/newsfirstlive-kannada/media/post_attachments/wp-content/uploads/2023/07/Credit-card.jpg)
ಮಾಲ್‌ಗಳು ಅಥವಾ ಶಾಪಿಂಗ್ ಸೆಂಟರ್‌ಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳಿಗಾಗಿ ಏಜೆಂಟರ್​ಗಳು ನಿಮ್ಮ ಬಳಿಗೆ ಬರೋದನ್ನು ನೋಡ್ತೀರಿ. ಇದಲ್ಲದೆ ಕ್ರೆಡಿಟ್ ಕಾರ್ಡ್‌ಗಳ ಕುರಿತು ಆಗಾಗ ಕರೆಗಳು ಬರುತ್ತವೆ. ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಕೊಳ್ಳುವಂತೆ ಯಾಕೆ ಏಕೆ ಸಂಪರ್ಕಿಸುತ್ತವೆ? ಯಾಕೆ ಒತ್ತಾಯ ಮಾಡ್ತವೆ? ಬ್ಯಾಂಕ್​ಗಳಿಗೆ​ ಏನು ಪ್ರಯೋಜನ? ಇಲ್ಲಿದೆ ಮಾಹಿತಿ.
ವೇಗವಾಗಿ ಬೆಳೆಯುತ್ತಿದೆ..
ಭಾರತದಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಮೇಲೆ ವಿವಿಧ ಕೊಡುಗೆ ನೀಡುತ್ತವೆ. ಮಾರುಕಟ್ಟೆಗಳಲ್ಲಿ ಕ್ರೆಡಿಟ್ ಕಾರ್ಡ್​ಗಳಿಗೆ ವಿಶೇಷ ಅವಕಾಶ ಇದೆ. ಕ್ರೆಡಿಟ್‌ನಲ್ಲಿ ಏನನ್ನಾದರೂ ಖರೀದಿಸಲು ಅವಕಾಶ ಇದೆ. 45 ದಿನಗಳಲ್ಲಿ ಮರುಪಾವತಿ ಮಾಡಿದರೆ ಸಾಕು. ಸಕಾಲಿಕ ಪಾವತಿಗಳಿಗೆ ಕ್ಯಾಶ್‌ಬ್ಯಾಕ್ ಮತ್ತು ಬಹುಮಾನಗಳು ಕೂಡ ಲಭ್ಯವಿದೆ. ಇದರಿಂದ ಬಳಕೆದಾರರಿಗೆ ಮಾತ್ರವಲ್ಲದೇ ಬ್ಯಾಂಕಿಗೂ ಪ್ರಯೋಜನವಿದೆ.
ಇದನ್ನೂ ಓದಿ: ನಾವೆಲ್ಲರೂ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಸುಮ್ನಿದ್ದೆ, ಬಾಯಿ ಇಲ್ಲ ಎಂದಲ್ಲ -ಕಿಚ್ಚ ಸುದೀಪ್ ವಾರ್ನಿಂಗ್
/filters:format(webp)/newsfirstlive-kannada/media/media_files/2025/09/19/credit-card-2025-09-19-08-59-48.jpg)
ಬ್ಯಾಂಕ್ ಹೇಗೆ ಗಳಿಸುತ್ತದೆ?
ಆರ್‌ಬಿಐ ದತ್ತಾಂಶದ ಪ್ರಕಾರ.. 2025 ರ ಆರಂಭದ ವೇಳೆಗೆ ಭಾರತದಲ್ಲಿ ಸಕ್ರಿಯ ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆ 110 ಮಿಲಿಯನ್ ಮೀರಿದೆ. ಕ್ರೆಡಿಟ್ ಕಾರ್ಡ್‌ಗಳು ಬ್ಯಾಂಕುಗಳಿಗೆ ಒಂದು ವ್ಯವಹಾರ ಮಾದರಿಯಾಗಿದೆ. ಅವು ಬಡ್ಡಿದರಗಳು ಮತ್ತು ಇತರ ಶುಲ್ಕಗಳಿಂದ ಲಾಭ ಗಳಿಸುತ್ತವೆ. ಸಮಯಕ್ಕೆ ಸರಿಯಾಗಿ ಬಡ್ಡಿ ಪಾವತಿಸದಿದ್ದರೆ ಬಾಕಿ ಪಾವತಿಗಳ ಮೇಲೆ 15-40 ಪ್ರತಿಶತದಷ್ಟು ಬಡ್ಡಿದರ ವಿಧಿಸುತ್ತವೆ.
ಹೆಚ್ಚುವರಿಯಾಗಿ, ಕ್ರೆಡಿಟ್ ಕಾರ್ಡ್ ವಾರ್ಷಿಕ ನವೀಕರಣ ಶುಲ್ಕಗಳು, ಲೇಟ್​​ ಪೇಮೆಂಟ್ ಫೀಸ್, ಇಂಟರ್ಚೇಂಜ್ ಫೀಸ್, ಅಡ್ವಾನ್ಸ್ ಕ್ಯಾಶ್ ಫೀಸ್, ಬ್ಯಾಲೆನ್ಸ್ ಟ್ರಾನ್ಸ್​​ಫರ್ ಫೀಸ್, ಮತ್ತು ಇಎಂಐ ಪರಿವರ್ತನೆ ಶುಲ್ಕಗಳಿಂದ ಬ್ಯಾಂಕುಗಳಿಗೆ ಗಮನಾರ್ಹ ಆದಾಯಕ್ಕೆ ಬರುತ್ತದೆ. ಅದಕ್ಕಾಗಿಯೇ ಬ್ಯಾಂಕುಗಳು ತಮ್ಮ ಗ್ರಾಹಕರ ಮೇಲೆ ಕ್ರೆಡಿಟ್ ಕಾರ್ಡ್ ಪಡೆಯುವಂತೆ ಒತ್ತಾಯ ಮಾಡುತ್ತವೆ.
ಇದನ್ನೂ ಓದಿ: ಮಗಳ ಹುಟ್ಟುಹಬ್ಬಕ್ಕೆ ಕೇಕ್ ಕೊಂಡೊಯ್ತಿದ್ದ ಅಪ್ಪ ಹಠಾತ್ ನಿಧನ.. ಕಣ್ಣೀರಿಟ್ಟ ಶಾಸಕ ಟೆಂಗಿನಕಾಯಿ
/filters:format(webp)/newsfirstlive-kannada/media/post_attachments/wp-content/uploads/2024/04/CREDIT-CARD.jpg)
ಇಂಟರ್ಚೇಂಜ್ ಫೀಸ್ ಎಂದರೇನು?
ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಏನನ್ನಾದರೂ ಖರೀದಿಸಿದಾಗ, ಬ್ಯಾಂಕ್ ವ್ಯಾಪಾರಿ ಅಥವಾ ಅಂಗಡಿಯವರಿಗೆ ವಹಿವಾಟಿನ ಮೇಲೆ 1-3 ಪ್ರತಿಶತ ಕಮಿಷನ್ ವಿಧಿಸುತ್ತದೆ. ಇದನ್ನು ಇಂಟರ್ಚೇಂಜ್ ಶುಲ್ಕ ಎಂದು ಕರೆಯಲಾಗುತ್ತದೆ. ಈ ರೀತಿಯಾಗಿ ಬ್ಯಾಂಕ್ ಹಣ ಪಡೆಯುತ್ತದೆ.
ನಗದು ಮುಂಗಡ ಶುಲ್ಕ ಎಂದರೇನು?
ನೀವು ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂ ಅಥವಾ ಬ್ಯಾಂಕಿನಿಂದ ಹಣ ಹಿಂತೆಗೆದುಕೊಂಡಾಗ ವಿತ್‌ಡ್ರಾ ಮೊತ್ತದ ಮೇಲೆ 2.5-5 ಪ್ರತಿಶತದಷ್ಟು ಶುಲ್ಕ ವಿಧಿಸುತ್ತದೆ. ಅಲ್ಲದೇ ಬಡ್ಡಿಯನ್ನ ಆ ಕ್ಷಣದಿಂದಲೇ ವಿಧಿಸುತ್ತದೆ. ಇದರರ್ಥ ಬಡ್ಡಿ ಅದೇ ದಿನ ವಿಧಿಸಲು ಶುರು ಮಾಡುತ್ತದೆ. ನೀವು ₹10,000 ನಗದು ಮುಂಗಡವನ್ನು ಹಿಂತೆಗೆದುಕೊಂಡಾಗ ಮತ್ತು ಶೇಕಡಾ 3 ರಷ್ಟು ಶುಲ್ಕವನ್ನು ವಿಧಿಸಿದರೆ, ಬ್ಯಾಂಕ್ ತಕ್ಷಣವೇ 300 ರೂಪಾಯಿ ವಹಿವಾಟು ಶುಲ್ಕವನ್ನು ಮತ್ತು ಬಡ್ಡಿಯನ್ನು ಗಳಿಸುತ್ತದೆ.
ಕ್ರೆಡಿಟ್ ಕಾರ್ಡ್ ಖರ್ಚು ಹೆಚ್ಚುತ್ತಿದೆ..
ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಖರ್ಚು ಜನವರಿ 2025 ರಲ್ಲಿ ಶೇ 10.8 ರಷ್ಟು ಹೆಚ್ಚಾಗಿ ₹1,84,000 ಕೋಟಿ ತಲುಪಿದೆ. ಕ್ರೆಡಿಟ್ ಕಾರ್ಡ್‌ಗಳು ಬಳಕೆದಾರರಿಗೆ ಬಹುಮಾನ ಯೋಜನೆಗಳು, ಕ್ಯಾಶ್‌ಬ್ಯಾಕ್, ಪ್ರಯಾಣ ರಿಯಾಯಿತಿ ಮತ್ತು ಕ್ರೆಡಿಟ್ ಸ್ಕೋರ್ ನಿರ್ಮಿಸುವ ಅವಕಾಶದಂತಹ ಅನೇಕ ಪ್ರಯೋಜನ ನೀಡುತ್ತವೆ.
ನಿಮ್ಮ ಬಿಲ್‌ಗಳನ್ನು ನಿಯಮಿತವಾಗಿ ಪಾವತಿಸೋದ್ರಿಂದ ನಿಮ್ಮ ಕ್ರೆಡಿಟ್ ಅರ್ಹತೆ ಸುಧಾರಿಸುತ್ತದೆ. ಕ್ಯಾಶ್‌ಬ್ಯಾಕ್ ಮತ್ತು ಲಾಯಲ್ಟಿ ಪಾಯಿಂಟ್‌ಗಳಂತಹ ರಿವಾರ್ಡ್ ಯೋಜನೆಗಳು ಗ್ರಾಹಕರನ್ನು ಹೆಚ್ಚಾಗಿ ಖರ್ಚು ಮಾಡಲು ಪ್ರೋತ್ಸಾಹಿಸುತ್ತವೆ. ಕ್ರೆಡಿಟ್ ಕಾರ್ಡ್ ದುರುಪಯೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ RBI ಮತ್ತು ಬ್ಯಾಂಕುಗಳು ತಮ್ಮ ನಿಯಮಗಳನ್ನು ಬಿಗಿಗೊಳಿಸುತ್ತಿವೆ.
ಇದನ್ನೂ ಓದಿ: ವಿಶ್ವಕಪ್​​ಗೆ ತಂಡ ಪ್ರಕಟ.. ಯಾರಿಗೆ ಏನು ಜವಾಬ್ದಾರಿ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us