ಸ್​ ದೊಡ್ಮನೆಗೆ ಎಂಟ್ರಿ ಆಗಿದ್ದಾರೆ.. ಅವರು ಯಾರೆಂದು ಗೊತ್ತಾ?
ತಮಿಳುನಾಡು ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಂತೆ ಟಿವಿಕೆ ಸಂಸ್ಥಾಪಕ ವಿಜಯ್ ಗೆ ಸಂಕಷ್ಟ ಎದುರಾಗಿದೆ. ಪ್ರಕರಣದ ಸಂಪೂರ್ಣವಾಗಿ ತನಿಖೆ ನಡೆಯುವವರೆಗೂ ವಿಜಯ್ ಅವರ TVK ಪಕ್ಷದ ಸಾರ್ವಜನಿಕ ಕಾರ್ಯಕ್ರಮಗಳಿಗೆ ತಡೆ ನೀಡುವಂತೆ ಸಂತ್ರಸ್ತರೊಬ್ಬರೊಬ್ಬರು ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಒಟ್ಟಾರೆ ತಮಿಳುನಾಡಿನ ರಾಜಕೀಯ ಱಲಿಗೆ ಘನಘೋರ ದುರಂತವೇ ಸಂಭವಿಸಿದೆ. ರಾಜಕೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡ್ತಿದ್ದಾರೆ.. ಇತ್ತ ಯಾರದ್ದೇ ಪ್ರತಿಷ್ಟೆ, ಅಧಿಕಾರಕ್ಕೆ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಲ್ಲಿ ಆಕ್ರಂದ ಹೇಳತೀರದ್ದಾಗಿದೆ.
ಇದನ್ನೂ ಓದಿ:ಟ್ರೋಫಿ ಗೆದ್ದರೂ ಪ್ರಶಸ್ತಿ ಸ್ವೀಕರಿಸದ ಭಾರತ.. ಪಾಕ್​​ಗೆ ಸೋಲಿಗಿಂತ ದೊಡ್ಡ ಅವಮಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ