Advertisment

ಶಿವಮೊಗ್ಗದ ಜನರಿಗೆ ಕೇಂದ್ರದಿಂದ ಗುಡ್​ನ್ಯೂಸ್​​; ಮತ್ತೆ ವಿಐಎಸ್ಎಲ್ ಆರಂಭ

author-image
Ganesh Nachikethu
Updated On
ಶಿವಮೊಗ್ಗದ ಜನರಿಗೆ ಕೇಂದ್ರದಿಂದ ಗುಡ್​ನ್ಯೂಸ್​​; ಮತ್ತೆ ವಿಐಎಸ್ಎಲ್ ಆರಂಭ
Advertisment
  • ಶಿವಮೊಗ್ಗದ ಜನರಿಗೆ ಗುಡ್​ನ್ಯೂಸ್​
  • ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ..!
  • ವಿಐಎಸ್ಎಲ್ ಕಾರ್ಖಾನೆ ಆರಂಭ

ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಪುತ್ರ, ಶಿವಮೊಗ್ಗದ ಸಂಸದ ಬಿ.ವೈ ರಾಘವೇಂದ್ರ ಭದ್ರಾವತಿ ಜನರಿಗೆ ಸಿಹಿಸುದ್ದಿ ನೀಡಿದ್ದಾರೆ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಆರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೋದಿ ಸರ್ಕಾರ ಒಪ್ಪಿಗೆ ನೀಡಿದ್ದಾರೆ ಎಂದಿದ್ದಾರೆ.

Advertisment

ಈ ಸಂಬಂಧ ಟ್ವೀಟ್​ ಮಾಡಿರುವ ಬಿ.ವೈ ರಾಘವೇಂದ್ರ, ವಿಐಎಸ್‌ಎಲ್‌ ಕಾರ್ಖಾನೆ ಮತ್ತೆ ಶುರು ಮಾಡಲು ಭಾರತೀಯ ಉಕ್ಕು ಪ್ರಾಧಿಕಾರ (SAIL) ಅನುಮತಿ ನೀಡಿದೆ. ಆಗಸ್ಟ್‌ 10ನೇ ತಾರೀಕಿನಿಂದ ಬಾರ್​​ ಮಿಲ್​​ ಶುರುವಾಗಲಿದೆ. ಆದಷ್ಟು ಬೇಗ ವಿಐಎಸ್‌ಎಲ್‌ ಕಾರ್ಖಾನೆ ಕೆಲಸ ಆಗಲಿದೆ ಎಂದರು.

ಒಳ್ಳೆಯ ಉದ್ದೇಶಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಉಕ್ಕು ಸಚಿವ ಜ್ಯೋತಿರಾಧಿತ್ಯ ಸಿಂಧಿಯಾಗೆ ಧನ್ಯವಾದಗಳು. ಈ ಗೆಲುವು ಇಷ್ಟು ವರ್ಷಗಳಿಂದ ಹೋರಾಟ ಮಾಡಿದ ಶಿವಮೊಗ್ಗ ಮತ್ತು ಭದ್ರಾವತಿ ಜನರಿಗೆ ಸಲ್ಲಬೇಕು. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದರು.

ವಿಐಎಸ್‌ಎಲ್‌ ಶುರುವಾಗಿದ್ದು ಯಾವಾಗ?

ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌, ದೇಶ ಕಂಡ ಶ್ರೇಷ್ಠ ಎಂಜಿನಿಯರ್ ಭಾರತ ರತ್ನ ಸರ್.ಎಂ ​ವಿಶ್ವೇಶ್ವರಯ್ಯ 1923ರಲ್ಲಿ ಭದ್ರಾವತಿಯಲ್ಲಿ ವಿಐಎಸ್‌ಎಲ್‌ ಕಾರ್ಖಾನೆ ಆರಂಭಿಸಿದ್ದರು. ಅಂದಿನಿಂದಲೇ ಭದ್ರಾವತಿಯೂ ಉಕ್ಕು, ಸಿಮೆಂಟ್‌, ಕಾಗದ ಉತ್ಪಾದನೆಗೆ ಖ್ಯಾತಿಯಾಗಿತ್ತು. ಬರೋಬ್ಬರಿ 34 ವರ್ಷಗಳ ಹಿಂದೆ ಅಂದರೆ 1989ರಲ್ಲಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ವಿಐಎಸ್‌ಎಲ್‌ ಕಾರ್ಖಾನೆಯನ್ನು ಒಪ್ಪಿಸಿತ್ತು. ನಷ್ಟದಲ್ಲಿದ್ದ ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚಲು ಕೇಂದ್ರ ಸರ್ಕಾರ ಹೊರಟಿತ್ತು. ಕೊನೆಗೂ ಭದ್ರಾವತಿ ಜನರ ನಿರಂತರ ಹೋರಾಟದ ಫಲವಾಗಿ ಇಂದು ಮತ್ತೆ ಆರಂಭಿಸಲು ಕೇಂದ್ರ ಒಪ್ಪಿಗೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment