ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ದೊಡ್ಡ ಶಕ್ತಿ -ಡಿಕೆಶಿ ಮತ್ತೊಂದು ಬಾಣ

ರಾಜ್ಯ ರಾಜಕಾರಣದಲ್ಲಿ ‘ಪವರ್ ಶೇರಿಂಗ್’ ವಿಚಾರ ಭಾರೀ ಚರ್ಚೆ ಆಗ್ತಿದೆ. ಸಿದ್ದರಾಮಯ್ಯ, ಡಿಕೆ ಶಿವವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡ್ತಾರಾ? ಇಲ್ಲ, ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಅನ್ನೋದೇ ಬಿಸಿಬಿಸಿ ಚರ್ಚೆ.

author-image
Ganesh Kerekuli
DK Shivakumar (11)
Advertisment

ರಾಜ್ಯ ರಾಜಕಾರಣದಲ್ಲಿ ‘ಪವರ್ ಶೇರಿಂಗ್’ ವಿಚಾರ ಭಾರೀ ಚರ್ಚೆ ಆಗ್ತಿದೆ. ಸಿದ್ದರಾಮಯ್ಯ, ಡಿಕೆ ಶಿವವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡ್ತಾರಾ? ಇಲ್ಲ, ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಅನ್ನೋದೇ ಬಿಸಿಬಿಸಿ ಚರ್ಚೆ. 

ಕರ್ಚಿಗಾಗಿ ನಡೆಯುತ್ತಿರುವ ಫೈಟ್​​ಗೆ ಇದೀಗ ಸ್ವಾಮೀಜಿಗಳು ಕೂಡ ತಮ್ಮ, ತಮ್ಮ ಸಮುದಾಯದ ನಾಯಕನ ಪರ ಬ್ಯಾಟ್ ಬೀಸಲು ಆರಂಭಿಸಿದ್ದಾರೆ. ಹಾಗಾಗಿ ಇದು ಎಲ್ಲಿಯವರೆಗೆ ಹೋಗಿ ಮುಟ್ಟುತ್ತೆ ಅನ್ನೋದು ಊಹೆಗೂ ನಿಲುಕುತ್ತಿಲ್ಲ. 

ಇದನ್ನೂ ಓದಿ: ಖಾದಿಗಳ ಕುರ್ಚಿ ಕದನಕ್ಕೆ ಖಾವಿಗಳ ರಂಗಪ್ರವೇಶ.. ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ ಬೇಸರ

CM SIDDU AND DKS WATCHING CHAIR

ಈ ಮಧ್ಯೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಬಹಿರಂಗವಾಗಿ ಟಾಂಗ್ ಕೊಡಲು ಆರಂಭಿಸಿದ್ದಾರೆ. ನಿನ್ನೆಯಷ್ಟೇ ಕುರ್ಚಿಯ ವ್ಯಾಲ್ಯೂ ಬಗ್ಗೆ ಮಾತನ್ನಾಡಿದ್ದ ಶಿವಕುಮಾರ್, ಇವತ್ತು ‘ಪ್ರಾಮಿಸ್’​ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಶಿವಕುಮಾರ್, ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ! ಎಂದು ಪ್ರತಿಪಾದಿಸಿದ್ದಾರೆ. 

ಇದನ್ನೂ ಓದಿ: 25 ಬೀದಿ ನಾಯಿ ಸಾಕೋಕೆ ವರ್ಷಕ್ಕೆ 88 ಲಕ್ಷ.. ಜಿಲ್ಲಾಡಳಿತ ಪ್ರಸ್ತಾವನೆಗೆ ಸಚಿವರೇ ಶಾಕ್..!

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ದೊಡ್ಡ ಶಕ್ತಿ. ಮಾತಿನ ಶಕ್ತಿಯೇ ವಿಶ್ವದ ಶಕ್ತಿ. ಜಗತ್ತಿನ ಅತಿ ದೊಡ್ಡ ಶಕ್ತಿ ಅಂದ್ರೆ ವಚನಬದ್ಧತೆ. ಕೊಟ್ಟ ಮಾತು ಉಳಿಸಿಕೊಳ್ಳುವುದು ದೊಡ್ಡ ಶಕ್ತಿ. ಜಡ್ಜ್​ ಆಗಲಿ, ಅಧ್ಯಕ್ಷರಾಗಲಿ ಅಥವಾ ನಾನೇ ಆಗಲಿ. ಬೇರೆ ಯಾರೇ ಆಗಿರಲಿ, ನುಡಿದಂತೆ ನಡೆಯಬೇಕು ಅನ್ನೋದು ಶಿವಕುಮಾರ್ ಅವರ ಪೋಸ್ಟ್ ಹೇಳ್ತಿದೆ. ಆ ಮೂಲಕ ಶಿವಕುಮಾರ್ ಒಂದೊಂದೇ ವಿಚಾರವನ್ನು ನಿಧಾನವಾಗಿ ಹೊರ ಹಾಕ್ತಿದ್ದಾರೆ. ಮೊನ್ನೆ ಮಾತನ್ನಾಡಿದ್ದ ಅವರು, ಇದು ನಾಲ್ಕೈದು ಜನರ ಮಧ್ಯೆ ನಡೆದ ಗುಟ್ಟಿನ ವ್ಯಾಪಾರ ಎಂದಿದ್ದರು. ಈ ಎಲ್ಲ ಹೇಳಿಕೆಗಳ ಮೂಲಕ, ಸರ್ಕಾರ ರಚನೆ ವೇಳೆ ಹೈಕಮಾಂಡ್ ಸಮ್ಮುಖದಲ್ಲಿ ನಡೆದ ಮಾತುಕತೆಯನ್ನು ಸಿದ್ದರಾಮಯ್ಯಗೆ ನೆನಪಿಸುತ್ತಿದ್ದಾರೆ ಅಂತಾ ಹೇಳಲಾಗುತ್ತಿದೆ. 

ಇದನ್ನೂ ಓದಿ: ತವರಿನಲ್ಲೇ ಅಭಿಮಾನಿಗಳಿಗೆ ಕಾಡಿದ ಟೀಂ ಇಂಡಿಯಾದ ಆ ಐದು ಸೋಲುಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH DK Shivakumar
Advertisment