ಅರಸುಗೆ ಹೋಲಿಕೆ ಬೇಡ ಅಂದಿದ್ದೇಕೆ ಸಿದ್ದರಾಮಯ್ಯ? ಅರಸು-ಸಿದ್ದು ಸಾಮ್ಯತೆ ಏನೇನು..?

2 ಅವಧಿ.. 2,792 ದಿನ.. ಅರಸು ದಾಖಲೆ ಮುರಿದ ಸಿದ್ದು! ಅವ್ರು ಉಳುವವನಿಗೆ ಭೂಮಿ ಕೊಟ್ರು.. ಇವ್ರು ಅನ್ನ ಕೊಟ್ರು! ಯಾರ ಯೋಜನೆ ಹೇಗಿದೆ? ಸಿದ್ದುಗೆ ಮುಂದಿನ ಹಾದಿ ಏನು..?

author-image
Ganesh Kerekuli
Siddaramaiah (12)
Advertisment

ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧೆ ಇರುತ್ತೆ.. ಅಗ್ನಿ ಪರೀಕ್ಷೆಗಳು ಎದುರಾಗ್ತಾವೆ. ಆದ್ರೆ ರಾಜಕೀಯದಲ್ಲಿ ಶತ್ರುಗಳು ಯಾರು? ಮಿತ್ರರು ಯಾರು ಅಂತ ಗೊತ್ತು ಮಾಡೋದೇ ಕಷ್ಟ. ಅಲ್ಲಿಯ ಅಗ್ನಿ ಪರೀಕ್ಷೆಯನ್ನ ಜಡ್ಜ್‌ ಮಾಡೋದೇ ಇನ್ನೊಂದು ಅಗ್ನಿ ಪರೀಕ್ಷೆ. ಹೀಗಿದ್ದಾಗ ದಾಖಲೆ ಮಾಡೋದು, ರೆಕಾರ್ಡ್‌ ಬ್ರೇಕ್‌ ಮಾಡೋದು ಏಳು ಕೆರೆಯ ನೀರು ಕುಡಿದಂತಾಗುತ್ತೆ. ಅಷ್ಟಕ್ಕೂ ನಾವು ಈ ಮಾತು ಹೇಳೋದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ. ಅವ್ರು ಅರಸು ದಾಖಲೆಯನ್ನ ಮುರಿದಿದ್ದಾರೆ. ಹಾಗಾದ್ರೆ ಇಬ್ಬರಿಗೂ ಇರೋ ಸಾಮ್ಯತೆ ಏನು? ಯಾರ ಯೋಜನೆ ಹೇಗಿವೆ? 

ಇದನ್ನೂ ಓದಿ: ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸೀರಿಸ್‌.. ಪಂತ್‌ನ ಡ್ರಾಪ್‌ ಮಾಡಿರುವ ಸಿಕ್ರೇಟ್‌ ರಿವೀಲ್..!

Siddaramaiah (13)

ಇಂದಿನ ದಿನಮಾನದಲ್ಲಿ ಒಂದು ಬಾರಿ ಎಮ್‌ಎಲ್‌ಎ ಆಗ್ಬೇಕು ಅಂದ್ರೆ ಹರಸಾಹಸ ಮಾಡ್ಬೇಕು. ಸಿಎಂ ಗದ್ದುಗೆ ಏರ್ಬೇಕು ಅಂದ್ರೆ ಅಕ್ಷರಶಃ ಏಳು ಕೆರೆಯ ನೀರು ಕುಡಿದು ಬರ್ಬೇಕು. ಹೌದು, ಸಿಎಂ ಆಗೋದು ಸುಲಭ ಮಾತು ಅಲ್ಲವೇ ಅಲ್ಲ. ಹಾಗೇ ಸಿಎಂ ಸಿಂಹಾಸನ ಏರಿದ್ಮೇಲೆ ಅದನ್ನ ಉಳಿಸ್ಕೊಳ್ಳುವುದು ಬಹುದೊಡ್ಡ ಚಾಲೆಂಜ್‌. ಆಗಾಗ ಅಗ್ನಿ ಪರೀಕ್ಷೆಗಳು ಬರ್ತಾನೆ ಇರ್ತಾವೆ. ವಿರೋಧ ಪಕ್ಷಗಳಿಂದ ಅಷ್ಟೇ ಅಲ್ಲ, ಸ್ವಪಕ್ಷದಿಂದಲೂ ಬಾಣಗಳು ಬರ್ತಾನೇ ಇರ್ತಾವೆ. ಆದ್ರೆ, ಅವುಗಳೆಲ್ಲವನ್ನ ದಾಟಿ ಇತಿಹಾಸ ನಿರ್ಮಿಸೋದು ಊಹಿಸೋದು ಕಷ್ಟ. ಕರ್ನಾಟಕದ ಇತಿಹಾಸ ಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಹೊಸ ದಾಖಲೆ ಬರೆದಿದ್ದಾರೆ. ಇನ್ಮೇಲೆ ರಾಜ್ಯದಲ್ಲಿ ದೀರ್ಘಾವಧಿ ಮುಖ್ಯಮಂತ್ರಿ ಯಾರು ಅಂದ್ರೆ ಇತಿಹಾಸದ ಪುಟದಲ್ಲಿ ಸಿದ್ದರಾಮಯ್ಯ ಹೆಸ್ರು ಕೇಳಿಬರುತ್ತೆ.

ಅರಸುಗೆ ಹೋಲಿಕೆ ಬೇಡ ಅಂದಿದ್ದೇಕೆ ಸಿದ್ದರಾಮಯ್ಯ?

ದೇವರಾಜ್‌ ಅರಸು... ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಯಾವತ್ತೂ ಮರೆಯಲಾಗದ ಹೆಸ್ರು. ಯಾಕಂದ್ರೆ ಅವರ ಕೊಡುಗೆ ರಾಜ್ಯಕ್ಕೆ ಆ ಪರಿಪ್ರಮಾಣದಲ್ಲಿದೆ. ಜನ ಯಾವತ್ತೂ ಮರೆಯದ ಯೋಜನೆಗಳನ್ನ ತಂದು ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಅವ್ರು 1972 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆಗ್ತಾರೆ. ಆವಾಗ 5 ವರ್ಷದ 287 ದಿನಗಳನ್ನ ಪೂರೈಸಿರ್ತಾರೆ. ಆಮೇಲೆ 1978-1979 ರಲ್ಲಿಯೂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರ್ತಾರೆ. ಒಟ್ಟು 2,792 ದಿನಗಳ ಕಾಲ ದೇವರಾಜು ಅರಸು ಅವ್ರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರ್ತಾರೆ. ಆಮೇಲೆ ಅನೇಕ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಬಂದು ಹೋಗಿದ್ದಾರೆ. ದೇವರಾಜ್‌ ಅರಸು ದಾಖಲೆಯನ್ನ ಮುರಿಯೋದಕ್ಕೆ ಯಾರಿಗೂ ಸಾಧ್ಯವಾಗಿರ್ಲಿಲ್ಲ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಮುರಿಯುತ್ತಿದ್ದಾರೆ. ಜನವರಿ 6ನೇ ತಾರೀಕಿಗೆ ಅರಸು ದಾಖಲೆ ಸರಿಗಟ್ಟಲಿದ್ರೆ, ಜನವರಿಗೆ 7ಕ್ಕೆ ಅರಸು ದಾಖಲೆಯನ್ನ ಸಿದ್ದರಾಮಯ್ಯ ಮುರಿದು ಮುಂದೆ ಸಾಗಲಿದ್ದಾರೆ.

Siddaramaiah (14)

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೇವರಾಜು ಅರಸು ಅವರ ಮೇಲೆ ಅಪಾರ ಅಭಿಮಾನ. ರಾಜಕೀಯವಾಗಿ ಅರಸು ಅವರನ್ನ ನೋಡಿ ಸಿದ್ದರಾಮಯ್ಯ ಅನೇಕ ಪಾಠಗಳನ್ನ ಕಲಿತ್ತಿದ್ದಾರೆ. ಆದ್ರೆ, ಅದ್ಯಾವಾಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಮಾಡಿದ್ರೋ? ಅವಾಗ್ಲೇ ತಮ್ಗೆ ದೇವರಾಜ್‌ ಅರಸು ದಾಖಲೆಯನ್ನ ಮುರಿಯೋ ಅವಕಾಶ ಸಿಗುತ್ತೆ ಅನ್ನೋ ಆಶಾಭಾವನೆಯಲ್ಲಿದ್ರು. ಹಾಗೇ ಇತ್ತೀಚೆಗೆ ದೇವರಾಜ್‌ ಅರಸು ದಾಖಲೆ ಮುರಿಯೋ ಬಗ್ಗೆ ಮಾತನ್ನು ಆಡಿದ್ರು. ಸಿದ್ದರಾಮಯ್ಯ ಆಪ್ತರು ಪದೇ ಪದೇ ದೇವರಾಜ್‌ ಅರಸು ದಾಖಲೆಯನ್ನ ಸಿದ್ದರಾಮಯ್ಯ ಮುರೀತಾರೆ ಅನ್ನೋದನ್ನ ಹೇಳಿಕೊಳ್ತಾ ಇದ್ರು. ಇದೀಗ ಆ ಕಾಲ ಬಂದಿದೆ. 2013 ರಿಂದ 2018ರ ವರೆಗೂ ಕಾಂಗ್ರೆಸ್‌ನಲ್ಲಿ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 5 ವರ್ಷ ಪೂರ್ಣಗೊಳಿಸಿದ್ರು. ಆಮೇಲೆ 2023 ರಲ್ಲಿ ಎರಡನೇ ಬಾರಿಗೆ ಸಿಎಂ ಗದ್ದುಗೆಯನ್ನ ಏರಿ ಎರಡೂವರೆ ವರ್ಷ ಪೂರೈಸಿದ್ದಾರೆ. ಹಾಗೇ ಕರ್ನಾಟಕದ ದೀರ್ಘಾವಧಿ ಸಿಎಂ ಅನ್ನೋ ಹಿರಿಮೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಫೆಬ್ರವರಿಯಲ್ಲಿ ಧವನ್‌ಗೆ ಎರಡನೇ ಮದುವೆ -ಗಬ್ಬರ್‌ನ ಸೆಕೆಂಡ್‌ ಇನ್ನಿಂಗ್ಸ್‌ನ ಪಾರ್ಟ್ನರ್‌ ಯಾರು?

Siddaramaiah (15)

ಸಿದ್ದುಗೆ ನಾಟಿ ಕೋಳಿ ಔತಣ!

ಸಿಎಂ ಸಿದ್ದರಾಮಯ್ಯ ಜನವರಿ 6ರಂದು ರಾಜ್ಯದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ದಿವಂಗತ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿ, ಹೊಸ ದಾಖಲೆ ಬರೆಯಲಿದ್ದಾರೆ. ಈ ಸಂಭ್ರಮವನ್ನು ''ನಾಟಿ ಕೋಳಿ ಔತಣಕೂಟ'' ಆಯೋಜಿಸಿ ಸಂಭ್ರಮಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಹೌದು, ಜ.6ರಂದು ನೆಲಮಂಗಲದ ಭಕ್ತನ ಪಾಳ್ಯದಲ್ಲಿ ನಾಟಿ ಕೋಳಿ ಔತಣಕೂಟ ನಡೆಯಲಿದ್ದು, ನಾಟಿಕೋಳಿ ಸಾಂಬಾರ್, ಮುದ್ದೆ, ಕಾಳು ಗೊಜ್ಜು, ರೈಸ್, ಪುಲಾವ್ ಮತ್ತು ಸಿಹಿತಿಂಡಿ ನೀಡಲು ತೀರ್ಮಾನಿಸಲಾಗಿದೆ. ಐದರಿಂದ ಹತ್ತು ಸಾವಿರ ಜನರು ಸೇರುವ ನಿರೀಕ್ಷೆ ಮಾಡಲಾಗಿದೆ. 

ಅರಸು-ಸಿದ್ದು ಸಾಮ್ಯತೆ!

  • ಇಬ್ಬರು ಹಿಂದುಳಿದ ಸಮುದಾಯದ ರಾಜಕೀಯ ನಾಯಕರು!
  • ಅರಸು-ಸಿದ್ದರಾಮಯ್ಯ ಇಬ್ಬರೂ ಮೈಸೂರು ಜಿಲ್ಲೆಯವರು!
  • ರಾಜ್ಯ ರಾಜಕೀಯದಲ್ಲಿ ಮಾಸ್‌ ಲೀಡರ್‌ ಆಗಿ ಗುರ್ತಿಸಿಕೊಂಡವ್ರು!
  • ಅಹಿಂದ ನಾಯಕರಾಗಿ ಗುರುತಿಸಿಕೊಂಡು ಹೆಸರು ಮಾಡಿದವ್ರು!
  • ಬಡವರ ಶ್ರೇಯೋಭಿವೃದ್ಧಿಗಾಗಿ ರಾಜಕೀಯ ಜೀವನ ಪಣಕ್ಕಿಟ್ಟವ್ರು!
  • ಅನೇಕ ಜನಪ್ರಿಯ ಯೋಜನೆಗಳನ್ನ ಜಾರಿಗೆ ತಂದವ್ರು!
  • ಇಬ್ಬರೂ ನಾಯಕರು ತೀರಾ ಬಡ ಕುಟುಂಬದಿಂದ ಬಂದವ್ರು!
  • Siddaramaiah (16)

ಉಳುವವನಿಗೆ ಭೂಮಿ ನೀಡಿದ್ದು ದೇವರಾಜ್‌ ಅರಸು!

ದೀವಂಗತ ಮಾಜಿ ಮುಖ್ಯಮಂತ್ರಿ ದೇವರಾಜ್‌ ಅರಸು ಅವರನ್ನ ಕರ್ನಾಟಕದ ರಾಜಕೀಯ ಇತಿಹಾಸದ ಪುಟದಲ್ಲಿ ಯಾಕೆ ಮರೆಯೋದಕ್ಕೆ ಸಾಧ್ಯವಿಲ್ಲ ಅಂದ್ರೆ ಇದೇ ನೋಡಿ. ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಇಡೀ ದೇಶದಲ್ಲಿ ಉಳುವವನೆ ಭೂಮಿ ಒಡೆಯ ಅನ್ನೋ ಕಾಯ್ದೆಯನ್ನ ಜಾರಿಗೆ ತರ್ತಾರೆ. ಅಂತಹ ಸಂದರ್ಭದಲ್ಲಿ ರಾಜ್ಯದಲ್ಲಿರೋ ಸವಾಲುಗಳನ್ನ ಎದುರಿಸಿ ರಾಜ್ಯದಲ್ಲಿಯೂ ಕಾಯ್ದೆಯನ್ನ ಜಾರಿಗೆ ತಂದಿದ್ದು ದೇವರಾಜ್‌ ಅರಸು. ಅದು ಜಾರಿಯಾಗಿದ್ದು 1974 ರಲ್ಲಿ.

ಇದನ್ನೂ ಓದಿ:2 ಅವಧಿ.. 2,792 ದಿನ! ರಾಜ್ಯ ರಾಜಕೀಯದಲ್ಲಿ ಹೊಸ ಮೈಲಿಗಲ್ಲು, ಅರಸು ದಾಖಲೆ ಸರಿಗಟ್ಟಿದ ಸಿದ್ದು..!

Siddaramaiah (17)

ಅಲ್ಲಿಯವರೆಗೂ ರಾಜ್ಯದಲ್ಲಿ ಹೇಗಿತ್ತು ಅಂದ್ರೆ ಜಮೀನ್ದಾರರು ಅಲ್ಪ ಪ್ರಮಾಣದಲ್ಲಿದ್ರು. ದೊಡ್ಡ ಪ್ರಮಾಣದ ಜಮೀನು ಅವರ ಕಪಿಮುಷ್ಠಿಯಲ್ಲಿತ್ತು. ಅವ್ರು ಗೇಣಿಗಾಗಿ ಬಡ ರೈತರಿಗೆ ನೀಡಿ ತಾವು ಬೆಳೆಯನ್ನ ತೆರೆದುಕೊಳ್ತಾ ಇದ್ರು. ಆದ್ರೆ, ಉಳುವವನೆ ಭೂಮಿ ಒಡೆಯ ಕಾಯ್ದೆ ಜಾರಿ ಆಗ್ತಾ ಇದ್ದಂತೆ ಯಾರು ಗೇಣಿಗೆ ಕೆಲಸ ಮಾಡ್ತಾ ಇದ್ರೋ ಅವರೇ ಜಮೀನು ಮಾಲಿಕರಾದ್ರು. ಇದರ ಮುಖ್ಯ ಉದ್ದೇಶ ಗೇಣಿದಾರರಿಗೆ ಭೂ ಒಡೆತನ ನೀಡಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ತರುವುದು. ಈ ಕಾಯ್ದೆಯು ಶೋಷಿತರ ಬದುಕು ಕಟ್ಟಲು, ಜಮೀನ್ದಾರಿ ಪದ್ಧತಿ ನಿರ್ಮೂಲನೆ ಮಾಡೋದಕ್ಕೆ, ಕೃಷಿ ಉತ್ಪಾದನೆ ಹೆಚ್ಚಿಸೋದಕ್ಕೆ ಸಹಕಾರಿಯಾಯಿತು. ಅದೆಷ್ಟೋ ಲಕ್ಷ ಲಕ್ಷ ಕುಟುಂಬಕ್ಕೆ ಜಮೀನು ದೊರೆಯುವಂತಾಯ್ತು. 

ಬಡವರ ಬಂಧು!

ದೇವರಾಜ್‌ ಅರಸು ಅವರು ಉಳುವವನೆ ಭೂಮಿ ಒಡೆಯ ಸೇರಿದಂತೆ ಅನೇಕ ಜನಪ್ರಿಯ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಅದ್ರಲ್ಲಿ ಪ್ರಮುಖವಾದ ಯೋಜನೆಗಳು ಅಂದ್ರೆ ಅತೀ ಹಿಂದುಳಿದವರಿಗೆ ಯುವಶಕ್ತಿ ಯೋಜನೆ ಜಾರಿಗೆ ತಂದಿದ್ದು. ಅರಿವು ಶಿಕ್ಷಣ ಸಾಲವನ್ನ ಜಾರಿಗೆ ತಂದು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದು, ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ನೇರ ಸಾಲ ಸೌಲಭ್ಯ ಸಿಗುವಂತೆ ಮಾಡಿದ್ದು. ಹಿಂದುಳಿದವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುವಂತೆ ಮಾಡಿದ್ದು ಅರಸುಗೆ ಸೇರುತ್ತದೆ.

Siddaramaiah (18)

ಕರ್ನಾಟಕದಲ್ಲಿ ದೇವರಾಜ್‌ ಅರಸು ಅವರೇ ಮೊದಲ ಹಿಂದುಳಿದ ಮುಖ್ಯಮಂತ್ರಿ. ಅದಕ್ಕೂ ಮುನ್ನ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದವರೇ ಮುಖ್ಯಮಂತ್ರಿಗಳಾಗಿದ್ರು. ಅದ್ಯಾವಾಗ ದೇವರಾಜ್‌ ಅರಸು ಅವರು ಸಿಎಂ ಆದ್ರೋ ಆವಾಗಿಂದ ಹಿಂದುಳಿದ ನಾಯಕರನ್ನ ಗುರುತಿಸಿ. ಅವರಿಗೆ ಟಿಕೆಟ್‌ ಕೊಡಿಸಿ ರಾಜಕೀಯ ಪ್ರಾತಿನಿಧ್ಯ ನೀಡಿದ್ರು. ಅದೇ ರೀತಿಯ ಹಾದಿಯಲ್ಲಿ ಸಾಗಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಇದನ್ನೂ ಓದಿ: ಪ್ರೀತಿಸಿ ಮದುವೆ.. ಯುವತಿ ಕುಟುಂಬಸ್ಥರಿಂದ ನವ ಜೋಡಿ ಮೇಲೆ ಅಟ್ಯಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH Devaraj Arsu
Advertisment