/newsfirstlive-kannada/media/media_files/2025/08/30/vijayendra-and-nikhil-kumaraswamy-2025-08-30-17-29-40.jpg)
ಧರ್ಮಸ್ಥಳದ ಬುರುಡೆ ಕೇಸ್. ಒಂದ್ಕಡೆ ತನಿಖೆ ಆಗ್ತಿದೆ. ಬಂಧಿತ ಬುರುಡೆ ಚೆನ್ನಯ್ಯನ ತನಿಖೆ ತೀವ್ರವಾಗಿದೆ. ಇತ್ತ ರಾಜ್ಯ ರಾಜಕೀಯದಲ್ಲೂ ಇದೇ ವಿಚಾರ ಹಾಟ್ ಟಾಪಿಕ್ ಆಗಿದೆ. ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಗಳು ಜೋರಾಗಿದ್ದು, ನಾಳೆ ಜೆಡಿಎಸ್ ಪಾದಯಾತ್ರೆ ಕೈಗೊಂಡಿದ್ರೆ, ನಾಡಿದ್ದು ಬಿಜೆಪಿ ಸಮಾವೇಶ ಇಟ್ಟುಕೊಂಡಿದೆ. ದೋಸ್ತಿಗಳಿಬ್ಬರು ಧರ್ಮಸ್ಥಳ ವಿಚಾರದಲ್ಲಿ ಪ್ರತ್ಯೇಕವಾಗಿ ಅಖಾಡಕ್ಕೆ ಇಳಿದಿರೋದು ರಾಜ್ಯ ರಾಜಕೀಯದಲ್ಲಿ ಭಾರೀ ಗಮನ ಸೆಳೆಯುತ್ತಿದೆ.
ನಾಳೆ ಜೆಡಿಎಸ್ ಪಾದಯಾತ್ರೆ..!
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ.. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ವಿದೇಶಿ ಫಂಡಿಂಗ್ ನಡೆದಿರುವ ಬಗ್ಗೆ ಅನುಮಾನ ಇದೆ. ಇದರ ಬಗ್ಗೆ ಸತ್ಯಾಸತ್ಯತೆ ಹೊರತರಲು NIA ತನಿಖೆ ಅವಶ್ಯಕವಾಗಿದೆ. ಧರ್ಮಸ್ಥಳ ಪಾವಿತ್ರ್ಯತೆಯನ್ನ ಹಾಳು ಮಾಡಲು ಒಳಸಂಚು ರೂಪಿಸಿದ್ದು, ರಾಜ್ಯದ ಜನರಿಗೆ SIT ತನಿಖೆ ಮೇಲೆ ನಿರೀಕ್ಷೆಗಳಿಲ್ಲ. NIA ತನಿಖೆಗೆ ವಹಿಸಿದರೆ ಷಡ್ಯಂತ್ರ ಬಯಲಾಗಲಿದೆ.
ಇದನ್ನೂ ಓದಿ: ‘ದಸರಾ ಉದ್ಘಾಟನೆಗೆ ಕುಂಕುಮ ಇಟ್ಟುಕೊಂಡು ಬರಲಿ’.. ಬಾನು ಮುಷ್ತಾಕ್ ವಿರುದ್ಧ ಹರಿಹಾಯ್ದ ಪ್ರತಾಪ್ ಸಿಂಹ
ಧರ್ಮಸ್ಥಳ ಯಾತ್ರೆಗೆ ಹಾಸನವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿದ್ದು, ಮುಖಂಡರು, ಕಾರ್ಯಕರ್ತರು ಹಾಸನಕ್ಕೆ ತೆರಳಲಿದ್ದಾರೆ. ಅಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ನಂತರ ಧರ್ಮಸ್ಥಳ ನೇತ್ರಾವತಿಗೆ ತೆರಳಿ, ಅಲ್ಲಿ ಸ್ನಾನ ಮಾಡಿದ ಬಳಿಕ ಅಲ್ಲಿಂದ ಮಂಜುನಾಥಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುತ್ತೇವೆ. ಈ ಯಾತ್ರೆಯಲ್ಲಿ ಜೆಡಿಎಸ್ ಲೋಕಸಭಾ ಸದಸ್ಯರು, ಶಾಸಕರು, ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಕಾರ್ಯಕರ್ತರು, ಭಕ್ತರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 1 ಬಿಜೆಪಿ ಸಮಾವೇಶ
ಧರ್ಮಸ್ಥಳ ಹೆಸರು ಕೆಡಿಸಲು ಸರ್ಕಾರದ ಪಿತೂರಿ ಅಂತ ಬಿಜೆಪಿ ಧರ್ಮ ರಕ್ಷಣಾ ಯಾತ್ರೆ ನಡೆಸ್ತಿದೆ. ಧರ್ಮಸ್ಥಳ ಮೇಲಿನ ಷಡ್ಯಂತ್ರದ ತನಿಖೆಯನ್ನ NIAಗೆ ಒಪ್ಪಿಸುವಂತೆ ಕರೆ ಕೊಟ್ಟಿದೆ.. ಸೆಪ್ಟೆಂಬರ್ 1 ರಂದು ಧರ್ಮಸ್ಥಳ ಚಲೋಗೆ ಕರೆ ಕೊಟ್ಟಿದೆ. ಅಲ್ಲದೆ ಧರ್ಮಸಂರಕ್ಷಣಾ ಸಮಾವೇಶಕ್ಕೆ ಪ್ಲಾನ್ ಮಾಡಿದೆ.
ಬಿಜೆಪಿ ಆರೋಪ ಏನು?
ಸಿಎಂ ಸಿದ್ದರಾಮಯ್ಯರಿಗೆ ದೇವರ ಮೇಲೆ ನಂಬಿಕೆ ಅಷ್ಟಕ್ಕಷ್ಟೇ. ಧರ್ಮಸ್ಥಳದ ಅಣ್ಣಪ್ಪನ ಮೇಲೆ ಅವರಿಗೆ ಎಷ್ಟು ಭಕ್ತಿ ಇದೆ? ಗೊತ್ತಿಲ್ಲ. ಧರ್ಮಸ್ಥಳದ ಅಣ್ಣಪ್ಪನಿಗೆ ಕೋಟಿ ಕೋಟಿ ಭಕ್ತರಿದ್ದಾರೆ. ಕೋಟಿ ಕೋಟಿ ಭಕ್ತರಿಗೆ ಧರ್ಮಸ್ಥಳ ಒಂದು ಪುಣ್ಯಕ್ಷೇತ್ರ. ಧರ್ಮಸ್ಥಳ ಕೇವಲ ಒಂದು ಮಂದಿರ ಅಲ್ಲ. ಅದು ಭಾವನೆ.
ಇದನ್ನೂ ಓದಿ: ನಾನು ಅರ್ಬನ್ ನಕ್ಸಲ್, ಬಿಜೆಪಿಯವರು ನಗರ ಡಕಾಯಿತರು ಎಂದ ವಕೀಲ ಸಿ.ಎಸ್.ದ್ವಾರಕನಾಥ್
ಹಲವಾರು ದಶಕಗಳಿಂದ ಅದನ್ನೇ ಉಳಿಸಿಕೊಂಡು ಬರಲಾಗಿದೆ.. ಇಂತಹ ಕ್ಷೇತ್ರದ ಮೇಲೆ ಯಾರೋ ಒಬ್ಬ ವ್ಯಕ್ತಿ ಬುರುಡೆ ಹಿಡಿದುಕೊಂಡು ಬಂದು ಬುರುಡೆ ಬಿಟ್ಟಿದ್ದಾನೆ.. ಆ ವ್ಯಕ್ತಿ ಯಾರು? ಆತನ ಹಿಂದೆ ಯಾರಿದ್ದಾರೆ? ಆತನಿಗೆ ಬೆಂಬಲಿಸಿದ್ಯಾರು? ಇಂತಹ ವಿಚಾರಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಿತ್ತು.. ಆದ್ರೆ, ಸಿಎಂ ಆತುರ ಪಟ್ಟು ನಿರ್ಧಾರ ತಗೊಂಡು ಜನ ಸಮುದಾಯದಲ್ಲಿ ಕ್ಷೇತ್ರದ ಮೇಲೆ ಅನುಮಾನ ಬರೋ ರೀತಿ ನಡೆದುಕೊಂಡ್ರು ಅನ್ನೋದು ಬಿಜೆಪಿ ಮಾಡ್ತಿರೋ ಆರೋಪ. ಸೆಪ್ಟೆಂಬರ್ 1ರಂದು ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ದೇಶದಲ್ಲಿ ಈಗ ಲೋಕಸಭಾ ಚುನಾವಣೆ ನಡೆದರೇ, ಯಾರಿಗೆಷ್ಟು ಸೀಟು ಸಿಕ್ತಾವೆ? ಸರ್ವೇ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ