/newsfirstlive-kannada/media/post_attachments/wp-content/uploads/2023/06/Yadagiri.jpg)
ಯಾದಗಿರಿ: ಬೈಕ್ ಗೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ.
ಬೈಕ್ ಸವಾರ ಮುದುಕಪ್ಪ ಅಡ್ಡಲಾಗಿ ರಸ್ತೆ ದಾಟುತ್ತಿರುವಾಗ ವೇಗವಾಗಿ ಬಂದ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಟಿಪ್ಪರ್ ಗುದ್ದಿದ ರಭಸಕ್ಕೆ ಸವಾರ ಬೈಕ್ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸಾವನ್ನಪ್ಪಿದ ಮುದುಕಪ್ಪ ಹುಣಸಗಿ ಪಟ್ಟಣದ ನಿವಾಸಿಯಾಗಿದ್ದು, ಕೆಲಸ ನಿಮಿತ್ಯ ರಸ್ತೆ ಕ್ರಾಸ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಟಿಪ್ಪರ್ ಚಾಲಕ ಮುದುಕಪ್ಪನಿಗೆ ಗುದ್ದಿ ಪರಾರಿಯಾಗಿದ್ದಾನೆ. ಇನ್ನು ಟಿಪ್ಪರ್ ಡಿಕ್ಕಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಣಸಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ ಗೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ.#Yagagiri#Accidentpic.twitter.com/BsuPKEui0b
— NewsFirst Kannada (@NewsFirstKan) June 30, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ