ಅಮೆರಿಕಾದ ಆಮದು ಸುಂಕ ಹೆಚ್ಚಳಕ್ಕೆ ಮೋದಿ ಪ್ರತ್ಯುತ್ತರ, ಭಾರಿ ಬೆಲೆ ತೆರಲು ಸಿದ್ಧ ಎಂದ ಮೋದಿ

ಅಮೆರಿಕಾವು ಭಾರತದ ಉತ್ಪನ್ನಗಳ ಅಮದು ಮೇಲೆ ಶೇ.50 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದೆ. ಬೇರೆ ಯಾವುದೇ ದೇಶಗಳ ಮೇಲೂ ಅಮೆರಿಕಾ ಇಷ್ಟೊಂದು ದೊಡ್ಡ ಮೊತ್ತದ ಅಮದು ಸುಂಕ ವಿಧಿಸಿಲ್ಲ. ಇದಕ್ಕೆ ಮೋದಿ ಈಗ ಖಡಕ್ ಜವಾಬ್ ನೀಡಿದ್ದಾರೆ. ನಾನು ಭಾರಿ ಬೆಲೆ ತೆರಲು ಸಿದ್ದ, ಭಾರತದ ರೈತರು, ಮೀನುಗಾರರು, ಹೈನುಗಾರರ ಹಿತಾಸಕ್ತಿಯಲ್ಲಿ ರಾಜೀ ಮಾಡಿಕೊಳ್ಳಲ್ಲ ಎಂದಿದ್ದಾರೆ

author-image
Chandramohan
USA PREZ DONALD TRUMP and modi

ಡೋನಾಲ್ಡ್ ಟ್ರಂಪ್ ಮತ್ತು ಮೋದಿ

Advertisment
  • ಅಮೆರಿಕಾದ ಸುಂಕ ಹೆಚ್ಚಳಕ್ಕೆ ಮೋದಿಯಿಂದ ಖಡಕ್ ಪ್ರತಿಕ್ರಿಯೆ
  • ಭಾರತದ ಹಿತಾಸಕ್ತಿ ರಕ್ಷಣೆಗಾಗಿ ಭಾರಿ ತೆರಲು ನಾನು ಸಿದ್ದ ಎಂದ ಮೋದಿ
  • ಭಾರತದ ರೈತರು, ಮೀನುಗಾರರು, ಹೈನುಗಾರರ ಹಿತಾಸಕ್ತಿ ರಕ್ಷಣೆಯಲ್ಲಿ ರಾಜೀ ಇಲ್ಲ ಎಂದ ಮೋದಿ

ಭಾರೀ ಬೆಲೆ ತೆರಬೇಕಾದರೂ ಸಹ, ಭಾರತ ತನ್ನ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ರಷ್ಯಾದ ತೈಲ ಖರೀದಿಯನ್ನು ಮುಂದುವರೆಸಿದ್ದಕ್ಕಾಗಿ ಭಾರತದ ಮೇಲೆ ಶೇ. 50 ರಷ್ಟು  ಆಮದು ಸುಂಕ ವಿಧಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೇರ ಪ್ರತ್ಯುತ್ತರವನ್ನು ಪ್ರಧಾನಿ ಮೋದಿ ಈ ಮೂಲಕ ನೀಡಿದ್ದಾರೆ. 

ಇದನ್ನೂ ಓದಿ: ಭಾರತದ ಒಂದೇ ಕುಟುಂಬದ ನಾಲ್ವರು 5 ದಿನದ ಹಿಂದೆ ನಾಪತ್ತೆ.. ಅಮೆರಿಕದ ನಿಗೂಢ ಸ್ಥಳದಲ್ಲಿ ನಿಧನ

ಕೃಷಿ ವಿಜ್ಞಾನಿ ದಿವಂಗತ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವದ  ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ರೈತರ ಬೆಂಬಲಕ್ಕೆ ನಿಲ್ಲುವುದನ್ನು ಮುಂದುವರಿಸುವುದಾಗಿ ಹೇಳಿದರು.  ಅಮೆರಿಕದ ಅತ್ಯಂತ ಹೆಚ್ಚಿನ ಸುಂಕಗಳ ಹೊರೆಯನ್ನು ಹೊರೆವುದಾಗಿಯೂ ಪ್ರಕಟಿಸಿದ್ದರು. "ನಮಗೆ, ನಮ್ಮ ರೈತರ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯಾಗಿದೆ" ಎಂದು ಪ್ರಧಾನಿ ಹೇಳಿದರು. "ಭಾರತ ಎಂದಿಗೂ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ." ಎಂದು ಘೋಷಿಸಿದ್ದರು. 

"ನಾನು ವೈಯಕ್ತಿಕವಾಗಿ ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ.  ನಾನು ಅದಕ್ಕೆ ಸಿದ್ಧನಿದ್ದೇನೆ. ಭಾರತ ಅದಕ್ಕೆ ಸಿದ್ಧವಾಗಿದೆ" ಎಂದು ಪ್ರಧಾನಿ ಮೋದಿ ಸಮಾವೇಶದಲ್ಲಿ ಹೇಳಿದರು. ಪ್ರಧಾನಿ ಮೋದಿ  ಅವರ ಭಾಷಣದ ವಿಡಿಯೋ ಲಿಂಕ್ ಅನ್ನು ಕೆಳಗೆ ನೀಡಿದ್ದೇವೆ. ತಾವು ವಿಡಿಯೋವನ್ನು ನೋಡಬಹುದು. 


ಡೋನಾಲ್ಡ್  ಟ್ರಂಪ್ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸಿದ ನಂತರ ಪ್ರಧಾನಿ ಮೋದಿಯಿಂದ ಪ್ರತಿಭಟನೆಯ ಈ ಹೇಳಿಕೆ ಬಂದಿದೆ. ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಭಾರತದ ಆಮದು ಉತ್ಪನ್ನಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸುವುದಾಗಿ ನಿನ್ನೆ ರಾತ್ರಿ ಘೋಷಿಸಿದ್ದಾರೆ. ಬೇರೆ ಯಾವುದೇ ದೇಶಗಳ ಮೇಲೂ ಅಮೆರಿಕಾ ಶೇ.50 ರಷ್ಟು ಆಮದು ಸುಂಕ ವಿಧಿಸಿಲ್ಲ. ರಷ್ಯಾ, ಚೀನಾ, ಬ್ರೆಜಿಲ್ ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳ ಮೇಲೆ ಇಷ್ಟೊಂದು ದೊಡ್ಡ ಪ್ರಮಾಣದ ಆಮದು ಸುಂಕ ವಿಧಿಸಿಲ್ಲ. ಆದರೇ, ಭಾರತದ ಮೇಲೆ ಮಾತ್ರವೇ ಶೇ.50 ರಷ್ಟು ಆಮದು ಸುಂಕ ವಿಧಿಸಿದ್ದಾರೆ.

ರಷ್ಯಾದಿಂದ ಭಾರತದಂತೆ ಚೀನಾವೂ ಕೂಡ ಕಚ್ಚಾತೈಲ ಖರೀದಿಸುತ್ತಿದೆ. ಚೀನಾದ ಮೇಲೆ ಶೇ.30 ರಷ್ಟು ಸುಂಕ ವಿಧಿಸಿದ್ದಾರೆ. ಟರ್ಕಿ ಮೇಲೆ ಶೇ.15 ರಷ್ಟು ಸುಂಕವನ್ನು ಡೋನಾಲ್ಡ್ ಟ್ರಂಪ್ ವಿಧಿಸಿದ್ದಾರೆ. ಟರ್ಕಿ, ಚೀನಾ ಕೂಡ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿವೆ. ಆದರೇ, ಟರ್ಕಿ, ಚೀನಾಗಿಂತ ಭಾರತದ ಮೇಲೆ ಬರೋಬ್ಬರಿ ಶೇ.50 ರಷ್ಟು ಆಮದು ಸುಂಕವನ್ನು ಡೋನಾಲ್ಡ್ ಟ್ರಂಪ್ ವಿಧಿಸಿದ್ದಾರೆ. 

ಇದನ್ನೂ ಓದಿ: ತನ್ನ ಗೋರಿಯನ್ನ ತಾನೇ ತೋಡಿಕೊಂಡು ಕಣ್ಣೀರಿಟ್ಟ ವ್ಯಕ್ತಿ.. ಉಗ್ರರಿಂದ ಇದೆಂಥ ಶಿಕ್ಷೆ..? VIDEO

ಈ ಹಿಂದೆ ಆಗಸ್ಟ್ 1 ರಂದು ಶೇ.25 ರಷ್ಟು ಆಮದು ಸುಂಕವನ್ನು ಭಾರತದ ಉತ್ಪನ್ನಗಳ ಮೇಲೆ ಟ್ರಂಪ್ ವಿಧಿಸಿದ್ದರು. ಇದು ಆಗಸ್ಟ್ 7 ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕಾ ಹೇಳಿತ್ತು. ಬಳಿಕ ಈಗ ನಿನ್ನೆ ರಾತ್ರಿ ಮತ್ತೆ ಹೊಸದಾಗಿ ಶೇ.25 ರಷ್ಟು ಹೆಚ್ಚುವರಿ ಸುಂಕವನ್ನು ಭಾರತದ ಮೇಲೆ ವಿಧಿಸುವುದಾಗಿ ಅಮೆರಿಕಾ ಘೋಷಿಸಿದೆ. ಇದರಿಂದಾಗಿ ಭಾರತದ ಆಮದು ಉತ್ಪನ್ನಗಳ ಮೇಲೆ ಶೇ.50 ರಷ್ಟು ಆಮದು ಸುಂಕ ವಿಧಿಸಿದಂತಾಗಿದೆ. ದಂಡದ ರೂಪದಲ್ಲಿ ಹೊಸದಾಗಿ ವಿಧಿಸಿದ ಸುಂಕವು ಆಗಸ್ಟ್ 27 ರಿಂದ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

PM NARENDR MODI2

 ರಷ್ಯಾದಿಂದ ಕಚ್ಚಾತೈಲ ಖರೀದಿ ಮತ್ತು ಮಿಲಿಟರಿ ಶಸ್ತ್ರಾಸ್ತ್ರವನ್ನು ಖರೀದಿಸುವುದನ್ನು ಭಾರತ ಮುಂದುವರಿಸಿದೆ. ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ನಿಲ್ಲಿಸಬೇಕು ಅಂತ ಅಮೆರಿಕಾ ಹೇಳಿದ್ದನ್ನು ಭಾರತವು ಈಗಾಗಲೇ ತಿರಸ್ಕರಿಸಿದೆ. ಇದಕ್ಕೆ ನೇರ ಶಿಕ್ಷೆಯಾಗಿ, ದಂಡವಾಗಿ ಭಾರತದ ಉತ್ಪನ್ನಗಳ ಮೇಲೆ ಶೇ.50 ರಷ್ಟು ಆಮದು ಸುಂಕವನ್ನು ಅಮೆರಿಕಾ ವಿಧಿಸಿದೆ. 

ಇದನ್ನೂ ಓದಿ:ಭಾರತಕ್ಕೆ ಟ್ರಂಪ್ ಆಘಾತ.. ಶೇಕಡಾ 50 ರಷ್ಟು ಆಮದು ಸುಂಕ ಘೋಷಣೆ

ಭಾರತವು ರಷ್ಯಾದ ವಾರ್ ಮೆಷಿನ್ ಗೆ ಕಚ್ಚಾತೈಲ ಖರೀದಿಸುವ ಮೂಲಕ ಹಣವನ್ನು ನೀಡುತ್ತಿದೆ ಅಂತ ಡೋನಾಲ್ಡ್ ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೇ, ನಮಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಲಿ ಕಡಿಮೆ ಬೆಲೆಗೆ ಕಚ್ಚಾತೈಲ ಸಿಗುತ್ತೋ ಅಲ್ಲಿಂದ ನಾವು ಕಚ್ಚಾತೈಲ ಖರೀದಿಸುತ್ತೇವೆ, ನಮಗೆ ನಮ್ಮ ದೇಶದ ಜನರ ಹಿತಾಸಕ್ತಿ, ದೇಶದ ಜನರ ಹಿತಾಸಕ್ತಿ ಮುಖ್ಯ ಎಂದು  ಈಗಾಗಲೇ ಭಾರತವು, ಅಮೆರಿಕಾಗೆ ತಿರುಗೇಟು ನೀಡಿದೆ. 

ಈಗ ಪ್ರಧಾನಿ ಮೋದಿ ಕೂಡ ನೇರವಾಗಿ ಅಮೆರಿಕಾದ ಒತ್ತಡಗಳಿಗೆ ನಾವು ಮಣಿಯಲ್ಲ. ನಮ್ಮ ದೇಶದ ಹಿತಾಸಕ್ತಿಯೇ ನಮಗೆ ಮೊದಲ ಆದ್ಯತೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Pm Narendra Modi DONALD TRUMP
Advertisment