/newsfirstlive-kannada/media/media_files/2025/09/17/cm-siddaramaiah-1-2025-09-17-18-10-03.jpg)
ಸಿಎಂ ಸಿದ್ದರಾಮಯ್ಯ ದಿಢೀರ್​​ ಡಬಲ್​​​ ದಾಳ ಉರುಳಿಸಿದ್ದಾರೆ. ಸಂಪುಟ ಪುನಾರಚನೆ ಬಗ್ಗೆ ಸಿಎಂ ಸುಳಿವು ಕೊಟ್ಟ ಬೆನ್ನಲ್ಲೆ ಸೋಮವಾರ ಸಚಿವರಿಗೆ ಊಟಕ್ಕಾಗಿ ಆಹ್ವಾನಿಸಿದ್ದಾರೆ. ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆಯಲಿರುವ ಔತಣಕೂಟ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಜಸ್ಟ್​​ 15 ದಿನಗಳಲ್ಲಿ ರಾಜ್ಯ ರಾಜಕೀಯ ಮಹತ್ತರ ಬದಲಾವಣೆಗೆ ಸಾಕ್ಷಿ ಆಗಿದೆ. ಸೆಪ್ಟೆಂಬರ್​ ಕ್ರಾಂತಿ ಸೈಡ್​​ಗೆ ಸರಿದ ಬಳಿಕ ಬಿರುಗಾಳಿಯಂತೆ ಎದ್ದ ನವೆಂಬರ್​​ ಡೇಟು, ತುಂಬಾ ಲೇಟು ಅನ್ಸುತ್ತೆ.. ಸಿಎಂ ಸಿದ್ದು ಮೂರು ಅಸ್ತ್ರ ಹೂಡಿ ಎದುರಾಳಿ ಪಡೆಯ ಜಂಘಾಬಲವನ್ನೇ ಕುಸಿಯುವಂತೆ ಮಾಡಿದ್ದಾರೆ. ಪಟ್ಟದಾಟಕ್ಕೆ ಬೇಟೆ ಆಡಿದ ಸಿದ್ದರಾಮಯ್ಯ, ದಿಢೀರ್​ ಸಂಪುಟ ಪುನಾರಚನೆಯ ದಾಳ ಉರುಳಿಸಿದ್ದಾರೆ.
ಇದನ್ನೂ ಓದಿ: ಹಾಸನಾಂಬೆ ದೇವಿಯ ಬಾಗಿಲು ಇವತ್ತು ತೆರೆಯಲಿದೆ.. ದರುಶನ ಯಾವಾಗ?
ಅಂದ್ಹಾಗೆ ಸಚಿವ ಸಂಪುಟ ಪುನಾರಚನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ಕೊಟ್ಟಿದ್ದಾರೆ. ಈ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಮೈದಳೆದು ನಿಂತಿದ್ದು, ಸೈಲೆಂಟ್​ ಆಗಿದ್ದ ಆಂಕಾಂಕ್ಷಿಗಳು ಅಲರ್ಟ್ ಆಗಿದ್ದು, ಮೈಕೊಡವಿ ಎದ್ದು ನಿಂತಿದ್ದಾರೆ. ಸಿಎಂ ಮಾತಿನಿಂದಲೇ ವರ್ಷಾಂತ್ಯಕ್ಕೆ ಸಂಪುಟ ಪುನಾರಚನೆ ಆಗುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಪವರ್​ ಶೇರಿಂಗ್​​ ಆಟಕ್ಕೆ ವಿರಾಮ ಘೋಷಿಸಿದ್ದಾರೆ..
ಹೀಗೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಆಕಾಂಕ್ಷಿಗಳಲ್ಲಿ ಮತ್ತೆ ಸಚಿವ ಸ್ಥಾನದ ಕನಸು ಚಿಗುರಿದೆ. ಸಂಪುಟ ಪುನಾರಚನೆ ವೇಳೆ ತಮಗೆ ಅವಕಾಶ ಸಿಕ್ಕೇ ಸಿಗಲಿದೆ ಎಂಬ ಬಲವಾದ ವಿಶ್ವಾಸದಲ್ಲಿ ಒತ್ತಡ ತಂತ್ರಗಳು ಜೋರಾಗಿವೆ. ಸಿಎಂ ಸುತ್ತ ಮುತ್ತ ಆಕಾಂಕ್ಷಿಗಳು ಕಾಣಿಸಿಕೊಳ್ತದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆದ ಎಐಸಿಸಿ ಅಧ್ಯಕ್ಷ ಖರ್ಗೆ ಆರೋಗ್ಯ ವಿಚಾರಿಸುವ ನೆಪದಲ್ಲಿ ಸುಳಿದಾಡಿದ್ದಾರೆ.
ಪಟ್ಟದಾಟಕ್ಕೆ ಟಕ್ಕರ್​​.. ಸಿಎಂ ಸಿದ್ದು ಪಗಡೆ ಆಟ!
ಸಚಿವರಿಗೆ ಸೋಮವಾರ ಸಿಎಂ ಸಿದ್ದರಾಮಯ್ಯ ದಿಢೀರ್​ ಡಿನ್ನರ್​​​ ಆಯೋಜಿಸಿದ್ದಾರೆ. ಸಂಪುಟ ಪುನಾರಚನೆ ಚರ್ಚೆ ಹೊತ್ತಲ್ಲೇ ಔತಣಕ್ಕೆ ಆಹ್ವಾನಿಸಿದ್ದು ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.. ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಔತಣಕೂಟ ನಡೆಯಲಿದೆ..
ಸಿಎಂ ಔತಣ ರಾಜ‘ಕಾರಣ’!
- ಎಲ್ಲ ಸಚಿವರನ್ನ ಡಿನ್ನರ್​ ಮೀಟಿಂಗ್​ಗೆ ಆಹ್ವಾನಿಸಿರುವ ಸಿದ್ದರಾಮಯ್ಯ
- ವರ್ಷಾಂತ್ಯದೊಳಗೆ ಸಚಿವ ಸಂಪುಟ ಪುನಾರಚನೆ ಬಗ್ಗೆ ಸಿಎಂ ಸುಳಿವು
- ಪುನಾರಚನೆ ವೇಳೆ 12ಕ್ಕೂ ಹೆಚ್ಚು ಸಚಿವರನ್ನ ಕೈಬಿಡುವ ಬಗ್ಗೆ​ ಗುಸುಗುಸು
- ಈ ಕುರಿತು ಸಚಿವರಿಗೆ ಮನವರಿಕೆ ಮಾಡಲು ಔತಣಕೂಟ​ ಎಂಬ ಚರ್ಚೆ
- ಮುಂದಿನ ಸೋಮವಾರ ಸಿಎಂ ಸರ್ಕಾರಿ ನಿವಾಸದಲ್ಲಿ ಸಚಿವರಿಗೆ ಡಿನ್ನರ್
ಕಾರಣ ಇದಷ್ಟೇ ಆಗಿರಲಿಕ್ಕಿಲ್ಲ. ಬಿಹಾರ ಎಲೆಕ್ಷನ್​ ಘೋಷಣೆ ಆಗಿದ್ದು, ಈ ಹೊಸ್ತಿಲಲ್ಲಿ ಡಿನ್ನರ್​ ಮೀಟಿಂಗ್​ ಕರೆದಿರುವ ಸಿಎಂ, ಮಗಧದಲ್ಲಿ ಶಕ್ತಿ ವಿನಿಯೋಗದ ಅನಿವಾರ್ಯತೆ ಹೊಂದಿದಂತಿದೆ.
ಇದನ್ನೂ ಓದಿ: SRH ಕ್ಯಾಪ್ಟನ್​, ಸ್ಫೋಟಕ ಬ್ಯಾಟರ್​ಗೆ ಬಿಗ್ ಆಫರ್.. ವರ್ಷಕ್ಕೆ 58 ಕೋಟಿ ರೂಪಾಯಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ