/newsfirstlive-kannada/media/post_attachments/wp-content/uploads/2024/09/hassanal-bolkiah-4.jpg)
ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾದ ಬ್ರೂನೈ (Brunei) ಮತ್ತು ಸಿಂಗಾಪುರಕ್ಕೆ ಮೂರು ದಿನಗಳ ಕಾಲ ಪ್ರವಾಸ ಬೆಳೆಸಿದ್ದಾರೆ. ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ (Hassanal Bolkiah) ಆಹ್ವಾನದ ಮೇರೆಗೆ ಇಂದು ಬ್ರೂನೈ ದೇಶಕ್ಕೆ ಭೇಟಿ ನೀಡಿದ್ದಾರೆ. ಮೋದಿ ಅವರ ಬ್ರೂನೈ ಅವರ ಭೇಟಿಯು ಭಾರತದ ಪ್ರಧಾನಿಯ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ.
/newsfirstlive-kannada/media/post_attachments/wp-content/uploads/2024/09/hassanal-bolkiah-6.jpg)
ಮೋದಿ ಪ್ರವಾಸದ ಬೆನ್ನಲ್ಲೇ ಬ್ರೂನೈ ದೇಶದ ಸುಲ್ತಾನ ಹಸನಲ್ ಬೊಲ್ಕಿಯಾ ಅವರ ಐಷಾರಾಮಿ ಜೀವನ ಚರಿತ್ರೆ ಬಗ್ಗೆ ಸುದ್ದಿಯಾಗುತ್ತಿದೆ. ಅಂದ್ಹಾಗೆ ಬೊಲ್ಕಿಯಾ ಜೀವನದ ರಾಜವೈಭವದ ಸಂಗತಿಗಳು ಗೊತ್ತಾದರೆ ನೀವು ಕೂಡ ಅಚ್ಚರಿಗೆ ಒಳಗಾಗುತ್ತೀರಿ. ಆತ ಯಾರು? ಆತನ ಐಷಾರಾಮಿ ಜೀವನ ಹೇಗಿದೆ ಅನ್ನೋ ವಿವರ ಇಲ್ಲಿದೆ.
ಇದನ್ನೂ ಓದಿ:ಈ ಉದ್ಯಮಿ ದಿನಕ್ಕೆ 30 ನಿಮಿಷ ಮಾತ್ರ ನಿದ್ರೆ ಮಾಡೋದು! ಇವರ ಸೂಪರ್​ ಆಕ್ಟಿವಿಟಿ ಜಗತ್ತಿಗೆ ಸವಾಲ್..!
/newsfirstlive-kannada/media/post_attachments/wp-content/uploads/2024/09/hassanal-bolkiah-7.jpg)
ಯಾರು ಈ ಸುಲ್ತಾನ್?
ಬ್ರೂನೈ ಸುಲ್ತಾನನ ಹೆಸರು ಹಸನಲ್ ಬೊಲ್ಕಿಯಾ. ವಿಶ್ವದ ಅಂತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ಅಂದ್ಹಾಗೆ ಬ್ರೂನೈ 1984ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಿತು. ಹಸನಲ್ ಬೊಲ್ಕಿಯಾ ಬ್ರೂನೈನ ಸದ್ಯದ ಸುಲ್ತಾನ. ಸುಮಾರು 59 ವರ್ಷಗಳಿಂದ ಚಕ್ರವರ್ತಿಯಾಗಿದ್ದಾರೆ. ಅದಕ್ಕೂ ಮೊದಲು ಸುಲ್ತಾನ್ ಒಮರ್ ಅಲಿ ಸೈಫುದ್ದೀನ್-3 ಅಲ್ಲಿನ ಸುಲ್ತಾನ್ ಆಗಿದ್ದರು.
ಇದನ್ನೂ ಓದಿ:ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ 7 ತಿಂಗಳ ತುಂಬು ಗರ್ಭಿಣಿ; ಯಾರಿವರು..?
/newsfirstlive-kannada/media/post_attachments/wp-content/uploads/2024/09/hassanal-bolkiah-10.jpg)
ಜೀವನ ಎಷ್ಟು ಐಷಾರಾಮಿ..?
ಹಸನಲ್ ಬೊಲ್ಕಿಯಾ ಐಷಾರಾಮಿ ಜೀವನದ ವಿಚಾರದಲ್ಲಿ ಜಗತ್ತಿನಾದ್ಯಂತ ಪ್ರಸಿದ್ಧರು. ಇವರ ಅರಮನೆಯು ಎಕರೆಗಟ್ಟಲೆ ಹರಡಿಕೊಂಡಿದೆ. ಭವ್ಯ ಅರಮನೆಯು ಚಿನ್ನದಿಂದ ಮಾಡಲ್ಪಟ್ಟು, ಚಿನ್ನದಿಂದಲೇ ಅಲಂಕರಿಸಿದೆ. ಜೊತೆಗೆ ವಿಶ್ವದ ಅತಿದೊಡ್ಡ ವಾಹನ ಸಂಗ್ರಹವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಆಸ್ತಿಯ ಬಗ್ಗೆ ವಿಭಿನ್ನ ವರದಿಗಳಿದ್ದು, ಒಟ್ಟು 30 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ. (ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 25,18,57,44,87,000)
ಇದನ್ನೂ ಓದಿ:16 ಬಾರಿ ಮೂಳೆ ಮುರಿತ, 8 ಸಲ ಸರ್ಜರಿ.. ಆದರೂ ಛಲ ಬಿಡಲಿಲ್ಲ; IAS ಅಧಿಕಾರಿಯಾದ ಯಶೋಗಾಥೆ..!
/newsfirstlive-kannada/media/post_attachments/wp-content/uploads/2024/09/hassanal-bolkiah-8.jpg)
2550 ಕೋಟಿ ರೂ ಬೆಲೆ ಬಾಳುವ ಅರಮನೆ
ಅರಬ್ ನ್ಯೂಸ್ ವರದಿ ಒಂದರ ಪ್ರಕಾರ.. 1980ರ ದಶಕದಲ್ಲಿ ಸುಲ್ತಾನ್ ವಿಶ್ವದ ಅತಿದೊಡ್ಡ ಅರಮನೆಯನ್ನು ನಿರ್ಮಿಸಿದರು. ಪ್ರಸ್ತುತ ಅದರಲ್ಲೇ ವಾಸವಿದ್ದಾರೆ. ಈ ಅರಮನೆಯು 1770 ಕೊಠಡಿಗಳನ್ನು ಸಭಾಂಗಣಗಳನ್ನು ಹೊಂದಿದೆ. ವಿಶ್ವದ ಅತಿದೊಡ್ಡ ಐಷಾರಾಮಿ ಕಾರು ಗ್ಯಾರೇಜ್ ಕೂಡ ಇದೆ. ಈ ಅರಮನೆಯು ಎಷ್ಟು ಐಷಾರಾಮಿ ಆಗಿದೆ ಎಂದರೆ ಇಲ್ಲಿನ ಸುಲ್ತಾನರು ಪ್ರಪಂಚದಲ್ಲಿಯೇ ಅತ್ಯಂತ ಐಷಾರಾಮಿಯಾಗಿ ವಾಸಿಸುತ್ತಿದ್ದಾರೆ. ಇನ್ನು ಅರಮನೆಯು 2 ಮಿಲಿಯನ್ ಚದರ್ ಅಡಿಗಳವರೆಗೆ ಹರಡಿದೆ. ಅರಮನೆಯ ಗುಮ್ಮಟವನ್ನು 22 ಕ್ಯಾರೆಟ್ ಚಿನ್ನದಿಂದ ಅಲಂಕರಿಸಲಾಗಿದೆ. ಈ ಅರಮನೆಯ ಒಟ್ಟು ಮೌಲ್ಯ 2550 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ
/newsfirstlive-kannada/media/post_attachments/wp-content/uploads/2024/09/hassanal-bolkiah-5.jpg)
ಕಾರು, ವಿಮಾನ ಎಲ್ಲವೂ ಚಿನ್ನ
ಇನ್ನು ಹಸನಲ್ ಬೊಲ್ಕಿಯಾಗೆ ಚಿನ್ನದ ಮೇಲೆ ಎಲ್ಲಿಲ್ಲದ ಪ್ರೀತಿ. ಮನೆಯಲ್ಲಿ ಚಿನ್ನದ ಬೇಸಿನ್​ಗಳಿವೆ. ಕಾರು, ವಿಮಾನಗಳ ಮೇಲೂ ಚಿನ್ನವನ್ನು ಲೇಪಿಸಲಾಗಿದೆ. ಸುಲ್ತಾನನಿಗೆ ಇರುವ ಖಾಸಗಿ ವಿಮಾನ ಸಾಮಾನ್ಯ ವಿಮಾನ ಅಲ್ಲವೇ ಅಲ್ಲ. ಅದನ್ನು ಹಾರುವ ಅರಮನೆ ಎಂದು ಕರೆಯುತ್ತಾರೆ. ಅದರ ಒಳಗಿಂದ ಒಮ್ಮೆ ನೋಡಿದರೆ ಅದು ಸಂಪೂರ್ಣ ಹಳದಿ ಬಣ್ಣದಲ್ಲಿ ಕಾಣುತ್ತದೆ. ಯಾಕೆಂದರೆ ಅಷ್ಟರ ಮಟ್ಟಿಗೆ ಅದು ಚಿನ್ನದಿಂದ ಲೇಪಿತಗೊಂಡಿದೆ. ಇವರು ತಮ್ಮ ಮಗಳಿಗೆ ಏರ್​ಬಸ್​ A-340 ಉಡುಗೊರೆಯಾಗಿ ನೀಡಿದ್ದಾರೆ ಎಂದರೆ ನೀವೇ ಊಹಿಸಿ. 7000ಕ್ಕೂ ಹೆಚ್ಚು ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/09/hassanal-bolkiah-1.jpg)
ಹೇರ್ ಕಟಿಂಗ್​ಗೆ 16 ಲಕ್ಷ ಕೊಡ್ತಾರೆ
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ.. ಅರಮನೆಯು 1700ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿದೆ. 257 ವಾಶ್​ ರೂಂಗಳನ್ನು ಹೊಂದಿದೆ. ವಾಹನಗಳಿಗಾಗಿ 110 ಗ್ಯಾರೇಜ್​ಗಳನ್ನು ನಿರ್ಮಿಸಲಾಗಿದೆ. ಅರಮನೆಯ ಕೆಲವು ಗೋಡೆಗಳ ಮೇಲೆ ಚಿನ್ನವನ್ನು ಲೇಪಿಸಲಾಗಿದೆ. ಒಮ್ಮೆ ಸುಲ್ತಾನರು ಹೇರ್​ ಕಟಿಂಗ್ ಮಾಡಿಸಿಕೊಂಡರೆ, ಕಟಿಂಗ್ ಮಾಡುವ ತಜ್ಞರು 16 ಲಕ್ಷ ರೂಪಾಯಿ ಪಡೆದು ಹೊರ ಬರುತ್ತಾರೆ.
ಇದನ್ನೂ ಓದಿ:ಊಟ ಮಾಡೋವಾಗ ಪದೇ ಪದೇ ನೀರು ಕುಡಿತಾ ಇದ್ದೀರಾ? ನಿಮಗಿದೆ ಅಪಾಯ! ಕೂಡಲೇ ಎಚ್ಚರ ವಹಿಸಿ!
/newsfirstlive-kannada/media/post_attachments/wp-content/uploads/2024/09/hassanal-bolkiah-2.jpg)
ಬ್ರೂನೈ ಬಹುಸಂಖ್ಯಾತ ಮುಸ್ಲಿಂ
ಇಲ್ಲಿ ಶೇಕಡಾ 80 ರಷ್ಟು ಮುಸ್ಲಿಮರು ವಾಸಿಸುತ್ತಿದ್ದಾರೆ. ಮುಸ್ಲಿಂ ಜನಸಂಖ್ಯೆಯಲ್ಲಿನ ಈ ಅನುಪಾತವು ಇಂಡೋನೇಷ್ಯಾಕ್ಕಿಂತ ಕಡಿಮೆ ಆಗಿದೆ. ಇದು ಬ್ರೂನೈಗಿಂತ ದೊಡ್ಡದಾಗಿದೆ. ಸ್ವಾತಂತ್ರ್ಯದ ನಂತರ ಬ್ರೂನೈನಲ್ಲಿ ವಿರೋಧ ನೀತಿಗೆ ಅವಕಾಶ ಇಲ್ಲ. ಪರಿಣಾಮಕಾರಿ ನಾಗರಿಕ ಸಮಾಜ ಇಲ್ಲ. 1962ರಲ್ಲಿ ಘೋಷಿಸಲಾದ ತುರ್ತು ಪರಿಸ್ಥಿತಿ ಇನ್ನೂ ಅಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.
/newsfirstlive-kannada/media/post_attachments/wp-content/uploads/2024/09/hassanal-bolkiah-3.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us