/newsfirstlive-kannada/media/media_files/2026/01/06/siddaramaiah-20-2026-01-06-10-02-17.jpg)
ಸಿದ್ದರಾಮಯ್ಯ 40 ವರ್ಷದ ರಾಜಕೀಯ ಜೀವನದಲ್ಲಿ ಬೇಕಾದಷ್ಟು ಚಾಲೆಂಜ್ ಎದುರಿಸಿದ್ದಾರೆ. ಅಗ್ನಿ ಪರೀಕ್ಷೆಗಳನ್ನ ನೋಡಿದ್ದಾರೆ. ಅಂತಾದ್ರದಲ್ಲಿಯೂ ಒಂದು ಬಾರಿ ಡಿಸಿಎಂ, ಎರಡು ಬಾರಿ ಸಿಎಂ ಆಗಿದ್ದಾರೆ. ಸಿಂಹಾಸನದ ಮೇಲೆ ಕುಳಿತು ಯಾವ ಯಾವ ಜನಪ್ರಿಯ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಸದ್ಯ ಪೂರ್ಣಾವಧಿ ಸಿಎಂ ಆಗಿ ಇನ್ನೊಂದು ದಾಖಲೆ ನಿರ್ಮಿಸೋದಕ್ಕೆ ಎದುರಾಗ್ತಿರೋ ಚಾಲೆಂಜ್ ಏನು?
ರಾಜಕೀಯ ಅನ್ನೋದು ಹರಿಯೋ ನೀರು ಇದ್ದಂತೆ. ಹೊಸ ನೀರು ಬಂದಾಗ ಹಳೇ ನೀರು ಮುಂದೆ ಹೋಗುತ್ತೆ. ಅಲ್ಲಲ್ಲಿ ಟರ್ನ್‌ಗಳು, ಟ್ವಿಸ್ಟ್‌ಗಳು ಇದ್ದೇ ಇರ್ತಾವೆ.. ಕುರ್ಚಿ ಫೈಟ್ ಮಾತ್ರ ಹಾಗೇ ಇರುತ್ತೆ. 70 ಮತ್ತು 80 ದಶಕದಲ್ಲಿ ಕುರ್ಚಿ ಫೈಟ್ ಹೇಗಿತ್ತೋ? ಇವತ್ತಿಗೂ ಹಾಗೇ ಇದೆ. ಅಂದು ದೇವರಾಜ್ ಅರಸು ಅವ್ರು ಸಿಎಂ ಸ್ಥಾನಕ್ಕೇರೋದಕ್ಕೂ ಮುನ್ನ ಹರಸಾಹಸ ಮಾಡಿದ್ರು. ಆ ಸ್ಥಾನಕ್ಕೆ ಏರಿದ್ಮೇಲೆ ಮೊದಲ ಅವಧಿ ಏನೋ ಪೂರ್ಣ ಮಾಡಿದ್ರು. ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗುದ್ದುಗೆ ಉಳಿಸ್ಕೊಳ್ಳುವುದಕ್ಕೆ ಹರಸಾಹಸ ಮಾಡ್ಬೇಕಾಯ್ತು. ಆದ್ರೂ ಸಿಎಂ ಸಿಂಹಾಸನ ಉಳಿಸ್ಕೊಳ್ಳುವುದಕ್ಕೆ ಸಾಧ್ಯವೇ ಆಗಿಲ್ಲ. ಅಂದು ದೇವರಾಜ್ ಅರಸು ಯಾವ ರೀತಿಯ ಚಾಲೆಂಜ್‌ಗಳನ್ನ ಎದುರಾಸಿದ್ರೋ? ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಅಂತಹ ಚಾಲೆಂಜ್‌ಗಳನ್ನ ಎದುರಿಸ್ತಿದ್ದಾರೆ.
/filters:format(webp)/newsfirstlive-kannada/media/media_files/2026/01/06/siddaramaiah-12-2026-01-06-09-45-07.jpg)
ಬಡವರಿಗೆ ಭೂಮಿ ಕೊಟ್ಟ ಅರಸು, ಹಸಿದವರಿಗೆ ಅನ್ನಕೊಟ್ಟ ಸಿದ್ದು
ಹಿಂದುಳಿದ ವರ್ಗದಿಂದ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸು ಅವ್ರು ಮಾಡಿದ್ದ ಬಹುದೊಡ್ಡ ಯೋಜನೆ ಅಂದ್ರೆ ಉಳುವವರಿಗೆ ಭೂಮಿ ಸಿಗುವಂತೆ ಮಾಡಿದ್ದು. ಅನಂತರ ಹಿಂದುಳಿದ ವರ್ಗದಿಂದ ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ ಸಹ ಮುಖ್ಯಮಂತ್ರಿಯಾಗಿ ಅನೇಕ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಆದ್ರೆ ಅವಱರಿಗೂ ಪೂರ್ಣಾವಧಿ ಮುಖ್ಯಮಂತ್ರಿ ಆಗೋದಕ್ಕೆ ಸಾಧ್ಯವಾಗಿಲ್ಲ. ಬಟ್, ಸಿದ್ದರಾಮಯ್ಯ ಮಾತ್ರ 2013 ರಲ್ಲಿ ಮುಖ್ಯಮಂತ್ರಿಯಾದಾಗ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಪೂರೈಕೆ ಮಾಡ್ತಾರೆ. ಆಮೇಲೆ 2023 ರಲ್ಲಿ ಮುಖ್ಯಮಂತ್ರಿ ಆದ್ಮೇಲೆ ಎರಡೂವರೆ ವರ್ಷದ ಗಡಿ ದಾಟಿದ್ದಾರೆ.
ಇದನ್ನೂ ಓದಿ: ಅರಸುಗೆ ಹೋಲಿಕೆ ಬೇಡ ಅಂದಿದ್ದೇಕೆ ಸಿದ್ದರಾಮಯ್ಯ? ಅರಸು-ಸಿದ್ದು ಸಾಮ್ಯತೆ ಏನೇನು..?
/filters:format(webp)/newsfirstlive-kannada/media/media_files/2026/01/06/siddaramaiah-13-2026-01-06-09-45-23.jpg)
ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಬಂಧು ಅಂತಾನೇ ಕರೆಯಿಸ್ಕೊಂಡವ್ರು. ಭಾಗ್ಯದ ರಾಮಯ್ಯ ಅಂತಾನೇ ಖ್ಯಾತಿ ಪಡೆದವ್ರು. 2013 ರಲ್ಲಿ ಜಾರಿಗೆ ತಂದ ಅನ್ನಭಾಗ್ಯ ಯೋಜನೆ ಇಡೀ ದೇಶದಲ್ಲಿಯೇ ಜನಪ್ರಿಯತೆಯನ್ನ ಪಡ್ಕೊಂಡಿದೆ. ಪ್ರತಿ ಬಿಪಿಎಲ್ ಕುಟುಂಬಕ್ಕೂ 10 ಕೆಜಿ ಅಕ್ಕಿಯನ್ನ ಫ್ರೀಯಾಗಿ ಕೊಡುವ ಸ್ಕೀಮ್ ಅದಾಗಿತ್ತು. ಈ ಯೋಜನೆಯಿಂದ ಅದೆಷ್ಟೋ ಬಡವರು ಹೊಟ್ಟೆ ತುಂಬ ಊಟ ಮಾಡಿ ಮಲಗಿಕೊಳ್ಳುವುದಕ್ಕೆ ಸಹಕಾರಿಯಾಗಿದೆ. ಅಷ್ಟಕ್ಕೂ ಈ ಯೋಜನೆಯನ್ನ ಸಿದ್ದರಾಮಯ್ಯ ಜಾರಿಗೆ ತಂದಿದ್ದು ಯಾಕೆ ಅಂದ್ರೆ, ಬಾಲ್ಯದಲ್ಲಿ ಬಡತನ ಅಂದ್ರೆ ಏನು ಅನ್ನೋದನ್ನ ಕಣ್ಣಾರೆ ನೋಡಿದ್ದು. ಹೌದು, ಒಂದು ಹೊತ್ತಿನ ಊಟಕ್ಕೂ ಪರದಾಡುವ ಬಡವರನ್ನ ನೋಡಿ ಬೆಳೆದಿದ್ರು ಸಿದ್ದರಾಮಯ್ಯ. ಆ ನೋವು ಮುಂದೊಂದ್ ದಿನ ಅನ್ಯ ಭಾಗ್ಯ ಜಾರಿಯಾಗುವಂತೆ ಮಾಡ್ತು.
ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನ ಮಳೆ ಮತ್ತು ಭಾರೀ ಚಳಿ ಬೀಳುವ ಎಚ್ಚರಿಕೆ
/filters:format(webp)/newsfirstlive-kannada/media/media_files/2026/01/06/siddaramaiah-15-2026-01-06-09-45-49.jpg)
ಗ್ಯಾರಂಟಿ ರಾಮಯ್ಯ!
- 2013ರಲ್ಲಿ ಅನ್ನಭಾಗ್ಯ ಜೊತೆ ವಿವಿಧ ಯೋಜನೆ ಜಾರಿ!
- ಶಾಲಾ ಮಕ್ಕಳಿಗಾಗಿ ಕ್ಷಿರಭಾಗ್ಯ ಯೋಜನೆಗೆ ಚಾಲನೆ!
- ರೈತರಿಗೆ ನೆರವಾಗುವುದಕ್ಕಾಗಿ ಕೃಷಿ ಭಾಗ್ಯ ಯೋಜನೆ!
- ವಿದ್ಯಾಸಿರಿ ಯೋಜನೆಯಲ್ಲಿ ವಾರ್ಷಿಕ 1500 ರೂಪಾಯಿ!
- 2023ರಲ್ಲಿ ಪಂಚ ಗ್ಯಾರಂಟಿಗಳನ್ನ ಜಾರಿಗೆ ತಂದ ಸಿದ್ದು!
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯಕ್ಕೆ ಬಂದ್ಮೇಲೆ ಪ್ರಮುಖವಾಗಿ ಅಹಿಂದ ಸಮುದಾಯವನ್ನ ಒಟ್ಟಾಗಿಸಿದ್ದಾರೆ. ಅಂದ್ರೆ, ಹಿಂದುಳಿದ, ಅಲ್ಪ ಸಂಖ್ಯಾತ, ದಲಿತ ಸಮುದಾಯಗಳನ್ನ ರಾಜಕೀಯವಾಗಿ ಒಗ್ಗೂಡಿಸಿದ್ದಾರೆ. ಆ ಮೂಲಕ ರಾಜ್ಯ ರಾಜಕೀಯದಲ್ಲಿ ಅಹಿಂದ ಸಮುದಾಯ ನಾಯಕರು ಪ್ರವರ್ಧಮಾನಕ್ಕೆ ಬರುವಂತೆ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳ್ಬೇಕು ಅಂದ್ರೆ, ರಾಜ್ಯ ರಾಜಕೀಯಕ್ಕೆ ದೇವರಾಜ್ ಅರಸು ಕೊಡೆಗೆ ಹೇಗಿದೆಯೋ? ಹಾಗೇ ಸಿದ್ದರಾಮಯ್ಯ ಕೊಡುಗೆಯೂ ಇದೆ.
ಇದನ್ನೂ ಓದಿ:2 ಅವಧಿ.. 2,792 ದಿನ! ರಾಜ್ಯ ರಾಜಕೀಯದಲ್ಲಿ ಹೊಸ ಮೈಲಿಗಲ್ಲು, ಅರಸು ದಾಖಲೆ ಸರಿಗಟ್ಟಿದ ಸಿದ್ದು..!
/filters:format(webp)/newsfirstlive-kannada/media/media_files/2026/01/06/siddaramaiah-16-2026-01-06-09-46-04.jpg)
ಗದ್ದುಗೆಯಲ್ಲಿ 10 ವರ್ಷ ಪೂರೈಸುತ್ತಾರಾ ಸಿದ್ದರಾಮಯ್ಯ?
ಕಾಂಗ್ರೆಸ್‌ನಲ್ಲಿರೋ ಕುರ್ಚಿ ಫೈಟ್ ಏನು ಅನ್ನೋದ್ ಎಲ್ಲರಿಗೂ ಗೊತ್ತಿರೋ ವಿಚಾರ. ಅದು ಆಗಾಗ ಭುಗಿಲೇಳುತ್ತಾ ಇರುತ್ತೆ. ಸಿದ್ದು ಬಣದವ್ರು, ಡಿಕೆ ಶಿವಕುಮಾರ್ ಬಣದವ್ರು ಇಬ್ಬರೂ ಡೆಲ್ಲಿಯಾತ್ರೆ ಮಾಡಿ ಬರ್ತಾ ಇರ್ತಾರೆ. ಹಾಗೇ ಬಾಂಬ್‌ಗಳನ್ನ ಸಿಡಿಸುತ್ತಾ ಇರ್ತಾರೆ. ಹೀಗಾಗಿ ಸಿದ್ದರಾಮಯ್ಯ ಅವ್ರು ದೇವರಾಜು ಅರಸು ದಾಖಲೆಯನ್ನ ಮುರಿಯುತ್ತಾರೋ ಇಲ್ವೋ ಅನ್ನೋ ಅನುಮಾನ ಶುರುವಾಗಿತ್ತು. ಅಂತಿಮವಾಗಿ ಆ ದಾಖಲೆಯನ್ನ ಸಿದ್ದರಾಮಯ್ಯ ಮುರಿಯೋದು ಕನ್ಫರ್ಮ್.
ಸಿದ್ದರಾಮಯ್ಯ ಆಪ್ತರು ಇವತ್ತಿಗೂ ಮುಖ್ಯಮಂತ್ರಿಯಾಗಿ ಅವರೇ 5 ವರ್ಷ ಮುಂದುವರಿಯುತ್ತಾರೆ ಅನ್ನೋದನ್ನ ಹೇಳ್ತಿದ್ದಾರೆ. ಡಿಕೆ ಶಿವಕುಮಾರ್ ಆಪ್ತರು ಇಲ್ಲಾ ಇಲ್ಲಾ ಬೇಕಾದ್ರೆ ರಕ್ತದಲ್ಲಿ ಬರೆದು ಕೊಡ್ತೀನಿ ಡಿಕೆ ಶಿವಕುಮಾರ್ ಸಿಎಂ ಆಗೋದು ಪಕ್ಕಾ ಅಂತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ 5 ವರ್ಷ ಪೂರ್ತಿ ಮಾಡ್ತಾರೋ ಇಲ್ವೋ ಅನ್ನೋ ಗೊಂದಲ ಖಂಡಿತವಾಗಿಯೂ ಇದೆ. ಹಾಗೊಂದು ವೇಳೆ ಸಿದ್ದರಾಮಯ್ಯ ಪೂರ್ಣಾವಧಿ ಮುಗಿಸಿದ್ರೆ ರಾಜ್ಯದಲ್ಲಿ ಇನ್ನೊಂದ್ ದಾಖಲೆ ನಿರ್ಮಾಣವಾಗುತ್ತೆ. ಅದೇನು ಅಂದ್ರೆ ಎರಡೂ ಅವಧಿಗೂ ಪೂರ್ಣಾವಧಿ ಮುಖ್ಯಮಂತ್ರಿಯಾದ ನಾಯಕ ಅನ್ನೋ ಪಟ್ಟ. ಆದ್ರೆ, ಅದ್ಕೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡುತ್ತೋ ಇಲ್ವೋ ಅನ್ನೋದನ್ನ ಕಾದು ನೋಡೋಣ.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಏಕದಿನ ಸೀರಿಸ್.. ಪಂತ್‌ನ ಡ್ರಾಪ್ ಮಾಡಿರುವ ಸಿಕ್ರೇಟ್ ರಿವೀಲ್..!
/filters:format(webp)/newsfirstlive-kannada/media/media_files/2026/01/06/siddaramaiah-18-2026-01-06-09-46-29.jpg)
ಸ್ಪೋರ್ಟ್ಸ್ ಆಗಿರ್ಲಿ... ರಾಜಕೀಯ ಆಗಿರ್ಲಿ... ದಾಖಲೆ ಇರೋದೇ ಮುರಿಯೋದಕ್ಕೆ ಅನ್ನೋದು ಸತ್ಯ. ಆದ್ರೆ, ರಾಜಕೀಯದಲ್ಲಿ ದಾಖಲೆ ಮಾಡೋದು, ದಾಖಲೆ ಮುರಿಯೋದು ಎರಡೂ ಕಬ್ಬಿಣದ ಕಡಲೆ ಇದ್ದಂತೆ. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us