Accident: ಭೀಕರ ಅಪಘಾತ.. ಜೀಪ್ ಪಲ್ಟಿಯಾಗಿ 9 ಮಂದಿ ದಾರುಣ ಸಾವು

author-image
Ganesh
Updated On
Accident: ಭೀಕರ ಅಪಘಾತ.. ಜೀಪ್ ಪಲ್ಟಿಯಾಗಿ 9 ಮಂದಿ ದಾರುಣ ಸಾವು
Advertisment
  • ಮೃತರೆಲ್ಲ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು
  • ಮೂವರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು
  • ಮುಖ್ಯಮಂತ್ರಿ ಸಂತಾಪ, ಗಾಯಾಳುಗಳಿಗೆ ಚಿಕಿತ್ಸೆಗೆ ಸೂಚನೆ

ತೋಟದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾಗ ಜೀಪ್ ಪಲ್ಟಿಯಾಗಿ ಕಂದಕಕ್ಕೆ ಬಿದ್ದು 9 ಮಂದಿ ಸಾವಿಗೀಡಾಗಿರುವ ದುರಂತ ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿಯಲ್ಲಿ ನಡೆದಿದೆ.

ಜೀಪಿನಲ್ಲಿ 12 ಮಂದಿ ಇದ್ದರು. ಗಾಯಗೊಂಡ ಮೂವರನ್ನು ವಯನಾಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಚಾಲಕ ಸೇರಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ ಎಂದು ವಯನಾಡ್ ಕಲೆಕ್ಟರ್ ರೇಣು ರಾಜ್ ಖಚಿತಪಡಿಸಿದ್ದಾರೆ.

ದುರ್ಘಟನೆ ಬಗ್ಗೆ ವರದಿ ಪಡೆದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment