/newsfirstlive-kannada/media/media_files/2026/01/06/siddaramaiah-11-2026-01-06-08-51-49.jpg)
ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ. ಈವರೆಗೆ ಸುದೀರ್ಘ ಸಿಎಂ ಹೆಗ್ಗಳಿಗೆ ಭಾಜನರಾಗಿದ್ದ ದೇವರಾಜ ಅರಸು ಅವರ ರೆಕಾರ್ಡ್ ​​ಬ್ರೇಕ್​​ ಆಗಿದೆ. ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ ಈಗಾಲೇ ಎಲ್ಲರಿಗಿಂತ ಮುಂದಿದ್ದು, ಅವರ ಅಭಿಮಾನಿಗಳು ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.
ಸಿದ್ದರಾಮಯ್ಯ.. ಅಹಿಂದ ಕೋಟೆ ಕಟ್ಟಿ ಚಕ್ರಾಧಿಪತಿಯಾದ ಚಕ್ರವರ್ತಿ.. ಕಾಂಗ್ರೆಸ್​​​ನ್ನ ಪುನರುತ್ಥಾನ ಮಾಡಿದ ಚಾಣಾಕ್ಯ ನಾಯಕ.. ಕರ್ನಾಟಕದಲ್ಲಿ ಸಿದ್ದು ಇಲ್ಲದ ರಾಜಕೀಯ ಚರಿತ್ರೆ ಅಪೂರ್ಣ ಅನ್ನುವಷ್ಟರ ಮಟ್ಟಿಗೆ ಆಳವಾಗಿ ಛಾಪು ಮೂಡಿಸಿದ ಛಲದಂಕಮಲ್ಲ.. ಸಿದ್ದರಾಮಯ್ಯ ಜಪಿಸಿದ ಜನಪರ ಆಡಳಿತ, ಸಮರ್ಥ ನಾಯಕತ್ವ ಅಸಂಖ್ಯೆ ದೀನರ ಬದುಕಿಗೆ ಭರವಸೆಯ ಧಾರೆ ಎರೆದಿದೆ.. ಭಾಗ್ಯಗಳ ಒಡೆಯ ಸಿದ್ದರಾಮಯ್ಯ ಇಂದಿಗೆ ರಾಜ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: ಹಳ್ಳಿ ಅಧಿಕಾರ ಕಸಿದುಕೊಂಡ ಮೋದಿ ಸರ್ಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ
/filters:format(webp)/newsfirstlive-kannada/media/media_files/2026/01/06/siddaramaiah-10-2026-01-06-08-54-31.jpg)
ಉಳುವವನೇ ಹೊಲದೊಡೆಯ.. ಇದು ಅರಸು ಭಿತ್ತಿದ ಕ್ರಾಂತಿಕಾರಿ ಬೀಜ.. ಕರ್ನಾಟಕದಲ್ಲಿ ಬಿತ್ತನೆ ಆದ ಈ ಬೀಜ ಹೊನ್ನಕಳಸದಂತ ಫಲ ನೀಡಿದ ಕಿರಿಟಪ್ರಾಯದ ಯೋಜನೆ.. ಕಾನೂನಿನ ಮೂಲಕ ಭೂಮಿ ಮರುಹಂಚಿ, ಸಾಮಾಜಿಕ ಬದಲಾವಣೆ ಕ್ರಾಂತಿಯ ಹೆಜ್ಜೆ ಇಟ್ಟಿದ್ದು ಇತಿಹಾಸ.. ಅದೇ ದಿಕ್ಕಿನಲ್ಲಿ ರಾಜಕೀಯ ಅರಸಿದ ಸಿದ್ದರಾಮಯ್ಯ, ಭೂಮಿಗಿಂತ ಹೆಚ್ಚಾಗಿ ಸರ್ಕಾರದ ಸಂಪನ್ಮೂಲಗಳನ್ನು ನೇರವಾಗಿ ಜನರಿಗೆ ತಲುಪಿಸುವ ಗ್ಯಾರಂಟಿಗಳ ಹರಿಕಾರ.
ಸಿದ್ದು ರಾಜ್ಯಭಾರ ದಾಖಲೆ!
- ಅತೀ ಹೆಚ್ಚು ಅವಧಿ ರಾಜ್ಯದ ಮುಖ್ಯಮಂತ್ರಿ ದಾಖಲೆ ಬ್ರೇಕ್​​​
- ತಮ್ಮದೇ ತವರು ಜಿಲ್ಲೆಯ ಅರಸು ದಾಖಲೆ ಅಳಿಸ್ತಿರುವ ಸಿದ್ದು
- 20 ಮಾ.1972 - 12 ಜ. 1980ರ ವರೆಗೆ ಅರಸು ರಾಜ್ಯಭಾರ
- ಒಟ್ಟು 7 ವರ್ಷ 239 ದಿನಗಳ ಕಾಲ ನಿರಂತರ ಅವಧಿಗೆ ಸಿಎಂ
- ಎರಡು ಪ್ರತ್ಯೇಕ ಅವಧಿಯಲ್ಲಿ ಸಿದ್ದರಾಮಯ್ಯ ಮೈಲಿಗಲ್ಲು
- 13 ಮೇ 2013 - 17 ಮೇ 2018ರ ವರೆಗೆ 5 ವರ್ಷ ಆಡಳಿತ
- ಐದು ವರ್ಷ ವಿರಾಮ ಪಡೆದು ಮತ್ತೆ ಅಧಿಕಾರಕ್ಕೇರಿದ್ದ ಸಿದ್ದು
- 20 ಮೇ 2023 ರಿಂದ ಸಿದ್ದರಾಮಯ್ಯ ಅವಧಿ ಮುಂದುವರಿಕೆ
- ಎಸ್​. ನಿಜಲಿಂಗಪ್ಪ 7 ವರ್ಷ 175 ದಿನಗಳ ಕಾಲ ಅಧಿಕಾರ
- ರಾಮಕೃಷ್ಣ ಹೆಗಡೆ 4ನೇ ಸ್ಥಾನ, 5 ವರ್ಷ 216 ದಿನ ಆಡಳಿತ
- ಯಡಿಯೂರಪ್ಪ 5ನೇ ಸ್ಥಾನ, 5 ವರ್ಷ 82 ದಿನ ಅವಧಿಗೆ ಸಿಎಂ
ಇದನ್ನೂ ಓದಿ: ಫೆಬ್ರವರಿಯಲ್ಲಿ ಧವನ್‌ಗೆ ಎರಡನೇ ಮದುವೆ -ಗಬ್ಬರ್‌ನ ಸೆಕೆಂಡ್ ಇನ್ನಿಂಗ್ಸ್‌ನ ಪಾರ್ಟ್ನರ್ ಯಾರು?
/filters:format(webp)/newsfirstlive-kannada/media/media_files/2026/01/05/devaraj-urs-and-siddaramaiah-1-2026-01-05-16-33-53.jpg)
ಅಹಿಂದ ಎಂಬ ಗುಪ್ತಗಂಗೆಯ ಮತಬ್ಯಾಂಕ್​​​ನ್ನ ಸೃಷ್ಟಿಸಿದ ಅರಸು, ಆ ಪರಿಕಲ್ಪನೆಯ ಜನ್ಮದಾತ.. ಪ್ರಬಲ ಜಾತಿಗಳ ವಿರುದ್ಧ ಈಜಿದ ಜನ ರಾಜಕಾರಣಿಯಾಗಿ ಮಿಂಚಿದ್ರು.. ಈಗ ಸಿದ್ದರಾಮಯ್ಯ ಸಹ ಅದೇ ಸಿದ್ಧಾಂತವನ್ನ ಆಧುನಿಕ ರಾಜಕಾರಣದಲ್ಲಿ ಮರುಸ್ಥಾಪಿಸಿ, ಆ ವರ್ಗಗಳ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದು ಚರಿತ್ರೆ.. ಈಗ ಅರಸು ಅವಧಿಯ ದಾಖಲೆಯನ್ನ ಸಿದ್ದರಾಮಯ್ಯ ಮುರಿದಿದ್ದಾರೆ.
ಅರಸು ಮೇಲೆ ಮಾರ್ಕ್ಸ್​​​​ ಸಿದ್ಧಾಂತದ ದಟ್ಟ ಪ್ರಭಾವ ಆವರಿಸಿದ್ರೆ, ಸಿದ್ದರಾಮಯ್ಯರಿಗೆ ಆಕರ್ಷಿಸಿದ್ದು ಲೋಹಿಯಾರ ಸಮಾಜವಾದಿ ಸಿದ್ಧಾಂತ.. ಇಬ್ಬರದ್ದು ಒಂದೇ ಜಿಲ್ಲೆ.. ಆದ್ರೆ, ಸಾಮಾಜಿಕ ಅಂತಸ್ತಿನಲ್ಲಿ ಭಿನ್ನತೆ.. ಅರಸು ಮೇಲ್ವರ್ಗದ ಅತ್ಯಂತ ಚಿಕ್ಕ ಸಮುದಾಯದ ಸಿರಿತನದಿಂದ ಬಂದು ಕೆಳಜಾತಿಗಳನ್ನ ಸಂಘಟಿಸಿದ ಚತುರ.. ಆದ್ರೆ ಸಿದ್ದರಾಮಯ್ಯ, ಪ್ರಬಲ ಹಿಂದುಳಿದ ಸಮುದಾಯದಿಂದ ಬಂದ ಬಡತನದ ಬೇಗೆಯಲ್ಲಿ ಬೆಂದು ಬೆಳೆದ ನಾಯಕ.. ಇಬ್ಬರು ತಮ್ಮ ರಾಷ್ಟ್ರೀಯ ನಾಯಕರ ಜೊತೆ ಸಂಘರ್ಷ ನಡೆಸಿ ಒಬ್ರು ಅಧಿಕಾರ ಕಳೆದ್ಕೊಂಡ್ರೆ ಇನ್ನೊಬ್ರು, ಅಧಿಕಾರದ ಸಿಂಹಾಸನ ಅಲಂಕರಿಸಿದ್ರು.
ಇದನ್ನೂ ಓದಿ:ಸ್ಪಂದನಾ ಪ್ರಕಾರ ಯಾಱರು ಹೆಂಗೆ..? ಗೆಲ್ಲಿ ಬಗ್ಗೆ ಹೇಳಿದ್ದೇನು..?
/filters:format(webp)/newsfirstlive-kannada/media/media_files/2025/12/16/cm-siddaramaiah-in-session-2025-12-16-14-23-14.jpg)
ಅತೀ ಹೆಚ್ಚು ಅವಧಿ ರಾಜ್ಯದ ಮುಖ್ಯಮಂತ್ರಿಯ ದಾಖಲೆ ಇಂದು ಬ್ರೇಕ್​​ ಆಗಿದೆ. ತಮ್ಮದೇ ತವರು ಜಿಲ್ಲೆಯ ದಿ. ದೇವರಾಜ ಅರಸು ಅವರನ್ನ ದಾಖಲೆಯನ್ನ ನಲ್ವತ್ತು ವರ್ಷಗಳ ಬಳಿಕ ಆ ಹೆಗ್ಗಳಿಕೆ ತಮ್ಮದಾಗಿಸ್ತಿದ್ದಾರೆ ಸಿದ್ದರಾಮಯ್ಯ.. ಈ ಬಗ್ಗೆ ಮಾತ್ನಾಡಿದ ಸಿದ್ದರಾಮಯ್ಯ, ಜನಾಶೀರ್ವಾದ ನೆನೆದಿದ್ದಾರೆ. ಸಿದ್ದರಾಮಯ್ಯ ಆಪ್ತ ತಂಡದ ಕಂದಾಯ ಸಚಿವ ಕೃಷ್ಣಬೈರೇಗೌಡ, ಸುದೀರ್ಘ ಅವಧಿಗೆ ಸಿಎಂ ಆಗಿ ಅರಸು ಹೊಸ ದಿಕ್ಕು ಕೊಟ್ಟವ್ರು. ಅದಕ್ಕೆ ಗೌರವ ತರುವ ರೀತಿಯಲ್ಲಿ ಸಿದ್ದರಾಮಯ್ಯ ಆಡಳಿತ ನೀಡ್ತಿದ್ದಾರೆ ಅಂತ ಬಣ್ಣಿಸಿದ್ದಾರೆ.. ಆಡಳಿತದ ಅನುಭವ, ಜನ ಮನ್ನಣೆ, ಜನಮಾನಸ ನಾಯಕ ಅಂತ ಹೊಗಳಿದ್ದಾರೆ.
ದಾಖಲೆ ಹೊತ್ತಲ್ಲೇ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಆಗ್ಲಿದೆ. ವಿಜಯಪುರ, ಕಲಬುರಗಿ, ಹಾಸನ, ಮೈಸೂರು ಸೇರಿ ಹಲವೆಡೆ ಕಾರ್ಯಕ್ರಮ ನಡೆಯಲಿವೆ.. ರಕ್ತದಾನ ಶಿಬಿರ, ನಾಟಿಕೋಳಿ ಊಟ ಆಯೋಜನೆ ಆಗಿದೆ.. ಫೆಬ್ರುವರಿ 13ರಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶವನ್ನ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.. ಸರ್ಕಾರಕ್ಕೆ 1000 ದಿನ ಪೂರೈಕೆ ಪ್ರಯುಕ್ತ ಹಾವೇರಿಯಲ್ಲಿ ಹಟ್ಟಿ ತಾಂಡಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ಬೃಹತ್​​​ ಕಾರ್ಯಕ್ರಮ ನಡೆಯಲಿದೆ..
ಇದನ್ನೂ ಓದಿ:ಪ್ರೀತಿಸಿ ಮದುವೆ.. ಯುವತಿ ಕುಟುಂಬಸ್ಥರಿಂದ ನವ ಜೋಡಿ ಮೇಲೆ ಅಟ್ಯಾಕ್..!
ಒಟ್ಟಾರೆ, ಕರ್ನಾಟಕ ರಾಜಕಾರಣದಲ್ಲಿ ದಶಕಗಳಿಂದ ಇದ್ದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪ್ರಾಬಲ್ಯ ಮುರಿದು ಹಿಂದುಳಿದ ವರ್ಗಗಳ ಒಕ್ಕೂಟದ ಮೂಲಕ ಅಧಿಕಾರ ಹಿಡಿದ ಸಾಧಕರು. ಆದ್ರೆ, ಅರಸು ಸಿದ್ಧಾಂತದ ಉತ್ತರಾಧಿಕಾರಿಯಾಗಿ ಸಿದ್ದರಾಮಯ್ಯ ಕಾಣಿಸಿಕೊಂಡ್ರೂ, ಆಡಳಿತ ಕಾರ್ಯವೈಖರಿ ಮತ್ತು ಆರ್ಥಿಕ ಯೋಜನೆಗಳು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಭಿನ್ನವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us