/newsfirstlive-kannada/media/media_files/2025/10/13/siddaramaiah-1-2025-10-13-07-03-36.jpg)
ಕಾಂಗ್ರೆಸ್‌ನಲ್ಲಿ ನವೆಂಬರ್ ಆಟಕ್ಕೆ ಇವತ್ತೇ ಶಂಕುಸ್ಥಾಪನೆ ಆಗೋಯ್ತಾ? ವರ್ಷಾಂತ್ಯದ ಡಿಸೆಂಬರ್​ನಲ್ಲಿ ಏನಾಗಲಿದೆ? ಸೆಪ್ಟೆಂಬರ್​ ಕ್ರಾಂತಿ ಗೀತೆ ಗೀಚಿದ ಬಳಿಕ ಈಗ ಹೊಸ ಡೇಟು ಫ್ರೆಶ್​ ಆಗಿ ಬಂದಿದೆ.. ಈ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಪಟ್ಟದಾಟ ಆರಂಭಿಸಿದ್ದು, ಡಿನ್ನರ್ ಪಾಲಿಟಿಕ್ಸ್​​ಗೆ ಕೈಹಾಕಿದ್ದಾರೆ.. ಬಹಳ ದಿನಗಳ ನಂತ್ರ ಸಚಿವರ ಸಭೆ ಕರೆದಿರುವ ಸಿಎಂ ಸಿದ್ದರಾಮಯ್ಯ ನಡೆ ಈಗ ಕುತೂಹಲಕ್ಕೆ ಕಾರಣವಾಗಿದೆ..
ಪುನಾರಚನೆ ಚರ್ಚೆ
ಊಟದ ನೆಪ.. ಅಧಿಕಾರದ ಜಪ.. ಆಕಾಂಕ್ಷಿಗಳಿಗೆ ಕುರ್ಚಿ ತಪ.. ಸಚಿವರ ಜೊತೆ ಸಿಎಂ ಸಭೆ ನಡೆಸಲಿದ್ದು, ಡಿನ್ನರ್‌ಗೆ ಡಿಸಿಎಂ ಡಿಕೆಶಿಗೂ ಕೂಡ ಆಹ್ವಾನ ಹೋಗಿದೆ.. ಇವತ್ತು ಸರ್ಕಾರಿ ನಿವಾಸ ಕಾವೇರಿಯಲ್ಲಿ ಔತಣಕೂಟ ಆಯೋಜನೆ ಆಗಿದೆ.. ಸಚಿವರನ್ನ ರಾತ್ರಿ ಊಟಕ್ಕೆ ಆಹ್ವಾನಿಸಿದ್ದಾರೆ.. ಡಿನ್ನರ್ ಮೀಟಿಂಗ್ ನೆಪದಲ್ಲಿ ಪಕ್ಷದೊಳಗಿನ ಕೆಲ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ.. ಸಿಎಂ ಸಂಪುಟ ಪುನಾರಚನೆಯ ಸುಳಿವು ನೀಡಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ.. ಆದ್ರೆ, ಡಿಸಿಎಂ ಈ ಬಗ್ಗೆ ವಿರೋಧಭಾಸ ಹೊಂದಿದ್ದಾರೆ..
ಇದನ್ನೂ ಓದಿ: 10th, ಪಿಯುಸಿ, ಐಟಿಐ, ಡಿಪ್ಲೋಮಾ, ಪದವೀಧರರಿಗೆ ಒಳ್ಳೆ ಚಾನ್ಸ್​.. 194 ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ತಿದ್ದು, ಹೈಕಮಾಂಡ್​​​ಗೆ ಸಚಿವ ಸಂಪುಟ ಪುನಾರಚನೆ ಅಗತ್ಯ ಕಾಣಿಸಿದೆ.. ನವೆಂಬರ್ ಇಲ್ಲವೇ ಡಿಸಿಎಂಬರ್​ನಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ಸಾಧ್ಯತೆ ಇದೆ.. ಹೀಗಾಗಿ ಡಿನ್ನರ್​ ಮೀಟಿಂಗ್​ ಕರೆಯಲಾಗಿದೆ ಅನ್ನೋ ಚರ್ಚೆ ಶುರುವಾಗಿದೆ..
ಇದನ್ನೂ ಓದಿ: ಎಲ್ಲರ ಜೊತೆ ಕಿತ್ತಾಡುವ ಪಾಪಿ ಪಾಕಿಸ್ತಾನ​.. 58 ಸೈನಿಕರು ಸಾವು, ಸರಿಯಾಗಿ ಗುಮ್ಮಿದ ಅಫ್ಘಾನ್
ಸಿಎಂ ಡಿನ್ನರ್​ ಪಾಲಿಟಿಕ್ಸ್​!
- ಡಿನ್ನರ್ ಮೀಟಿಂಗ್ ನೆಪದಲ್ಲಿ ಸಂಪುಟ ಪುನಾರಚನೆ ಚರ್ಚೆ
- ವರ್ಷಾಂತ್ಯದಲ್ಲಿ ಡಜನ್​ಗೂ ಹೆಚ್ಚು ಸಚಿವರಿಗೆ ಕೊಕ್​​​ ಸುದ್ದಿ
- ಸಚಿವರ ಕೈಬಿಡುವ ವದಂತಿ ನಡುವೆಯೇ ಡಿನ್ನರ್ ಮೀಟಿಂಗ್
- ಸಂಪುಟದಿಂದ ಕೈಬಿಡುವ ಬಗ್ಗೆ ಮನವರಿಕೆ ಮಾಡಲು ಔತಣ
- 12ಕ್ಕೂ ಹೆಚ್ಚು ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ?
- ನಿಷ್ಕ್ರಿಯ, ಭ್ರಷ್ಟಾಚಾರದ ಆರೋಪ ಹೊತ್ತವರಿಗೆ ಗೇಟ್​ಪಾಸ್​
- ಸಚಿವರನ್ನ ಕೈಬಿಡಲು ಹೈಕಮಾಂಡ್​ ಕಟ್ಟಪ್ಪಣೆ ಅನ್ನೋ ವರದಿ
- ಮುಂದಿನ ಎರಡೂವರೆ ವರ್ಷವು ಚುನಾವಣೆ ಮೇಲೆ ಗಮನ
- ಈ ಕಾರಣ ಸಂಪುಟ ಸರ್ಜರಿ ಅನಿವಾರ್ಯ ಅನ್ನೋ ಸಂದೇಶ
ಈಗಾಗಲೇ ಖಾಲಿಯಾಗಿರುವ 2 ಸ್ಥಾನ ಮತ್ತೆ ನಾಗೇಂದ್ರ ಹಾಗೂ ಕೆ.ಎನ್ ರಾಜಣ್ಣಗೆ ಅವಕಾಶ ನೀಡಲು ತೆರೆಮರೆ ಯತ್ನವೂ ನಡೆದಿದೆ. ಇದರ ನಡುವೆ ಇವತ್ತು ಸಚಿವರಿಗೆ ಡಿನ್ನರ್ ಆಯೋಜಿಸಿದ್ದು, ಕೇವಲ ಪುನಾರಚನೆ ಚರ್ಚೆ ಆಗುತ್ತಾ? ಅಥವಾ ಬೇರೆ ವಿಷಯ ಚರ್ಚೆ ಆಗುತ್ತಾ ಅನ್ನೋದು ಕುತೂಹಲ.
ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸುಲಭವಾಗಿ ನಿಯಂತ್ರಣ ಮಾಡಬಹುದು.. ಆದ್ರೆ ಈ ಟಿಪ್ಸ್​ ನಿಮ್ಗೆ ಗೊತ್ತಿರಬೇಕು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ